Last modified at 21/04/2017 11:28 by Fisheries
ಪರಿಚಯ
​​


ಮೀನುಗಾರಿಕೆಯು ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಠಿಯ ಮೂಲವಾಗಿರುವುದರಿಂದ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದರ ಜೊತೆಗೆ ಈ ವಲಯವು ಕೈಗಾರಿಕೆ ಉದ್ದಿಮೆಯ ಸ್ವರೂಪವನ್ನು ಸಹ ಹೊಂದಿದೆ. ಮಾನವನ ಆಹಾರದಲ್ಲಿ ಮೀನು ಕಡಿಮೆ ಬೆಲೆಯ ಪ್ರೋಟೀನ್ ಮೂಲವಾಗಿದೆ. ಮೀನುಗಾರಿಕೆ ಇಲಾಖೆಯನ್ನು 1957ರ ಇಸವಿಯಲ್ಲಿ ರಾಜ್ಯದಲ್ಲಿರುವ ಕರಾವಳಿ ಮತ್ತು ಒಳನಾಡು ವಲಯದ ಸಂಪನ್ಮೂಲಗಳನ್ನು ಉಪಯೋಗಿಸಿ ರಾಜ್ಯದ ಮೀನು ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಕರ್ನಾಟಕದಲ್ಲಿ ಸುಮಾರು 5.93 ಲಕ್ಷ ಹೆಕ್ಟೇರಗಳಷ್ಟು ಒಳನಾಡು ಜಲಸಂಪನ್ಮೂಲ, 8000 ಹೆಕ್ಟೇರ್ ಹಿನ್ನೀರು ಪ್ರದೇಶ ಮತ್ತು 27,000 ಚದರ ಕಿ.ಮೀ ಭೂಖಂಡ ಪ್ರದೇಶವನ್ನು ಹೊಂದಿದ 320 ಕಿ.ಮೀ ಉದ್ದದ ಕರಾವಳಿ ಪ್ರದೇಶ ಇರುತ್ತದೆ. ಮೀನುಗಾರಿಕೆ ಇಲಾಖೆಯು ಸಂಪನ್ಮೂಲಗಳ ಸದ್ಬಳಕೆಗಾಗಿ ಹಾಗು ಸಾರ್ವಜನಿಕರ ವಿಶೇಷವಾಗಿ ಮೀನುಗಾರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

    ರಾಜ್ಯದ ಮೀನು ಉತ್ಪಾದನೆ ಎಂಬತ್ತರ ದಶಕದ ಆರಂಭದಲ್ಲಿ ಸುಮಾರು 2 ಲಕ್ಷ ಟನ್ ಗಳಷ್ಟಿದ್ದು ಅದು ತೊಂಬತ್ತರ ದಶಕದ ಮಧ್ಯದಲ್ಲಿ ಸುಮಾರು 3 ಲಕ್ಷ ಟನ್ ಗಳಿಗೆ ಏರಿತು.  ಕಳೆದ ಐದು ವರ್ಷಗಳ ಅವಧಿಯ ಸರಾಸರಿ ಮೀನು ಉತ್ಪಾದನೆ ಸುಮಾರು 5.65 ಲಕ್ಷ ಟನ್ ಗಳಿಗೆ ಏರಿದೆ. ಇದರಲ್ಲಿ ಕರಾವಳಿಯ ಕೊಡುಗೆ ಶೇ 66 ಇದ್ದರೆ ಒಳನಾಡಿನ ಕೊಡುಗೆ ಶೇ 34 ರಷ್ಟಿದೆ. 2013-14 ನೇ ಸಾಲಿನ ದೇಶದ ಒಟ್ಟು ಮೀನು ಉತ್ಪಾದನೆಯಲ್ಲಿ ರಾಜ್ಯದ ಕೊಡುಗೆ ಶೇ 5.86 ರಷ್ಟಿದ್ದು ಒಳನಾಡು ಮೀನು ಉತ್ಪಾದನೆಯಲ್ಲಿ 7 ನೇ ಸ್ಥಾನ ಹಾಗೂ ಕರಾವಳಿಯಲ್ಲಿ 6ನೇ ಸ್ಥಾನ ಹೊಂದಿದೆ.  ರಾಜ್ಯದ ಪ್ರಸ್ತುತ ತಲಾ ಮೀನು ಲಭ್ಯತೆ 6.8 ಕೆ.ಜಿ.ಯಷ್ಟಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಗೆ ಮೀನುಗಾರಿಕೆ ವಲಯದ ಕೊಡುಗೆ 1993-94 ರಲ್ಲಿ ರೂ 16,316 ಲಕ್ಷಗಳಷ್ಟಿದ್ದದ್ದು 2012-13 ರಲ್ಲಿ ರೂ 2,86,273 ಲಕ್ಷಗಳಿಗೆ ಹೆಚ್ಚಿದೆ.

ಕರ್ನಾಟಕದ ಮೀನು ಉತ್ಪಾದನೆ

(ಪ್ರಮಾಣ: ಮೆ.ಟನ್                                                                       ಮೌಲ್ಯ: ಲಕ್ಷ ರೂ)

ವರ್ಷಕಡಲುಒಳನಾಡುಒಟ್ಟು
ಪ್ರಮಾಣಮೌಲ್ಯಪ್ರಮಾಣಮೌಲ್ಯಪ್ರಮಾಣಮೌಲ್ಯ
1997-981898592364312054228394​31040152037
1998-99160627210091184192799527904649004
1999-00165653236841266462970629229953390
2000-01177907248291274682991130537554740
2001-02128416199421211962834324961248285
2002-031801613365386262980526642343458
2003-0418700340498700361878325703959281
2004-0517122745873804702158225169867455
2005-06176974465981205993232129757378918
2006-07168545551431239193717629246492318
2007-08175566517871221244274429769094531
2008-092181378202414371757487361854139511
2009-10248728.8090198.11159324.0063730408052.80153928.11
2010-11340570.68133564.71186008.7577348526579.43210913.00
2011-12347383.21150629.73199053.4780016546436.68230645.27
2012-13357324.97201668.16168241.4784604.91525566.44286273.07
​2013-14357358
204101.57​203914​159621​561272​363723.00
​2014-15389822​265093.22223419​193205​613241​458298.00​
​2015-16411762​342433.19​168828​148217​580590​490650​

ಕರ್ನಾಟಕದ ಮೀನು ರಫ್ತು

ವರ್ಷಪ್ರಮಾಣ (ಮೆ.ಟನ್ )
ಮೌಲ್ಯ (ಲಕ್ಷ ರೂ)
ಶೇ.ವಾರು ಬೆಳವಣಿಗೆದರ ಪ್ರತಿ ಕೆ.ಜಿ.
ಪ್ರಮಾಣಮೌಲ್ಯ
1992-9366325768.00-  14087
1993-9481277601.00+ 23+ 3294
1994-95909911312.71+ 12+ 49124
1995-9671589874.30-  21- 13138
1996-9799149926.36+ 38+  1100
1997-981055111731.87+  6+18111
1998-991174711395.35+ 11-   397
1999-001289712238.00+10+795
2000-01118239446.00-8-2380
2001-0294306338.00-20-3367
2002-0397886270.00+4-164
2003-0484746447.00-13+376
2004-05103497692.39+22+19135
2005-061596510327.00+54+3465
2006-072672314949.00+67+3956
2007-082615516261.00-2+962
2008-093300026400.00+26+6280
2009-105735939112.00+73+4868
2010-1110479568813.00+83+7666
2011-128629965846.00-17.65-4.3176
2012-139633385495.00+11.62+29.8489

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top