​​ಕಿತ್ತೂರು ಅಭಿವೃದ್ಧಿ ಪ್ರಾಧಿಕಾ​ರ


ಬ್ರಿಟಿಷರ ಆಳ್ವಿಕೆ ವಿರುದ್ದ ಹೋರಾಡಿದ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮನವರ ದೇಶಭಕ್ತಿ, ತ್ಯಾಗ ಮತ್ತು ಬಲಿದಾನಗಳನ್ನು ನಾಡಿನ ಜನತೆಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಹಾಗೂ ಚೆನ್ನಮ್ಮಾಜಿಯವರ ಮತ್ತು ಕ್ರಾಂತಿವೀರ ಸ್ವಾತಂತ್ರ್ಯ ಯೋಧ ಸಂಗೊಳ್ಳಿ ರಾಯಣ್ಣನವರು ಹುಟ್ಟಿ ಬೆಳೆದ ಕಾರ್ಯ ಕ್ಷೇತ್ರಗಳನ್ನು ಹಾಗೂ ಸ್ಮಾರಕಗಳನ್ನು ಮತ್ತು ಸಮಕಾಲೀನ ಕಿತ್ತೂರು ಪರಂಪರೆಯ ತಾಣಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಉದ್ದೇಶಿಸಿ ಸರ್ಕಾರವು ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಕಿತ್ತೂರು ಅಭಿವೃದ್ದಿ ಪ್ರಾಧಿಕಾರವನ್ನು ಸರ್ಕಾರಿ ಆದೇಶ ಸಂಖ್ಯೆ:ಕಂಇ 115 ಆರ್.ಇ.ಹೆಚ್. 2007, ದಿನಾಂಕ: 13.01.2009ರಲ್ಲಿ ರಚಿಸಲಾಗಿದೆ.

ಈ ಪ್ರಾಧಿಕಾರಕ್ಕೆ 2007-08ನೇ ಸಾಲಿನಲ್ಲಿ ರೂ. 300 ಲಕ್ಷ, 2008-09ನೇ ಸಾಲಿನಲ್ಲಿ ರೂ. 100 ಲಕ್ಷ ಹಾಗೂ 2009-10ನೇ ಸಾಲಿನಲ್ಲಿ ರೂ. 200 ಲಕ್ಷಗಳನ್ನು ಅನುದಾನವನ್ನಾಗಿ ಬಿಡುಗಡೆ ಮಾಡಲಾಗಿದೆ. ಈ ಪ್ರಾಧಿಕಾರದ ಪ್ರಥಮ ಸಭೆಯು ದಿನಾಂಕ 29.12.2009ರಂದು ನಡೆದಿದ್ದು, ಅನುಮೋದಿತ ಕ್ರಿಯಾ ಯೋಜನೆ ಪ್ರಕಾರ ಅಭಿವೃ​ದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ   ಉಪ ವಿಭಾಗಾಧಿಕಾರಿಗಳ ಕಛೇರಿ ಬೈಲಹೊಂಗಲ
ಆಯುಕ್ತರು  (ಪ್ರ)                 
 ಶ್ರೀ ವಿಜಯ್ ಕುಮಾರ್ ಹೊನಕೇರಿ  ಕೆ.ಎ.ಎಸ್  
ಉಪ ವಿಭಾಗಾಧಿಕಾರಿ ಬೈಲಹೊಂಗಲ
ದೂರವಾಣಿ ಸಂಖ್ಯೆ:08288-233160