ಆಧಾರ್ ಹಿನ್ನಲೆ ಮತ್ತು ಪ್ರಯೋಜನಗಳು :

  • ಕಳೆದ ಇಪ್ಪತ್ತು ವರ್ಷಗಳಲ್ಲಿ ರಾಷ್ಟ್ರವು ಆರ್ಥಿಕ ಮತ್ತು ನೀತಿ ರಚನೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ, ಈ ಅವಧಿಯಲ್ಲಿನ ಸುಧಾರಣೆಗಳು ನಮ್ಮ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಪ್ರಬುದ್ಧತೆ ಮತ್ತು ಆರೋಗ್ಯಕರ ನಿಯಂತ್ರಣಕ್ಕೆ ಕಾರಣವಾಗಿದೆ. ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಪರವಾನಗಿ ನೀಡುವಿಕೆ, ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಬಳಕೆ, ಆಡಳಿತ ವಿಕೇಂದ್ರೀಕರಣದಿಂದ ರಾಷ್ಟ್ರವನ್ನು ನಿರ್ಬಂಧಿತ ಸಮಾಜದಿಂದ ಹೆಚ್ಚು ಅಧಿಕಾರಯುಕ್ತವಾಗಿ ಬದಲಾಗಲು ಸಾಧ್ಯವಾಗಿದೆ.  ಮುಕ್ತ ಆರ್ಥಿಕ ನೀತಿಯಿಂದಾಗಿ ನಾಗರೀಕರು ಸಂಪನ್ಮೂಲಗಳನ್ನು ಹಾಗೂ ಸೇವೆಗಳನ್ನು ಹೆಚ್ಚು ಸುಲಭವಾಗಿ ಮತ್ತು ಸರಳವಾಗಿ ಹೊಂದುವಂತೆ ಮಾಡುವಲ್ಲಿ ಸಾಧ್ಯವಾಗಿದೆ.
  • ಆದರೆ, ಈ ಪ್ರಯತ್ನಗಳ ಹೊರತಾಗಿಯೂ, ಗ್ರಾಮೀಣ ಭಾರತದ ಅದರಲ್ಲೂ ಬಡ ನಿವಾಸಿಗಳಿಗೆ ಆರ್ಥಿಕ ಸೇವೆ ದೊರಕುವುದು ವಿರಳವಾಗಿದೆ.  ಇಂದು, ಬ್ಯಾಂಕ್ ಖಾತೆಗಳ ಕೊರತೆ ಎದುರಿಸುತ್ತಿರುವ ಗ್ರಾಮೀಣ ನಿವಾಸಿಗಳ ಪ್ರಮಾಣವು ಶೇಕಡ 40 ರಷ್ಟಿದ್ದು ರಾಷ್ಟ್ರದ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಈ ಕೊರತೆ ಜನಸಂಖ್ಯೆಯ 3/5 ರಷ್ಟಿದೆ.
  • ಈ  ದುರ್ಬಲಗೊಳಿಸುವಿಕೆಯು ಆರ್ಥಿಕ ಅವಕಾಶ  ಮತ್ತು ಆರ್ಥಿಕ ಸೌಲಭ್ಯದೊಂದಿಗೆ ಜೋಡಿಸಿಕೊಂಡಿದೆ.  ಇಂತಹ ಆರ್ಥಿಕ ಸೇವೆ ಸೌಲಭ್ಯವು ಬಡವರಿಗೆ  ವಿಶೇಷವಾಗಿ ಮೌಲ್ಯಯುತವಾಗಿದ್ದು  ಸಣ್ಣ ಆದಾಯದ ಗುಂಪಿಗೆ ಬೆಂಬಲವಾಗಿದೆ, ಇದು ತಮ್ಮ ಆದಾಯ ಅವಗಢಗಳ ವಿರುದ್ಧ ಉಳಿತಾಯ ಮಾಡಲು ಮತ್ತು ಹೂಡಿಕೆಗಳನ್ನು ಮಾಡಲು ಅವಕಾಶಗಳನ್ನು ನೀಡುತ್ತದೆ. ಉದಾಹರಣೆಗೆ ಅನಾರೋಗ್ಯ, ಉದ್ಯೋಗ ನಷ್ಟ, ಬರ ಮತ್ತು ಬೆಳೆ ವೈಫಲ್ಯಗಳ ವಿರುದ್ಧ ಉಳಿತಾಯ ಮತ್ತು ವಿಮೆಗಳು  ಸಮರ್ಥವಾಗಿ ರಕ್ಷಣೆ ನೀಡುತ್ತವೆ.  ಆದಾಗ್ಯೂ ಆರ್ಥಿಕ ಸೇವೆಗಳ ಕೊರತೆಯಿಂದ ಬಡ ಜನತೆ ಉಳಿತಾಯ ಸಂಗ್ರಹ ಮಾಡುವಲ್ಲಿ ತೊಂದರೆಗಳನ್ನು ಎದುರಿಸುತ್ತಿವೆ.
  • ಈ ಆರ್ಥಿಕ ಪ್ರವೇಶದ ಕೊರತೆ ಪರಿಹರಿಸಲು, ನೂತನ ಮಾರ್ಗಗಳಿಂದ ಯಾವುದೇ ತಡೆಗಳಿಲ್ಲದ ಖಾತೆಗಳ ತೆರೆಯುವಿಕೆ, ಬ್ಯಾಂಕಿಂಗ್ ಉದಾರೀಕರಣ ಮತ್ತು ಎಟಿಎಂ ನೀತಿಗಳು ಮತ್ತು ಶಾಖೆ ರಹಿತ ಬ್ಯಾಂಕಿಂಗ್ ಸೇವೆಗಳ (BCS) ಮೂಲಕ ಸ್ಥಳೀಯ ಸ್ವಸಹಾಯ ಗುಂಪುಗಳ ಮತ್ತು ಕಿರಾಣಿ ಅಂಗಡಿಗಳ ಜೊತೆ ಬ್ಯಾಂಕಿಂಗ್ ಸೇವೆಗಳನ್ನು / ಆರ್ಥಿಕ ಸೇವೆಗಳನ್ನು ಒದಗಿಸುವ ಕ್ರಮಗಳ ಸುಧಾರಣೆಗೆ ಗಮನಹರಿಸಲಾಗಿದೆ.  ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆಯನ್ನು ಉತ್ತೇಜಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.  ದೇಶದಲ್ಲಿ ಪಾವತಿ ಮತ್ತು  ಸ್ಥಿರೀಕರಣಕ್ಕಾಗಿ ರಾಷ್ಟ್ರೀಯ ಮೂಲಸೌಕರ್ಯ ಒದಗಿಸಲು ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು (NPC) ಅನುಷ್ಠಾನಗೊಳಿಸಿದೆ.
  • ಉದಾಹರಣೆಗೆ ಕೋರ್ ಬ್ಯಾಂಕಿಂಗ್, ಎಟಿಎಂ, ಮತ್ತು ಮೊಬೈಲ್ ಸಂಪರ್ಕ ತಂತ್ರಜ್ಞಾನದ ಪ್ರಗತಿ ಬ್ಯಾಂಕಿಂಗ್ ಮೇಲೆ ಅಗಾಧ ಪ್ರಭಾವ ಬೀರಿವೆ. ಅದರಲ್ಲೂ ಮೊಬೈಲ್ ದೂರವಾಣಿಗಳು ಪ್ರಸ್ತುತ ರಾಷ್ಟ್ರದಾದ್ಯಂತ ಆರ್ಥಿಕ ಸೇವೆಗಳನ್ನು ಒದಗಿಸುವ ಅಪಾರ ಅವಕಾಶವನ್ನು ಹೊಂದಿವೆ. ಈ ತಂತ್ರಜ್ಞಾನಗಳು ಬ್ಯಾಂಕುಗಳನ್ನು ತಮ್ಮ ಗ್ರಾಹಕರೊಂದಿಗೆ ಭೌತಿಕ ಅಗತ್ಯವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದೆ  ಮತ್ತು ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಮೂಲಕ ಸೇವೆಗಳನ್ನು ಪರಿಣಾಮವಾಗಿ ಒದಗಿಸುವ ಪ್ರಯೋಗದಲ್ಲಿ ಸಮರ್ಥವಾಗಿವೆ. ಈ ಆಯ್ಕೆಗಳು, ದೇಶಾದ್ಯಂತ ಅನೇಕ ನಗರದ  ನಿವಾಸಿಗಳಿಗೆ ಎಟಿಎಂ ಜೊತೆಗೆ, ಬ್ಯಾಂಕಿಂಗ್ ಸೌಲಭ್ಯವನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಿವೆ.
  • ಪ್ರವೇಶ ಮತ್ತು ಗುರುತಿನ ಸವಾಲುಗಳನ್ನು ಜೊತೆಗೆ, ಸಾಮಾನ್ಯವಾಗಿ micropayments ಎಂದು ವರ್ಗೀಕರಿಸಿರುವ ಸಣ್ಣ ಪ್ರಮಾಣದಲ್ಲಿ ನಿರ್ವಹಿಸುವ ಬಡವರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ವೆಚ್ಚವು  ಮೂರನೇ ಮಿತಿಯಾಗಿದೆ. ಇಂತಹ ಪಾವತಿಗಳು ನಿರ್ವಹಣಾವೆಚ್ಚವನ್ಜು ವಹಿಸಿಕೊಳ್ಳಲು ತುಂಬಾ ಹೆಚ್ಚಾಗುವುದರಿಂದ ಅನಾಕರ್ಷಕವೆಂದು ಪರಿಗಣಿಸಲಾಗುತ್ತದೆ. 
  • ಬಡ ಮತ್ತು ಅನಾಥ ನಿವಾಸಿಗಳು ಗುರುತಿನ ಸ್ಪಷ್ಟ ಪೂರವೆಯನ್ನು ಒದಗಿಸುವುದರಿಂದ ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯ ಸೇವೆಯನ್ನು ಪಡೆಯುವ ಅಧಿಕಾರವನ್ನು ಪಡೆಯಲು ಮತ್ತು ಅವರಿಗೆ ಸರ್ಕಾರ ಮತ್ತು ಖಾಸಗಿ ವಲಯದ ದೊರಕುವ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆಯುವ ಅವಕಾಶಗಳನ್ನು ಆಧಾರ್ ನೀಡುತ್ತದೆ.

ಪ್ರಯೋಜನಗಳು

          ವಿಶಿಷ್ಟ ಗುರುತಿನ ಸಂಖ್ಯೆ-ಆಧಾರ್:  ರಾಷ್ಟ್ರಾದ್ಯಾಂತ ವ್ಯಕ್ತಿಗಳನ್ನು ಅವರ ವೈಯಕ್ತಿಕ ಮತ್ತು ಜೈವಿಕ ಮಾಹಿತಿಗಳ ಆಧಾರದ ಮೇಲೆ ಸ್ಪಷ್ಟವಾಗಿ ಹಾಗೂ ವೈಯಕ್ತಿಕವಾಗಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಗುರುತಿಸುವ ಸಾಧನವಾಗಿದೆ. ಇದು ಆರ್ಥಿಕ ಸೇರ್ಪಡೆ ಅಸ್ತಿತ್ವದಲ್ಲಿರುವ ಮಿತಿಗಳನ್ನು ಪರಿಹರಿಸಲು ಅವಕಾಶವನ್ನು ಒದಗಿಸುತ್ತದೆ. ಬಡ ನಿವಾಸಿಗಳು ಸುಲಭವಾಗಿ ಬ್ಯಾಂಕುಗಳಲ್ಲಿ ತಮ್ಮ ಗುರುತನ್ನು ಒದಗಿಸಲು ಆಧಾರ್ ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ, ಬ್ಯಾಂಕುಗಳ ವ್ಯವಹಾರ ಹೆಚ್ಚಳವಾಗಲಿದೆ.