​ಕೂಡಲ ಸಂಗಮ ಅಭಿವೃ​​​ದ್ಧಿ ಮಂಡಳಿ


ಕೂಡಲ ಸಂಗಮ ಕ್ಷೇತ್ರವು ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಕೂಡುವ ಸ್ಥಳದಲ್ಲಿ ಇದೆ. ಇದನ್ನು ಸಂಗಮ ಎಂದು ಕರೆಯುತ್ತಾರೆ. ಈ ಸ್ಥಳದಲ್ಲಿ, 2 ಪ್ರಮುಖ ಪವಿತ್ರ ಸ್ಮಾರಕಗಳು ಅಂದರೆ ಸಂಗಮೇಶ್ವರ ದೇವಾಲಯ ಮತ್ತು ಐಕ್ಯ ಮಂಟಪ ಇವೆ. ಈ ಎರಡೂ ಸ್ಥಳಗಳು ಕರ್ನಾಟಕದ ಮಹಾನ್ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕ ಶ್ರೀ.ಬಸವೇಶ್ವರರ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ದುರ್ದೈವವಶಾತ್ ಈ ಎರಡೂ ಸ್ಥಳಗಳು ಕರ್ನಾಟಕದ ಅತೀ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಿನ್ನೀರಿನಿಂದ ಮುಳುಗಡೆಯಾಗಲಿದ್ದವು. ದೇವಸ್ಥಾನಗಳನ್ನು ಭಾಗಶಃ ನೆಲಸಮ ಮಾಡಿ ಮತ್ತು ಅವುಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಕ್ರಮ ಜರುಗಿಸಲಾಗಿತ್ತು. ಆದರೆ ಸಾರ್ವಜನಿಕರ ಪ್ರತಿಭಟನೆಯಿಂದಾಗಿ ಸರ್ಕಾರವು ದೇವಾಲಯಗಳನ್ನು ಸ್ಥಳಾಂತರಿಸುವುದನ್ನು ಕೈಬಿಟ್ಟದೆ ಮತ್ತು ಆ ಸ್ಥಳವನ್ನು ದೊಡ್ಡ ಯಾತ್ರಾ ಕೇಂದ್ರವನ್ನಾಗಿ ಮತ್ತು ಪ್ರವಾಸಿಗರ ಆಕರ್ಷಿಣೀಯ ಸ್ಥಳವನ್ನಾಗಿ ರೂಪಾಂತರಿಸಿದೆ. ಈ ಉದ್ದೇಶಕ್ಕಾಗಿ ಸರ್ಕಾರವು ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಅಧಿನಿಯಮ 1994 ಎಂದು ಕರೆಯಲ್ಪಡುವ ವಿಶೇಷ ಕಾಯ್ದೆಯನ್ನು ಜಾರಿಗೆ ತಂದಿದೆ.
 
ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ಅಧಿನಿಯಮದಲ್ಲಿ ಸಂಗಮ ಸ್ಥಳದಲ್ಲಿರುವ ಮತ್ತು ರೂಪಾಂತರಗೊಳಿಸಿರುವ ಸ್ಥಳದಲ್ಲಿಯ ಧಾರ್ಮಿಕ ಸ್ಮಾರಕಗಳನ್ನು ಸಂರಕ್ಷಿಸಲು, ದೊಡ್ಡ ಯಾತ್ರಾ ಸ್ಥಳವನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ಹಿರಿಯ ಸಚಿವರು ಮತ್ತು 14 ಹಿರಿಯ ಅಧಿಕಾರಿಗಳು ಮತ್ತು 10 ಜನ ನಾಮ ನಿರ್ದೇಶಿತ ಸದಸ್ಯರನ್ನೊಳಗೊಂಡ ಒಂದು ಸ್ವಾಯತ್ತ ಸಂಸ್ಥೆಯನ್ನು ರಚಿಸಲಾಗಿದೆ. ಈ ಸಂಸ್ಥೆ ಎಲ್ಲಾ ನೀತಿ ನಿಯಮಗಳನ್ನು ರೂಪಿಸುತ್ತದೆ ಮತ್ತು ಇತರೆ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ದಿನನಿತ್ಯದ ಕಾರ್ಯ-ಕಲಾಪಗಳನ್ನು ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಗೆ ಸಮನಾದ ಆಯುಕ್ತರು ಅವಶ್ಯಕ ಸಿಬ್ಬಂದಿಯೊಂದಿಗೆ ನಡೆಸಿಕೊಂಡು ಹೋಗುತ್ತಾರೆ. ನೀರಾವರಿ ಯೋಜನೆಗಳಿಂದ ಈ ದೇವಸ್ಥಾನಗಳಿಗೆ ಹಾನಿ ತಗಲಿದ್ದರಿಂದ, ಈ ಎಲ್ಲಾ ಕಾರ್ಯಗಳಿಗೆ ನೀರಾವರಿ ಇಲಾಖೆಯಿಂದ ಹಣ ಒದಗಿಸಲಾಗಿದೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸುತ್ತಿರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಈ ಸಂಸ್ಥೆಯಿಂದಲೂ ಹಣ ಒದಗಿಸಲಾಗಿದೆ. ಈ ಕ್ಷೇತ್ರದ ಎಲ್ಲಾ ಪುನರ್ ನಿರ್ಮಾಣ ಮತ್ತು ಭೂ ಸ್ವಾಧೀನ ಕಾಮಗಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳಾಗಿರುವ ಆಯುಕ್ತರು (ಭೂ ಸ್ವಾಧೀನ, ಪು ಮತ್ತು ಪು) ಇವರ ಅಧೀನದಲ್ಲಿ ನಡೆಯುತ್ತವೆ. ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯೂ ಸಹ ಆಯುಕ್ತರ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿಯೇ ನಡೆಯುತ್ತದೆ. ಕಳೆದ 10 ವರ್ಷಗಳಿಂದ, ಈ ಸ್ಥಳದಲ್ಲಿ ನವೀಕರಣ ಮತ್ತು ಅಭಿವೃದ್ಧಿ ಕಾರ್ಯಗಳು ಆಯುಕ್ತರ ಕಾರ್ಯಾಲಯದ ಮುಖಾಂತರವೇ ನಡೆದಿರುತ್ತವೆ. ಈವರೆಗೆ ಸರ್ಕಾರವು ಅಭಿವೃದ್ಧ ಕಾರ್ಯಗಳಿಗಾಗಿ 30.50 ಕೋಟಿ ರೂ.ಗಳನ್ನು ಮತ್ತು ಕಾರ್ಪನ್ ಫಂಡಿಗಾಗಿ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕೂಡಲ ಸಂಗಮದಲ್ಲಿಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಒಟ್ಟಾರೆ 45 ಕೋಟಿ ರೂ.ಗಳನ್ನು ಮತ್ತು ಕಾರ್ಪಸ್ ಫಂಡಿಗನಲ್ಲಿ ರೂ.11 ಕೋಟಿ ರೂ.ಗಳನ್ನು ತೊಡಗಿಸಿದೆ. ಕೂಡಲ ಸಂಗಮಕ್ಕೆ ಸಂಬಂಧಿಸಿದ ಇತರೆ ಕ್ಷೇತ್ರಗಳಾದ ಬಸವನಬಾಗೇವಾಡಿ ಮತ್ತು ಚಿಕ್ಕಸಂಗಮ ಕ್ಷೇತ್ರಗಳನ್ನು ಈ ಮಂಡಳಿಯ ಅಧೀನದಲ್ಲಿ ತೆಗೆದು ಕೊಳ್ಳಲಾಗಿದೆ. ಇದಲ್ಲದೆ ಮಂಡಳಿಯ ವತಿಯಿಂದ ಬೆಳಗಾವಿಯ ಎಂ.ಕೆ. ಹುಬ್ಬಳ್ಳಿ ಸಮೀಪದಲ್ಲಿರುವ ಶ್ರೀ. ಬಸವೇಶ್ವರರ ಧರ್ಮಪತ್ನಿ ಗಂಗಾಂಬಿಕೆಯವರ ಐಕ್ಯಮಂಟಪ ಅಭಿವೃದ್ಧಿ ಹಾಗೂ ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ತಂಗಡಗಿ ಸಮೀಪದಲ್ಲಿರುವ ನೀಲಾಂಬಿಕೆ, ಹಡಪದ ಅಪ್ಪಣ್ಣ ಹಾಗೂ ಮಡಿವಾಳ ಮಾಚಿದೇವರ ಐಕ್ಯ ಮಂಟಪಗಳನ್ನು ಅಭಿವೃದ್ಧಿಪಡಿಸಲು ರೂ.6.00 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಸವಣ್ಣನವರ ತಾಯಿಯವರ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮ ಅಭಿವೃದ್ದಿಗೆ ರೂ.1.5 ಕೋಟಿ ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಕೂಡಲ ಸಂಗಮ, ಬಾಗಲಕೋಟ
ಆಯುಕ್ತರು  (ಪ್ರ)                            
 ಶ್ರೀ ಮಹಾದೇವ ಎ ಮುರಗಿ    ಆಯುಕ್ತರು                    
ಯೋಜನಾ ನಿರ್ದೇಶಕರು
ಮೊಬೈಲ್ ಸಂ: 8053408576