​ಬಾಗಲಕೋಟೆ ಪಟ್ಟಣ ಅಭಿ​ವೃದ್ಧಿ ಪ್ರಾಧಿಕಾರ


ಬಾಗಲಕೋಟೆ ಪಟ್ಟಣದ ಪುನರ್ವಸತಿಗಾಗಿ 2009-10ನೇ ಸಾಲಿನ ಆಯವ್ಯಯದಲ್ಲಿ ಈ ಕೆಳಕಂಡಂತೆ ಅನುದಾನ ಒದಗಿಸಲಾಗಿದೆ.
 

1​​ಎ.ಐ.ಬಿ.ಪಿ. ಮುಂದುವರೆದ ಕಾಮಗಾರಿಗಳುರೂ.3809.00 ಲಕ್ಷಗಳು
2ಎ.ಐ.ಬಿ.ಪಿ. ಹೊಸ ಕಾಮಗಾರಿಗಳುರೂ.1991.00 ಲಕ್ಷಗಳು
3ವಿಶೇಷ ಪ್ಯಾಕೇಜ್ ಮುಂದುವರೆದ ಕಾಮಗಾರಿಗಳುರೂ.900.00 ಲಕ್ಷಗಳು
4ವಿಶೇಷ ಪ್ಯಾಕೇಜ್ ಹೊಸ ಕಾಮಗಾರಿಗಳುರೂ.100.00 ಲಕ್ಷಗಳು

 
ಆಲಮಟ್ಟಿ ಜಲಾಶಯದ ಎಫ್.ಆರ್.ಎಲ್. ಮಟ್ಟ 521 ಮೀಟರ್ ವರೆಗಿನ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ಈಗಾಗಲೇ ಪರಿಹಾರವನ್ನು ಪಾವತಿಸಲಾಗಿದೆ. ಸಂತ್ರಸ್ಥ ಕುಟುಂಬಗಳಿಗೆ ಬಾಗಲಕೋಟೆ ನವನಗರದಲ್ಲಿ ನಿವೇಶಗಳನ್ನು ಹಂಚಿಕೆ ಮಾಡಲಾಗಿದೆ.
 
ಎಫ್.ಆರ್.ಎಲ್. ಮಟ್ಟ 521 ರಿಂದ 523 ಮೀಟರ್ ವರೆಗಿನ ​ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಪಾವತಿಸಲು ನಡವಳಿಗಳು ಜಾರಿಯಲ್ಲಿವೆ. 2ನೇ ಹಂತದ ಪುನರ್ ವಸತಿ ಕೇಂದ್ರಗಳ ನಿರ್ಮಾಣ ಕಾರ್ಯ ಜಾರಿಯಲ್ಲಿದೆ.