ಚಟುವಟಿಕೆಗಳು

ಕರ್ನಾಟಕದಲ್ಲಿ ಗ್ಯಾಸೆಟಿಯರ್ ಪ್ರಕಟಣೆ

ಕೇಂದ್ರ ಸರ್ಕಾರವು 1955ರಲ್ಲಿ ನೇಮಿಸಿದ ತಜ್ಞರ ಸಮಿತಿಯ ಶಿಫಾರಸ್ಸುಗಳ ಅನ್ವಯ ಕೇಂದ್ರ ಮತ್ತು ಹಲವಾರು ರಾಜ್ಯಗಳಲ್ಲಿ ಗ್ಯಾಸೆಟಿಯರ್ ಘಟಕಗಳ ಉಗಮವನ್ನು ಗುರ್ತಿಸಬಹುದು. 1955ರ ಪೂರ್ವದಲ್ಲಿಯೇ ಕೆಲವು ರಾಜ್ಯಗಳಲ್ಲಿ (ಮಹಾರಾಷ್ಟ್ರ ಮತ್ತು ತಮಿಳುನಾಡು) ಗ್ಯಾಸೆಟಿಯರ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಆದ್ದರಿಂದ, ಇನ್ನಿತರೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಸೂಚನೆಯ ಅನ್ವಯ ಜಿಲ್ಲಾ ಗ್ಯಾಸೆಟಿಯರ್ ಗಳನ್ನು ತಯಾರಿಸಿ ಪ್ರಕಟಿಸಲು ಕಛೇರಿಗಳನ್ನು ಸ್ಥಾಪಿಸಿದವು. ಹೆಚ್ಚಿನ  ಅಥವಾ ಕಡಿಮೆ ಸಿಬ್ಬಂದಿ ವರ್ಗದ ನಿಯೋಜನೆ ಕಾರ್ಯವನ್ನು ಆಯಾ ರಾಜ್ಯಗಳಿಗೆ ಬಿಡಲಾಯಿತು.

ಎರಡನೇ ಪಂಚವಾರ್ಷಿಕ ಯೋಜನೆ ಅವಧಿಯ ಮಧ್ಯದಲ್ಲಿ ಅಂದರೆ 1958ರಲ್ಲಿ ಗ್ಯಾಸೆಟಿಯರ್ ಘಟಕವನ್ನು ಕರ್ನಾಟಕದಲ್ಲಿ ಪ್ರಾರಂಭಿಸಲಾಯಿತು. ಆಡಳಿತ ಉದ್ದೇಶಗಳಿಂದ ಈ ಘಟಕವನ್ನು ಸಾಮಾನ್ಯ ಆಡಳಿತ ಇಲಾಖೆಗೆ ಸೇರಿಸಲಾಗಿತ್ತು. ಪ್ರಸ್ತುತ ವಾರ್ತಾ, ಪ್ರವಾಸೋದ್ಯಮ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವಾಲಯದ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಕಾರ್ಯದರ್ಶಿಗಳ ಸಭಾದ್ಯಕ್ಷತೆಯಲ್ಲಿ ಗಣ್ಯ ವ್ಯಕ್ತಿಗಳ ಆಡಳಿತ ಸಲಹಾ ಸಮಿತಿ ಇದೆ.

ಹೊಸದೃಷ್ಟಿಯ ಜಿಲ್ಲಾ ಗ್ಯಾಸೆಟಿಯರ್ ಸರಣಿಯು ಸ್ವಾತಂತ್ರದ ನಂತರ ಪ್ರಾರಂಭವಾಯಿತು ಮತ್ತು ಕೆಲಸದಲ್ಲಿ ಕ್ರಮಬದ್ದ ಶ್ರೇಣಿ ಇರಲಿಲ್ಲ. ನೆರೆಯ ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ಘಟಕಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಈ ಅಸಾಧಾರಣ ಪಾತ್ರವುಳ್ಳ ಸಾಹಸದ ಕೆಲಸ ಕುರಿತಂತೆ ಕರ್ನಾಟಕ ರಾಜ್ಯದ ದೃಷ್ಟಿಕೋನವು ಎಚ್ಚರಿಕೆಯಿಂದ ಕೂಡಿತ್ತು. ಗ್ಯಾಸೆಟಿಯರ್ ಗಳ ಪರಿಷ್ಕರಣೆಯ ಜೊತೆಗೆ ಹೊಸ ಜಿಲ್ಲಾ ಗ್ಯಾಸೆಟಿಯರ್ ಗಳನ್ನು ಹೊರತರಲು ಇಲಾಖೆಯನ್ನು ರಚಿಸಲಾಯಿತು.

ಒಂದು ಪ್ರಾಂತ್ಯದ ಜನಪದ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ ಇತ್ಯಾದಿಗಳ ಕುರಿತಂತೆ ಸಮಗ್ರ ವಿವರ ಮತ್ತು ಅಧಿಕಾರಯುತ, ಅತ್ಯಂತ ಬೆಲೆಯುಳ್ಳ ಜಿಲ್ಲೆಯ ವಿವಿಧ ಮಾಹಿತಿಯನ್ನೊಳಗೊಂಡ ವಿಶ್ವ ಕೋಶದ ತರಹ ಪ್ರತಿ ಗ್ಯಾಸೆಟಿಯರ್ ಇರುತ್ತದೆ. ಸರಕಾರದ ಕಾರ್ಯನೀತಿ ಮತ್ತು ಯೋಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತಾ, ವಿವಿಧ ಮೂಲಗಳಿಂದ ಜನಜೀವನ, ಚರಿತ್ರೆ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಬ್ಯಾಂಕಿಂಗ್ ವ್ಯವಸ್ಥೆ, ವ್ಯಾಪಾರ ಮತ್ತು ವಾಣಿಜ್ಯ,   ಕೈಗಾರಿಕೆ, ಶಿಕ್ಷಣ, ವೈದ್ಯಕೀಯ ಸೇವೆ, ಕೃಷಿ ಮತ್ತು ಕೃಷಿ ಆಧಾರಿತ  ಉದ್ದಿಮೆಗಳ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸಿ ವಿವಿಧ ಅಧ್ಯಾಯಗಳ ತಯಾರಿಕೆಯು ಪ್ರಾರಂಭವಾಗುತ್ತದೆ. ಆದ್ದರಿಂದ ಐತಿಹಾಸಿಕ ಸಂಶೋಧನೆಗೆ ಜನಸಾಮಾನ್ಯರು ಮತ್ತು ಸರ್ಕಾರದ  ಇಲಾಖೆಗಳ ಉಪಯೋಗಕ್ಕಾಗಿ ಗ್ಯಾಸೆಟಿಯರ್ ಗಳ ಪ್ರಕಟಣೆಗಳು ಅಧಿಕೃತ ಮೂಲವಾಗಿರುತ್ತದೆ. ಗ್ಯಾಸೆಟಿಯರ್ ಪ್ರಕಟಣೆಗಳ ಪ್ರಾಮುಖ್ಯತೆಯನ್ನು ಮನಗಂಡ ಸರ್ಕಾರವು ರಾಜ್ಯ ಮತ್ತು ದೇಶದ ಹೊರಗೆ ತನ್ನ ಸಂಸ್ಕೃತಿ ಮತ್ತು ಶ್ರೀಮಂತ ಚರಿತ್ರೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ಕನ್ನಡ  ಭಾಷೆಯ ಗ್ಯಾಸೆಟಿಯರ್ ಪ್ರಕಟಣೆಯೊಂದಿಗೆ  ಇಂಗ್ಲೀಷ್ ಭಾಷೆಯ ಪ್ರಕಟಣೆಯನ್ನು ಸಹಾ ಕೈಗೊಳ್ಳುತ್ತಿದೆ. ಕನ್ನಡ ಭಾಷೆಯಲ್ಲಿ  ಕೊಡಗು, ಧಾರವಾಡ, ಗುಲಬರ್ಗಾ, ಬಿಜಾಪುರ, ಮಂಡ್ಯ, ಕೋಲಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಗ್ಯಾಸೆಟಿಯರ್ ಗಳ  ಪರಿಷ್ಕೃತ ಪ್ರಕಟಣೆಗಳನ್ನು ಹೊರತರಲಾಗಿದೆ. ಕನ್ನಡದಿಂದ  ಇಂಗ್ಲೀಷ್ ಗೆ ತರ್ಜುಮೆ ಮಾಡಿದ ಕೊಡಗು, ಧಾರವಾಡ, ಗುಲಬರ್ಗಾ, ಬಿಜಾಪುರ, ಕೋಲಾರ, ಉಡುಪಿ ಮತ್ತು ಮಂಡ್ಯ ಜಿಲ್ಲೆಗಳ ಜಿಲ್ಲಾ ಗ್ಯಾಸೆಟಿಯರ್ ಗಳನ್ನು ಹೊರತರಲಾಗಿದೆ.

ಉದ್ದೇಶಗಳು

1. ಪರಿಷ್ಕೃತ ಜಿಲ್ಲಾ ಗ್ಯಾಸೆಟಿಯರ್ ಸಂಪುಟಗಳ ಪ್ರಕಟಣೆ ಹಾಗೂ ರಾಜ್ಯ ಗ್ಯಾಸೆಟಿಯರ್ ಸಂಪುಟಗಳ ಪ್ರಕಟಣೆ (ಕನ್ನಡ ಹಾಗೂ  ಇಂಗ್ಲೀಷ್)

2. ಕರ್ನಾಟಕ ಕೈಪಿಡಿಯ ಪರಿಷ್ಕೃತ ಆವೃತ್ತಿಯ ಪ್ರಕಟಣೆ (ಕನ್ನಡ ಹಾಗೂ  ಇಂಗ್ಲೀಷ್)

3. ಕನ್ನಡ ಹಾಗೂ  ಇಂಗ್ಲೀಷ್ ಆವೃತ್ತಿಗಳಲ್ಲಿ ತಾಲೂಕು ಗ್ಯಾಸೆಟಿಯರ್ ಗಳ ಸಂಪಾದನೆ ಹಾಗೂ ಪ್ರಕಟಣೆ

4. ಪ್ರವಾಸೋದ್ಯಮ ಗ್ಯಾಸೆಟಿಯರ್, ಗ್ಲಿಂಪ್ಸಸ್ ಆಫ್ ಕರ್ನಾಟಕ (ಆಂಗ್ಲ), ಕರ್ನಾಟಕ ಮಿನುಗುನೋಟ, ಜುವೆಲ್ಸ್ ಆಫ್ ಅಡ್ಮಿನಿಷ್ಟ್ರೇಷನ್, ಆಫ್ ಪ್ರಿನ್ಸಿಲಿ ಮೈಸೂರ್ ಸ್ಟೇಟ್, ಟಿಪ್ಪುಸುಲ್ತಾನ್-ಎ ಕ್ರೂಸೆಡರ್ ಫಾರ್ ಚೇಂಜ್  ಅಂತಹ ಅಮೂಲ್ಯ ಗ್ರಂಥಗಳ ವಿಶೇಷ ಪ್ರಕಟಣೆಗಳು.

5. ಹಿಂದಿನ ಅಪರೂಪದ ಬಹುಅಮೂಲ್ಯವಾದ ಗ್ಯಾಸೆಟಿಯರ್ ಗಳ ಸ್ಕ್ಯಾನಿಂಗ್ ಹಾಗೂ ಮರುಮುದ್ರಣ ಕಾರ್ಯಗಳು:

 ಸರ್ ಬುಕನನ್ ರವರ ರಚನೆಯಾದ 'ಎ ಜರ್ನಿ ಫ್ರಂ ಮದ್ರಾಸ್ ತ್ರೂ ದ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್ '(ಮರುಮುದ್ರಣ  ಮೂರು ಸಂಪುಟಗಳಲ್ಲಿ) , ಇಂಪೀರಿಯಲ್ ಗ್ಯಾಸೆಟಿಯರ್ ಬೀದರ್, ಗುಲಬರ್ಗಾ ಮತ್ತು ರಾಯಚೂರು ಜಿಲ್ಲಾ ಗ್ಯಾಸೆಟಿಯರ್, ಬಿ.ಎಲ್.ರೈಸ್ ಸಂಪಾದಿತ ಮೈಸೂರು ಮತ್ತು ಕೂರ್ಗ(3 ಸಂಪುಟಗಳು), ಮೈಸೂರು ಗ್ಯಾಸೆಟಿಯರ್ (ಹಯವದನ ರಾವ್ ಸಂಪಾದಿತ)-9 ಪುಸ್ತಕಗಳನ್ನು  5 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.

ಪ್ರಮುಖ ಲಕ್ಷಣಗಳು  

  1. 1958ರಲ್ಲಿ ಕರ್ನಾ‍ಟಕ ಗ್ಯಾಸೆಟಿಯರ  ಇಲಾಖೆಯನ್ನು ಸ್ಥಾಪಿಸಲಾಯಿತು
  2. ಇಲಾಖೆಯು ಇಪ್ಪತ್ತು ಜಿಲ್ಲೆಗಳ ಜಿಲ್ಲಾ ಗ್ಯಾಸೆಟಿಯರ್ ಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಹೊರತಂದಿದೆ.  ಜಿಲ್ಲಾ ಗ್ಯಾಸೆಟಿಯರ್ ಗಳ ಪರಿಷ್ಕರಣಾ ಕಾರ್ಯ ಪ್ರಗತಿಯಲ್ಲಿದೆ.
  3. ದೇಶದಲ್ಲಿ ಮೊದಲಬಾರಿಗೆ ಕರ್ನಾಟಕ ರಾಜ್ಯವು "ರಾಜ್ಯ ಗ್ಯಾಸೆಟಿಯರ್" ನ್ನು ಇಂಗ್ಲೀಷ್ ಭಾಷೆಯಲ್ಲಿ ಎರಡು ಭಾಗಗಳನ್ನು (1982-1983) ಮತ್ತು ಕನ್ನಡ ಭಾಷೆಯಲ್ಲಿ ಮೂರು ಭಾಗಗಳನ್ನು (1984-1986) ಪ್ರಕಟಿಸಿತು.
  4. ಕರ್ನಾಟಕ ರಾಜ್ಯ ಸಂಪುಟದ ದಶವಾರ್ಷಿಕದ ಪೂರಕ ಸಂಪುಟಗಳನ್ನು 1996 ಮತ್ತು 1994ರಲ್ಲಿ ಕ್ರಮವಾಗಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಕಟಿಸಲಾಯಿತು.
  5. "ಕರ್ನಾಟಕದ ಕೈಪಿಡಿ"ಯನ್ನು 1996ರಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಕಟಿಸಲಾಯಿತು. ಇಂಗ್ಲೀಷ್ ಭಾಷೆಯ ಪರಿಷ್ಕೃತ ಪ್ರಕಟಣೆಯನ್ನು 2001, 2005 ಮತ್ತು 2010ರಲ್ಲಿ ಪ್ರಕಟಿಸಲಾಯಿತು. ಕನ್ನಡ ಭಾಷೆಯ ಪರಿಷ್ಕೃತ ಪ್ರಕಟಣೆಯನ್ನು 2011 ಮತ್ತು 2012ರಲ್ಲಿ ಪ್ರಕಟಿಸಿದೆ.
  6. ಕನ್ನಡದಲ್ಲಿ ಜಿಲ್ಲಾ ಗ್ಯಾಸೆಟಿಯರ್ ಗಳನ್ನು ಪ್ರಕಟಿಸಲು 1992ರಿಂದ ಪ್ರಾರಂಭಿಸಲಾಯಿತು. ಇಂದಿನವರೆಗೆ ಕೊಡಗು, ಧಾರವಾಡ, ಬಿಜಾಪುರ, ಗುಲಬರ್ಗಾ, ಮಂಡ್ಯ, ಕೋಲಾರ, ದಕ್ಷಿಣ ಕೆನರಾ, ಉಡುಪಿ ಜಿಲ್ಲೆಗಳ ಗ್ಯಾಸೆಟಿಯರ್ ಗಳನ್ನು ಬಿಡುಗಡೆ ಮಾಡಲಾಗಿದೆ.
  7. "ಮರುಮುದ್ರಣ" ಯೋಜನೆಯಡಿಯಲ್ಲಿ ಸ್ವತಂತ್ರ ಪೂರ್ವದ ಗ್ಯಾಸೆಟಿಯರ್ ಗಳನ್ನು ಹೊರತರಲಾಗಿದೆ. ಧಾರವಾಡ, ಕೆನರಾ ಮತ್ತು ಬೆಳಗಾವಿ (ಜೇಮ್ಸ್ .ಎಂ. ಕ್ಯಾಂಬೆಲ್) ದಕ್ಷಿಣ ಕನ್ನಡ (John Sturrock & Harold. A.Stuart)  ಬಳ್ಳಾರಿ (John Kelsall),  ಮೈಸೂರು ಮತ್ತು ಕೂರ್ಗ್-ಮೂರು ಸಂಪುಟಗಳು (B.L.Rice)
  8.  ವೆಬ್ ಸೈಟ್ ವಿಳಾಸ  www.gazetteer.kar.nic.in

9    ಇಮೇಲ್ ವಿಳಾಸ : kargaz@nic.in,  karnatakagazetteer@gmail.com

       ಸಂಪರ್ಕಿಸಲು     :         ಮುಖ್ಯ ಸಂಪಾದಕರು,

                                     ಕರ್ನಾಟಕ ಗ್ಯಾಸೆಟಿಯರ್ ಇಲಾಖೆ,

                                  8ನೇ ಮಹಡಿ, ಜಲಮಂಡಳಿ ಕಟ್ಟಡ,

                                     ಕಾವೇರಿ ಭವನ, ಬೆಂಗಳೂರು-560 009.

                                     ದೂರವಾಣಿ: 22213474, ಫ್ಯಾಕ್ಸ್: 22243293

Designed and Developed by: Gazetteer Department, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion.

Designed and Developed by: Center for e-Governance Government of Karnataka

©2016, All Rights Reserved.

india-gov-logo
pm india
CM Karnataka logo
nic logo
Top