ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ(ಇಡಿಸಿಸ್)

ಕರ್ನಾಟಕ ಸರ್ಕಾರ

GOK > EDCS > Kannada > e-Distric
New Icon ಸಿವಿಲ್ ಇಂಜಿನಿಯರ್ ಗಳ ಸೇವೆಯನ್ನು ಪಡೆಯಲು ಅಧಿಸೂಚನೆ
Last modified at 24/03/2017 11:12 by System Account

ಪರಿಚಯ

ಇ-ಜಿಲ್ಲೆಯು ರಾಷ್ಟ್ರೀಯ ಇ-ಆಡಳಿತ ನೀತಿಯಡಿಯಲ್ಲಿನ (NeGP) 31 ಧ್ಯೇಯಾಧಾರಿತ ಯೋಜನೆಗಳಲ್ಲಿ (ಮಿಷನ್ ಮೋಡ್ ಪ್ರಾಜೆಕ್ಟ್ಸ್ - MMP), ಕೇಂದ್ರ ಸರ್ಕಾರದ (GOI) ಮಾಹಿತಿ ತಂತ್ರಜ್ಞಾನ ಇಲಾಖೆಯ(DIT) ಒಂದಾಗಿರುವ ಯೋಜನೆಯಾಗಿದ್ದು, ಸಿ.ಇ.ಜಿಯು ನೋಡಲ್ ಇಲಾಖೆಯಾಗಿದ್ದು, ರಾಜ್ಯ ಸರ್ಕಾರದಿಂದ ಅಥವಾ ಅವರಿಂದ ನಿಯೋಜಿಸಲ್ಪಟ್ಟ ಸಂಸ್ಥೆಗಳಿಂದ ಜಾರಿಗೊಳಿಸಬೇಕಾದ ಯೋಜನೆಯಾಗಿರುತ್ತದೆ.  ಈ ಯೋಜನೆಯು ರಾಜ್ಯದ ಜಿಲ್ಲಾಡಳಿತವನ್ನು ಬಲವರ್ಧಿಸುವ ಉದ್ದೇಶದಿಂದ ಆಯ್ದ ನಾಗರೀಕ ಸೇವೆಗಳನ್ನು ಕೇಂದ್ರೀಕೃತ ತಂತ್ರಾಂಶ ಅನ್ವಯಿಕೆಯ ಮೂಲಕ ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಲಾಖಾ ಸಿಬ್ಬಂದಿಗಳಿಗೆ ತರಬೇತಿಯನ್ನೂ ಸಂಘಟಿಸುತ್ತದೆ.


ಕರ್ನಾಟಕದ ಇ-ಜಿಲ್ಲಾ ಯೋಜನೆಯಡಿಯಲ್ಲಿ, ನಾಗರೀಕ ಸೇವೆಗಳ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯವು (ಇಡಿಸಿಎಸ್ ಡೈರೆಕ್ಟೊರೇಟ್) ಈಗಾಗಲೇ ಬೇರೆ ಬೇರೆ ಇಲಾಖೆಗಳಲ್ಲಿ ಹಮ್ಮಿಕೊಂಡಿರುವ ನಾಗರೀಕರ ಕೇಂದ್ರಿತ ಸೇವೆಗಳನ್ನು ಗುರುತಿಸಿ, ಪ್ರತಿಯೊಂದು ಸೇವೆಯ ‘ಕಾರ್ಯೋನ್ಮುಖ ಅಗತ್ಯಗಳ ವಿಶಿಷ್ಟತೆಗಳು’ (Functional Requirement Specification – FRS) ಹಾಗೂ ‘ಔದ್ಯಮಿಕ ಪ್ರಕ್ರಿಯೆಗಳ ಮರುಮಾರ್ಪಾಡು’ (Business Process Re-engineering – BPR) ಗಳೇ ಮುಂತಾದ ಬೇಕಾದ ದಾಖಲುಗಳನ್ನು ತಯಾರಿಸಿದೆ. ಈ ಯೋಜನೆಯಡಿಯಲ್ಲಿ ಸಾಮಾನ್ಯ ಅನ್ವಯಿಕ ವೇದಿಕೆಯೊಂದನ್ನು ಸೃಜಿಸಲು ಉದ್ದೇಶಿಸಿದ್ದು, ಇದನ್ನು ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಏಕೀಕೃತವಾಗಿ ಶೇಖರಿಸಲಾಗುವುದು.

 

ಇ-ಜಿಲ್ಲಾ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಿದ ಸೇವೆಗಳನ್ನು ವಿವಿಧ ವಿತರಣಾ ವಾಹಿನಿಗಳ ಮೂಲಕ ವಿತರಿಸಲಾಗುತ್ತದೆ,


 • ಇ-ಜಿಲ್ಲಾ ಜಾಲತಾಣದ ಮೂಲಕ ನಾಗರೀಕರು ನೋಂದಾಯಿತ ಬಳಕೆದಾರರಾಗಿ ನೇರವಾಗಿ ಒಳಹೊಕ್ಕುವಂಥದ್ದು
 • ಪ್ರಸ್ತುತವಿರುವ ಅಟಲ್ ಜನಸ್ನೇಹಿ ಕೇಂದ್ರಗಳು/ ಬೆಂಗಳೂರು ಒನ್/ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ
 • ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ (ಗ್ರಾಮ ಪಂಚಾಯಿತಿ ಮಟ್ಟದವರೆವಿಗೂ ಸ್ಥಾಪಿಸಬೇಕಿದೆ)

 

ಎಲ್ಲಾ ಗುರುತಿಸಿರುವ ಸೇವೆಗಳಿಗೂ ಸೇವಾ ಕೋರಿಕೆಯ ಪ್ರಕ್ರಿಯೆಯು ಇ-ಜಿಲ್ಲಾ ಅನ್ವಯಿಕದ (back-end application) ಮೂಲಕ ಆಗುತ್ತದೆ.  ನಾಗರೀಕ ಸೇವೆಗಳನ್ನು ಒದಗಿಸುತ್ತಿರುವ ಇತರ ಇಲಾಖೆಗಳ ಅನ್ವಯಿಕಗಳೊಡನೆಯೂ ಇ-ಜಿಲ್ಲಾ ವೇದಿಕೆಯನ್ನು ಸಮಗ್ರಗೊಳಸಲಾಗುತ್ತದೆ.

ಉದ್ದೇಶ

 • ಜಿಲ್ಲೆ ಹಾಗೂ ಅದಕ್ಕಿಂತ ಕೆಳಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಬೃಹತ್ ಗಾತ್ರದ ನಾಗರೀಕ ಕೇಂದ್ರಿತ ಸೇವೆಗಳನ್ನು ವಿದ್ಯುನ್ಮಾನ ಪ್ರಕ್ರಿಯೆಯ ಮೂಲಕ ವಿತರಣೆ ಮಾಡುವ ಗುರಿಯನ್ನು ಇ-ಜಿಲ್ಲಾ ಯೋಜನೆಯು ಹೊಂದಿದೆ.
 • CSC, SDC ಹಾಗೂ SWAN ಮುಂತಾದ ಇನ್ನಿತರ MMPಗಳೊಡನೆ ಈ ಕೆಳಗೆ ತಿಳಿಸಿರುವ NeGPಯ ಆಶಯವನ್ನು ಸಾಕಾರಗೊಳಿಸುವಲ್ಲಿ ಇ-ಜಿಲ್ಲಾ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ.

“ಸರ್ಕಾರದ ಕಾರ್ಯ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿ ಮತ್ತು ಪ್ರೋತ್ಸಾಹಿಸುವುದರ ಜೊತೆಗೆ ನಾಗರೀಕರಿಗೆ ಅಗತ್ಯ ಮಾಹಿತಿ ಹಾಗೂ ಸೇವೆಗಳನ್ನು ದಕ್ಷತೆಯೊಂದಿಗೆ ಅವಿರತವಾಗಿ ಆನ್ ಲೈನ್ ಮುಖಾಂತರ ಪೂರೈಸುವಿಕೆ ”.

ಸೇವೆಗಳು

ಭಾರತ ಸರ್ಕಾರದ ಡೈಟಿಇಲಾಖೆಯ ಮಾರ್ಗದರ್ಶನದನ್ವಯ ಸೇವೆಗಳನ್ನು ಇ-ಜಿಲ್ಲೆಯಡಿಯಲ್ಲಿ ಪರಿಗಣಿಸಲು ಅವುಗಳು ಬೃಹತ್ ಪ್ರಮಾಣದ ಸೇವೆಗಳಾಗಿರಬೇಕುಹಾಗೂ ನಾಗರೀಕರಿಗೆ ವೆಚ್ಚ, ಸಮಯ, ಶ್ರಮ ಉಳಿತಾಯ ಆಗುವಂತಿರಬೇಕು. ಎರಡು ವರ್ಗದ ಸೇವೆಗಳನ್ನು ಭಾರತ ಸರ್ಕಾರದ ಡೈಟಿಯು ಕಡ್ಡಾಯ ಮಾಡಿದೆ, ಅವೆಂದರೆ: ರಾಷ್ಟ್ರೀಯ ಕಡ್ಡಾಯ ವರ್ಗ ಹಾಗೂ ರಾಜ್ಯ ಆಯ್ಕೆಯ ವರ್ಗ.

 ಇ.ಡಿ.ಸಿ.ಎಸ್. ನಿರ್ದೇಶನಾಲಯವು 29 ಇಲಾಖೆಗಳ 346 ನಾಗರೀಕ ಸೇವೆಗಳನ್ನು ಪಟ್ಟಿಮಾಡಿ ಅವುಗಳ ಸೇವೆಗಳ ಸಂಪುಟವನ್ನು ಸಿದ್ಧಪಡಿಸಿದೆ. ಗಮನಾರ್ಹ ವಿಷಯವೆಂದರೆ 279 ಸೇವೆಗಳು ಈಗಾಗಲೇ ಗಣಕೀಕೃತಗೊಂಡಿರುತ್ತವೆ ಹಾಗೂ ಆಯಾ ಇಲಾಖೆಗಳಲ್ಲಿ ಬಳಕೆಯಲ್ಲಿವೆ.  ಇ-ಜಿಲ್ಲಾ ಯೋಜನೆಯು ಈ 279 ಸೇವೆಗಳನ್ನು ಒದಗಿಸಲು ಈಗಾಗಲೇ ಅಭಿವೃದ್ಧಿ ಪಡಿಸಿರುವ ಎಲ್ಲಾ ಅನ್ವಯಿಕಗಳ ಜೊತೆಗೂ ಸಮಗ್ರಗೊಳಿಸುತ್ತದೆ.  ಇದಲ್ಲದೇ, ಇನ್ನುಳಿದ 67 ಸೇವೆಗಳಿಗೆ ಅವಶ್ಯಕವಾದ ಬ್ಯಾಕ್ಎಂಡ್ ಕಾರ್ಯವಿಧಾನವನ್ನು ಇ-ಜಿಲ್ಲಾ ಯೋಜನೆಯು ಅಭಿವೃದ್ಧಿಪಡಿಸುತ್ತದೆ.  ಈ ಎಲ್ಲಾ ಸೇವೆಗಳೂ ನಾಗರೀಕರಿಗೆ ಇ-ಜಿಲ್ಲಾ ಜಾಲತಾಣದ ಮೂಲಕ ಲಭ್ಯವಾಗಲಿದೆ. ಜಾಲತಾಣವು ಎಲ್ಲಾ ಸೇವೆಗಳ ವಿತರಣೆಗೆ ಏಕೈಕ ವೇದಿಕೆಯಾಗಲಿದೆ.

 ಸೇವೆಗಳ ವಿವರಗಳು:

ರಾಷ್ಟ್ರೀಯ ಕಡ್ಡಾಯ ವರ್ಗದ ಸೇವೆಗಳ ಅಡಿಯಲ್ಲಿನ ಉಪವರ್ಗಗಳು:

ಉಪವರ್ಗ

ಸೇವೆಗಳ ಸಂಖ್ಯೆ

ಪ್ರಮಾಣ ಪತ್ರಗಳು

32

ಸಮಾಜ ಕಲ್ಯಾಣ (ಪಿಂಚಣಿ)

7

ಕಂದಾಯ ನ್ಯಾಯಾಲಯ ಪ್ರಕರಣಗಳು

17

ಪಡಿತರ ಚೀಟಿ ಸೇವೆಗಳು

10

ಮಾಹಿತಿ ಹಕ್ಕು ಹಾಗೂ ಅಹವಾಲುಗಳು

5

 

ರಾಜ್ಯ ಆಯ್ಕೆಯ ವರ್ಗದ ಸೇವೆಗಳ ಅಡಿಯಲ್ಲಿನ ಉಪವರ್ಗಗಳು:

ಉಪವರ್ಗ

ಸೇವೆಗಳ ಸಂಖ್ಯೆ

ಆಯುಶ್ ಇಲಾಖೆ

3

ಕರ್ನಾಟಕ ಸ್ಲಮ್ ಅಭಿವೃದ್ಧಿ ಮಂಡಳಿ

3

ಅಂಗವಿಕಲ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ

2

ಕಂದಾಯ (MAG ನ್ಯಾಯಾಲಯ ಪ್ರಕರಣಗಳು)

2

ವಿದ್ಯುತ್ ನಿರೀಕ್ಷಣಾಲಯ ಇಲಾಖೆ

21

ಕೃಷಿ ಇಲಾಖೆ

3

ಸಮಾಜ ಕಲ್ಯಾಣ ಇಲಾಖೆ

4

ಬುಡಕಟ್ಟು ಕಲ್ಯಾಣ ಇಲಾಖೆ

4

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

12

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

9

ಕಂದಾಯ (ಸೇವೆಗಳು)

3

ವಾಣಿಜ್ಯ ತೆರಿಗೆಗಳ ಇಲಾಖೆ

6

ಅರಣ್ಯ ಇಲಾಖೆ

2

ನೋಂದಣಿಗಳ ಮಹಾನಿರೀಕ್ಷಕರು (ಐಜಿಆರ್)

13

ಕರ್ನಾಟಕ ರಾಜ್ಯ ಶಿಕ್ಷಣ ಪರೀಕ್ಷಾ ಮಂಡಳಿ

2

ಕಾರ್ಮಿಕ ಇಲಾಖೆ

20

ಉದ್ಯೋಗ ವಿನಿಮಯ ಇಲಾಖೆ

2

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ

3

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

1

ಅಬಕಾರಿ ಇಲಾಖೆ

8

 

ಗುಣ ಲಕ್ಷಣಗಳು

ಇ-ಜಿಲ್ಲಾ MMPಯಲ್ಲಿನ ಗುಣಲಕ್ಷಣಗಳು:


 • ವಿವಿಧ ಇಲಾಖೆಗಳು ನೀಡುವ ನಾಗರೀಕ ಸೇವೆಗಳನ್ನೊಳಗೊಂಡ ಕಾರ್ಯಾಧಾರಿತ ಅನ್ವಯಿಕೆಗಳ ಪೋರ್ಟಲ್.
 • ಇ-ಜಿಲ್ಲಾ ಅನ್ವಯಿಕೆಯನ್ನು ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿರುವ ಹೋಸ್ಟ್ ಮಾಡಲಾಗುವುದು.
 • ಇಲಾಖಾ ಸಿಬ್ಬಂದಿಗಳಿಂದ ತಮ್ಮ ಇಲಾಖಾ ಸೇವೆಗಳಿಗೆ ಅನ್ವಯಿಸುವಂತೆ ಪಾತ್ರ ನಿರ್ವಹಣೆ.
 • ನಾಗರೀಕರು ಅಂತರ್ಜಾಲದ ಮುಖಾಂತರ ಇ-ಜಿಲ್ಲಾ ಅನ್ವಯಿಕೆಯ ಸಂಪರ್ಕಕ್ಕೆ ವಿವಿಧ ಇಲಾಖೆಗಳಲ್ಲಿರುವ ಸೇವೆಗಳನ್ನು ಆನ್-ಲೈನ್ ನಲ್ಲಿ ಪಡೆಯುವಿಕೆ.
 • ಪ್ರತಿಯೊಂದು ಜಿಲ್ಲೆಯೂ ಜಿಲ್ಲಾ ಇ-ಆಡಳಿತ ಸೊಸೈಟಿಯನ್ನು (ಡಿ.ಇ.ಜಿ.ಎಸ್.) ಹೊಂದಿದ್ದು ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಅದರ ಅಧ್ಯಕ್ಷರಾಗಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.
 • ಇ.ಡಿ.ಸಿ.ಎಸ್. ನಿರ್ದೇಶನಾಲಯದಿಂದ ನಿಯೋಜಿಸಲ್ಪಡುವ ಜಿಲ್ಲಾ ಯೋಜನಾ ನಿರ್ವಾಹಕರುಗಳು ಪ್ರತೀ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿಕೊಂಡು ಇ-ಜಿಲ್ಲಾ ಯೋಜನೆಯನ್ನು ಜಾರಿಗೊಳಿಸಲು ಸಹಾಯಕವಾಗುವುದು.
 • ನಾಗರೀಕ ಸೇವೆಗಳನ್ನು ವಿತರಿಸಲು ಗಣಕ ಪರಿಕರ ಇಲ್ಲದಿರುವ, ಭಾಗವಹಿಸುವ ಇಲಾಖೆಗಳಿಗೆ ಉಪಕರಣಗಳ ಪೂರೈಕೆ.
 • ಡಾಟಾ ಡಿಜಿಟಲೈಸೇಷನ್
 • ಕೆಪಾಸಿಟಿ ಬಿಲ್ಡಿಂಗ್

ಸ್ಥಿತಿ-ಗತಿ

 1. 27 ಜಿಲ್ಲೆಗಳಲ್ಲಿ ಜಿಲ್ಲಾ ಇ-ಆಡಳಿತ ಸೊಸೈಟಿಗಳನ್ನು (ಡಿ.ಇ.ಜಿ.ಎಸ್.) ಸ್ಥಾಪನೆ.
 2. ಎನ್.ಐ.ಸಿ. ಸಂಸ್ಥೆಯನ್ನು ಅನ್ವಯಿಕೆ ಅಭಿವೃದ್ಧಿ ಸಂಸ್ಥೆ (ಅಪ್ಲಿಕೇಷನ್ ಡೆವೆಲಪ್ಮೆಂಟ್ ಏಜೆನ್ಸಿ)ಯಾಗಿ ಆಯ್ಕೆ ಮಾಡಲಾಗಿದ್ದು, ಪ್ರಸ್ತುತವಿರುವ ಅನ್ವಯಿಕಗಳೊಡನೆ ಅಪ್ಲಿಕೇಷನ್ ಡೆವೆಲಪ್ಮೆಂಟ್ ಮತ್ತು ಇಂಟೆಗ್ರೇಷನ್ ಗೆ ಅವಶ್ಯಕ ಬೆಂಬಲವನ್ನು ನೀಡುತ್ತದೆ.
 3. ಪ್ರತೀ ಜಿಲ್ಲೆಗೆ ಒಂದರಂತೆ ಜಿಲ್ಲಾ ಯೋಜನಾ ನಿರ್ವಾಹಕರನ್ನು (ಡಿ.ಪಿ.ಎಂ) ಒದಗಿಸಲು ಮಾನವ ಸಂಪನ್ಮೂಲ ಏಜೆನ್ಸಿಯನ್ನು ಆಯ್ಕೆ ಮಾಡುವ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.


ಯೋಜನೆಯ ಒಟ್ಟಾರೆ ಸ್ಥಿತಿ-ಗತಿ :    ಅನುಷ್ಟಾನದಲ್ಲಿದೆ.


ಸಂಪರ್ಕ:


ಯೋಜನಾ ನಿರ್ದೇಶಕರು, 

 ಕೊಠಡಿ ಸಂ.:  110, 2ನೇ ಹಂತ,

ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ,

ಬೆಂಗಳೂರು – 560 001

ದೂ.ಸಂ.: +91 080 22370281,
ಮಿಂಚಂಚೆ: dir-edcs@karnataka.gov.in,

URL:  http://www.karnataka.gov.in/edistrict

(ಸೃಜನೆ ಬಾಕಿ ಇದೆ)


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ(ಇಡಿಸಿಸ್), ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top