Last modified at 18/07/2016 17:37 by System Account

ದೂರು ನೀಡುವ ರೀತಿ

ಯಾರೇ ಆಗಲಿ, ತಮ್ಮ ಹತ್ತಿರವಿರುವ ಜಿಲ್ಲಾ ಎಸಿಬಿ ಕಛೇರಿಯಲ್ಲಿ ಅಥವಾ ಕೇಂದ್ರ ಕಛೇರಿಯಲ್ಲಿ ದೂರನ್ನು ನೀಡಬಹುದಾಗಿದೆ. ಜಿಲ್ಲಾವಾರು ಹಾಗೂ ಕೇಂದ್ರ ಕಛೇರಿಯ ವಿವರಗಳು ‘ಸಂಪರ್ಕಿಸಿ’ ಪುಟದಲ್ಲಿ (ಕಾಂಟಾಕ್ಟ್ ಅಸ್) ನೀಡಲಾಗಿದೆ. ಬೆಂಗಳೂರು ನಗರದಲ್ಲಿ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕೇಂದ್ರ ಕಛೇರಿಯಲ್ಲಿ ದೂರು ನೀಡಲು ಇಚ್ಛಿಸುವವರು ಡಿ.ವೈ.ಎಸ್.ಪಿ ಅಥವಾ ಪೊಲೀಸ್ ಇನ್ಸ್ ಪೆಕ್ಟರ್ ರವರನ್ನು ಸಂಪರ್ಕಿಸಬಹುದು. ದೂರುದಾರರು ದೂರು ನೀಡುವಾಗ ಬೆರಳಚ್ಚು ಮಾಡಿದ ಅಥವಾ ಕೈ ಬರಹದ ಮೂಲ ಪ್ರತಿಯನ್ನು ಸಲ್ಲಿಸಬಹುದು.

ಅನಕ್ಷರಸ್ಥರಾಗಿದ್ದಲ್ಲಿ, ಬೇರೊಬ್ಬರಿಂದ ಬರೆಸಿ ದೂರು ಸಲ್ಲಿಸಬಹುದಾಗಿದ್ದು ಬರೆದವರ ಹೆಸರು, ವಿಳಾಸವನ್ನು ದೂರಿನ ಕೊನೆಯಲ್ಲಿ ಬರೆದಿರಬೇಕು, ಹಾಗೂ ‘ದೂರನ್ನು ದೂರುದಾರರು ಹೇಳಿದಂತೆಯೇ ಬರೆದಿರುವೆ ಎಂಬ ಬಗ್ಗೆ ಮತ್ತು ಬರೆದಿರುವ ಅಂಶಗಳನ್ನು ದೂರುದಾರರಿಗೆ ಓದಿ ಹೇಳದೆ ಅದು ಸರಿ ಇದೆ ಎಂದು ಒಪ್ಪಿರುತ್ತಾರೆ’ ಎಂಬ ದೃಢೀಕರಣವಿರಬೇಕು. ದೂರುದಾರರು ತಮ್ಮ ಎಡಗೈ ಹೆಬ್ಬೆರಳಿನ ನಿಶಾನೆಯನ್ನು ದೂರಿನ ಪ್ರತಿಗೆ ಒತ್ತಿರಬೇಕು. ಅಕ್ಷರಸ್ಥ ದೂರುದಾರರು ದೂರು ನೀಡುವಾಗ ತಮ್ಮ ಸಹಿಯನ್ನು ಹಾಕಿರಬೇಕು.

ಸಾಮಾನ್ಯವಾಗಿ ಅನಾಮಧೇಯ ಮತ್ತು ಸುಳ್ಳು ವಿಳಾಸವಿರುವ ದೂರುಗಳನ್ನು ಪರಿಗಣಿಸಲಾಗುವುದಿಲ್ಲ. ಆದರೆ ಪ್ರಸ್ತಾಪಿತ ದೂರಿನ ಅಂಶಗಳನ್ನು ಪರಿಶೀಲಿಸಿ ನಿಖರ ಅಂಶಗಳಿದ್ದರೆ ತನಿಖೆ ಮಾಡಲಾಗುವುದು. ಬರೆದ ದೂರುಗಳನ್ನು/ ಮಾಹಿತಿಯನ್ನು ನೊಂದಾಯಿತ ಅಂಚೆ (ರಿಜಿಸ್ಟರ್ ಪೋಸ್ಟ್) ಮುಖೇನವೂ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ, ವೆಬ್ ಪುಟದ ‘ಸಂಪರ್ಕಿಸಿ ಪುಟ’ದಲ್ಲಿ ಎಸಿಬಿ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದ್ದು, ಸಂಕೋಚವಿಲ್ಲದೆ ಸಂಪರ್ಕಿಸಬಹುದು.

ಸಂಪರ್ಕಿಸಿ



ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಭ್ರಷ್ಟಾಚಾರ ನಿಗ್ರಹ ದಳ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top