​ಕಾಗಿನೆಲೆ ಅಭಿವೃದ್ಧಿ ಪ್ರಾ​​ಧಿಕಾರ


ಕಾಗಿನೆಲೆ ಗ್ರಾಮವು ಕವಿ, ಸಂತ ಮತ್ತು ತತ್ವಜ್ಞಾನಿ ಭಕ್ತ ಕನಕದಾಸನ ದೈವೀ ಸ್ಥಳವಾಗಿದೆ. ಕನಕದಾಸರು ಅಗ್ರಗಣ್ಯರಾಗಿ ಹುಟ್ಟಿದರೂ, ಎಲ್ಲಾ ಲೌಕಿಕ, ಐಹಿಕ ವಿಷಯಗಳನ್ನು ತೊರೆದು, ದೇವರ ಸೇವಕನಾದರು. ತನ್ನದೇ ಆದ ಶೈಲಿಯನ್ನು ರೂಢಿಸಿಕೊಂಡು ತತ್ವ ಪದಗಳನ್ನು ಬರೆದು, ಹಾಡಿ ಸಮಾಜದಲ್ಲಿ ಸ್ತ್ರೀ ಪುರುಷರ ಸಮಾನತೆಯ ಬಗ್ಗೆ ದೈವತ್ವದ ಬಗ್ಗೆ, ವರ್ಣರಹಿತ ಸಮಾಜದ ಬಗ್ಗೆ ತತ್ವ ಸಂದೇಶವನ್ನು ಸಾರಿದರು. ಕನಕದಾಸರಿಗೆ ಸಂಬಂಧಪಟ್ಟ ಸ್ಥಳಗಳನ್ನು ಅಭಿವೃದ್ದಿಪಡಿಸಲು ಮತ್ತು ಅವರ ಬೋಧನೆಗಳ ದಾಸ ಸಾಹಿತ್ಯವನ್ನು ಪ್ರಚಾರಪಡಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಈ ಕಾರಣಕ್ಕಾಗಿ, ಕೂಡಲಸಂಗಮ ಅಭಿವೃದ್ದಿ ಮಂಡಳಿಯ ಮಾದರಿಯಲ್ಲಿಯೇ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಲಾಗಿದೆ. ಇದಕ್ಕಾಗಿ ಅಧಿನಿಯಮವನ್ನು ರಚಿಸಲಾಗಿದೆ. ಈ ಪ್ರಾಧಿಕಾರಕ್ಕೆ 2006-07ನೇ ಸಾಲಿನಲ್ಲಿ ರೂ. 300 ಲಕ್ಷ 2007-08ನೇ ಸಾಲಿನಲ್ಲಿ ರೂ.125 ಲಕ್ಷ, 2008-09ನೇ ಸಾಲಿನಲ್ಲಿ 1000 ಲಕ್ಷ, 2009-10ನೇ ಸಾಲಿನಲ್ಲಿ ರೂ. 1000 ಲಕ್ಷಗಳನ್ನು ಬಿಡುಗಡೆ ಮಾಡಿದೆ. ಪ್ರಾಧಿಕಾರದ ವತಿಯಿಂದ ರೂ.2,947 ಲಕ್ಷ ಅಂದಾಜು ವೆಚ್ಚದಲ್ಲಿ 23 ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅವು ಪ್ರಗತಿಯಲ್ಲಿದೆ.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ   ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
ಆಯುಕ್ತರು  (ಪ್ರ)                              
ಶ್ರೀ ಹೊರಪೇಟ್    
ದೂರವಾಣಿ ಸಂಖ್ಯೆ: 080 08375-289388