ಮುಖಪುಟ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ವೆಬ್ ಸೈಟನಲ್ಲಿ ಯುವಜನರಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಇಲಾಖೆಯು ಕೈಗೊಳ್ಳುತ್ತಿರುವ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು ಮತ್ತು ಇತರ ಎಲ್ಲಾ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ.

ಇಲಾಖೆಯು ಯುವಜನರಿಗಾಗಿ ಹಮ್ಮಿಕೊಂಡಿರುವ ಚಟುವಟಿಕೆಗಳು ಮತ್ತು ಯುವ ಸಂಘಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

 
ರಾಜ್ಯದಲ್ಲಿರುವ ಕ್ರೀಡಾ ಮೂಲಭೂತ ಸೌಕರ್ಯಗಳ ಬಗ್ಗೆ ಉದಾ: ಹೊರಾಂಗಣ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಈಜುಕೊಳಗಳು, ವೆಲೋಡ್ರೋಂ, ಜಿಮ್ನಾಶಿಯಂ ಇತ್ಯಾದಿಗಳ ಮಾಹಿತಿಯನ್ನು ಒದಗಿಸುತ್ತದೆ. ಕ್ರೀಡಾಕ್ಷೇತ್ರದಲ್ಲಿ ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳು ಮಾಡಿರುವ ಸಾಧನೆಗಳ ವಿವರ ಮತ್ತು ಪ್ರಶಸ್ತಿಗಳನ್ನು ಪಡೆದಿರುವ ಮಾಹಿತಿಯನ್ನು ತೋರಿಸುತ್ತದೆ. ಇದು ಕರ್ನಾಟಕ ರಾಜ್ಯದ ಯುವಜನರು ಮತ್ತು ಕೀಡಾಪಟುಗಳ ವಿವರಗಳನ್ನು ಪಡೆಯಲು ಸದೃಢ ಮಾಧ್ಯಮವಾಗಿ ಕಾರ್ಯನಿರ್ವಹಿಸಲಿದೆ.


 

ಸಾಹಸ ಕ್ರೀಡೆಗಳು ಯುವಜನರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುತ್ತಿವೆ. ಸಾಹಸ ಕ್ರೀಡೆಗಳಲ್ಲಿ ಯುವಜನರ ಪಾಲ್ಗೊಳ್ಲುವಿಕೆಯೇ ಇದಕ್ಕೆ ಸಾಕ್ಷಿಯಾಗಿದೆ. ಇಲಾಖೆಯು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯನ್ನು 1982 ರಲ್ಲಿ ಪ್ರಾರಂಭಿಸಿದೆ. ಈ ಅಕಾಡೆಮಿಯು ರಾಜ್ಯದ ವಿವಿಧೆಡೆ ಭೂ, ವಾಯು ಮತ್ತು ಜಲ ಸಾಹಸ ಕೇಂದ್ರಗಳನ್ನು ಸ್ಥಾಪಿಸಿದೆ ಮತ್ತು ಸಾಹಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾಹಸ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಪ್ರಕಟಿಸಿ ಯುವಜನರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ಗುರಿ ಹೊಂದಲಾಗಿದೆ.

ಇಲಾಖೆಯ ಈ ವೆಬ್ ಸೈಟು ಯುವ ಸಬಲೀಕರಣ ಮತ್ತು ಕ್ರ್ರೀಡಾ ಕ್ಷೇತ್ರದ ಎಲ್ಲರಿಗೂ ಸಹಕಾರಿಯಾಗಲಿದೆ.