ಭೂಸ್ವಾಧೀನ, ಸ್ಥಳಾಂತರ ಮತ್ತು ಪುನರ್ವಸ​​ತಿ


ಸಾರ್ವಜನಿಕ ಉದ್ದೇಶಗಳಿಗಾಗಿ ಖಾಸಗಿ ಜಮೀನುಗಳನ್ನು ಮತ್ತು ಅವುಗಳಲ್ಲಿರುವ ಕಟ್ಟಡಗಳು, ಮರಗಳು, ಮಾಲ್ಕಿಗಳನ್ನು ಭೂ ಸ್ವಾದೀನಪಡಿಸಿಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ.  ಅದೇ ರೀತಿಯಾಗಿ ವಿಶೇಷ ಸಂದರ್ಭಗಳಲ್ಲಿ ಕಂಪನಿಗಳ ಪರವಾಗಿಯೂ ಸರ್ಕಾರವು ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ.  ಈ ಸಲುವಾಗಿ ಭೂ ಸ್ವಾಧೀನ ಕಾಯ್ದೆ, 1894 ಮತ್ತು ಕರ್ನಾಟಕ ಭೂಸ್ವಾಧೀನ ನಿಯಮಗಳ ಅಡಿಯಲ್ಲಿ ಅಧಿಕಾರಗಳು ಹಾಗೂ ವಿಧಾನಗಳನ್ನು ನಿರೂಪಿಸಲಾಗಿದೆ.  ಇದಲ್ಲದೆ, ಇತರೆ ವಿಶೇಷ ಅಧಿನಿಯಮಗಳಡಿಯಲ್ಲಿ ಅಂದರೆ ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಕಾಯ್ದೆ 1966, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1976, ಕರ್ನಾಟಕ ನಗರಾಭಿವೃದ್ಧಿ  ಪ್ರಾಧಿಕಾರ ಕಾಯ್ದೆ 1989ರನ್ವಯ ಭೂಸ್ವಾಧೀನಪಡಿಸಲಾಗುತ್ತಿದ್ದು, ಈ ಕಾಯ್ದೆಗಳಡಿ ಭೂಸ್ವಾಧೀನವನ್ನು ಹೊರತುಪಡಿಸಿ ಕಂದಾಯ ಇಲಾಖೆಯು ಉಳಿದೆಲ್ಲಾ ಸಾರ್ವಜನಿಕ ಉದ್ದೇಶಗಳಿಗಾಗಿ ಭೂ ಸ್ವಾಧೀನವನ್ನು ಕೈಗೊಳ್ಳುತ್ತದೆ.

ಭೂ ಸ್ವಾಧೀನ
ಶ್ರೀ ಕೆ.ಎಲ್. ಶ್ರೀಧರ್ 
ಉಪ ಕಾರ್ಯದರ್ಶಿ
ಕಂದಾಯ ಇಲಾಖೆ, 
3ನೇ ಗೇಟ್, 5ನೇ ಮಹಡಿ,
ಬಹುಮಹಡಿಗಳ ಕಟ್ಟಡ, ಅಂಬೇಡ್ಕರ್ ವೀಧಿ,
ಬೆಂಗಳೂರು-560001.

ದೂರವಾಣಿ ಸಂಖ್ಯೆ: 080 22032516