ಆಧಾರ್ ಕುರಿತು
ಆಧಾರ್ ಎಂಬುದು ಒಂದು 12 ಡಿಜಿಟ್ ವೈಯಕ್ತಿಕ ಗುರುತಿನ ಸಂಖ್ಯೆಯಾಗಿದ್ದು, ಇದನ್ನು ಭಾರತ ಸರ್ಕಾರದ ಪರವಾಗಿ ಭಾರತದ ವಿಶಿಷ್ಟ
ಗುರುತು ಚೀಟಿ ಪ್ರಾಧಿಕಾರದಿಂದ ನೀಡಲಾಗುವುದು. ಈ ಸಂಖ್ಯೆಯನ್ನು ಪ್ರತಿಯೊಬ್ಬ ದಾಖಲಿತ ನಿವಾಸಿಯ - ಛಾಯಾಚಿತ್ರ, ಹತ್ತು ಬೆರಳು ಗುರುತುಗಳು ಹಾಗೂ ಕಣ್ಣುಪಾಪೆಗಳ ಮುದ್ರೆಯನ್ನು
ಮೂಲ ವೈಯಕ್ತಿಕ ಹಾಗೂ ಜೈವಿಕ ಮಾಹಿತಿಯೊಡನೆ ಬೆಸೆಯಲಾಗುತ್ತದೆ.
ಈ ಸಂಖ್ಯೆಯು ಭಾರತದ ಎಲ್ಲೆಡೆಯೂ
ವ್ಯಕ್ತಿ ಹಾಗೂ ವಿಳಾಸದ ಗುರುತಾಗಿ ಪುರಾವೆಯಾಗಿರುತ್ತದೆ. ವಯಸ್ಸು ಮತ್ತು ಲಿಂಗ ಏನೇ ಇರಲಿ, ಭಾರತದ ಯಾವುದೇ ನಿವಾಸಿಯು, ಭಾರತದ ವಿಶಿಷ್ಟ ಗುರುತು
ಪ್ರಾಧಿಕಾರದ ವ್ಯಾಖ್ಯೆಯಂತೆ ಅವಶ್ಯಕ ದೃಢೀಕರಣ ಪ್ರಕ್ರಿಯೆ ಮುಗಿದ ನಂತರ ಆಧಾರ್ ಸಂಖ್ಯೆ ಪಡೆಯಬಹುದಾಗಿದೆ.
ಆಧಾರ್ ಏಕೆ?
ನಿವಾಸಿಯೊಬ್ಬರಿಗೆ, ದೇಶದ ಯಾವುದೇ ಸ್ಥಳದಿಂದ ಯಾವುದೇ ಸಮಯದಲ್ಲಿ
ಸೇವೆಗಳು ಹಾಗೂ ಸಂಪನ್ಮೂಲಗಳನ್ನು ಪಡೆಯುವ ಸಾಮರ್ಥ್ಯವನ್ನು ಆಧಾರ್ ಕಲ್ಪಿಸುತ್ತದೆ.
ಉದಾಹರಣೆ, ಆಧಾರ್ ದೇಶವ್ಯಾಪಿ ಆರ್ಥಿಕ ಸೇರ್ಪಡೆಗೆ ಗುರುತಿನ
ಮೂಲಸೌಕರ್ಯವನ್ನು ಒದಗಿಸುತ್ತದೆ –
ಬ್ಯಾಂಕುಗಳು
ಪ್ರತಿಯೊಬ್ಬ ನಿವಾಸಿಗೆ ಬ್ಯಾಂಕ್ ಖಾತೆಯೊಂದಕ್ಕೆ ವಿಶಿಷ್ಟ ಸಂಖ್ಯೆಯನ್ನು ಜೋಡಿಸಿ, ನಿವಾಸಿಗಳು ಎಲ್ಲಿಂದಲಾದರೂ ತಮ್ಮ ಖಾತೆಯನ್ನು ಸಂಪರ್ಕಿಸಲು
ಅನುವು ಮಾಡಿಕೊಡಲು ಆನ್ ಲೈನ್ ಗುರುತಿನ ಖಾತ್ರಿಯನ್ನು ಉಪಯೋಗಿಸುಬಹುದಾಗಿದೆ.
ವ್ಯಕ್ತಿಗತ ಹಕ್ಕುಗಳ ಪರಿಣಾಮಕಾರಿ ಜಾರಿಗೂ ಆಧಾರ್ ಅಡಿಪಾಯವಾಗಬಲ್ಲದು. ಉದ್ಯೋಗ, ಆಹಾರ, ಇತ್ಯಾದಿಗಳ ಮೇಲೆ ತಮ್ಮ ಹಕ್ಕುಗಳನ್ನು ಚಲಾಯಿಸಲು ವ್ಯಕ್ತಿಗತ ಗುರುತಿನ ಸ್ಪಷ್ಟ ಛಾಪು ಅವಶ್ಯಕವಾಗಿದೆ. ಹೀಗೆ ಗುರುತು ಮತ್ತು ಅಂಗೀಕೃತಗೊಂಡ
ವ್ಯಕ್ತಿಗಳ ಈ ಸಂಖ್ಯೆಯು ರಾಜ್ಯಕ್ಕೆ ಇಂತಹ ಹಕ್ಕುಗಳನ್ನು ಪೂರೈಸಲು ಸಹಾಯಕವಾಗುತ್ತದೆ.
ಒಮ್ಮೆ ವ್ಯಕ್ತಿಯೊಬ್ಬರು ಯು.ಐ.ಡಿ. ಸಂಖ್ಯೆಯನ್ನು ಪಡೆದಲ್ಲಿ, ಅವರಿಗೆ ದೇಶದಾದ್ಯಂತ ಸುಲಲಿತವಾಗಿ ತಮ್ಮ ಗುರುತನ್ನು ನಿರೂಪಿಸಲು ಸಾಧ್ಯವಾಗುತ್ತದೆ. ಇಂತಹ ಯು.ಐ.ಡಿ. ಸಂಖ್ಯೆಯು ಗುರುತು ಖಾತ್ರಿಗೆ ಏಕೈಕ
ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ. ನಾಗರೀಕರುಗಳು ಬ್ಯಾಂಕು ಖಾತೆ, ಪಾಸ್ ಪೋರ್ಟು, ವಾಹನ ಚಾಲನೆ ಪರವಾನಗಿ ಮತ್ತಿತರ
ಸೇವೆಗಳನ್ನು ಪಡೆಯಲಿಚ್ಛಿಸಿದ ಪ್ರತಿ ಬಾರಿಯೂ ಮತ್ತೆ ಮತ್ತೆ ಸಂಬಂಧಿತ ಗುರುತಿನ ದಾಖಲೆಗಳನ್ನು
ಒದಗಿಸುವ ಪರಿಸ್ಥಿತಿ ಬರುವುದಿಲ್ಲ.
ಗುರುತಿನ ಸ್ಪಷ್ಠ ಪುರಾವೆ ಒದಗಿಸುವುದರಿಂದಾಗಿ, ಯು.ಐ.ಡಿ. ಸಂಖ್ಯೆಯು ಬಡ ಮತ್ತು ನಿರಾಶ್ರಿತ ನಿವಾಸಿಗಳಿಗೆ
ಪಾರಂಪರಿಕವಾಗಿ ಬ್ಯಾಂಕಿನ ವ್ಯವಸ್ಥೆ,
ಸರ್ಕಾರಿ
ಮತ್ತು ಖಾಸಗೀ ವಲಯಗಳು ಒದಗಿಸುವ ಸೇವೆಗಳನ್ನು ಪಡೆಯುವ ಅವಕಾಶಗಳಿಗೆ ಅನುಕೂಲ ಕಲ್ಪಿಸುತ್ತದೆ. ವಲಸೆ/ಗುಳೆ ಹೋಗುವವರಿಗೂ ಯು.ಐ.ಡಿ.ಯು
ಖಚಿತ ಗುರುತನ್ನು ಒದಗಿಸುತ್ತದೆ.