ಬಸವಕಲ್ಯಾಣ ಅಭಿವೃದ್ಧಿ ಮಂಡ​​​ಳಿ


ಬಸವಕಲ್ಯಾಣವು ಕರ್ನಾಟಕ ಒಳಗೊಂಡು ಮಧ್ಯ ಭಾರತ ಹಾಗೂ ದೇಶದ ವಿವಿಧ ಭಾಗವನ್ನಾಳಿದ ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಹಿಂದೂ ಕಾಯ್ದೆಯ ಮಿತಾಕ್ಷರ ಕಾಯ್ದೆಯು ಬಸವಕಲ್ಯಾಣದಿಂದಲೇ ಪ್ರಾರಂಭವಾಯಿತು. ಈ ಪದ್ದತಿಯು ಚಾಲುಕ್ಯ ನ್ಯಾಯಾಲಯದಲ್ಲಿ ಮಹಾನ್ ವಿದ್ವಾಂಸರಾದ ವಿಜ್ಞಾನೇಶ್ವರರಿಂದ ಬರೆಯಲ್ಪಟ್ಟಿತ್ತು. ಬಸವೇಶ್ವರರು ಕೆಲವು ಕಾಲ ಪ್ರಧಾನಿ ಹುದ್ದೆಯಲ್ಲಿದ್ದು, (ಮಹಾ ಮಂತ್ರಿ) ವೃತ್ತಿ ಘನತೆ, ಸ್ತ್ರೀ ಪುರುಷ ಸಮಾನತೆ ಬಗ್ಗೆ, ವರ್ಗರಹಿತ, ವರ್ಣರಹಿತ ಸಮಾಜ ಸೃಷ್ಟಿಸುವ ತತ್ವಗಳನ್ನು ಹರಡಿದರು. ಆದಾಗ್ಯೂ, ಬಸವಕಲ್ಯಾಣದಲ್ಲಿರುವ ಸಂಬಂಧಿಸಿದ ಸಾಂಸ್ಕೃತಿಕ ಸ್ಮಾರಕಗಳು ಹಾಳಾಗುವ ಸ್ಥಿತಿಯಲ್ಲಿವೆ. ಈ ಸ್ಥಳದ, ಸ್ಮಾರಕಗಳ ಪ್ರಾಮುಖ್ಯತೆಯನ್ನು ಗಮನಿಸಿ ಕರ್ನಾಕಟ ಸರ್ಕಾರವು ಈ ಎಲ್ಲಾ ಪ್ರಾಚೀನ ಸ್ಮಾರಕಗಳನ್ನು ನವೀಕರಿಸಲು ಮತ್ತು ಈ ಸ್ಥಳವನ್ನು ಅಂತರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ. ಈ ಕಾರಣಕ್ಕಾಗಿ ಬಸವಕಲ್ಯಾಣ ಅಭಿವೃದ್ದಿ ಮಂಡಳಿ ಅಧಿನಿಯಮ 2005 ಎಂಬ ಒಂದು ಹೊಸ ಕಾಯ್ದೆಯನ್ನು ರಚಿಸಲಾಗಿದೆ.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಬಸವಕಲ್ಯಾಣ, ಬೀದರ್ ಜಿಲ್ಲೆ
ಆಯುಕ್ತರು  (ಪ್ರ)  
ಶ್ರೀಮತಿ ಹೆಪ್ಸಿಬ ರಾಣಿ ಕೊರ್ಲಾಪಾಟಿ ಭಾ.ಆ.ಸೇ             
ಉಪವಿಭಾಗಾಧಿಕಾರಿ, ಬೀದರ್

ದೂರವಾಣಿ ಸಂಖ್ಯೆ: 080 08481-25906​