​ಪೀಠಿಕೆ


ಇ-ಆಡಳಿತ ವಿಭಾಗವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಭಾಗವಾಗಿದ್ದು 2003 ರಲ್ಲಿ ಸೃಜಿಸಲಾಯಿತು. ಸರ್ಕಾರದ ಪ್ರಕ್ರಿಯೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ಧೇಶವಾಗಿರುತ್ತದೆ.


ಉದ್ಧೇಶ

  • ವಿಶ್ವದಾದ್ಯಂತ ಇರುವ ಉತ್ಕೃಷ್ಟ ಇ-ಆಡಳಿತ ವಿಷಯಗಳನ್ನು ಅಭ‍್ಯಸಿಸಿ ಮತ್ತು ಸಂಕಲಿಸಿ ಅವುಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕಾಗಿ ಮಾನದಂಡ (benchmark) ನಿಗಧಿಪಡಿಸುವುದು.
  • ದತ್ತಾಂಶ ಸಂಗ್ರಹಣೆ (database storage), ಭದ್ರತೆ (security), ಪಾವತಿ, ಸ್ಥಳೀಯ ಭಾಷಾ ಅಳವಡಿಕೆ (ಕನ್ನಡ ಭಾಷೆ), ಆನ್ ಲೈನ್ ಸಂಗ್ರಹಣೆ, ಭೌಗೋಳಿಕ ಮಾಹಿತಿ ಸೇವೆ ಇತ್ಯಾದಿಗಳು ಸೇರಿದಂತೆ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು.
  • ವಿವಿಧ ಇಲಾಖೆಗಳಲ್ಲಿ ಇ-ಆಡಳಿತ ಚಟುವಟಿಕೆಗಳ ಅಭಿವೃದ್ಧಿಯನ್ನು ಅನುವು ಮಾಡುವುದು.
  • ಇ-ಆಡಳಿತದ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚಿನ ಇಲಾಖೆಗಳನ್ನು ಸೇರಿಸಿ ಅನುಷ್ಠಾನಗೊಳಿಸುವುದು ಮತ್ತು ಸಮಗ್ರಗೊಳಿಸುವುದು.
  • ಇ-ಆಡಳಿತಕ್ಕೆ ಅಗತ್ಯವಿರುವ ಸಾಮಾನ್ಯ ಮಾಹಿತಿ ತಂತ್ರಜ್ಞಾನ ಸೌಲಭ್ಯವನ್ನು ಸೃಷ್ಟಿಸುವುದು ಮತ್ತು ನಿರ್ವಹಿಸುವುದು.
  • ಕರ್ನಾಟಕ ರಾಜ್ಯದಾದ್ಯಂತ ಮಾಹಿತಿ ತಂತ್ರಜ್ಞಾನದ ನೈಪುಣ್ಯತೆಯನ್ನು ಅಭಿವೃದ್ಧಿಗೊಳಿಸಲು ಒಂದು ತಾಂತ್ರಿಕತೆಯನ್ನು ರೂಪಿಸುವುದು.

egovernance-project

ಇಲಾಖೆಯ ದೂರದೃಷ್ಟಿ ಮತ್ತು ಆಶಯ

“ಸರ್ಕಾರದ ಕಾರ್ಯಾಚರಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿ, ತನ್ಮೂಲಕ ಎಲ್ಲ ಸಾರ್ವಜನಿಕರಿಗೆ ಅವಶ್ಯವಾದ ಮಾಹಿತಿಯನ್ನು ನೀಡುವುದರ ಜೊತೆಗೆ, ಎಲ್ಲಾ ಸೇವೆಗಳನ್ನು ದಕ್ಷತೆಯಿಂದ ಅಡೆತಡೆಯಿಲ್ಲದೆ ದೊರಕಿಸಿ, ಗುರುತಿಸಿದ ಸೇವೆಗಳನ್ನು ಆನ್ ಲೈನ್ ಮುಖಾಂತರ ಒದಗಿಸುವುದು”.

​