achievements

Last modified at 23/07/2016 19:21 by hfw

​​​​​​​​​​

ಸಾಧನೆಗಳು

  1. ಡಾ. ನಂಜುಂಡಪ್ಪ ಸಮಿತಿ ವರದಿಯನ್ನಾಧರಿಸಿ, ಹೊಸದಾಗಿ ಉನ್ನತೀಕರಿಸಿರುವ 51 ಸಮುದಾಯ ಆರೋಗ್ಯ ಕೇಂದ್ರಗಳಿಗಾಗಿ ಹೊಸ ಕಟ್ಟಡ ಕಾಮಗಾರಿಯನ್ನು ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕೈಗೆತ್ತಿಕೊಳ್ಳಲಾಗಿದ್ದು ಪ್ರಗತಿಯಲ್ಲಿದೆ. ಇದೇ ರೀತಿ, ಗುಲ್ಬರ್ಗಾ ಮತ್ತು ಚಾಮರಾಜನಗರದ ಜಿಲ್ಲಾ ಆಸ್ಪತ್ರೆಗಳ ಕಟ್ಟಡ ಕಾಮಗಾರಿಯನ್ನೂ ಕೈಗೆತ್ತಿಕೊಂಡು ಪ್ರಗತಿಯಲ್ಲಿದೆ. ಈ ವರ್ಷ ಒಟ್ಟಾರೆ ಕಟ್ಟಡ ಕಾಮಗಾರಿಗಳಿಗೆ ₹ 21.00 ಕೋಟಿಗಳಷ್ಟು ಮೊತ್ತವನ್ನು ವೆಚ್ಚ ಮಾಡಲಾಗುತ್ತಿದೆ.
  2. ·  ರಾಜ್ಯದಲ್ಲಿನ ಎಲ್ಲಾ ಆರೋಗ್ಯ ಸಂಸ್ಥೆಗಳಿಗೂ ಔಷಧ ಸರಬರಾಜನ್ನು ಹೆಚ್ಚಿಸಲಾಗಿದೆ. ಈಗಾಗಲೇ ಪ್ರಸ್ತುತವಿರುವ ಬಜೆಟ್ ಗೆ ಹೆಚ್ಚುವರಿ ಮೊತ್ತವಾಗಿ ₹ 26.00 ಕೋಟಿಗಳಷ್ಟನ್ನು ಬಿಡುಗಡೆ ಮಾಡಲಾಗಿದೆ.
  3. · ಆರೋಗ್ಯ ವಿಮಾ ಯೋಜನೆಯೊಂದಾದ 'ಸುವರ್ಣ ಸುರಕ್ಷಾ"ವನ್ನು ಕೃಷಿ ಕಾರ್ಮಿಕರಿಗೆ ಜಾರಿಗೊಳಿಸಲಾಗಿದೆ. ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ₹ 35.00 ಕೋಟಿಗಳ ಮೊತ್ತವನ್ನು ನಿಗದಿಪಡಿಸಲಾಗಿದೆ.
  4. ·  ಡಾ.ನಂಜುಂಡಪ್ಪ ಸಮಿತಿ ವರದಿಯನ್ವಯ ಉನ್ನತೀಕರಿಸಿದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿ ಮತ್ತು ಉಪಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
  5. · ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳನ್ನು ಕನಿಷ್ಟ 100 ಹಾಸಿಗೆಗಳಿರುವ ಆಸ್ಪತ್ರೆಗಳಾಗಿ ಉನ್ನತೀಕರಿಸಲು ಯೋಜಿಸಲಾಗಿದೆ. ಉಳಿದ 63 ಆಸ್ಪತ್ರೆಗಳನ್ನು ಸಿಬ್ಬಂದಿ ಮಂಜೂರು ಮಾಡಿಯೂ ಉನ್ನತೀಕರಿಸಲಾಗಿದೆ. ನಿಯಮಗಳನುಸಾರ 41 ತಾಲ್ಲೂಕು ಆಸ್ಪತ್ರೆಗಳಿಗೆ ಮತ್ತು ಪ್ರಸ್ತುತವಿರುವ 117 ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ತುಂಬಲಾಗುತ್ತಿದೆ.
  6. · ರಾಜ್ಯ ಆರೋಗ್ಯ ವಿಭಾಗದಲ್ಲಿ ಪ್ರಾಥಮಿಕ ಮಾಹಿತಿ ಮತ್ತು ಸಮಗ್ರ ಮಾಹಿತಿಯನ್ನು ಕಲೆತುಹಾಕಲು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದಲ್ಲಿ ನಿಯಂತ್ರಣಾ ಕೊಠಡಿಯನ್ನು ಪ್ರಾರಂಭಿಸಲಾಗುತ್ತಿದೆ. ಇದು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುವಂತೆ ಪ್ರಸ್ತಾವಿಸಲಾಗಿದೆ.
  7. ·  ಅಪಘಾತ ಸಂತ್ರಸ್ತರಿಗೆ ಅವಶ್ಯಕ ಉಪಕರಣಗಳುಳ್ಳ ಆ್ಯಂಬುಲೆನ್ಸ್ ವಾಹನಗಳನ್ನು ಎಲ್ಲಾ 27 ಜಿಲ್ಲಾ ಆಸ್ಪತ್ರೆಗಳಿಗೂ ಒದಗಿಸಲಾಗಿದೆ.
  8. · ಎಲ್ಲಾ ಸಿ.ಎಚ್.ಸಿಗಳಲ್ಲೂ, ತಾಲ್ಲೂಕು ಆಸ್ಪತ್ರೆಗಳಲ್ಲೂ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲೂ, ಔಷಧ ವಿತರಣಾ ಕೇಂದ್ರಗಳನ್ನು ಎಲ್ಲರಿಗೂ ಎದ್ದು ಕಾಣುವಂತೆ ಸ್ಥಾಪಿಸಲಾಗಿದೆ.
  9. · ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ₹ 75,000 ದಿಂದ ₹ 1,00,000 ಕ್ಕೆ ಹಾಗೂ ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ₹ 1,00,000 ದಿಂದ ₹ 2,00,000 ಕ್ಕೆ  ಔಷಧಿ ಸರಬರಾಜು ಮಾಡಲು ಆಯವ್ಯಯವನ್ನು ಹೆಚ್ಚಿಸಲಾಗಿದೆ, ಇನ್ನಿತರ ಆಸ್ಪತ್ರೆಗಳಲ್ಲಿ ಔಷಧಿ ಸರಬರಾಜು ಮಾಡಲು ಬಜೆಟ್ ಅನ್ನು 2-3 ಪಟ್ಟು ಹೆಚ್ಚಿಸಲಾಗಿದೆ.