Last modified at 02/04/2018 11:24 by System Account

​​

iso_9001_2015_blue_tm


ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ​ (ಎಂಪ್ರಿ) ​

​​​​​​​​ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ (ಎಂಪ್ರಿ) ಸಂಸ್ಥೆಯು ಅನ್ವಯಿಕ ಸಂಶೋಧನೆಯ ಜೊತೆಗೆ ಸಮಾಜಕ್ಕೆ ಪ್ರಸ್ತುತವೆನಿಸುವ ಪರಿಸರ ವಿಷಯಗಳಲ್ಲಿ, ಸಾಮಥ್ರ್ಯ ಬೆಳವಣಿಗೆಯ ತರಬೇತಿಗಳನ್ನು ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ನಾಗರಿಕ ಸಮಾಜಕ್ಕೆ, ಸರ್ಕಾರ ಮತ್ತು ಕೈಗಾರಿಕೆಗಳಿಗೆ ಸಲಹಾ ಸೇವೆಯನ್ನು  ಒದಗಿಸುತ್ತದೆ. ಎಂಪ್ರಿ ಸಂಸ್ಥೆಯು ಮಾನವ ಮತ್ತು ನಿಸರ್ಗದ ನಡುವೆ ಸಾಮರಸ್ಯದ ಪರಿಸರ ನಿರ್ಮಿಸುವಲ್ಲಿ ಸಮಾಜವನ್ನು ಪ್ರೇರೇಪಿಸಿ ಸಬಲಗೊಳಿಸು ಬೌದ್ಧಿಕ ಕೇಂದ್ರವಾಗುವ ದೂರದೃಷ್ಟಿ ಹೊಂದಿದೆ.​​

OHSAS%2018001%20blue%20TM


​​​​​​​​​​​ಹಸಿರು ಭವನ - ಎಂಪ್ರಿ​

ಎಂಪ್ರಿ ಸಂಸ್ಥೆಯು ಪರಿಸರ ರಕ್ಷಣೆ ಮತ್ತು ಸುಧಾರಣೆಯ ಬಗ್ಗೆ ಇರುವ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಸಂಸ್ಥೆಯ ಮುಖ್ಯ ಮತ್ತು ವಿಸ್ತರಣಾ ಎರಡೂ ಕಟ್ಟಡಗಳನ್ನು ಹಸಿರು ಕಟ್ಟಡದ ಪರಿಕಲ್ಪನೆಯನ್ನು (Green Building Concept) ಅಳವಡಿಸಿಕೊಂಡು ನಿರ್ಮಿಸಲಾಗಿದೆ. ಈ ಹಸಿರು ಕಟ್ಟಡದ ಲಕ್ಷಣಗಳು ಕೆಳಗಿನಂತಿವೆ:

  • ನಿವೇಶನದಲ್ಲಿಯ/ಕಟ್ಟಡದಲ್ಲಿನ ಜೀವ ಪರಿಸರದ ಮೌಲ್ಯಗಳನ್ನು ಕಾಯ್ದುಕೊಳ್ಳುವಾಗ ಇಂಗಾಲದ ಹೆಜ್ಜೆಗುರುತು ಕಡಿಮೆಗೊಳಿಸಲಾಗಿದೆ.
  • ದೃಶ್ಯ ಮತ್ತು  ಉಷ್ಣಾಧಾರಕ ಅನುಕೂಲಗಳಿಗೆ ಸಂಬಂಧಿಸಿದಂತೆ ಹವಾಗುಣ ವಿನ್ಯಾಸದ ಗುಣಲಕ್ಷಣಗಳ ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಒಳಾಂಗಣ ಪರಿಸರವನ್ನು ಹೊಂದುವಂತೆ ಮಾಡಲಾಗಿದೆ.
  • ನಿಷ್ಕ್ರೀಯ/ಜಡ/ಅವ್ಯಕ್ತ (passive) ವಿನ್ಯಾಸದ ವೈಶಿಷ್ಟ್ಯಗಳು, ಪರಿಣಾಮಕಾರಿ ಬೆಳಕಿನ ನೆಲ​ವಿನ್ಯಾಸಗಳು  ಮತ್ತು ಇತರ ಸಲಕರಣಗಳ ಅಳವಡಿಕೆಯ  ಮೂಲಕ ವಿದ್ಯುತ್ ಶಕ್ತಿಯ ಬೇಡಿಕೆಯನ್ನು ಕಡಿಮೆಗೊಳಿಸಲಾಗಿದೆ. 
  • ಬಾಹ್ಯ ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ನವೀಕರಿಸಬಹುದಾದ ಶಕ್ತಿಯ ಒಗ್ಗೂಡುವಿಕೆ
  • ಮಳೆ ನೀರು ಕೊಯ್ಲು ತಂತ್ರಗಳ ಅಳವಡಿಕೆ
  • ಕಡಿಮೆ ತೀವ್ರತೆಯ ಶಕ್ತಿಯ ವಸ್ತುಗಳ ಮತ್ತು ತಂತ್ರಜ್ಞಾನಗಳ ಬಳಕೆ​

“ಅನುಕರಣೀಯ ಸಾಧನೆಗಾಗಿ” GRIHA ಪ್ರಶಸ್ತಿ​​

'ಆದರ್ಶ' (Association for Development and ​Research of Sustainable Habitats- ADaRSH) ವು  ಭಾರತ ಸರ್ಕಾರದ ಹೊಸ ನವೀಕರಿಸಬಹುದಾದ ಶಕ್ತಿಯ ಸಚಿವಾಲಯದ (Ministry of New and Renewable Energy- MNRE) ಬೆಂಬಲದೊಂದಿಗೆ ಭಾರತ ಉಪಖಂಡದಲ್ಲಿ ಸುಸ್ಥಿರ ಆವಾಸಸ್ಥಾನಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಪರಸ್ಪರ ಸಂವಹನ ಕ್ರಿಯೆಗಳಿಗೆ ಒಂದು ಸ್ವತಂತ್ರವಾದ ವೇದಿಕೆಯಾಗಿದ್ದು, ಇದು ತನ್ನ 6ನೇ ವಾರ್ಷಿಕ ಗೃಹ ಶೃಂಗ ಸಮ್ಮಳನ 2015 ರಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ  ಅತ್ಯುತ್ತಮ ಪ್ರಯತ್ನಗಳಿಗೆ ಮತ್ತು ಗೃಹ ಮಾನದಂಡಗಳ ಅನುಷ್ಠಾನದ ಅಂಗೀಕಾರಕ್ಕಾಗಿ  “Exemplary Demonstration of Passive Architecture Design Award” ಪ್ರಶಸ್ತಿಯನ್ನು ನೀಡಿದೆ. ಎಂಪ್ರಿ ಸಂಸ್ಥೆಗೆ ಈ ಪ್ರಶಸ್ತಿಯು ಅದರ ಹೊಸ ಹಸಿರು ಕಟ್ಟಡದಲ್ಲಿಯ ಬೆಳಕಿನ ವ್ಯವಸ್ಥೆ, ಗಾಳಿಯ ಪ್ರಸರಣ,  ಉಷ್ಣಾಂಶದ ನಿಯಂತ್ರಣ,  ಇಂಧನ ದಕ್ಷತೆ,  ಸೌರ ದ್ಯುತಿವಿದ್ಯುತ್ಜನಕಗಳು, ಅಂಗಣದ ನಿರ್ಮಾಣ, ಗಾಳಿ ಮತ್ತು ಬೆಳಕಿಗಾಗಿ ಹೆಚ್ಚಿನ ಕಿಟಕಿಗಳ ಬಳಕೆ ಈ ಎಲ್ಲವುಗಳ ಆಧಾರದ ಮೇಲೆ ದೊರಕಿದೆ. ​   


Griha1 griha2​​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಜೀವವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top