​​ಧ್ಯೇಯೋದ್ದೇಶಗಳು

​​​ರಾಜ್ಯದ ಯುವಜನರನ್ನು ತಲುಪಲು ಎಲ್ಲ ಸ್ಥರಗಳಲ್ಲಿ ಅವಕಾಶ ಕಲ್ಪಿಸುವುದು.​

ರಾಜ್ಯದ ಯುವಜನರ ಗುರಿ, ಆಶೋತ್ತರ ಹಾಗೂ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳವುದು.

ರಾಜ್ಯದ ವೈವಿಧ್ಯಮಯ ಸಾಂಸ್ಕøತಿಕ ಸಂರಚನೆ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗನುಗುಣವಾಗಿ ರಾಜ್ಯದೆಲ್ಲೆಡೆ ಹರಡಿಕೊಂಡಿರುವ ನಮ್ಮ ಯುವಜನರ ವಿವಿಧ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವುದು.

ಕರ್ನಾಟಕ ರಾಜ್ಯದ ಯುವಜನರನ್ನು ದೃಷ್ಠಿಯಲ್ಲಿರಿಸಿಕೊಂಡು ಅವರಿಗಾಗಿ ಅಲ್ಪಾವಧಿ ಹಾಗೂ ದೀಘಾವಧಿ ಯೋಜನೆಗಳನ್ನು ರೂಪಿಸುವುದು.

ಯುವಜನರ ಆಂತರಿಕ ಸಾಮಥ್ರ್ಯವನ್ನು ವೃದ್ದಿಗೊಳಿಸಲು ಅವಕಾಶಗಳನ್ನು ಕಲ್ಪಿಸಿ, ಅವರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುವುದು. 

ರಾಜ್ಯದ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾಲುದಾರರಾಗಲು, ಜೊತೆಗೆ ಬಹುಮುಖಿ ವಲಯಗಳಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಯುವಜನರಿಗಾಗಿ ಕಾರ್ಯತಂತ್ರಗಳನ್ನು ರೂಪಿಸುವುದು. 

ಯುವಜನ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮತ್ತು ಉದ್ದೇಶಿತ ಫಲಿತಾಂಶಗಳನ್ನು ಈಡೇರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದು.