ಪರಿಚಯ

​​​​​​ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ​

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು (Environmental Management & Policy Research Institute - EMPRI), ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಡಿಯಲ್ಲಿ, 17ನೇ ಸೆಪ್ಟೆಂಬರ್ 2002 ರಲ್ಲಿ, ಕರ್ನಾಟಕ ಸರ್ಕಾರÀದಿಂದ ಸ್ಥಾಪನೆಯಾದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಸಂಸ್ಥೆಯು ಅನ್ವಯಿಕ ಮತ್ತು ನೀತಿ ಸಂಶೋಧನೆಯ ಜೊತೆಗೆ ಸಮಾಜಕ್ಕೆ ಪ್ರಸ್ತುತವೆನಿಸುವ ಪರಿಸರ ವಿಷಯಗಳಲ್ಲಿ, ಸಾಮಥ್ರ್ಯ ಬೆಳವಣಿಗೆಯ ತರಬೇತಿಗಳನ್ನು ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ನಾಗರಿಕ ಸಮಾಜಕ್ಕೆ, ಸರ್ಕಾರ ಮತ್ತು ಕೈಗಾರಿಕೆಗಳಿಗೆ ಸಲಹಾ ಸೇವೆಯನ್ನು ನೀಡುವ ಜೊತೆಗೆ ಪ್ರೇರಣೆ ನೀಡುವ ಮೂಲಕ ಸಮರ್ಥಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಇದು 1960 ರ ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾನೂನಿನ ಅಡಿಯಲ್ಲಿ ನೋಂದಣಿಯಾಗಿದೆ.​​