​​​​​ಬುನಾದಿ:​

 ಕರ್ನಾಟಕ ರಾಜ್ಯವು ಸಾಕಷ್ಟು ಸ್ವಾಭಾವಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಮುಖ್ಯ ಕಸುಬು ಕೃಷಿ. ಗ್ರಾಮೀಣ ಯುವಕರು ಪಟ್ಟಣ/ನಗರಗಳಿಗೆ ವಲಸೆ ಬರುವುದನ್ನು ತಡೆಯುವ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಂಡ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ  ಅರಸು ​ರವರು,ಶ್ರೀ ಹಾವನೂರು ಆಯೋಗದ ವರದಿಯ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು 28 ನೇ ಅಕ್ಟೋಬರ್ 1977 ರಂದು ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು (ಕೆ.ಬಿ.ಸಿ.ಡಿ.ಸಿ) ಕಂಪನಿ ಕಾಯಿದೆ 1956 ರ ಅಡಿಯಲ್ಲಿ ಸ್ಥಾಪಿಸಿದರು.

​     ​ಗುಡಿ ಕೈಗಾರಿಕೆಯನ್ನು ಸ್ಥಾಪಿಸುವುದು, ಗ್ರಾಮೀಣ ಮತ್ತು ನಗರ ಪ್ರದೇಶದ ವ್ಯವಸ್ಥೆಗಳ ಮಧ್ಯೆ ಸಮತೋಲನ ಕಾಪಾಡುವುದು ಮತ್ತು ಗ್ರಾಮೀಣ ಪ್ರದೇಶಗಳಿಗೆ ನಗರ ಪ್ರದೇಶಗಳಲ್ಲಿದ್ದಂತೆ ಸೌಕರ್ಯಗಳನ್ನು ಕಲ್ಪಿಸುವುದು ಈ ನಿಗಮದ ಮೂಲ ಉದ್ದೇಶವಾಗಿದೆ.
ಶ್ರೀ ಡಿ. ದೇವರಾಜ  ಅರಸು ​ ​ರವರ ಕನಸನ್ನು ಸಾಕಾರಗೊಳಿಸಲು ಈ ನಿಗಮದ ಹೆಸರನ್ನು ಡಿ. ದೇವರಾಜ  ಅರಸು ​ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂದು 28 ನೇ ಅಕ್ಟೋಬರ್ 2005 ರಿಂದ ಮರುನಾಮಕರಣ ಮಾಡಲಾಗಿದೆ. ​
​​​​​​​​​​
​​​​​​​​​​​​​​​​​​​​suma 008.jpg​​​​​
ಡಿ. ದೇವರಾಜ ಅರಸು ​ರವರು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ವನ್ನು ದಿನಾಂಕ :1-12-1977ರಂದು ​ ಉದ್ಘಾಟಿಸುತ್ತಿರುವುದು
​​
​ ​