Last modified at 12/08/2016 10:42 by gokenergy
​​​​​​​​​​​​​​​​ಚಟುವಟಿಕೆಗಳು
ಕೇಂದ್ರ ಹಾಗು ರಾಜ್ಯ ಸರ್ಕಾರದ ಕಾರ್ಯಯೋಜನೆಗಳು:

ಕೇಂದ್ರ ಸರ್ಕಾರದ ಕಾರ್ಯಯೋಜನೆಗಳು :

1).
 ದೀನದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ(ಡಿ.ಡಿ.ಯು.ಜಿ.ಜೆ.ವೈ):

             ಕೇಂದ್ರ ಇಂಧನ ಮಂತ್ರಾಲಯ, ಭಾರತ​ ಸರ್ಕಾರ ತಮ್ಮ ಕಛೇರಿ ಜ್ಞಾಪನಾ ಪತ್ರ ಸಂಖ್ಯೆ: 44/44/2014-RE ದಿನಾಂಕ: 03.12.2014ರಲ್ಲಿ ದೀನದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ 
ಯೋಜನೆಗೆ ಮಂಜೂರಾತಿಯನ್ನು ನೀಡಿರುತ್ತಾರೆ. ಈ ಯೋಜನೆಯ ಪ್ರಮುಖ ಉದ್ದೇಶವು ಈ ಕೆಳಕಂಡಂತಿದೆ.

 ಅ)  ಗ್ರಾಮೀಣ ಭಾಗದ ಕೃಷಿ ಮತು ಕೃಷಿಯೇತರ ಗ್ರಾಹಕರಿಗೆ ನ್ಯಾಯಯುತ ಸರದಿ ಪಟ್ಟಿ ಅನ್ವಯ ವಿದ್ಯುತ್ ಪೂರೈಕೆ ಮಾಡಲು ಅನುವಾಗುವಂತೆ ಕೃಷಿ ಮತ್ತು ಕೃಷಿಯೇತರ ಮಾರ್ಗಗಳ ವಿಭಜನೆ;

 ಆ)  ವಿದ್ಯುತ್ ಪರಿವರ್ತಕಗಳು/ಮಾರ್ಗಗಳು/ಗ್ರಾಹಕರ ಸ್ಥಾವರಗಳ ಮಾಪಕ ಸೇರಿದಂತೆ, ಗ್ರಾಮೀಣ ಭಾಗದಲ್ಲಿನ ಉಪ ಪ್ರಸರಣ ಹಾಗೂ ವಿತರಣಾ ಮೂಲ ಸೌಕರ್ಯದ ವೃದ್ಧಿ ಹಾಗೂ ಬಲವರ್ಧನೆ.

 ಇ)  ಗ್ರಾಮೀಣ ವಿದ್ಯುದೀಕರಣ: ದಿನಾಂಕ 01.08.2013 ರಲ್ಲಿ  CCEA ರವರು ಅನುಮೋದಿಸಿರುವಂತೆ ಆರ್.ಜಿ.ಜಿ.ವಿ.ವೈ 12ನೇ ಹಾಗೂ 13ನೇ ಯೋಜನೆಯಡಿಯಲ್ಲಿ ನಿಗದಿಪಡಿಸಲಾದ  ಗುರಿನ್ನು ಪೂರ್ಣಗೊಳಿಸಲು, ಆರ್.ಜಿ.ಜಿ.ವಿ.ವೈ ಯೋಜನೆಗೆ ಮಂಜೂರಾದ ಮೊತ್ತವನ್ನು ಡಿ.ಡಿ.ಯು.ಜಿ.ಜೆ.ವೈ ಯೋಜನೆಗೆ ತರುವ ಮೂಲಕ.

 ಈ)  ಯೋಜನೆಯ ಹಣಕಾಸಿನ ವ್ಯವಸ್ಥೆ (Funding Mechanism)  ಈ ಕೆಳಕಂಡಂತಿದೆ:

  ​1​
Grant from GOI: 60%
​  2Discom Contribution:   10% 
  ​3Loan(FIs/Banks):30%
  4Additional Grant from GOI on achievement      of prescribed  milestones:  
50% of total loan component
i.e., 15%
  ​5Maximum Grant by GOI:75% ​

ಹೆಚ್ಚು ಮಾಹಿತಿಗಾಗಿ: http://www.ddugjy.in/

2). ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (Integrated Power Development Scheme (IPDS)): 
        ಕೇಂದ್ರಇಂಧನ ಮಂತ್ರಾಲಯ, ಭಾರತ ಸರ್ಕಾರ ತಮ್ಮ ಕಛೇರಿ ಜ್ಞಾಪನಾ ಪತ್ರ ಸಂಖ್ಯೆ: 26/01/2014- APDRP ದಿನಾಂಕ:03.12.2014ರಲ್ಲಿ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಗೆ (IPDS) ಮಂಜೂರಾತಿಯನ್ನು ನೀಡಿರುತ್ತಾರೆ.  ಈ ಯೋಜನೆಯ ಪ್ರಮುಖ ಉದ್ದೇಶವು ಈ ಕೆಳಕಂಡಂತಿದೆ.

ಅ)  ನಗರ ಪ್ರದೇಶಗಳಲ್ಲಿ ಉಪ ಪ್ರಸರಣ ಹಾಗೂ ವಿತರಣಾ ಜಾಲದ ಬಲವರ್ಧನೆ.

ಆ)  ನಗರ ಪ್ರದೇಶಗಳಲ್ಲಿನ ವಿದ್ಯುತ್ ಪರಿವರ್ತಕಗಳು/ಮಾರ್ಗಗಳು/ಗ್ರಾಹಕರ ಸ್ಥಾವರಗಳಿಗೆ ಮಾಪಕ ಅಳವಡಿಕೆ.

ಇ)  ವಿತರಣಾ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಅಳವಡಿಕೆ ಹಾಗೂ ವಿತರಣಾ ಜಾಲದ ಬಲವರ್ಧನೆ:   ದಿನಾಂಕ: 21.06.2013 ರಲ್ಲಿ   CCEA  ರವರು ಅನುಮೋದಿಸಿರುವಂತೆ  ಆರ್.ಎ.ಪಿ.ಡಿ.ಆರ್.ಪಿ 12ನೇ ಹಾಗೂ 13ನೇ ಯೋಜನೆಯಡಿಯಲ್ಲಿ ನಿಗದಿಪಡಿಸಲಾದ ಗುರಿಯನ್ನು ಪೂರ್ಣಗೊಳಿಸಲು, ಆರ್.ಎ.ಪಿ.ಡಿ.ಆರ್.ಪಿ ಯೋಜನೆಗೆ ಮಂಜೂರಾದ ಮೊತ್ತವನ್ನು  ಐ.ಪಿ.ಡಿ.ಎಸ್ ಯೋಜನೆಗೆ ತರುವ ಮೂಲಕ

ಈ) ಯೋಜನೆಯ ಹಣಕಾಸಿನ ವ್ಯವಸ್ಥೆ(Funding Mechanism) ಈ ಕೆಳಕಂಡಂತಿದೆ:  

​​​1​​​Grant from GOI:60%
​2Discom Contribution:10%
​3Loan(FIs/Banks):30%
​4Additional Grant from GOI on  achievement of​ prescribed  milestones: 50% of total loan component
i.e., 15%
​5Maximum Grant by GOI:75%
  ಹೆಚ್ಚು ಮಾಹಿತಿಗಾಗಿ: http://apdrp.gov.in/

3) ರಾಷ್ಟ್ರೀಯ ಸೌರಶಕ್ತಿ ಪ್ರಚಾರ ವೇದಿಕೆ (NSM):

      ರಾಷ್ಟ್ರೀಯ ಸೌರಶಕ್ತಿ ಯೋಜನೆಯು ಭಾರತ ಸರ್ಕಾರ ಹಾಗು ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾಗಿದ್ದು.ಈ ಯೋಜನೆಯ ಮೂಲಕ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗಳನ್ನು ಪೂರೈಸಲು  ಪ್ರಕೃತಿ ಕೊಡುಗೆಗಳನ್ನು ಹೆಚ್ಚು ಉಪಯೋಗಿಸುವಂತೆ ಪ್ರಯತ್ನಿಸುವುದು. ಇದರ ಮುಖಾಂತರ ವಿಶ್ವವು ಬದಲಾಗುತ್ತಿರುವ ಹವಾಮಾನದಿಂದ ಎದುರಿಸುತ್ತಿರುವ ಆತಂಕವನ್ನು ಶಮನಗೊಳಿಸುವ  ನಿಟ್ಟಿನಲ್ಲಿ ಪ್ರಯತ್ನಿಸುವುದು.

    ಹೆಚ್ಚು ಮಾಹಿತಿಗಾಗಿ: http://www.mnre.gov.in/

----------------------------------------------------------------------------------------------------------

ರಾಜ್ಯ ಸರ್ಕಾರದ ಕಾರ್ಯಯೋಜನೆಗಳು

1)ನಿರಂತರ ಜ್ಯೋತಿ ಯೋಜನೆಯ ಅನುಷ್ಠಾನ :

  • ರಾಜ್ಯದಲ್ಲಿ ನಿರಂತರಜ್ಯೋತಿಯೋಜನೆಯನ್ನು 2008-09ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಗೊಳಿಸಲಾಯಿತು. ಈ ಯೋಜನೆಯನ್ನುಎರಡು ಹಂತಗಳಲ್ಲಿ ಒಟ್ಟು 128   ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
  • ನಿರಂತರಜ್ಯೋತಿ  ಯೋಜನೆಯನ್ನು ಒಟ್ಟು ರೂ.2123 ಕೋಟಿಗಳ ಅಂದಾಜಿನಲ್ಲಿ  ಅನುಷ್ಠಾನಗೊಳಿಸುವ ಬಗ್ಗೆ  ರಾಜ್ಯ  ಸರ್ಕಾರದ  ಅನುಮೋದನೆ  ನೀಡಿದ್ದು, ಯೋಜನೆಯ  ಶೇ.40 ರಷ್ಟು ವೆಚ್ಚವನ್ನುರಾಜ್ಯ ಸರ್ಕಾರಈಕ್ವಿಟಿಯಾಗಿಒದಗಿಸಲು, ಮತ್ತು ಉಳಿದ ಶೇ.60 ರಷ್ಟುಯೋಜನೆಯ ವೆಚ್ಚವನ್ನು ವಿತರಣಾ ಕಂಪನಿಗಳು ಸಾಲದರೂಪದಲ್ಲಿ ಭರಿಸುವುದಾಗಿರುತ್ತದೆ.
  • ನಿರಂತರಜ್ಯೋತಿಯೋಜನೆಯ ಪ್ರಗತಿಯ ವಿವರಗಳು: (30-04-2015ರ ತನಕ)
ಕ್ರಸಂಕಂಪನಿಯ ಹೆಸರುಒಟ್ಟು ತಾಲ್ಲೂಕುಗಳುಪ್ರಸ್ತಾವಿತ ಎನ್.ಜೆ. 
11 ಕೆ.ವಿ. ಮಾರ್ಗಗಳು
ಭೌತಿಕ ಪ್ರಗತಿ (11ಕೆ.ವಿ ಮಾರ್ಗಗಳ
ಕಾಮಗಾರಿಗಳನ್ನು  ಪೂರ್ಣಗೊಳಿಸಿದ  ಸಂಖ್ಯೆ )
ಶೇಕಡವಾರು
ಪ್ರಗತಿ(%)
  1ಬೆಸ್ಕಾಂ4054250593%
  2ಸೆಸ್ಕ್2437021458%
  3ಹೆಸ್ಕಾಂ3445637682%
  4ಜೆಸ್ಕಾಂ3034422666%

ಒಟ್ಟು1281712132177%

2)ಕುಡಿಯುವ ನೀರು ಸರಬರಾಜು ಯೋಜನೆಯನ್ನು ಹೆಚ್ಚು ಚೇತನಗೊಳಿಸುವುದು:

                 ಕುಡಿಯುವ ನೀರು ಮನುಷ್ಯನ ಮೂಲ ಅವಶ್ಯಕತೆಯಾಗಿದ್ದು, ಅದನ್ನು ಒದಗಿಸುವುದು ಪರಮ ಆದ್ಯತೆಯಾಗಿದೆ. ವರ್ಷ 2004-05 ರಿಂದ 2014-15 ರವರೆಗೆ, ಕರ್ನಾಟಕ ರಾಜ್ಯವು ನೀರಿನ  ಬರದ  ಹೊಡೆತಕ್ಕೆ ತೀವ್ರ ತತ್ತರಿಸಿತ್ತು.  ಆಗ ನೀರು  ಸರಬರಾಜನ್ನು  ಇನಷ್ಟು ಚೇತನಗೊಳಿಸುವ ಕಾರ್ಯಕ್ರಮಗಳನ್ನು ರೂಪಿಸಲಾಯಿತು.  ಈ  ಸಮಯದಲ್ಲಿ  ಒಟ್ಟು 68,325  ಕುಡಿಯುವ  ನೀರು ಸರಬರಾಜು ಯೋಜನೆಗಳನ್ನು ಚೇತನಗೊಳಿಸಲಾಯಿತು(ಸ.ಯೋ.ಚೆ.) 2014-15 ರ ತನಕ ಒಟ್ಟು 65356 ಕುಡಿಯುವ ನೀರು ಸರಬರಾಜು ಯೋಜನೆಗಳ      ಚೇತನಗೊಳಿಸಲಾದ  ಮಾಹಿತಿಯನ್ನು ಕೆಳಗೆ ಒದಗಿಸಲಾಗಿದೆ.

YEAR2004-05​2005-062006-072007-082008-092009-102010-112011-12 2012-132013-142014-15
TOTAL2383393433453198482155793906571413472132318652

3) ಗಂಗಾ ಕಲ್ಯಾಣ ಯೋಜನೆ: 

       ಈ ಯೋಜನೆ ೦೧-೦೨-೧೯೯೭ ರಿಂದ ಅನುಷ್ಠಾನಕ್ಕೆ ಬಂದಿದೆ. ಈ ಯೋಜನೆಯ ಉದ್ದೇಶ ನೀರು ಕಡಿಮೆ ಇರುವ ಕಡೆಯಲ್ಲಿ ಬೇಸಾಯಕ್ಕೆ ಬೋರ್ವೆಲ್ ಕೊರೆದು ಅಂತರ್ಜಲದ ನೀರನ್ನು ಕೃಷಿಗೆ   ಬಳಸುವುದು. ಇದರ ಲಾಭವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ರೈತರು ಪಡೆಯಬಹುದು. ವಿದ್ಯುತ್ ವಿತರಣಾ ಕಂಪನಿಗಳು ಈ   ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತದೆ. ಈ ಯೋಜನೆಯಡಿ ಫಲಾನುಭವಿಗಳಿಗೆ  ವಿದ್ಯುತ್  ಪಂಪ್‌ಸೆಟ್‌ಗಳನ್ನು  ಡಾ.ಬಿ.ಆರ್.ಅಂಬೇಡ್ಕರ್   ಅಭಿವೃದ್ಧಿ     ನಿಗಮ,  ಶ್ರೀ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳು ನೀಡುತ್ತದೆ.  ವರ್ಷವಾರು ಈ ಯೋಜನೆಯಡಿ ಪಂಪ್‍ಸೆಟ್‍ಗಳಿಗೆ  ​ವಿದ್ಯುತ್ ಸಂಪರ್ಕ ಪಡೆದುಕೊಂಡ ವಿವರಗಳು:

YEAR2004-05​2005-062006-072007-082008-092009-102010-112011-12 2012-132013-142014-15
TOTAL103921543561492311322111261185712132159222019110859​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಇಂಧನ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top