ಆಡಳಿತಾತ್ಮಕ ವ್ಯವಸ್ಥೆ


 

     ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಚುನಾವಣೆಯ ಮೂಲಕ ಚುನಾಯಿಸಲಾಗುತ್ತದೆ, ಅದರಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾದಂತಹ ಸಂಸ್ಥೆಗಳಲ್ಲಿ ಯಾವ ಸಂಸ್ಥೆಯ ವಾರ್ಷಿಕ ಆದಾಯವು ರೂ. 1.00 ಲಕ್ಷಗಳನ್ನು ಮೀರಿರುತ್ತದೇಯೋ ಅಂತಹ ಸಂಸ್ಥೆಯ ಪದಾಧಿಕಾರಿಯವರು ಮತವನ್ನು ಚಲಾಯಿಸಿ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಬಹುದು, ಮತ್ತು ಮಂಡಳಿಯಲ್ಲಿ ಒಬ್ಬ ಮುಸ್ಲಿಂ ಅಧಿಕಾರಿ, ಒಬ್ಬ ಮುಸ್ಲಿಂ ರಾಜ್ಯ ವಿಧಾನ ಸಭೆ ಸದಸ್ಯರು, ಹಾಗೂ ಒಬ್ಬ ಲೋಕಸಭಾ ಸದಸ್ಯ, ಮತ್ತು ರಾಜ್ಯ ಬಾರ್ ಕೌನ್ಸಿಲ್‍ನ ಒಬ್ಬ ಸದಸ್ಯರನ್ನು ಒಳಗೊಂಡಿರುತ್ತದೆ. ಮಂಡಳಿಯ ಅದ್ಯಕ್ಷರನ್ನು ಎಲ್ಲಾ ಸದಸ್ಯರು ಸೇರಿ ಚುನಾಯಿಸುತ್ತಾರೆ. ಮಂಡಳಿಯ ನೌಕರರ ಮುಖ್ಯಸ್ಥರಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ  ರಾಜ್ಯದಲ್ಲ ಲಭ್ಯವಿರು ಯಾವುದೇ ಮುಸ್ಲಿಂ ಕೆ.ಎ.ಎಸ್ ಹಿರಿಯ ಅಧಿಕಾರಿ ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳು ಅಸ್ತಿತ್ವದಲ್ಲಿದ್ದು ಜಿಲ್ಲಾ ವಕ್ಫ್ ಕಛೇರಿಯಲ್ಲಿ ಜಿಲ್ಲಾ ವಕ್ಫ್ ಅಧಿಕಾರಿಗಳು ಕಛೇರಿಯ ಮುಖ್ಯಸ್ಥರಾಗಿರುತ್ತಾರೆ.