​​​​

                                                                             23cc6ea397f0c92163f9ed1a1e035eb22fc4e3fc.jpg              

ಉತ್ತಮ ಕಾರ್ಯಕ್ಷಮತಾ ಪ್ರಶಸ್ತಿ         

  • ರಾಷ್ಟ್ರ ಮಟ್ಟದಲ್ಲಿ ಚಾನಲೈಸಿಂಗ್ ಏಜೆನ್ಸಿಗಳಿಗೆ ನೀಡುವ "ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿ"ಗಳಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2006-07ನೇ ಸಾಲಿಗೆ ಪ್ರಥಮ ಸ್ಥಾನ (First Rank) ಪಡೆದಿದೆ.
  • ಕಳೆದ 3 ವರ್ಷಗಳಿಂದಲೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ "ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿ"ಯನ್ನು ಪಡೆದಿರುತ್ತದೆ .                        

ಮಾದರಿ ಸಂಸ್ಥೆಯ ಪ್ರಶಸ್ತಿ

  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ ಪಬ್ಲಿಕ್ ಒಪಿನಿಯನ್ ನವದೆಹಲಿ ಇವರಿಂದ 1996-97ರಲ್ಲಿ ರಾಜ್ಯದಲ್ಲಿ ಹೈನುಗಾರಿಕೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ಪ್ರಶಂಸೆ ಲಭಿಸಿದೆ.

1995-96-ಪ್ರಶಂಸೆ

ಎನ್.ಬಿ.ಸಿ.ಎಫ್.ಡಿ.ಸಿಯಿಂದ ರಾಷ್ಟ್ರದಲ್ಲಿಯೇ ಅತಿ ಹೆಚ್ಚಿನ ಹಣಕಾಸು ನೆರವು ಪಡೆದು ರಾಜ್ಯದ ಹೆಚ್ಚಿನ ಹಿಂದುಳಿದ ಜನರಿಗೆ ಗರಿಷ್ಟ ನೆರವು ನೀಡಿಕೆಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಪ್ರಶಂಸೆ ಪಡೆದಿದೆ.