ಪರಿಚಯ

 

     ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಕೇಂದ್ರ ವಕ್ಫ್ ಕಾಯ್ದೆ 1995 ರನ್ವಯ ಶಾಸನಬದ್ಧವಾಗಿ  ರಚನೆಯಾದ ಮಂಡಳಿಯಾಗಿದ್ದು, ಹಾಲಿಯಲ್ಲಿ, ಕರ್ನಾಟಕ ರಾಜ್ಯ ಸರಕಾರದ ಅಲ್ಪಸಂಖ್ಯಾತರ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ 27548 ವಕ್ಫ್ ಆಸ್ತಿಗಳು ನೊಂದಣಿಯಾಗಿರುತ್ತವೆ,  ವಕ್ಫ್ ಆಸ್ತಿಗಳಲ್ಲಿ ಮಸೀದಿಗಳು, ದರ್ಗಾಗಳು, ಖಬರಸ್ತಾನಗಳು, ಈದ್ಗಾಗಳು, ಆಶೂರ್‍ಖಾನಗಳು, ಶಾಲೆಗಳು, ಅನಾಥಾಶ್ರಮಗಳು.. ಇನ್ನಿತರೆ ಚರ ಮತ್ತು ಸ್ಥಿರ ಆಸ್ತಿಗಳು ಸೇರಿಕೊಂಡಿರುತ್ತವೆ.
      ಮಂಡಳಿಯ ನೌಕರರ ಮುಖ್ಯಸ್ಥರಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ  ರಾಜ್ಯದಲ್ಲ ಲಭ್ಯವಿರು ಯಾವುದೇ ಮುಸ್ಲಿಂ ಕೆ.ಎ.ಎಸ್ ಹಿರಿಯ ಅಧಿಕಾರಿ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳು ಅಸ್ತಿತ್ವದಲ್ಲಿದ್ದು ಜಿಲ್ಲಾ ವಕ್ಫ್ ಕಛೇರಿಯಲ್ಲಿ ಜಿಲ್ಲಾ ವಕ್ಫ್ ಅಧಿಕಾರಿಗಳು ಕಛೇರಿಯ ಮುಖ್ಯಸ್ಥರಾಗಿರುತ್ತಾರೆ.
      ವಕ್ಫ್ ಸಂಸ್ಥೆಗಳಿಂದ 7% ಕೊಡುಗೆಯನ್ನು ವಕ್ಫ್ ಮಂಡಳಿಯು ಪಡೆದು, 1% ಹಣವನ್ನು ಕೇಂದ್ರ ವಕ್ಫ್ ಕೌನ್ಸಿಲ್, ನವದೆಹಲಿಗೆ ನೀಡಬೇಕಾಗಿರುತ್ತದೆ.