​​​​​​​MPIC - Record of Proceedings for May 2015​


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮುಂದುವರೆದ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯನ್ನು (ಎಂ.ಪಿ.ಐ.ಸಿ.) ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಮೇ - 2015 ಮಾಸದಲ್ಲಿ ನಡೆದ ಎಂಪಿಕ್ ಸಭೆಯ ನಡೆವಳಿ

ಹಾಜರಿದ್ದವರು

  1. ​​ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
  2. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದರಾವಿ, ವೃತ್ತ, ಬೆಂಗಳೂರು 560 009.
  3. ​​ಔಷಧ ನಿಯಂತ್ರಕರು, ಔಷಧ ನಿಯಂತ್ರಣಾಲಯ, ಅರಮನೆ ರಸ್ತೆ, ಬೆಂಗಳೂರು.
  4. ಆಡಳಿತಾಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆನಂದರಾವ್ ವೃತ್ತ, ಬೆಂಗಳೂರು.
  5. ಆಂತರಿಕ ಆರ್ಥಿಕ ಸಲಹೆಗಾರರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
  6. ಮುಖ್ಯ ಆಡಳಿತಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದರಾವಿ ವೃತ್ತ, ಬೆಂಗಳೂರು.
  7. ​ಯೋಜನಾ ನಿರ್ದೇಶಕರು (ಆರ್.ಸಿ.ಹೆಚ್.) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದ ರಾವ್ ವೃತ್ತ, ಬೆಂಗಳೂರು 560 059.
  8. ಯೋಜನಾ ಆಡಳಿತಾಧಿಕಾರಿ, ಕರ್ನಾಟಕ ಆರೋಗ್ಯ ಪದ್ದತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ, ಶೆಷಾಧ್ರಿ ರಸ್ತೆ, ಬೆಂಗಳೂರು 560 001.
  9. ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಅಂಚೆ ಚೀಲ ಸಂಖ್ಯೆ 5377, ಅರಮನೆ ರಸ್ತೆ, ಬೆಂಗಳೂರು 560 001.
  10. ನಿರ್ದೇಶಕರು, ಯೋಜನಾ ಇಲಾಖೆ (ಜನ ಶಕ್ತಿ ಮತ್ತು ಉದ್ಯೋಗ ವಿಭಾಗ) ಬಹುಮಹಡಿಗಳ ಕಟ್ಟಡ.
  11. ಅಪರ ನಿರ್ದೇಶಕರು, ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವೇರ್ ಹೌಸಿಂಗ್ ಸೊಸೈಟಿ, ಬೆಂಗಳೂರು.
  12. ಸರ್ಕಾರದ ಉಪ ಕಾರ್ಯದರ್ಶಿ-1, 2 ಮತ್ತು 3, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
  13. ಉಪ ನಿರ್ದೇಶಕರು (ಆಯುರ್ವೇದ) ಆಯುಷ್ ಇಲಾಖೆ.
​ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು 2015ರ ಮೇರಿಂದ ಜೂನ್ 15ವರೆಗೆ ನಡೆಸಲ್ಪಡುವ ಮಾಸಿಕ ವಿವಿಧ ಹಂತದ ಪರಿಶೀಲನೆ ಸಭೆ ನಡೆಸಲು ಗುರುತಿಸಿದ ದಿನಾಂಕವನ್ನು ಗಮನದಲ್ಲಿಟ್ಟು ಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ​​ ಇಲಾಖೆ, ಆಯುಷ್ ಇಲಾಖೆ ಮತ್ತು ಔಷಧ ಇಲಾಖೆಗಳ ಮೇ 2015ರ ಮಾಹೆಯ 2015-16ನೇ ಸಾಲಿನ ಮುಂದುವರೆದ ಯೋಜನಾ ಕಾರ್ಯಕ್ರಮಗಳ ಪ್ರಗತಿ ವರದಿಗಳನ್ನು ಮತ್ತು 2015-16ನೇ ಸಾಲಿನ ಆಯವ್ಯಯದ ಘೋಷಿತ ಚಟುವಟಿಕೆಗಳ ಕಾರ್ಯಸೂಚಿಗಳನ್ನು ಪರಿಶೀಲಿಸಲಾಯಿತು.
    • ​ಆಯುವ್ಯಯ ಭಾಷಣದಲ್ಲಿ ಘೋಷಿಸಿದ ಹೊಸ ಯೋಜನೆಯಾದ ರಾಜ್ಯದ ಎಲ್ಲಾ ಆಸ್ಪತ್ರೆ ತಂತ್ರಾಂಶ ಅಳವಡಿಕೆ ಕಾರ್ಯಕ್ರಮದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. (ಕಡತ ಸಂಖ್ಯೆ ಆಕುಕ 63 ಎಫ್ ಪಿ ಆರ್ 2015 ರಲ್ಲಿ ಆಯುಕ್ತರು ಇದನ್ನು ಎನ್. ಹೆಚ್. ಎಂ. ಅಡಿಯಲ್ಲಿ ಕೈಗೊಳ್ಳಲು ಮಂಜೂರಾತಿ ಕೇಳಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸುವ ಬಗ್ಗೆ ಪ್ರಧಾನ ಕಾರ್ಯದರ್ಶಿಗಳ ಆದೇಶವನ್ನು ನಿರೀಕ್ಷಿಸಲಾಗಿದೆ. (13/8/2015). [ಅನುಸರಣೆ: ಡಾ|| ಸುರೇಶ್ ಮತ್ತು ಮುಖ್ಯ ಆಡಳಿತಾಧಿಕಾರಿಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ)
    • ರಾಜ್ಯದಲ್ಲಿ ಹೆಣ್ಣು ಬ್ರೂಣ ಹತ್ಯೆಯನ್ನು ತಡೆಗಟ್ಟುವ ದೃಷ್ಟಿಯಿಂದ ಎಲ್ಲಾ ಅಲ್ಟ್ರಾ ಸ್ಕ್ಯಾನಿಂಗ್ ಕೇಂದ್ರಗಳಿಂದ ನೈಜ ಸಮಯದ ಮಾಹಿತಿಯನ್ನು ಅಂತರ್ ಜಾಲದ ಮೂಲಕ ಸಂಗ್ರಹಿಸುವ ಕಾರ್ಯಕ್ರಮದ ಬಗ್ಗೆ ಡಾ|| ನಾರಾಯಣ್, ಡಾ|| ರಾಮಚಂದ್ರ ಬಾಯರಿ ಮತ್ತು ಉಪ ಕಾರ್ಯದರ್ಶಿಗಳನ್ನು ಒಳಗೊಂಡ ತಂಡ ಮಹಾರಾಷ್ಟ್ರ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಯಿತು. [ಅನುಸರಣೆ : ಉಪ ನಿರ್ದೇಶಕರು, ಪಿ.ಸಿ.ಪಿ.ಎನ್.ಡಿ.ಟಿ.]
    • ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಕೆಲವು ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ಸಹಿತ ತೀವ್ರ ನಿಗಾ ಘಟಕ (ಐ.ಸಿ.ಯು.) ಸ್ಥಾಪಿಸುವ ಯೋಜನೆಯ ಪ್ರಸ್ತಾವನೆ ಆರ್ಥಿಕ ಇಲಾಖೆಗೆ ಕಳುಹಿಸಿದ್ದು ಇದನ್ನು ಅನುಸರಿಸಲು ಸೂಚಿತವಾಯಿತು. [ಅನುಸರಣೆ : ಅಧೀನ ಕಾರ್ಯದರ್ಶಿಗಳು] [2210-01-110-2-44 - Implementation of E-Hospital Software at KC General Hospital, Sanjay Gandhi Truma Care Centre and Jayanagara General Hospital ಲೆಕ್ಕ ಶೀರ್ಷಿಕೆಯಲ್ಲಿಡಿಯಲ್ಲಿ ಈ ಯೋಜನೆಯನ್ನು ಕೈಗೊಳ್ಳಬೇಕಾಗಿದ್ದು, ಕಡತ ಸಂಖ್ಯೆ ಆಕುಕ 158 ಸಿಜಿಎಂ 2015ರಲ್ಲಿ (ಕಂಪ್ಯೂಟರ್ ಸಂಖ್ಯೆ 79711 ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ.
    • 2015-16ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಯವರ ಆಯವ್ಯಯ ಭಾಷಣ ಕಂಡಿಕೆಗಳ ಯೋಜನಾ ಕಾರ್ಯಕ್ರಮಗಳ ಇತರೆ ಪ್ರಸ್ತಾವನೆಗಳ ಪ್ರಗತಿಯನ್ನು ಆರ್ಥಿಕ ಇಲಾಖೆಯಲ್ಲಿ ಅನುಸರಿಸಲು ಸೂಚಿಸಲಾಯಿತು. (ಅನುಸರಣೆ : ಸಂಬಂಧಪಟ್ಟ ಇಲಾಖಾ ಮುಖ್ಯಸ್ತರು).  
    • ಎಲ್ಲಾ ಜಿಲ್ಲೆಗಳಲ್ಲಿ ದಂತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವ ಕಾರ್ಯಕ್ರಮದ ಪ್ರಸ್ತಾವನೆಯನ್ನು ಸರಿಪಡಿಸಿ ಸರ್ಕಾರಕ್ಕೆ ಪುನ: ಸಲ್ಲಿಸಲು ಸೂಚಿಸಲಾಯಿತು. [ಅನುಸರಣೆ : ಡಾ. ಈಶ್ವರಪ್ಪ, ಜಂಟಿ ನಿರ್ದೇಶಕರು, ವೈದ್ಯಕೀಯ]​.  Proposal of Commissioner vide letter No. DHS/OH/01/2015-16 dated 18.05.2015 processed in File No. HFW 142 CGM 2015 is scrutinised by Principal Secretary.  Proposal required rebuilding with details:  (1) List of equipments (2) What is the result of the gap analysis (3) Whether we have doctors there? (+Staff).  How does it work along with  'Dantha Bhagya Scheme' (Linkage required).  What is capex and opex? How is the referral path designed or conceived?  Are the dental doctors trained? These questions will be discussed in a meeting.
    • ಮೈಸೂರು ಮತ್ತು ಬೆಳಗಾವಿಯಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಹಾಗೂ ರಾಜ್ಯ ಪಾಲಿನ ಅನುದಾನವನ್ನು ವೆಚ್ಚ ಮಾಡಲು ಸೂಚಿಸಲಾಯಿತು. (ಅನುಸರಣೆ : ನಿರ್ದೇಶಕರು, ಪಿ.ಹೆಚ್.ಐ.)
    • ಕ್ಷಯ ಮತ್ತು ಹೆಚ್ ಐ ವಿ ಸೋಂಕಿತ ರೋಗಿಗಳಿಗೆ ಪೌಷ್ಟಿಕ ನೆರವು ಈ ಕಾರ್ಯಕ್ರಮದಡಿಯಲ್ಲಿ ರೂ. 25.00 ಲಕ್ಷ ಅನುದಾನವಿದ್ದು, ಹೆಬ್ಬಾಳದಲ್ಲಿರುವ ಕೃಷಿ ವಿಶ್ವ ವಿದ್ಯಾಲಯದಿಂದ ಪೌಷ್ಟಿಕ ಆಹಾರ ಮಿಶ್ರಣ ಖರೀದಿಸಿ ರೋಗಿಗಳಿಗೆ ಒದಗಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು. (ಅನುಸರಣೆ : ಸಹ ನಿರ್ದೇಶಕರು, ಕ್ಷಯ)
    • ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಅನುದಾನವನ್ನು ಡಿಸೆಂಬರ್ ಅಂತ್ಯದೊಳಗೆ ವೆಚ್ಚ ಮಾಡಲು ಸೂಚಿಸಲಾಯಿತು ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಉಪ ಶೀರ್ಷಿಕೆ 422 ರಡಿಯಲ್ಲಿ 24103.00 ಲಕ್ಷ ರೂಗಳನ್ನು ಹಾಗೂ ಉಪ ಶೀರ್ಷಿಕೆ 423ರಡಿಯಲ್ಲಿ 9709.00 ಲಕ್ಷ ರೂಗಳ ಅನುದಾನವಿದ್ದು, ಇದರ ವಿನಿಯೋಗಕ್ಕೆ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಲು ಸೂಚಿಸಲಾಯಿತು.  ಈ ಕಾರ್ಯಕ್ರಮದಡಿಯಲ್ಲಿ ಪ್ರಸೂತಿ ಆರೈಕೆ ಫಲಾನುಭವಿಗಳಿಗೆ ರೂ. 2000 ನೀಡಲು ಸರ್ಕಾರಿ ಆದೇಶ ಹೊರಡಿಸಬೇಕಾಗಿದ್ದು ಇದಕ್ಕೆ ಪೂರಕವಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಯಿತು.  (ಆಯುಕ್ತರ ಪ್ರಸ್ತಾವನೆಯನ್ನು ನಿರೀಕ್ಷಿಸಿದೆ).
    • ಕರ್ನಾಟಕ ಆರೋಗ್ಯ ಅಭಿವೃದ್ಧಿ ಹಾಗೂ ಸುಧಾರಣೆ ಯೋಜನೆಯ ಲೆಕ್ಕ ಶೀರ್ಷಿಕೆ 4210-01-110-1-87 (ಸೇವಾ ಸವಾಲು ನಿಧಿ) ಈ ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುದಾನದ ಪೂರ್ಣ ಬಳಕೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.  (ಅನುಸರಣೆ : ಮುಖ್ಯ ಅಭಿಯಂತರು, ಕೆ.ಹೆಚ್.ಎಸ್.ಆರ್.ಡಿ.ಪಿ.)
    • ಲೆಕ್ಕ ಶೀರ್ಷಿಕೆ 2210-01-104-0-01ರಡಿಯಲ್ಲಿ ಖರೀದಿ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಮುಗಿಸಿ ಅನುದಾನವನ್ನು ವೆಚ್ಚ ಮಾಡಲು ಸೂಚಿಸಲಾಯಿತು. (ಅನುಸರಣೆ: ಅಪರ ನಿರ್ದೇಶಕರು, ಕೆ.ಡಿ.ಎಲ್.ಡ.ಬ್ಲ್ಯೂ.ಎಸ್.)
    • ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿ ಸಲ್ಲಿಸಲು ಸೂಚಿಸಲಾಯಿತು.  ಹಾಗೂ ಸಮರ್ಪಕ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡಲು ಸೂಚಿಸಲಾಯಿತು. (ಅನುಸರಣೆ : ಮಾನಸಿಕ ಆರೋಗ್ಯ)
    • ಆಯುಷ್ ಇಲಾಖೆಯ ಕ್ರಿಯಾ ಯೋಜನೆಗಳ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.  ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಸಭೆಯ ನಡವಳಿಯಂತೆ ಕಾರ್ಯಕ್ರಮ ರೂಪಿಸಿ ಅನುದಾನ ವೆಚ್ಚ ಮಾಡಲು ಸೂಚಿಸಲಾಯಿತು.
​​