ಯೋಜನೆ​

 • ಗ್ರಾಮೀಣ ಕ್ರೀಡೋತ್ಸವ: ಎಲ್ಲಾ 176 ತಾಲ್ಲೂಕುಗಳಲ್ಲಿ ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ‘ಗ್ರಾಮೀಣ ಕ್ರೀಡೋತ್ಸವ’ ಆಯೋಜಿಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ವಾರ್ಷಿಕ ರೂ 1.50 ಲಕ್ಷಗಳನ್ನು ಒದಗಿಸಲಾಗುತ್ತಿದೆ.
 • ಕರ್ನಾಟಕ ಕ್ರೀಡಾ ರತ್ನ: ಗ್ರಾಮೀಣ, ದೇಸೀ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ‘ಕರ್ನಾಟಕ ಕ್ರೀಡಾ ರತ್ನ’ ಎಂಬ ನೂತನ ಪ್ರಶಸ್ತಿಯನ್ನು 2014-15ನೇ ಸಾಲಿನಿಂದ ನೀಡುತ್ತಿದ್ದು, ಪ್ರಶಸ್ತಿಯು ರೂ 1.00 ಲಕ್ಷಗಳ ನಗದು ಬಹುಮಾನ, ಪ್ರಮಾಣ ಪತ್ರಗಳನ್ನೊಳಗೊಂಡಿರುತ್ತದೆ.  
 • ಶೈಕ್ಷಣಿಕ ಶುಲ್ಕ ಮರುಪಾವತಿ: ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ ಮಾಡಲಾಗುತ್ತಿದೆ.  .  
 • ಕ್ರೀಡಾ ವಿದ್ಯಾರ್ಥಿ ವೇತನ: ರಾಜ್ಯ ಮಟ್ಟದಲ್ಲಿ ಪದಕ ವಿಜೇತರಾಗಿ ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 10,000/- ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.   
 • ಯುವ ಕ್ರೀಡಾ ಸಂಜೀವಿನಿ: ರಾಜ್ಯದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕ್ರೀಡಾಪಟುಗಳ ಅಪಘಾತ, ಆರೋಗ್ಯ ಭದ್ರತೆ ಹಾಗೂ ಸುರಕ್ಷತೆಗಾಗಿ ವಿಶೇಷವಾದ ಅಲ್ಲದೆ ಅತಿವಿನೂತನ ‘ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆ’ ಯನ್ನು ಪ್ರಾರಂಭಿಸಿದೆ.  ರಾಜ್ಯ, ರಾಷ್ಟ್ರ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕದ ಎಲ್ಲಾ ಕ್ರೀಡಾಪಟುಗಳಿಗಾಗಿ ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.  
 • ಯುವ ಕ್ರೀಡಾ ಮಿತ್ರ: 2015-16ನೇ ಸಾಲಿನ ಆಯವ್ಯಯದಲ್ಲಿ ‘ಯುವ ಕ್ರೀಡಾ ಮಿತ್ರ’ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದ್ದು, ಈ ಯೋಜನೆಯಡಿ ಪ್ರತಿ ಹೋಬಳಿಗೊಂದು ಯುವ ಕ್ರೀಡಾ ಸಂಘವನ್ನು ಗುರುತಿಸಿ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆ ನಿಲಯಗಳಿಗೆ ಕಳುಹಿಸಲು ಪ್ರೋತ್ಸಾಹಧನವಾಗಿ ವಾರ್ಷಿಕ ರೂ 25,000/-ಗಳನ್ನು ನೀಡಲಾಗುವುದು.  ನಗದು ಪುರಸ್ಕಾರ: ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಯೋಜನೆಯನ್ನು ಇಲಾಖೆಯು ಅನುಷ್ಥಾನಗೊಳಿಸುತ್ತಿದೆ.
 • ಏಕಲವ್ಯ ಪ್ರಶಸ್ತಿ: ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಲಾದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯು ರೂ 2.00 ಲಕ್ಷ, ಸಮವಸ್ತ್ರ, ಕಂಚಿನ ಪ್ರತಿಮೆ ಒಳಗೊಂಡಿರುತ್ತದೆ.
 • ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ: ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸಿ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾ ಮೀಸಲಾತಿ ಅಡಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಮುಂತಾದ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.  
 • ಕ್ರೀಡಾಕೂಟಗಳ ಸಂಘಟನೆ: ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪ್ರತಿ ವರ್ಷ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.  ಅದೇ ರೀತಿ, ಮಹಿಳಾ, ಗ್ರಾಮೀಣ, ಮತ್ತಿತರ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.   
 • ಮಾಸಾಶನ ಯೋಜನೆ: 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯಲ್ಲಿರುವ ವಾರ್ಷಿಕ ಆದಾಯ ರೂ 20,000/- ಗಳಿಗಿಂತ ಕಡಿಮೆ ಇರುವ ಮಾಜಿ ಕುಸ್ತಿ/ಕ್ರೀಡಾಪಟುಗಳಿಗೆ ಮಾಸಾಶನವನ್ನು ನೀಡಲಾಗುತ್ತಿದೆ. ರಾಜ್ಯ ಮಟ್ಟ-ರೂ 750/- ರಿಂದ 1,500/-, ರಾಷ್ಟ್ರ ಮಟ್ಟ ರೂ 1,000/- ರಿಂದ ರೂ 2,000/-, ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 3,000/- ರಂತೆ ಮಾಜಿ ಪೈಲ್ವಾನರುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ.
 • ರಾಜ್ಯ ಮಟ್ಟ-ರೂ 750/- ರಿಂದ ರೂ 1,000/-, ರಾಷ್ಟ್ರ ಮಟ್ಟ ರೂ 1,000/- ರಿಂದ ರೂ 1,500/-, ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 2,000/- ರಂತೆ ಮಾಜಿ ಕ್ರೀಡಾಪಟುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ. ಸದರಿ ಯೋಜನೆಯನ್ನು ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆ ಅಡಿಯಿಂದ ಅನುಷ್ಥಾನಗೊಳಿಸಲಾಗುತ್ತಿದೆ.
 • ರಾಜೀವ್ ಗಾಂಧಿ ಖೇಲ್ ಅಭಿಯಾನ್: ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟವನ್ನು (16 ವರ್ಷ ಒಳಗಿನ ಬಾಲಕ-ಬಾಲಕಿಯರು) ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹಾಗೂ ಮಹಿಳಾ ಕ್ರೀಡಾಕೂಟವನ್ನು (25 ವರ್ಷದೊಳಗಿನ ಮಹಿಳೆಯರಿಗೆ) ಜಿಲ್ಲೆ ಮತ್ತು ರಾಜ್ಯಮಟ್ಟಗಳಲ್ಲಿ ಸಂಘಟಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ರಾಷ್ಟ್ರ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ನಿಯೋಜಿಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಕ್ರೀಡಾ ಕಿಟ್ ಮತ್ತು ತರಬೇತಿಯನ್ನು ನೀಡಲಾಗುತ್ತಿದೆ. 
 • ‘ನಮ್ಮೂರ ಶಾಲೆಗೆ ನಮ್ಮ ಯುವಜನರು’  ಕಾರ್ಯಕ್ರಮ- ತಮ್ಮೂರ ಶಾಲೆಗಾಗಿ ಗಣನೀಯ ಕೊಡುಗೆ ನೀಡುವ ಯುವ ಸಂಘಗಳನ್ನು ತಾಲ್ಲೂಕಿಗೆ ಒಂದರಂತೆ ಗುರುತಿಸಿ ರೂ 1.00 ಲಕ್ಷ ನಗದು ಪುರಸ್ಕಾರ ನೀಡುವ ಯೋಜನೆ.  2015-16 ನೇ ಸಾಲಿನಲ್ಲಿ ಎಲ್ಲಾ 176 ತಾಲ್ಲೂಕುಗಳ ಉತ್ತಮ ಯುವ ಸಂಘಗಳಿಗೆ ತಲಾ ರೂ 2.00 ಲಕ್ಷ ವಿತರಿಸಲಾಗಿದೆ.
 • ‘ಯುವ ಸ್ಪಂದನ’ ಕಾರ್ಯಕ್ರಮ- ನಿಮ್ಹಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಯುವಜನರಿಗೆ ಮತ್ತು ಪೋಷಕರಿಗೆ ಆಪ್ತ ಸಮಾಲೋಚನಾ ಸೌಲಭ್ಯ ಒದಗಿಸುವ ಮತ್ತು ಯುವಜನರನ್ನು ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲು ತರಬೇತಿ ನೀಡುವ ಕಾರ್ಯಕ್ರಮ.
 • ‘ಯುವ ಶಕ್ತಿ ಕೇಂದ್ರ’: ರಾಜ್ಯದ 30 ಜಿಲ್ಲೆಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಗುರುತಿಸಲಾಗಿದ್ದು.  30 ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಲಾ ರೂ. 15.00 ಲಕ್ಷಗಳ ವೆಚ್ಚದಲ್ಲಿ ಮಲ್ಟಿ ಜಿಮ್ ಸೌಲಭ್ಯಗಳನ್ನೊಳಗೊಂಡ ಯುವ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 
 • ಯುವಜನೋತ್ಸವ- ಯುವಜನರ ಶಾಸ್ತ್ರೀಯ ಪ್ರತಿಭೆ ಅನಾವರಣಕ್ಕೆ ಜಿಲ್ಲೆಯಿಂದ ರಾಷ್ಟ್ರ ಮಟ್ಟದವರೆಗಿನ ಸ್ಪರ್ಧೆ.
 • ಯುವಜನ ಮೇಳ- ಯುವಜನರಲ್ಲಿನ ಜಾನಪದ ಪ್ರತಿಭೆ ಅನಾವರಣಕ್ಕೆ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಸ್ಪರ್ಧೆ.
 • ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ- ಸಂಘಟಿತ ಚಟುವಟಿಕೆಯ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಯುವಜನರನ್ನು ಮತ್ತು ಯುವ ಸಂಘಗಳನ್ನು ಗುರುತಿಸಿ, ಗೌರವಿಸಲು ನೀಡುವ ವಾರ್ಷಿಕ ಪ್ರಶಸ್ತಿ.
 • ಕ್ರೀಡಾ ಮೂಲ ಸೌಕರ್ಯಗಳ ಸೃಜನೆ: ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು, ಆಧುನಿಕ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‍ಗಳು, ಹಾಕಿ/ಫುಟ್ಬಾಲ್ ಟರ್ಫ್‍ಗಳು, ಗರಡಿ ಮನೆಗಳು ಸೇರಿದಂತೆ ಅಗತ್ಯ ಕ್ರೀಡಾ ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ.  
 • ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಕೆಳಕಾಣಿಸಿದ ಕ್ರಮ ಕೈಗೊಳ್ಳಲಾಗುತ್ತಿದೆ.
 • ಅಂತರ-ರಾಷ್ಟ್ರೀಯ ಕ್ರೀಡಾಪಟುಗಳಿಗೆ ನಿಯಮಾನುಸಾರ ವಿಮಾನ ಪ್ರಯಾಣ ವೆಚ್ಚ ಮರುಪಾವತಿ ಮಾಡಲಾಗುತ್ತಿದೆ.  
 • ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ ಆಯೋಜಿಸಲು ಹಾಗೂ ರಾಷ್ಟ್ರ ಮಟ್ಟಕ್ಕೆ ತಂಡವನ್ನು ನಿಯೋಜಿಸಲು ಅನುದಾನ ಸಂಹಿತೆ ನಿಯಮಾವಳಿ ಅನುಸಾರ ಅನುದಾನ ನೀಡಲಾಗುತ್ತಿದೆ.  
 • ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಯುವಜನರಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಲು ಭೂ ಸಾಹಸ, ಜಲಸಾಹಸ ಮತ್ತು ವಾಯು ಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಯುವಜನರಿಗೆ ಆದ್ಯತೆ ನೀಡಲಾಗುತ್ತಿದೆ.


ActionsUse SHIFT+ENTER to open the menu (new window).Open Menu
  
  
  
  
  
Description
  
There are no items to show in this view of the "Schemes" document library.

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top