​​

​​​​​​​​ಗಂಗಾಕಲ್ಯಾಣ ನೀರಾವರಿ ಯೋಜನೆ​​​​


ಅ. ವೈಯುಕ್ತಿಕ ಕೊಳವೆಬಾವಿ/ತೆರೆದ ಬಾವಿ ನೀರಾವರಿ ಯೋಜನೆ 
ಆ. ಸಾಮೂಹಿಕ ಕೊಳವೆಬಾವಿ ನೀರಾವರಿ ಯೋಜನೆ
ಇ. ಏತ ನೀರಾವರಿ ಯೋಜನೆ.

1. ಉದ್ದೇಶ: ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.
2. ಅರ್ಹತೆ: ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40000/-ಗಳ ಒಳಗಿರಬೇಕು.
3.ಸೌಲಭ್ಯ: 
1. ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ: ಈ ಯೋಜನೆಯಲ್ಲಿ  ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.  
ಘಟಕವೆಚ್ಚ: ರೂ.2.50ಲಕ್ಷಗಳು. ರೂ.2.00ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ರೂ.50,000/-ಗಳು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ. 
ಮರುಪಾವತಿ ಅವಧಿ: ಸಾಲದ  ಮರುಪಾವತಿ ಅವಧಿ 3 ವರ್ಷಗಳು. 
ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಆರ್.ಆರ್. ಸಂಖ್ಯೆ ನೀಡಿದ ನಂತರ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುದ್ಧೀಕರಣ ವೆಚ್ಚವಾಗಿ. ಪ್ರತಿ ಕೊಳವೆ ಬಾವಿಗಳಿಗೆ ಒಟ್ಟು ಘಟಕ ವೆಚ್ಚದಲ್ಲಿ ರೂ.50000/-ಗಳಂತೆ ಪಾವತಿಸಲಾಗುವುದು. 
ಬೆಂಗಳೂರು ನಗರ, ಬೆಂಗಳೂರು ಗ್ರಾ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ  ರೂ.4.00ಲಕ್ಷಗಳು, ಇದರಲ್ಲಿ ರೂ.3.50ಲಕ್ಷಗಳ ಸಹಾಯಧನ ಹಾಗೂ ರೂ.50000/-ಗಳ ಸಾಲವಾಗಿರುತ್ತದೆ.

2. ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆ: ಪ್ರವರ್ಗ-1, 2ಎ, 3ಎ & 3ಬಿಗೆ ಸೇರಿದ ಕನಿಷ್ಠ 3 ಜನ ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 8 ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕವಾಗಿ ನೀರಾವರಿ ಸೌಲಭ್ಯ. 
ಘಟಕ ವೆಚ್ಚ: 8-15 ಎಕರೆ ಜಮೀನಿಗೆ ರೂ.4.00ಲಕ್ಷಗಳ  ವೆಚ್ಚದಲ್ಲಿ 2 ಕೊಳವೆಬಾವಿ ಹಾಗೂ 15 ಎಕರೆಗಿಂತ ಹೆಚ್ಚು ಜಮೀನು ಒಳಪಡುವ ಘಟಕಗಳಿಗೆ ನಿಗದಿತ ಘಟಕವೆಚ್ಚ ರೂ.6.00ಲಕ್ಷಗಳ ವೆಚ್ಚದಲ್ಲಿ 3 ಕೊಳವೆಬಾವಿಗಳನ್ನು ಕೊರೆಯಿಸಿ ಪಂಪ್‍ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡುವುದು ಹಾಗೂ ವಿದ್ಯುದ್ದೀಕರಣಕ್ಕೆ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಇದು ಪೂರ್ಣ ಅನುದಾನವಾಗಿರುತ್ತದೆ.

3.ತೆರೆದಬಾವಿ: ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.

4.ಸಾಮೂಹಿಕ ಏತ ನೀರಾವರಿ ಯೋಜನೆ: ಭೂಮಟ್ಟದಲ್ಲಿ ಶಾಶ್ವತವಾಗಿ ದೊರೆಯುವ ಜಲಸಂಪನ್ಮೂಲಗಳಾದ ನದಿ, ಕೆರೆ, ಹಳ್ಳ ಇವುಗಳಿಗೆ ಮೋಟಾರ್ ಅಳವಡಿಸಿ ಪೈಪ್‍ಲೈನ್ ಮೂಲಕ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು. 
ಘಟಕವೆಚ್ಚ: ಸಾಮೂಹಿಕ ನೀರಾವರಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಸೌಲಭ್ಯ ಒದಗಿಸುವುದು. 

ಈ ಕಾರ್ಯಕ್ರಮಕ್ಕೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಆರ್ಥಿಕ ಗುರಿಯನ್ವಯ ಮೀಸಲಾತಿ ಅನುಪಾತ  ಪ್ರವರ್ಗ-1 ಮತ್ತು 2ಎಗೆ 70% ಪ್ರವರ್ಗ-3ಎ ಮತ್ತು 3ಬಿಗೆ 30%ರಂತೆ ವೈಯಕ್ತಿಕ/ಸಾಮೂಹಿಕ ನೀರಾವರಿ ಘಟಕಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಬೇಕು. 
5. ಕರ್ನಾಟಕ ಅಂತರ್ಜಲ ಅಧಿನಿಯಮದನ್ವಯ ಈ ಕೆಳಕಂಡ 35 ತಾಲ್ಲೂಕುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯುವ ಮುನ್ನ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯತಕ್ಕದ್ದು. ಅನುಮತಿ ಪಡೆದಂತಹ ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಲು ಕ್ರಮವಹಿಸತಕ್ಕದ್ದು.​​ಕ್ರಸಂ

ಜಿಲ್ಲೆಯ ಹೆಸರು

​​ಕ್ರಸಂ


ತಾಲ್ಲೂಕುಗಳ ಹೆಸರು
1 ಬೆಂಗಳೂರು ನಗರ 1 ಆನೇಕಲ್
2 ಬೆಂಗಳೂರು ಪೂರ್ವ
3 ಬೆಂಗಳೂರು ಉತ್ತರ
4​ ಬೆಂಗಳೂರು ದಕ್ಷಿಣ
2 ಬೆಂಗಳೂರು ಗ್ರಾಮಾಂತರ 5 ದೇವನಹಳ್ಳಿ
6 ದೊಡ್ಡಬಳ್ಳಾಪುರ
7 ಹೊಸಕೋಟೆ
8 ನೆಲಮಂಗಲ
3 ರಾಮನಗರ 9 ಕನಕಪುರ
10 ರಾಮನಗರ
4 ತುಮಕೂರು 11 ಚಿಕ್ಕನಾಯಕನಹಳ್ಳಿ
12 ಕೊರಟಗೆರೆ
13 ಮಧುಗಿರಿ
5 ಚಿತ್ರ​ದುರ್ಗ 14 ಚಿತ್ರದುರ್ಗ
​​ 15 ಹೊಳಲ್ಕೆರೆ
6 ಕೋಲಾರ 16 ಬಂಗಾರಪೇಟೆ
17 ಕೋಲಾರ
18 ಮಾಲೂರು
19 ಮುಳಬಾಗಿಲು
20 ಶ್ರೀನಿವಾಸಪುರ​
7 ಚಿಕ್ಕಬಳ್ಳಾಪುರ ​21 ಚಿಕ್ಕಬಳ್ಳಾಪುರ
22 ಚಿಂತಾಮಣಿ
23 ಗೌರಿಬಿದನೂರು
24 ಗುಡಿಬಂಡೆ
25 ಶಿಡ್ಲಘಟ್ಟ
8 ದಾವಣಗೆರೆ 26 ಜಗಳೂರು
9 ಬೆಳಗಾವಿ 27 ಅಥಣಿ
28 ಬೈಲಹೊಂಗಲ
29 ರಾಮದುರ್ಗ
30 ಸವದತ್ತಿ
10 ಬಾಗಲಕೋಟೆ 31 ಬಾದಾಮಿ
32 ಬಾಗಲಕೋಟೆ
11 ಬಳ್ಳಾರಿ 33 ಹಗರಿ ಬೊಮ್ಮನಹಳ್ಳಿ
34 ಹಡಗಲಿ
12 ಕೊಪ್ಪಳ 35 ಯಲಬುರ್ಗ