ಮೂಲೊದ್ದೇಶ


 

     ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾದಂತಹ ಎಲ್ಲಾ ರೀತಿಯ ವಕ್ಫ್ ಸಂಸ್ಥೆಗಳನ್ನು ಕರ್ನಾಟಕಾ ರಾಜ್ಯ ಸರಕಾರದಿಂದ ಪ್ರತೀ ವರ್ಷ ಗ್ರಾಂಟ್-ಇನ್-ಏಡ್ ಯೋಜನೆಯಡಿ ಹಣ ಬಿಡುಗಡೆ ಮಾಡಿ ವಕ್ಫ್ ಆಸ್ತಿಗಳ ನಿರ್ವಹಣೆ ಹಾಗು ಅಭಿವೃದ್ಧಿಗೆ ಸಹಾಯ ಮಾಡುವುದು. ಮತ್ತು ಈ ಎಲ್ಲಾ ಸಂಸ್ಥೆಗಳಿಗೆ ಸೇರಿದಂತಹ ಆಸ್ತಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಭದ್ರತೆ ಒದಗಿಸಿ ಅವುಗಳನ್ನು ಸಂರಕ್ಷಿಸುವುದು. 
    ಯಾವುದೇ ಆಸ್ತಿ ಅಥವಾ ಸಂಸ್ಥೆಗಳು ಅತೀಕ್ರಮಣವಾಗಿದ್ದರೆ ಅಂತಹ ಅತೀಕ್ರಮಣದಾರರಿಗೆ ಮಂಡಳಿಯು ಕೇಂದ್ರ ವಕ್ಫ್ ಕಾಯ್ದೆ 1995- ಸೆಕ್ಷೆನ್ 52, 52ಎ ಮತ್ತು ಸೆಕ್ಷನ್ 54 ರಡಿಯಲ್ಲಿ ತನ್ನ ಅಧಿಕಾರವನ್ನು ಉಪಯೋಗಿಸಿ ವಕ್ಫ್ ಆಸ್ತಿಗಳನ್ನು ಭೂ-ಕಬಳಿಕೆದಾರರಿಂದ ಆಕ್ರಮಣವಾಗದಂತೆ ನೋಡಿಕೋಳ್ಳುತ್ತದೆ.