ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕೆಗಳ ಪ್ರಾಧಿಕಾರ(ಕಂಪಾ) ಇಲಾಖೆ

ಕರ್ನಾಟಕ ಸರ್ಕಾರ

GOK > KAMPA-Home > Kannada
Last modified at 03/08/2017 15:56 by Kampa


 No automatic alt text available.

ಮುಖಪುಟ


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾವುದೇ ಗಿಡದ ಒಂದು ಅಥವಾ ಹೆಚ್ಚು ಭಾಗಗಳಲ್ಲಿ ಔಷಧಿ ಸಾರವಿದ್ದು ಅದನ್ನು ಚಿಕಿತ್ಸೆಗಾಗಿ ಬಳಸಲಾಗುತ್ತದೊ ಅಥವಾ ಔಷಧಿ ನಿರ್ಮಾಣದಲ್ಲಿ ಮೂಲವಸ್ತುವಾಗಿ ಉಪಯೋಗಿಸಲಾಗುತ್ತದೊ ಅದನ್ನು ಔಷಧಿ ಗಿಡಮೂಲಿಕೆ ಎಂದು ಕರೆಯಲಾಗಿರುತ್ತದೆ.

ಆಯುರ್ವೇದದ ಸತ್ವ ಭಾರತದ ಔಷಧಿ ಗಿಡಮೂಲಿಕೆಗಳಲ್ಲಿ ಅಡಗಿದೆ. ಗಿಡಗಳಲ್ಲಿ ವಿಶಿಷ್ಟ ಘಟಕ/ಅಂಶಗಳನ್ನು ಅಥವಾ Secandory Metabolites ಗಳಿದ್ದು, ಔಷಧಿ ಗುಣಗಳಿಂದ ಕೂಡಿರುವುದರಿಂದ ಸಾಮಾನ್ಯವಾಗಿ ಚಿಕಿತ್ಸೆಗಾಗಿ ಮತ್ತು ರೋಗಗಳನ್ನು ತಡೆಯಲು ಉಪಯೋಗಿಸಲಾಗುತ್ತದೆ. ಔಷಧಿಯಾಗಿ ಹೆಚ್ಚಿನ ಸಂಖ್ಯೆಯ ಗಿಡಮೂಲಿಕೆಗಳನ್ನು ಉಪಯೋಗಿಸಲಾಗುತ್ತಿದೆ. ಭಾರತದಲ್ಲಿ ಲಭ್ಯವಿರುವ 1000 ಔಷಧಿ ಗಿಡಮೂಲಿಕೆಗಳಲ್ಲಿ ಶೇಕಡ 10 ಭಾಗ ಗಿಡಮೂಲಿಕೆಗಳು ಬೇರೆ ಬೇರೆ ಕಾರಣಗಳಿಂದ ಅಪಾಯದಂಚಿನಲ್ಲಿವೆ. ಆದ್ದರಿಂದ ಔಷಧಿ ಗಿಡಮೂಲಿಕೆಗಳ ಸಂರಕ್ಷಣೆ ಅತ್ಯವಶ್ಯಕವಾಗಿದೆ.

ನವೆಂಬರ್ 2002ರಲ್ಲಿ ಭಾರತ ಸರಕಾರದಿಂದ ರಾಷ್ಟ್ರೀಯ ಔಷಧಿ ಗಿಡಮೂಲಿಕೆಗಳ ಮಂಡಳಿಯ ಸ್ಥಾಪನೆಯನ್ನಾ ಹೊಸದೆಹಲಿಯಲ್ಲಿ ಮಾಡಲಾಗಿದೆ. ಮಂಡಳಿಯ ಪ್ರಮುಖ ಕಾರ್ಯ ಔಷಧಿಗಿಡಮೂಲಿಕೆಗಳಿಗೆ ಸಂಬಂಧ ಪಟ್ಟ ಎಲ್ಲಾ ವಿಚಾರಗಳನ್ನು ಸಂಯೋಜನ ಮತ್ತು ಅವುಗಳ ನಿಯಮಗಳನ್ನು ಮತ್ತು ಯೋಜನೆಗಳನ್ನಾ ಕಾರ್ಯರೂಪಕ್ಕೆ ತರಲು ಸಹಾಯ ಮಾಡುವುದು.

ರಾಷ್ಟ್ರೀಯ ಔಷಧಿ ಗಿಡಮೂಲಿಕೆಗಳ ಮಂಡಳಿಯ ಪ್ರಾದೇಶಿಕ/ ರಾಜ್ಯ ಮಟ್ಟದಲ್ಲಿ ಔಷಧಿ ಗಿಡಮೂಲಿಕೆಗಳ ವಿಭಾಗದ ಅಭಿವೃದ್ದಿಗಾಗಿ ಪ್ರತಿ ರಾಜ್ಯಗಳಲ್ಲಿ 'ರಾಜ್ಯ ಔಷಧಿ ಗಿಡಮೂಲಿಕೆಗಳ ಮಂಡಳಿ/ಪ್ರಾಧಿಕಾರ' ರಚಿಸಲು ಮುಂದಾಗಿದೆ. "ಕರ್ನಾಟಕ ರಾಜ್ಯ ಔಷಧಿಗಿಡಮೂಲಿಕೆಗಳ ಪ್ರಾಧಿಕಾರ", ರಾಜ್ಯ ಗಿಡಮೂಲಿಕಾ ಮಂಡಳಿ ಇದನ್ನು 2002ರಲ್ಲಿ ಕರ್ನಾಟಕ ಸರ್ಕಾರದ ಆದೇಶ ನಂ. ಎಫ್...33 ಎಫ.ಡಿ.ಎಸ್. 2001 ಅನ್ವಯ ಪ್ರಾರಂಭಿಸಲಾಗಿದೆ.

ಪ್ರಾದಿಕಾರದ ಪ್ರಮುಖ ಕರ್ತವ್ಯ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಲಿಯ ವಿವಿಧ ಯೋಜನೆಗಳನ್ನು ರೈತರು ಮತ್ತು ಬೇರೆ ಬೇರ ಸಂಘ ಸಂಸ್ಥೆಗಳ ಮೂಲಕ ಕಾರ್ಯಗತಗೊಳಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದಾಗಿರುತ್ತದೆ.


 Image Viewer

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕೆಗಳ ಪ್ರಾಧಿಕಾರ(ಕಂಪಾ) , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top