ಮುಖಪುಟ

Last modified at 08/05/2017 12:23 by System Account

​​​​​​​ ಮುಖಪುಟ

 

ಇ-ಆಡಳಿತ ಕೇಂದ್ರದ ಬಗ್ಗೆ

ಇ-ಆಡಳಿತ ಕೇಂದ್ರದ ಜಾಲತಾಣ ಪುಟಗಳಿಗೆ ಸ್ವಾಗತ.  ಕರ್ನಾಟಕ ಸರ್ಕಾರವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದ್ಬಳಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅನುಕರಣೀಯ ಮಾದರಿಯಾಗಿದ್ದು, ರಾಷ್ಟ್ರದಲ್ಲಿ ವಿದ್ಯುನ್ಮಾನ-ಆಡಳಿತದ (ಇ-ಆಡಳಿತ) ಉಪಕ್ರಮಿಕೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸಕ್ರಿಯವಾಗಿದೆ. ರಾಜ್ಯದ ಇ-ಆಡಳಿತ ನೀತಿ ಮತ್ತು ತಂತ್ರಗಾರಿಕೆಗಳ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲು ಇ-ಆಡಳಿತ ಕೇಂದ್ರವನ್ನು ಸಂಘ-ಸಂಸ್ಥೆಗಳ ನೋಂದಾವಣೆ ಅಧಿನಿಯಮದ ಅಡಿಯಲ್ಲಿ 2006 ರಲ್ಲಿ ಒಂದು ನೋಡಲ್ ಸಂಸ್ಥೆಯಾಗಿ ಸೃಷ್ಟಿಸಲಾಗಿದೆ. ಇದು ರಾಜ್ಯದಲ್ಲಿ ಇ-ಆಡಳಿತ ಮೂಲಸೌಕರ್ಯಗಳ ಮತ್ತು ಮೂಲಭೂತ ಆಡಳಿತ ಸುಧಾರಣೆ ಆಧಾರಿತ ಅನ್ವಯಿಕಗಳನ್ನು ನಿರ್ವಹಿಸುವ ಪಾಲಕ ಸಂಸ್ಥೆಯಾಗಿದೆ. ವಸ್ತುತಃ ಈ ಸಂಸ್ಥೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ– (ಆಡಳಿತ ಸುಧಾರಣೆ – ಇ-ಆಡಳಿತ)) (ಡಿಪಿಎಆರ್- ಆಸು -ಇಆ) ಯ ಅಡಿಯಲ್ಲಿ ಸ್ಥಾಪಿತವಾಗಿದ್ದು, ಅದು ರಾಜ್ಯದ ಮುಖ್ಯಮಂತ್ರಿಗಳಿಗೇ ನೇರವಾಗಿ ಹೊಣೆಯಾಗಿರುವುದು ರಾಜ್ಯದಲ್ಲಿ ವಿಶೇಷವಾಗಿದೆ.

     ಪ್ರಸ್ತುತದಲ್ಲಿ, ಅತ್ಯಾಧುನಿಕ ಎರಡು ದತ್ತಾಂಶ ಕೇಂದ್ರಗಳು, ಎಂ.ಪಿ.ಎಲ್.ಎಸ್. ತಂತ್ರಜ್ಞಾನ ಆಧಾರಿತ ಕರ್ನಾಟಕ ರಾಜ್ಯ ವಿಸ್ತೃತ ಜಾಲ (/ಕೆಸ್ವಾನ್) ಮತ್ತು ಮೂಲ ಅನ್ವಯಿಕಗಳಾದ ಇ-ಸಂಗ್ರಹಣೆ ಮತ್ತು ಎಚ್.ಆರ್.ಎಂ.ಎಸ್. ಇವುಗಳನ್ನು ನಿರ್ವಹಿಸುವ ಹೆಗ್ಗಳಿಕೆಯ ಕೇಂದ್ರವಾಗಿದ್ದು, ಶತ ಪ್ರತಿಶತ ಕಾರ್ಯನಿರ್ವಹಣೆಯ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬರುತ್ತಾ, ಕೆಲವು ಹೆಗ್ಗುರುತನ್ನೂ ಮೂಡಿಸಿದೆ.  ಇನ್ನಷ್ಟು ಓದಿ...

ನಮ್ಮ ಸಂದೇಶ



ಶ್ರೀ ರಾಜೀವ್ ಚಾವ್ಲಾ ಭಾಆಸೇ, ಪ್ರಧಾನ ಕಾರ್ಯದರ್ಶಿ

ಇ-ಆಡಳಿತ ಕೇಂದ್ರವು ಕರ್ನಾಟಕ ಸರ್ಕಾರದ ಇ-ಪರಿವರ್ತನಾ ಕಾರ್ಯದ ನೇತೃತ್ವವನ್ನು ವಹಿಸಿದೆ. ಇದರ ಗುರಿಯು ಸರ್ಕಾರಕ್ಕೆ ಉತ್ತಮ ಗುಣಮಟ್ಟದ ಜಾಗತಿಕ ನೈಪುಣ್ಯತೆ, ಸೂಕ್ತ ತಂತ್ರಜ್ಞಾನ, ದಕ್ಷ ಪ್ರಕ್ರಿಯೆ ಮತ್ತು ಅಗತ್ಯ ಆರ್ಥಿಕ ಯೋಜನೆಗಳನ್ನು ಒದಗಿಸಿ, ಇಲಾಖೆಗಳಿಗೆ ಇ-ಆಡಳಿತ ಉಪಕ್ರಮಿಕೆಗಳ ವಿನ್ಯಾಸ ಮಾಡಿ ಅನುಷ್ಠಾನಗೊಳಿಸುವುದೇ ಆಗಿರುತ್ತದೆ.​

     ನಮ್ಮ ಉಪಕ್ರಮಗಳಿಂದ ರಾಜ್ಯ ಹಾಗೂ ನಾಗರೀಕರು ಸಾಕಷ್ಟು ಪ್ರಯೋಜನ ಪಡೆಯುವರೆಂದು ನಾವಾದರೂ ನಂಬಿದ್ದೇವೆ.


Mobileone Award







ಶ್ರೀ
. ಕೆ.ನಾಗರಾಜ,              
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು

ಇ-ಆಡಳಿತ ಕೇಂದ್ರವನ್ನು ಮಾಹಿತಿ ತಂತ್ರಜ್ಞಾನದ ಬಳಕೆಯೊಂದಿಗೆ ವಿಶ್ವಮಟ್ಟದ ಆಡಳಿತ ಸುಧಾರಣಾ ಸಂಸ್ಥೆಯಾಗಿ ರೂಪಿಸುವ ಮೂಲಕ ಈ ಜ್ಞಾನದ ಸಂಪೂರ್ಣ ಪ್ರಯೋಜನ ಪಡೆದು ಜನತೆಗೆ ಉತ್ತಮ ಆಡಳಿತ ನೀಡುವುದು ಕೇಂದ್ರದ ಗುರಿಯಾಗಿದೆ.  ಅಂತೆಯೇ ಹಲವು ಹೆಗ್ಗುರುತುಗಳನ್ನು ಮೂಡಿಸುವಲ್ಲಿ ಸಫಲರಾಗಿದ್ದೇವೆ.

   ಜನತೆಯು ನಮ್ಮ ಯೋಜನೆಗಳ ಗರಿಷ್ಠ ಲಾಭ ಪಡೆದುಕೊಳ್ಳುವ ಮೂಲಕ ನಮಗೆ ಸ್ಫೂರ್ತಿ ನೀಡಿದಂತಾಗುತ್ತದೆ.

ಇನ್ನಷ್ಟು ಓದಿ..

 

 Events

<May 2017>
MonTueWedThuFriSatSun
24252627282930
1234567
891011121314
15161718192021
22232425262728
2930311234
No Events Scheduled
ವಿಷಯ ಸ್ವಾಮ್ಯ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.