​​​​​​​​​​​​​​​​​​​​​​​​​​​​​​​​​​​​​​​​​​​​​​​ ​ ​​​​​​​​​​​​​​​​​​​​​​​​​​ ​​​​​​​​​​​​​​​​​​​​​​​​

ಪ್ರಕಟಣೆ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಬೆಂಗಳೂರು-52
(ಕರ್ನಾಟಕ ಸರ್ಕಾರದ ಉದ್ಯಮ)
ದೇವರಾಜ ಅರಸು ಭವನ, 4ನೇ ಮಹಡಿ, ನಂ 16ಡಿ, ಮಿಲ್ಲ​ರ್ ಟ್ಯಾಂಕ್ ಬಂಡ್ ರಸ್ತೆ ಏರಿಯಾ, 
ವಸಂತನಗರ, ಬೆಂಗಳೂರು – 52
--------------------------------------------------------------

ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿ ಇವರು ಒದಗಿಸಿದ ಅನುದಾನದಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳಾದ 1)ಬೈರಾಗಿ (ಬಾವ), 2)ಬಾಲ ಸಂತೋಷಿ-ಜೋಷಿ, 3)ಬಾಜಿಗರ್, 4)ಭರಡಿ, 5)ಬುಡಬುಡಕಿ-ಜೋಶಿ-ಗೋಂಧಳಿ, 6)ಚಾರ, 7)ಚಿತ್ರಕಥಿ-ಜೋಷಿ, 8)ಧೋಲಿ, 9)ಢವೇರಿ, 10)ದೊಂಬರಿ, 11)ಘಿಸಾಡಿ, 12)ಗರುಡಿ, 13)ಗೋಪಾಲ್, 14)ಗೊಂದÀಳಿ, 15)ಹೆಳವ, 16)ಜೋಗಿ, 17)ಕೇಲ್ಕರಿ, 18)ಕೋಲ್ಹಟಿ, 19)ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲ್ಲಿ, 20)ನಾಥಪಂಥಿ-ಡೌರಿ-ಗೋಸಾವಿ 21)ನಿರ್ಶಿಕಾರಿ, 22)ಪಾಂಗ್ಯುಯಲ್, 23)ಜೋಷಿ (ಸಾದ ಜೋಷಿ), 24)ಸಾನ್ಸಿಯ, 25)ಸರಾನಿಯ, 26)ತಿರುಮಲಿ, 27)ವಾಯ್ಡು 28)ವಾಸುದೇವ್, 29)ವಾಡಿ, 30)ವಾಗ್ರಿ, 31)ವಿರ್, 32)ಬಜನಿಯ, 33)ಶಿಕ್ಕಲಿಗರ್, 34)ಗೊಲ್ಲ, 35)ಕಿಲ್ಲಿಕ್ಯಾತಸ್, 36)ಸರೋಡಿ, 37)ದುರ್ಗ-ಮುರ್ಗ (ಬುರ್‍ಬುರ್‍ಚ), 38)ಹಾವಗಾರ್ (ಹಾವಾಡಿಗಾರ್), 39)ಪಿಚಗುಂಟಲ, 40)ಮಸಣಿಯ ಯೋಗಿ, 40)(ಬೆಸ್ತರ್)ಬುಂಡಬೆಸ್ತ, 42)ಕಟಬು, 43)ದರ್ವೆಶ್, 44)ಕಾಶಿ ಕಪಾಡಿ, 45)ದೊಂಬಿದಾಸ ಮತ್ತು 46)ಬೈಲ್‍ಪತರ್ ಈ ಸಮುದಾಯಗಳ ಅಭಿವೃದ್ದಿಗೆ ಸೌಲಭ್ಯ ಒದಗಿಸಲು ನಿಗಮವು ಅನುಷ್ಠಾನಗೊಳಿಸುತ್ತಿರುವ ಈ ಕೆಳಕಂಡ ಕಾರ್ಯಕ್ರಮಗಳಲ್ಲಿ, 2017-18ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. .​(ಕ್ಲಿಕ್ ಮಾಡಿ ​).​​2017-18 ನೇ ಸಾಲಿನ ​ನಿಗಮದ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ಫಲಾಪೇಕ್ಷೆಗಳು ಅರ್ಜಿ ಸಲ್ಲಿಸಲು ಹಾಗು ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ .ಇ ಟಿ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕ ವನ್ನು 09/06/2017 ರಿಂದ ದಿನಾಂಕ 24/06/2017 ​ರವರೆಗೆ ವಿಸ್ತರಿಸಲಾಗಿದೆ.​(ಕ್ಲಿಕ್ ಮಾಡಿ ​).

ದೇಹಿನಿ/ಅರಿವು/ಸಿಇಟಿ/ಪಿಓ-1/ಸಿಆರ್-  /2017-18                                                                                                                                                                  ದಿನಾಂಕ:26.04.2017
ಪ್ರಕಟಣೆ
ವಿಷಯ: 2017-18ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಮಂಜೂರಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿರುವ ಕುರಿತು.
*****
ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಮೂಲಕ ಸೀಟು ಪಡೆದು ಬಿ.ಇ., ಎಂ.ಬಿ.ಬಿ.ಎಸ್., ಬಿ.ಯು.ಎಂ.ಎಸ್., ಬಿ.ಡಿ.ಎಸ್., ಬಿ.ಎ.ಎಂ.ಎಸ್., ಬಿ.ಹೆಚ್.ಎಂ.ಎಸ್., ಎಂ.ಸಿ.ಎ., ಎಂ.ಎಸ್ಸಿ(ಅಗ್ರಿ)., ಮುಂತಾದ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ.1.00 ಲಕ್ಷಗಳವರೆಗೆ ಸಾಲ ಮಂಜೂರು ಮಾಡಲಾಗುತ್ತದೆ. 
2017-18ನೇ ಸಾಲಿಗೆ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ.ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸಿದ ಮುಂಗಡ ಹಣದ ಮೊತ್ತದಲ್ಲಿ ಜಮಾ ಮಾಡಲಾಗುತ್ತದೆ. 
      2017-18ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ನಿಗಮದಿಂದ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ಪ್ರ-1, ಪ್ರ-2ಎ(ವಿಶ್ವಕರ್ಮ ಮತ್ತು ಉಪ ಜಾತಿಗಳನ್ನು ಹಾಗೂ ಅಲ್ಪ ಸಂಖ್ಯಾತರನ್ನು ಹೊರತುಪಡಿಸಿ), ಪ್ರ-3ಎ ಮತ್ತು ಪ್ರ-3ಬಿ ಗೆ ಸೇರಿದ್ದು, ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನ ರೂ.3.50 ಲಕ್ಷಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ. 
          ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ http://www.karnataka.gov.in/dbcdc/ ರಲ್ಲಿ ಲಾಗಿನ್ ಆಗಿ ವೆಬ್‍ಸೈಟ್‍ನಲ್ಲಿ ಲಭ್ಯವಿರುವ UserName: infra\dbcdcarivu   ಮತ್ತು Password: DB(d#098 ನ್ನು ನಮೂದಿಸಿ ಅರ್ಜಿಯನ್ನು ಆನ್‍ಲೈನ್‍ಲ್ಲಿ ಭರ್ತಿಮಾಡುವುದು. ಹಾಗೂ ಈ ಕೆಳಕಂಡ ದಾಖಲೆಗಳನ್ನು Scan  ಮಾಡಿ ಅರ್ಜಿಯೊಂದಿಗೆ ಆನ್‍ಲೈನ್‍ಲ್ಲಿ ದಿನಾಂಕ 20.05.2017 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ಕಛೇರಿಗಳನ್ನು ಅಥವಾ ಮೇಲ್ಕಂಡ ವಿಳಾಸವನ್ನು ಸಂಪರ್ಕಿಸುವುದು.
ಅರ್ಜಿಯೊಂದಿಗೆ Scan ಮಾಡಿ ಸಲ್ಲಿಸಬೇಕಾದ ದಾಖಲೆಗಳು:_ 
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
2. ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ.
​3. ಆಧಾರ್ ಕಾರ್ಡ್ ಸಂಖ್ಯೆ.
4. ಎಸ್.ಎಸ್.ಎಲ್.ಸಿ ಅಂಕಪಟ್ಟಿ.
5. ಸಿ.ಇ.ಟಿ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್.
(ಡಾ|| ಎಂ.ಆರ್. ಏಕಾಂತಪ್ಪ)
ವ್ಯವಸ್ಥಾಪಕ ನಿರ್ದೇಶಕರು.
​​​​​​​

ಸಂಖ್ಯೆ: ದೇಹಿನಿ/ಸ/ಅಆ/ಸಿಆರ್-05/2017-18                                                                                                                                                                               ದಿನಾಂಕ: 25/04/2017​
                                                         ​  ಪ್ರಕಟಣೆ  
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2017-18ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ  ಕಛೇರಿಯಲ್ಲಿ ಅರ್ಜಿ ಪಡೆಯಲು ನಿಗದಿಪಡಿಸಿದ ಕೊನೆಯ ದಿನಾಂಕ: 31/05/2017. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ: 09/06/2017

ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಹೊಂದಿರಬೇಕಾದ ಸಾಮಾನ್ಯ ಆರ್ಹತೆಗಳು.(1) ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.(ವಿಶ್ವಕರ್ಮ ಅದರ ಉಪ ಸಮುದಾಯಗಳನ್ನು ಮತ್ತು ಮತಿಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) (2) ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು, (3) ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳು. (4) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. (5) ಅರ್ಜಿದಾರರು ಆಧಾರ್ ಸಂಖ್ಯೆ ಹೊಂದಿರಬೇಕು. (6)ಅರ್ಜಿದಾರರ ಐ.ಎಫ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.
ರಾಜ್ಯ ಸರ್ಕಾರದ ಯೋಜನೆಗಳು:

1. ​​​​​​​​​​ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ- ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ, ವ್ಯಾಪಾರ, ಸಾರಿಗೆ ಕೈಗಾರಿಕೆ, ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಟ ರೂ.5.00 ಲಕ್ಷಗಳವರೆಗೆ ಸಾಲ ಹಾಗೂ ನಿಗಮದಿಂದ ಶೇ20ರಷ್ಟು ಗರಿಷ್ಠ ರೂ.1.00ಲಕ್ಷಗಳ ಶೇಕಡ 4ರ ಬಡ್ಡಿದರದಲ್ಲಿ ಮಾರ್ಜಿನ್ ಹಣ. ರೂ.1.00 ಲಕ್ಷಕ್ಕಿಂತ ಕಡಿಮೆ ಇರುವ ಸಾಲಕ್ಕೆ ಶೇ.30ರಷ್ಟು, ಅಥವಾ ಗರಿಷ್ಟ ರೂ. 10,000/-ಗಳ ಸಹಾಯಧನ (ಸಬ್ಸಿಡಿ). 

2. ಅರಿವು-ಶೈಕ್ಷಣಿಕ ನೇರ ಸಾಲ ಯೋಜನೆ:- ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.3.50ಲಕ್ಷಗಳ ಮಿತಿಯಲ್ಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರತು ಪಡಿಸಿ ಇತರೆ ಪ್ರವೇಶ ಪರೀಕ್ಷೆ ಮುಖಾಂತರ ಮೆರಿಟ್ ಆಧಾರದ ಮೇಲೆ ಈ ಕೆಳಕಂಡ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿಗೆ ಶೇಕಡ 2ರ ಬಡ್ಡಿ ದರದಲ್ಲಿ ಗರಿಷ್ಠ ವಾರ್ಷಿಕ 1.00ಲಕ್ಷಗಳ ವರೆಗೆ ಸಾಲ ಒದಗಿಸಲಾಗುವುದು.  
(1) ಬಿ.ಇ.(ಸಿ.ಇ.ಟಿ), (2) ಎಂ.ಬಿ.ಬಿ.ಎಸ್., (3) ಬಿ.ಯೂ.ಎಂ.ಎಸ್., (4) ಬಿ.ಡಿ.ಎಸ್. (5) ಬಿ.ಎ.ಎಂ.ಎಸ್. (6) ಬಿ.ಎಚ್.ಎಂ.ಎಸ್. (7) ಎಂ.ಬಿ.ಎ. (8) ಎಂ.ಟೆಕ್. (9) ಎಂ.ಇ., (10) ಎಂ.ಡಿ., (11) ಪಿಹೆಚ್.ಡಿ. (12) ಬಿ.ಸಿ.ಎ./ಎಂ.ಸಿ.ಎ (13) ಎಂ.ಎಸ್.ಆಗ್ರ್ರಿಕಲ್ಚರ್ (14)ಬಿ.ಎಸ್‍ಸಿ. ನರ್ಸಿಂಗ್, (15)ಬಿ.ಫಾರಂ/ಎಂ.ಫಾರಂ (16) ಬಿ.ಎಸ್‍ಸಿ. ಪ್ಯಾರಾ ಮೆಡಿಕಲ್ (17) ಬಿ.ಎಸ್‍ಸಿ. ಬಯೋ ಟೆಕ್ನಾಲಜಿ (18) ಬಿ.ಟೆಕ್ (19) ಬಿ.ಪಿ.ಟಿ. (20) ಬಿ.ವಿ.ಎಸ್‍ಸಿ/ಎಂ.ವಿ.ಎಸ್‍ಸಿ (21)ಬಿ.ಎನ್.ಎಂ. (22)ಬಿ.ಹೆಚ್.ಎಮ್. (23)ಎಂ.ಡಿ.ಎಸ್. (24) ಎಂ.ಎಸ್.ಡಬ್ಲ್ಯೂ (25) ಎಲ್.ಎಲ್.ಎಂ. (26)ಎಂ.ಎಫ್.ಎ. (27) ಎಂ.ಎಸ್‍ಸಿ. ಬಯೋ ಟೆಕ್ನಾಲಜಿ ಮತ್ತು (28) ಎಂ.ಎಸ್‍ಸಿ. ಎಜಿ ಇತ್ಯಾದಿ ವೃತ್ತಿಪರ ಕೋರ್ಸ್‍ಗಳು

3. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ:- 
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್‍ಡಾಕ್ರ್ಟಲ್, ಪಿಹೆಚ್.ಡಿ., ಮಾಸ್ಟರ್ ಡಿಗ್ರಿ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ವಾರ್ಷಿಕ ರೂ.3.50ಲಕ್ಷಗಳಂತೆ, 03 ವರ್ಷಗಳ ಕೋರ್ಸ್‍ನ ಅವಧಿಗೆ,  ಗರಿಷ್ಠ ರೂ.10.00ಲಕ್ಷಗಳ ಬಡ್ಡಿರಹಿತ ಸಾಲ ಮಂಜೂರು.
ಅರ್ಜಿದಾರರು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ ರೂ.3.50ಲಕ್ಷಗಳನ್ನು ಮೀರಿರಬಾರದು ಹಾಗೂ ಅರ್ಹತ ಪರೀಕ್ಷೆಗಳಲ್ಲಿ ಶೇ.60ಕಿಂತ ಹೆಚ್ಚಿನ ಅಂಕಗಳಿಸಿರಬೇಕು.

4. ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ:- ಹಿಂದುಳಿದ ವರ್ಗಗಳ ಜನರು  ಸ್ವಯಂ ಉದ್ಯೋಗಕ್ಕೆ ಆರ್ಥಿಕೆ ಚಟುವಟಿಕೆ ಕೈಗೊಳ್ಳಲು ಚಟುವಟಿಕೆ ಅನುಸಾರ ಗರಿಷ್ಠ ರೂ.2,00,000/-ಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ, ಗರಿಷ್ಠ ಶೇ.15ರಷ್ಟು  ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ4ರ ಬಡ್ಡಿದರದಲ್ಲಿ ಸಾಲ. 

5. ಕಿರುಸಾಲ ಯೋಜನೆಯಲ್ಲಿ ಸೌಲಭ್ಯ:- ಸ್ವ ಸಹಾಯ ಗುಂಪುಗಳ ಸದಸ್ಯರು ಕೈಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರದ ಚಟುವಟಿಕೆಗಳಿಗೆ ಅಂದರೆ, ಹಣ್ಣು, ತರಕಾರಿ ಮಾರುವವರು, ಹಾಲು ಮಾರುವವರು, ಹೂ ಮಾರುವವರು, ತಳ್ಳುವ ಗಾಡಿ ವ್ಯಾಪಾರಿಗಳು ಮುಂತಾದ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗೆ ವಾರ್ಷಿಕ ಶೇಕಡ 4ರ ಬಡ್ಡಿ ದರದಲ್ಲಿ ಗರಿಷ್ಠ ರೂ.10,000ಸಾಲ ಹಾಗೂ ರೂ.5,000/-ಗಳ ಸಹಾಯಧನ. ಅರ್ಜಿದಾರರು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿರಬೇಕು ಹಾಗೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
  
6. ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ:- ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವೃತ್ತಿ ಅನುಸಾರ ಗರಿಷ್ಠ ರೂ.2,00,000/-ಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ, ಗರಿಷ್ಠ ಶೇ.15ರಷ್ಟು  ಸಹಾಯಧನ, ಉಳಿಕೆ ಮೊತ್ತ ಶೇ.2ರ ಬಡ್ಡಿದರದಲ್ಲಿ ಸಾಲ.

7. ಗಂಗಾ-ಕಲ್ಯಾಣ ಯೋಜನೆ:-  
(ಅ) ವೈಯಕ್ತಿಕ ಕೊಳವೆಬಾವಿ ಯೋಜನೆ:- ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಘಟಕ ವೆಚ್ಚ ರೂ.2.50ಲಕ್ಷಗಳಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‍ಸೆಟ್ಟು ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಒದಗಿಸುವುದು.ರೂ.2.50ಲಕ್ಷಗಳಲ್ಲಿ ರೂ.1.50ಲಕ್ಷಗಳ ಸಹಾಯಧನದಲ್ಲಿ ಬೋರ್‍ವೆಲ್ ಪರಿಕರಗಳು ಹಾಗೂ ರೂ.50,000/-ಗಳ ಸಾಲ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಬೆಂಗಳೂರು ನಗರ, ಬೆಂಗಳೂರು ಗ್ರಾ||, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.4.00ಲಕ್ಷಗಳು. ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.50,000/-ಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವುದು.

(ಆ) ಸಾಮೂಹಿಕ ನೀರಾವರಿ ಯೋಜನೆ:- ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ಕನಿಷ್ಠ 3 ಜನರು ಹೊಂದಿರುವ 8 ರಿಂದ 15 ಎಕರೆ ಜಮೀನಿಗೆ ರೂ.4.00ಲಕ್ಷಗಳ ವೆಚ್ಚದಲ್ಲಿ 02 ಕೊಳವೆ ಬಾವಿ, 15 ಎಕರೆಗಿಂತ ಹೆಚ್ಚಿನ ಜಮೀನಿಗೆ ರೂ.6.00ಲಕ್ಷಗಳ ವೆಚ್ಚದಲ್ಲಿ 03 ಕೊಳವೆಬಾವಿ ಕೊರೆಯಿಸಿ ಪಂಪ್ ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ. ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.50,000/-ಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವುದು.

ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚದಲ್ಲಿ ತೆರದ ಬಾವಿಗಳ ಮಂಜೂರು. 
ಭೂ ಮಟ್ಟದಲ್ಲಿ ದೊರೆಯುವ ನದಿ ಮತ್ತು ಜಲಾಶಯಗಳ ನೀರಾವರಿ ಸಂಪನ್ಮೂಲಗಳಿಂದ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ. 

8. 2016-17ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಮಡಿವಾಳ, ಸವಿತ, ಕುಂಬಾರ ಮತ್ತು ತಿಗಳ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಆರ್ಥಿಕ ನೆರವು. 

1. ಮಡಿವಾಳ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು:
1. ದೋಬಿ ವೃತ್ತಿ ನಿರ್ವಹಣೆಗೆ ಗರಿಷ್ಠ ರೂ.2.00ಲಕ್ಷಗಳ ವರೆಗೆ, ಶೇ.2ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.15ರಷ್ಟು ಸಹಾಯಧನ.
2. ಮಡಿವಾಳ ಸಮಾಜದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ರೂ.3.00ಲಕ್ಷಗಳ ವರೆಗೆ ಆರ್ಥಿಕ ನೆರವು.
3. ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ.
4. ಅರಿವು-ಶೈಕ್ಷಣಿಕ ಸಾಲ.
5. ಕೌಶಲ್ಯಾಭಿವೃದ್ಧಿ ತರಬೇತಿ: ಡಿ.ಟಿ.ಪಿ. ತರಬೇತಿ, ವಾಹನ ಚಾಲನ ತರಬೇತಿ, ಬ್ಯೂಟಿಷಿಯನ್, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.

2. ಸವಿತ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳು: 
1. ಕ್ಷೌರಿಕ ವೃತ್ತಿ ನಿರ್ವಹಣೆಗೆ ಗರಿಷ್ಠ ರೂ.2.00ಲಕ್ಷಗಳ ವರೆಗೆ, ಶೇ.2ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.15ರಷ್ಟು ಸಹಾಯಧನ.
2. ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.2.00ಲಕ್ಷಗಳ ವರೆಗೆ, ಶೇ.4ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.15ರಷ್ಟು ಸಹಾಯಧನ
3. ನಾಧಸ್ವರ ಮತ್ತು ಡೋಲು ಉಪಕರಣ ಕೊಳ್ಳಲು ವೈಯಕ್ತಿಕ ರೂ.10,000/-ಗಳಿಂದ ರೂ.25,000/-ಗಳ ವರೆಗೆ ಆರ್ಥಿಕ ನೆರವು, ಇದರಲ್ಲಿ ಶೇ.30ರಷ್ಟು ಸಹಾಯಧನ.
4. ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ.
5. ಅರಿವು-ಶೈಕ್ಷಣಿಕ ಸಾಲ.
6. ಬೇಸಿಕ್ ಸೌಂದÀರ್ಯವರ್ಧಕ ತರಬೇತಿ: ಬ್ಯೂಟಿಷಿಯನ್ ತರಬೇತಿ ಸಂಸ್ಥೆಗಳ ಮೂಲಕ ಒಂದು ವಾರದ ಅವಧಿಯ ಉಚಿತ ತರಬೇತಿ.
7. ಕೌಶಲ್ಯಾಭಿವೃದ್ಧಿ ತರಬೇತಿ: ಡಿ.ಟಿ.ಪಿ. ತರಬೇತಿ, ವಾಹನ ಚಾಲನ ತರಬೇತಿ, ಬ್ಯೂಟಿಷಿಯನ್, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.

3. ತಿಗಳಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು:
1. ಹೂವು, ತರಕಾರಿ, ಮಾರಾಟಗಾರರಿಗೆ ಹಾಗೂ ತರಕಾರಿ ಮತ್ತು ಹೂವು ಬೆಳೆ ಬೆಳೆಯಲು ಗರಿಷ್ಠ ರೂ.2.00ಲಕ್ಷಗಳ ವರೆಗೆ, ಶೇ.2ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.15ರಷ್ಟು ಸಹಾಯಧನ.
2. ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.2.00ಲಕ್ಷಗಳ ವರೆಗೆ, ಶೇ.4ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.15ರಷ್ಟು ಸಹಾಯಧನ.
3. ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ.
4. ಅರಿವು-ಶೈಕ್ಷಣಿಕ ಸಾಲ.
5. ಕೌಶಲ್ಯಾಭಿವೃದ್ಧಿ ತರಬೇತಿ: ಆ್ಯನಿಮೆಷನ್, ಆಟೋಕ್ಯಾಡ್, ಸೌಂಡ್‍ಇಂಜಿನಿಯರಿಂಗ್, ಡಿ.ಟಿ.ಪಿ. ತರಬೇತಿ, ವಾಹನ ಚಾಲನ ತರಬೇತಿ, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ. ಇತ್ಯಾದಿ.

4. ಕುಂಬಾರ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು:
1. ಕುಂಬಾರಿಕೆ ವೃತ್ತಿ ನಿರ್ವಹಣೆಗೆ ಗರಿಷ್ಠ ರೂ.2.00ಲಕ್ಷಗಳ ವರೆಗೆ, ಶೇ.2ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.15ರಷ್ಟು ಸಹಾಯಧನ.
2. ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.2.00ಲಕ್ಷಗಳ ವರೆಗೆ, ಶೇ.4ರ ಬಡ್ಡಿದರದಲ್ಲಿ ಸಾಲ. ಇದರಲ್ಲಿ ಶೇ.15ರಷ್ಟು ಸಹಾಯಧನ.
3. ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ.
4. ಅರಿವು-ಶೈಕ್ಷಣಿಕ ಸಾಲ.
5. ಕೌಶಲ್ಯಾಭಿವೃದ್ಧಿ ತರಬೇತಿ: ಕುಂಬಾರಿಕೆ ಕಲಾತ್ಮಕ ಉತ್ಪನ್ನಗಳ ತಯಾರಿಕೆ, ಡಿ.ಟಿ.ಪಿ. ತರಬೇತಿ, ವಾಹನ ಚಾಲನ ತರಬೇತಿ, ರೆಡಿಮೇಡ್ ಗಾರ್ಮೆಟ್ಸ್ ತರಬೇತಿ ಇತ್ಯಾದಿ.  

5. ಸಾರಾಯಿ ಮಾರಾಟ ನಿಷೇದದಿಂದ ಉದ್ಯೋಗ ಕಳೆದುಕೊಂಡಿರುವವರಿಗೆ ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು: ಸರಾಯಿ ಮಾರಾಟ ನಿಷೇದದಿಂದ ಉದ್ಯೋಗ ಕಳೆದುಕೊಂಡಿರುವ ಸರಾಯಿ ವೆಂಡರ್/ಮೂರ್ತೆದಾರರು/ಈಡಿಗ ಇತ್ಯಾಧಿ ಸಮುದಾಯಗಳ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆ ಅನುಸಾರ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಲ್ಲಿ ಗರಿಷ್ಠ ರೂ.2.00 ಲಕ್ಷಗಳ ವರೆಗೆ ಸಾಲ ಶೇ.4ರ ಬಡ್ಡಿದರದಲ್ಲಿ ಈ ಮೊತ್ತದಲ್ಲಿ ಶೇ.15 ರಷ್ಟು ಸಹಾಯಧನ.

9. ಅತ್ಯಂತ/ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಯುವಜನರ ಆರ್ಥಿಕ ಸಶಕ್ತಿಕರಣಕ್ಕಾಗಿ ಆರ್ಥಿಕ ನೆರವು: ಡಾ|| ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಅತ್ಯಂತ ಹಿಂದುಳಿದ 39 ತಾಲ್ಲೂಕುಗಳು ಹಾಗೂ ಅತಿ ಹಿಂದುಳಿದ 40 ತಾಲ್ಲೂಕುಗಳು ಹೀಗೆ ಒಟ್ಟು 79 ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾವಂತ ನಿರುದ್ಯೋಗಳಿಗಳ (ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ) 10 ಸದಸ್ಯರನ್ನು ಒಳಗೊಂಡ ಸ್ವ ಸಹಾಯ ಗುಂಪುಗಳಿಗೆ ರೂ.3.50ಲಕ್ಷ ಅರ್ಥಿಕ ನೆರವು. ಇದರಲ್ಲಿ ಶೇ.30ರಷ್ಟು ಸಹಾಯಧನ ಉಳಿಕೆ ವಾರ್ಷಿಕ ಶೇ.4ರಬಡ್ಡಿದರದಲ್ಲಿ ಸಾಲ. ವಯೋಮಿತಿ ಗರಿಷ್ಠ 35 ವರ್ಷಗಳು.
10. 1)ಮಡಿವಾಳ ಸಮಾಜದ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್‍ಗಳ ಮೂಲಕ ಟ್ಯಾಕ್ಸಿಕೊಳ್ಳಲು ರೂ.5.00ಲಕ್ಷಗಳ ವರೆಗೆ ಸಾಲ. ಇದರಲ್ಲಿ ನಿಗಮದಿಂದ ಶೇ.20ರಷ್ಟು ಗರಿಷ್ಠ ರೂ.1.00ಲಕ್ಷಗಳ ಮಾರ್ಜಿನ್ ಹಣ, ವಾರ್ಷಿಕ ಶೇ.4ರ ಬಡ್ಡಿದರದಲ್ಲಿ. ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲವಾಗಿರುತ್ತದೆ.
2)ಬಿ.ಬಿ.ಎಂ.ಪಿ., ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳು ಒದಗಿಸುವ ಸ್ಥಳಗಳಲ್ಲಿ ಲಾಂಡ್ರಿ ಘಟಕ ತೆರೆಯಲು ರೂ.1.00ಲಕ್ಷಗಳ ವರೆಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಆರ್ಥಿಕ ನೆರವು. ಇದರಲ್ಲಿ ಶೇ.20ರಷ್ಟು ಸಹಾಯಧನ.


11. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮದ ಸಾಲ ಯೋಜನೆಗಳು:
ಅವಧಿಸಾಲ ಯೋಜನೆಗಳು: ಕೃಷಿವಲಯ, ಸಣ್ಣ ವ್ಯಾಪಾರ, ಸೇವಾ ವಲಯ, ಸಾರಿಗೆ ವಲಯದಲ್ಲಿ ಆಟೋರಿಕ್ಷ/ಗೂಡ್ಸ್ ಆಟೋರಿಕ್ಷ, ನ್ಯೂ ಸ್ವರ್ಣಿಮಾ, ಮೈಕ್ರೋ ಫೈನಾನ್ಸ್ ವಲಯಗಳಲ್ಲಿ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆಯಾ ವಲಯದ ಅನುಮೋದಿತ ಘಟಕ ವೆಚ್ಚದ ಮಿತಿಗೊಳಪಟ್ಟು ಗರಿಷ್ಠ ರೂ.10.00ಲಕ್ಷ ಗಳವರೆಗೆ ವಾರ್ಷಿಕ ಶೇಕಡ 6 ರಿಂದ 7ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗವುದು. 

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ: ಇಂಜಿನಿಯರಿಂಗ್, ಮೆಡಿಕಲ್, ವೆಟರ್ನರಿ, ಕಾನೂನು, ಐ.ಸಿ.ಡಬೂ.್ಯಎ, ಸಿ.ಎ, ಹೋಟೆಲ್ ಮ್ಯಾನೇಜ್‍ಮೆಂಟ್ ಇತ್ಯಾದಿ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ವಾರ್ಷಿಕ ರೂ.2.50 ಲಕ್ಷ ಅಥವಾ ಕೋರ್ಸ್‍ನ ಅವಧಿಗೆ ಒಟ್ಟು ರೂ.10.00ಲಕ್ಷ ಸಾಲ ಮಂಜೂರು. ಶೇ. 4ರ ಬಡ್ಡಿ ದರ.
ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿಗೆ ರೂ.20.00ಲಕ್ಷ ಸಾಲ ಶೇ. 4ರ ಬಡ್ಡಿದರ ಹಾಗು ವಿದ್ಯಾರ್ಥಿನಿಯರಿಗೆ ಶೇ.3.5ರ ಬಡ್ಡಿದರ. 

ಸ್ವಯಂ ಸಕ್ಷಮ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕ್ಲಿನಿಕ್ ಸ್ಥಾಪಿಸಲು ವಕೀಲ ವೃತ್ತಿ ಆರಂಭಿಸಲು ಮೆಡಿಕಲ್ ಸ್ಟೋರ್ ಪ್ರಾರಂಭಿಸಲು ಇತ್ಯಾದಿ ಸ್ವಯಂ ಉದ್ಯೋಗ ಕೈಗೊಳ್ಳಲು ರೂ.10.00 ಲಕ್ಷಗಳವರೆಗೆ ಸಾಲ ಗರಿಷ್ಠ ಬಡ್ಡಿ ಶೇ.6 ರಿಂದ 7. 

ಮಹಿಳಾ ಸಮೃದ್ಧಿ  ಯೋಜನೆ: ಹಿಂದುಳಿದ ವರ್ಗಗಳ ಮಹಿಳಾ ಸ್ವ ಸಹಾಯ ಗುಂಪುಗಳು/ಸ್ತ್ರೀ ಶಕ್ತಿ ಗುಂಪುಗಳು, ಸ್ವ ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.35,000/-ಗಳ ಸಾಲ ಶೇ. 4ರ ಬಡ್ಡಿ ದರ.

ಮೈಕ್ರೋ ಫೈನಾನ್ಸ್ ಸಾಲ ಯೋಜನೆ: ಹಿಂದುಳಿದ ವರ್ಗಗಳ ಸ್ವ ಸಹಾಯ ಗುಂಪುಗಳು/ಸ್ತ್ರೀ ಶಕ್ತಿ/ಪುರುಷ ಗುಂಪುಗಳು, ಸ್ವ ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.35,000/-ಗಳ ಸಾಲ ಶೇ. 5ರ ಬಡ್ಡಿ ದರ.
 
ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು, ಅವರು ವಾಸಿಸುತ್ತಿರುವ ಆಯಾ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ನಿಗದಿಪಡಿಸಿದ ಉಚಿತ ಅರ್ಜಿಗಳನ್ನು ದಿನಾಂಕ: 31/5/2017ರೊಳಗೆ ಪಡೆಯುವುದು. ಹಾಗೂ ನಿಗಮದ ವೆಬ್ ಸೈಟ್ www.karnataka.gov.in/dbcdc ಇಲ್ಲಿ ಪಡೆಯಬಹುದಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ /ದಾಖಲಾತಿಗಳೊಂದಿಗೆ ದಿನಾಂಕ: 09/06/2017 ರೊಳಗೆ ಸಲ್ಲಿಸುವುದು. ದಿನಾಂಕ: 09/06/2017ರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್: www.karnataka.gov.in/dbcdc​ ಸಂಪರ್ಕಿಸಬಹುವುದು.

ದಿನಾಂಕ:25/4/2016                                                                                                                                                                                                                ​(ಡಾ|| ಎಂ.ಆರ್.ಏಕಾಂತಪ್ಪ)
ವ್ಯವಸ್ಥಾಪಕ ನಿರ್ದೇಶಕರು.​​​
​ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಾಲ ಒದಗಿಸಲು ಅರ್ಜಿ ನಮೂನೆ
ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿ
ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಅರಿವು-ಶೈಕ್ಷಣಿಕ ಯೋಜನೆಯಲ್ಲಿ ಸಾಲ ಪಡೆಯಲು ಅರ್ಜಿ ನಮೂನೆ​:​
​​​​​​​​​​​​​​​ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ನಿರುದ್ಯೋಗಿ ಯುವ ಜನಾಂಗದವರಿಗೆ ಟ್ಯಾಕಿ/ಸರಕು ಸಾಗಾಣಿಕೆ ವಾಹನ ಕೊಳ್ಳಲು ಅರ್ಜಿ ನಮೂನೆ.:​
​​​​​​​​​​​​​​​​ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಸ್ವಯಂ ಉದ್ಯೋಗ ಸಾಲಕ್ಕಾಗಿ ಅರ್ಜಿ ನಮೂನೆ.:​
​​​​​​​​

​​ದೋಬಿಘಾಟ್ ಅಭಿವೃದ್ಧಿ/ನಿರ್ಮಾಣಕ್ಕಾಗಿ ನೊಂದಾಯಿಕ ಸಹಾಕಾರ ಸಂಘ/ಸಂಸ್ಥೆ/ಸ್ವ ಸಹಾಯ ಗುಂಪು ಸಾಲಕ್ಕಾಗಿ ಸಲ್ಲಿಸುವ ಸಾಲದ ಅರ್ಜಿ ನಮೂನೆ

​ ​ ​ 
​​​​​​​​​​​ ​ಗಂಗಾ ಕಲ್ಯಾಣ ಯೋಜನೆ- ಸಾಮೂಹಿಕ/ವೈಯಕ್ತಿಕ ಕೊಳವೆ ಬಾವಿ ಅರ್ಜಿ ನಮೂನೆ.:​
ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಹಾಗೂ ಮಾರುಕಟ್ಟೆ ಜಾಲ ಏರ್ಪಡಿಸಲು ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಪ್ರದೇಶಗಳಲ್ಲಿ ಮಾರುಕಟ್ಟೆ ಮಳಿಗೆ ಸ್ಥಾಪನೆಗೆ ಸಾಲ ಮಂಜೂರಾತಿಗೆ ಅರ್ಜಿ​ :​
​​​​​ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ/ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ/ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅವಧಿ ಸಾಲ ಯೋಜನೆಗಳ ಸಾಲದ ಅರ್ಜಿ ​ ​​​​
​​​ ಕಿರುಸಾಲ ಯೋಜನೆ, ಮಹಿಳಾ ಸಮೃದ್ಧಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್ ಯೋಜನೆಯಲ್ಲಿ ಸ್ವ-ಸಹಾಯ/ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಸಾಲಕ್ಕಾಗಿ ಸಲ್ಲಿಸುವ ಸಾಲದ ಅರ್ಜಿ ನಮೂನೆ ​ :
​​ ​​​​ಅರಿವು ಶೈಕ್ಷಣಿಕ ಸಾಲ ಯೋಜನೆಯ ಅರ್ಜಿ​:
​​​​​​​​​​​​ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ​​​​​​
​​​​​​​​​​​​​​​​​​​​​​​​​​​​​​​​​ (ಅರ್ಜಿ)​ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ: ​​​​​​​

​​​​​​​
​​​​​​​​​ ಕುರಿ ಸಾಕಣೆಕೆ ಕಂಬಳಿ ನೇಕಾರರಿಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ
ಕುರಿ ಸಾಕಾಣಿಕೆ/ಕಂಬಳಿ ನೇಕಾರಿಕೆಗೆ ಸೌಲಭ್ಯ ಒದಗಿಸಲು ಅರ್ಜಿ ನಮೂನೆ
​ ​ ​ಹೈನುಗಾರಿಕೆ ಸಾಲದ ಅರ್ಜಿ:​ ​​​​​
​​​