Kannadacomputing

ಕನ್ನಡ ಕಂಪ್ಯೂಟಿಂಗ್ ಯೋಜನೆ
 

ಮಾನ್ಯ ಮುಖ್ಯ ಮಂತ್ರಿಗಳು 2015-16ನೇ ಸಾಲಿನ ಆಯವ್ಯಯವನ್ನು ಮಂಡಿಸುವಾಗ ಇ-ಆಡಳಿತ ಇಲಾಖೆಯಿಂದ ಕನ್ನಡ ಕಂಪ್ಯೂಟಿಂಗ್ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದು, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 02 ಸಿಇಜಿ 2015 ದಿನಾಂಕ:22.07.2015 ರಂದು ಜಾರಿಯಾಗಿದೆ.  ಕನ್ನಡ ಕಂಪ್ಯೂಟಿಂಗ್ ಮಾಡುವುದರಿಂದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಸುಲಲಿತವಾಗಿ ನೌಕರರು ಬಳಸಲು ಉಪಯುಕ್ತವಾಗುತ್ತದೆ.  ಸದರಿ ಕನ್ನಡ ಕಂಪ್ಯೂಟಿಂಗ್ ಯೋಜನೆ ಜಾರಿಗೆ ಬರುವುದರಿಂದ ರಾಜ್ಯದಾದ್ಯಂತ ಕನ್ನಡ ಭಾಷೆ ಹೆಚ್ಚು ವಿಸ್ತಾರಗೊಂಡು ನೌಕರರಿಗೆ ಸಂಶಯವಿಲ್ಲದೇ ಕನ್ನಡ ಕಂಪ್ಯೂಟಿಂಗ್ ಉಪಯೋಗಿಸಲು ಸಾಧ್ಯವಾಗುತ್ತದೆ. 

ಈ ಯೋಜನೆಯ ಮುಖ್ಯ ಉದ್ಧೇಶ :-

ಅ)  ಕನ್ನಡ ಯೂನಿಕೋಡ್ ಬಗ್ಗೆ ಅರಿವು ಮೂಡಿಸುವಿಕೆ.

ಆ)  ಸರ್ಕಾರಿ ನೌಕರರಿಗೆ ಕನ್ನಡ ಕಂಪ್ಯೂಟಿಂಗ್ ಬಗ್ಗೆ ಇರುವ ಅನುಮಾನಗಳ ಬಗ್ಗೆ ಷ್ಪಷ್ಠೀಕರಣ  

      ನೀಡುವುದು.

ಇ)  ಕನ್ನಡ ಕಂಪ್ಯೂಟಿಂಗ್ ಬಳಕೆಯನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಲಪಡಿಸುವುದು.

 

ಇದನ್ನು ಮುಂದುವರೆಸುತ್ತಾ ಇ-ಆಡಳಿತ ಇಲಾಖೆಯ ಇ–ಆಡಳಿತ ಕೇಂದ್ರವು ಆಡಳಿತ ತರಬೇತಿ ಸಂಸ್ಥೆ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರಗಳಲ್ಲಿ ಅಧಿಕಾರಿ / ಸಿಬ್ಬಂದಿ ವರ್ಗದವರಿಗೆ ಆನ್ ಲೈನ್ ಕನ್ನಡ ಕಂಪ್ಯೂಟಿಂಗ್ ತರಬೇತಿಯನ್ನು ಪ್ರಾರಂಭಿಸಿದೆ. 


 

ದಿನಾಂಕ 16.11.2015 ರಂದು ಬೀದರ್ ಜಿಲ್ಲೆಯಿಂದ ಪ್ರಾರಂಭವಾದ ತರಬೇತಿ ನಂತರದಲ್ಲಿ ವಿಜಯಪುರ, ಕಲ್ಬುರ್ಗಿ, ಬಾಗಲಕೋಟೆ, ಗದಗ್, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಚಿಕ್ಕಮಗಳೂರು ಶಿವಮೊಗ್ಗ, ಹಾಸನ, ಶಿರಸಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ (ಒಟ್ಟು 16 ಜಿಲ್ಲೆಗಳಲ್ಲಿ) ಈವರೆಗೆ ಕನ್ನಡ ಕಂಪ್ಯೂಟಿಂಗ್ ಆನ್ ಲೈನ್ ತರಬೇತಿಯನ್ನು  ಸಂಘಟಿಸಿದೆ.   ಈ ತರಬೇತಿಯಲ್ಲಿ 1,000 ಕ್ಕೂ ಮಿಗಿಲಾಗಿ ಅಧಿಕಾರಿ ಮತ್ತು ನೌಕರರು ಭಾಗವಹಿಸಿರುತ್ತಾರೆ.

  ಆ ತರಬೇತಿಯ ಕೆಲವು ಭಾವಚಿತ್ರಗಳು:​


 

ಕನ್ನಡ ಕಂಪ್ಯೂಟಿಂಗ್ ತರಬೇತಿ ಬೀದರ್ ದಿನಾಂಕ: 16.11.2015.
 ಕನ್ನಡ ಕಂಪ್ಯೂಟಿಂಗ್ ತರಬೇತಿ ಚಿತ್ರದುರ್ಗ ದಿನಾಂಕ: 01.12.2015. ಕನ್ನಡ ಕಂಪ್ಯೂಟಿಂಗ್ ತರಬೇತಿ ಹಾಸನ ದಿನಾಂಕ: 02.01.2016​.


 


 

ದಿನಾಂಕ: 11.01.2016 ರಿಂದ 29.01.2016 ರವರೆಗೆ ಕನ್ನಡ ಕಂಪ್ಯೂಟಿಂಗ್ ತರಬೇತಿಯು ಹಾವೇರಿ, ಬೆಳಗಾಂ, ದಾರವಾಢ, ಕೊಪ್ಪಳ, ಉಡುಪಿ ಮಂಗಳೂರು, ಮಡಿಕೇರಿ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಕೋಲಾರ ಚಿಕ್ಕಬಳ್ಳಾಪುರ  ಈ ಜಿಲ್ಲೆಗಳಲ್ಲಿ ನಡೆಸಲಾಯಿತು.    ​          


 


ಸಂಪರ್ಕಿಸಿ

ಶ್ರೀ ಟಿ. ಪ್ರಭಾಕರ್,

ಯೋಜನಾ ನಿರ್ದೇಶಕರು, ಕೆಪಾಸಿಟಿ ಬಿಲ್ಡಿಂಗ್,
ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560 001.
Tel: +91 080 22340060
Fax: +91 080 22371089
Email : prabhakardd@gmail.com
Url : http://www.karnataka.gov.in/training


 

 

 ​​

Content Owned and Maintained by : Centre for e-Governance, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Centre for e-Governance - Government of Karnataka
©2017, All Rights Reserved.