​ಭೂ ಸು​​ಧಾರಣೆ​


1. ಕರ್ನಾಟಕ ಸರ್ಕಾರವು ಗ್ರಾಮೀಣ ಜನತೆ ಮತ್ತು ಗೇಣಿದಾರರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಬದಲಾಯಿಸಬೇಕು ಎಂಬ ಮಹತ್ತರವಾದ ಉದ್ದೇಶದಿಂದ ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು 1961 ರ ಸುಮಾರಿನಲ್ಲಿಯೇ ಜಾರಿಗೆ ತರಲಾಗಿತ್ತು. ದೇಶದಲ್ಲಿಯೇ ಅದೊಂದು ಕ್ರಾಂತಿಕಾರಿ ಯೋಜನೆಯಾಗಿದೆ. ಈ ಕಾಯ್ದೆಯ ಮುಖ್ಯ ಉದ್ದೇಶಗಳು ಗೇಣಿದಾರರುಗಳಿಗೆ ಅಧಿಭೋಗದಾರಿಕೆ ಹಕ್ಕು ನೀಡುವುದು , ಕೃಷಿ ಭೂಮಿ ಹೊಂದುವುದಕ್ಕೆ ಮಿತಿ ನಿಗದಿಪಡಿಸುವುದು ಮತ್ತು ಭೂ ರಹಿತ ಬಡವರಿಗೆ ಹೆಚ್ಚುವರಿ ಭೂಮಿ ವಿತರಣೆ ಕಾರ್ಯಕ್ರಮ ಅನುಷ್ಠಾನ ಮಾಡುವುದಾಗಿರುತ್ತದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ನ್ನು ಜಾರಿಗೆ ತಂದರೂ ಕೂಡ ಕಾರ್ಯಕ್ರಮ ಅನುಷ್ಠಾನ ನಿಧಾನವಾಯಿತು. ಆದುದರಿಂದ 1974 ರಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಕ್ಕೆ ಹಲವಾರು ಮಹತ್ತರವಾದ ತಿದ್ದುಪಡಿಗಳನ್ನು ತರಲಾಯಿತು ಮತ್ತು ಇದೇ ವಿಧಾನವು 1984-85 ರ ವರೆಗೆ ತುಂಬಾ ಗಂಭೀರವಾಗಿ ಮುಂದುವರೆಯಿತು ಮತ್ತು ತಿದ್ದುಪಡಿಯಾದ ಕಾಯ್ದೆಯ ಕಲಂ 44 ರಂತೆ ದಿನಾಂಕ 01.04.1974 ರ ಮೊದಲು ಘೋಷಣೆ ಮಾಡಿದಂತಹ ಹಾಗೂ ಗೇಣಿದಾರರುಗಳೇ ಹೊಂದಿದ್ದ ಅಥವಾ ಸ್ವಾಧಿನಾನುಭವದಲ್ಲಿದ್ದ ಎಲ್ಲಾ ಭೂಮಿಗಳನ್ನು ವರ್ಗಾಯಿಸಿ ಆ ದಿನಾಂಕದಿಂದ ಸರ್ಕಾರದಲ್ಲೇ ನಿಹಿತಗೊಳಿಸಲಾಯಿತು. ಭೂ ಮಾಲೀಕರಾಗಿ ಅಥವಾ ಗೇಣಿದಾರರಾಗಿ ಅಥವಾ ಅಡಮಾನದಾರರಾಗಿ ಜಮೀನು ಹೊಂದಲು ಕಲಂ 63 ರಡಿಯಲ್ಲಿ ಹಲವಾರು ಮಿತಿಗಳನ್ನು ನಿಗದಿಪಡಿಸಲಾಯಿತು. ಅಧಿಭೋಗದಾರರು ಎಂದು ನೊಂದಾಯಿಸಲು ಅರ್ಹರಾದ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಲು ಆ ಸಮಯದಲ್ಲೇ ಅವಕಾಶ ಮಾಡಿಕೊಡಲಾಗಿತ್ತು.

2 ಸ್ವೀಕರಿಸಿದ ಗೇಣಿ ಅರ್ಜಿಗಳ ಸಂಖ್ಯೆ, ವಿಲೇವಾರಿ, ಗೇಣಿದಾರರ ಸೇರ್ಪಡೆ ಮತ್ತು ಎಕರೆಗಳು ವಿಲೇಯಾದ ವಿವರ ಈ ಕೆಳಕಂಡಂತಿದೆ.
ಸ್ವೀಕರಿಸಿದ ಒಟ್ಟು ಅ​ರ್ಜಿಗಳ ಸಂಖ್ಯೆವಿಲೆಯಾದ ಒಟ್ಟು ಅರ್ಜಿಗಳ ಸಂಖ್ಯೆಅರ್ಜಿಗಳ ವಿಲೆಯ ವಿವರಬಾಕಿ ಅರ್ಜಿಗಳು
ಅರ್ಜಿದಾರರ ಪರವಾಗಿತಿರಸ್ಕೃತ ಅರ್ಜಿಗಳು
ಸಂಖ್ಯೆವಿಸ್ತೀರ್ಣಸಂಖ್ಯೆವಿಸ್ತೀರ್ಣಸಂಖ್ಯೆವಿಸ್ತೀರ್ಣಸಂಖ್ಯೆವಿಸ್ತೀರ್ಣಸಂಖ್ಯೆವಿಸ್ತೀರ್ಣ
967195489795693245147951725130412246626419410254854634744102784

​ 
3 ಹೆಚ್ಚುವರಿ ಭೂಮಿ ಹಂಚಿಕೆ:-
   ಸರ್ಕಾರದಲ್ಲಿ ನಿಹಿತಗೊಂಡ ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ವಿತರಿಸುವ ಮೂಲಕ ಗ್ರಾಮಾಂತರ ಬಡಜನತೆಯ ಜೀವನವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲ್ಪಂಕ್ತಿಗೆ ತಂದು ಕೆಲವೊಂದು ಸಾಮಾಜಿಕ ಸೌಲಭ್ಯಗಳನ್ನು ಒದಗಿಸುವ ಗುರಿಯಾಗಿದೆ. ಸರ್ಕಾರದಲ್ಲಿ ನಿಹಿತಗೊಂಡ ಹೆಚ್ಚುವರಿ ಭೂಮಿಯನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಅಧಿನಿಯಮ 77ರ ಅಡಿಯಲ್ಲಿ ವಿತರಿಸಲಾಗುತ್ತಿದೆ. ಈ ಮೊದಲು ಲಭ್ಯವಿದೆ ಹೆಚ್ಚುವರಿ ಭೂಮಿಯಲ್ಲಿ ಶೇಕಡಾ 50 ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರಿಗೆ ಮೀಸಲಿರಿಸಲಾಗಿತ್ತು. ಇದನ್ನು ಡಾ|| ಬಿ.ಆರ್. ಅಂಬೇಡ್ಕರ್ ರವರ ಜನ್ಮಶತಾಬ್ದಿಯ ಪ್ರಯುಕ್ತ ದಿನಾಂಕ:- 21-04-1992 ರಿಂದ ಅನ್ವಯವಾಗುವಂತೆ ಶೇಕಡಾ 75ಕ್ಕೆ ಏರಿಸಲಾಯಿತು. ಹೆಚ್ಚುವರಿ ಭೂಮಿಯೆಂದು ಘೋಷಿಸಿದ್ದು, ಇದನ್ನು ಭೂರಹಿತ ಕೃಷಿ ಕಾರ್ಮಿಕರಿಗೆ, ಎಸ್ ಸಿ/ಎಸ್ ಟಿ ಮತ್ತು ಇತರೆ ಜನಾಂಗದವರಿಗೆ ವಿತರಿಸಿದ ಭೂ ವಿಸ್ತೀರ್ಣದ ವಿವರ ಇತ್ಯಾದಿ ಈ ಕೆಳಕಂಡಂತಿವೆ.
                                                                                                (ವಿಸ್ತೀರ್ಣ ಎಕರೆಗಳಲ್ಲಿ)

ಹೆಚ್ಚುವರಿ ಭೂಮಿ ಎಂದು ಘೋಷಿಸಿದ್ದರ ವಿಸ್ರೀರ್ಣಒಟ್ಟು ಹೆಚ್ಚುವರಿ ಭೂಮಿ ಹಂಚಿಕೆಪರಿಶಿಷ್ಟ ಜಾತಿಯವರಿಗೆ ಭೂಮಿ ಹಂಚಿಕೆಪರಿಶಿಷ್ಟ ಪಂಗಡದವರಿಗೆ ಭೂಮಿ ಹಂಚಿಕೆಇತರೆ ಹಿಂದುಳಿದವರಿಗೆ
ಫ​ಲಾನುಭವಿಗಳ ಸಂಖ್ಯೆವಿಸ್ತೀರ್ಣಫಲಾನುಭವಿಗಳ ಸಂಖ್ಯೆವಿಸ್ತೀರ್ಣಫಲಾನುಭವಿಗಳ ಸಂಖ್ಯೆವಿಸ್ತೀರ್ಣ
2489841300161852471009231094741105249533
 
4 ಭೂ ನ್ಯಾಯ ಮಂಡಳಿ:-
   ಕರ್ನಾಟಕ ಭೂಸುಧಾರಣಾ ಕಾಯ್ದೆ, 1961 ರ ಕಲಂ 48(1)( ) ರ ಅನುಸಾರ ಕರ್ನಾಟಕ ಸರ್ಕಾರ ನಾಲ್ಕು ಜನ ಅಧಿಕಾರೇತರ ಸದಸ್ಯರನ್ನೊಳಗೊಂಡ ಭೂನ್ಯಾಯ ಮಂಡಳಿಗಳನ್ನು ಒಂದೊಂದು ತಾಲ್ಲೂಕಿಗೆ ಒಂದರಂತೆ ರಚಿಸಬಹುದಾಗಿದೆ. ಅದರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ವ್ಯಕ್ತಿ ಇರಬೇಕಾಗುತ್ತದೆ. ರಾಜ್ಯದಲ್ಲಿ 176 ಭೂ ನ್ಯಾಯ ಮಂಡಳಿಗಳನ್ನು ರಚಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಸದರಿ ಜಿಲ್ಲೆಗಳಲ್ಲಿ 12 ಹೆಚ್ಚುವರಿ ಭೂ ನ್ಯಾಯ ಮಂಡಳಿಗಳನ್ನು ರಚಿಸಲಾಗಿದೆ. ಅವುಗಳೆಂದರೆ, ಉಡುಪಿ ಜಿಲ್ಲೆಯಲ್ಲಿ 8, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಮತ್ತು ಹಾವೇರಿ ಜಿಲ್ಲೆಯಲ್ಲಿ 1 ರಚಿಸಲಾಗಿದೆ. ಪ್ರಸ್ತುತ ಉಪ ವಿಭಾಗಾಧಿಕಾರಿಗಳ ಮಟ್ಟದ ಅಧಿಕಾರಿಗಳು ಭೂನ್ಯಾಯ ಮಂಡಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 
 
ಭೂನ್ಯಾಯ ಮಂಡಳಿಗಳ ಪ್ರಕರಣಗಳ ವಿಲೇವಾರಿ
31.01.2010 ರ ಅಂತ್ಯಕ್ಕೆ

ಪ್ರಕರಣಗಳ ವಿಲೆಬಾಕಿ
15286769
 
5 ರೆವಿನ್ಯೂ ಅಪೀಲು ನ್ಯಾಯಮಂಡಳಿಗಳಿಗೆ ಅಪೀಲು ಸಲ್ಲಿಸಲು ಕರ್ನಾಟಕ ಭೂಸುಧಾರಣಾ ಕಾಯ್ದೆ1961 ರ ಪ್ರಕರಣ 118 ನೇ ಉಪ ಪ್ರಕರಣ(2) ರ ಅಡಿಯಲ್ಲಿ ಅವಕಾಶ ಮಾಡಿಕೊಡುವ ಬಗ್ಗೆ:-
ರೆವಿನ್ಯೂ ಅಪೀಲು ನ್ಯಾಯಮಂಡಳಿಗಳಿಗೆ ಅಪೀಲು ಸಲ್ಲಿಸಲು ಕರ್ನಾಟಕ ಭೂಸುಧಾರಣಾ ಕಾಯ್ದೆ1961 ರಡಿಯಲ್ಲಿ ಡೆಪ್ಯೂಟಿ ಕಮೀಷನರ್ ರವರು ಅಥವಾ 77 ನೇ ಪ್ರಕರಣ (1)ನೇ ಉಪ ಪ್ರಕರಣ ಅಥವಾ ಪ್ರಕರಣ 83ರ ಅಡಿಯಲ್ಲಿ ಪ್ರಾಧಿಕೃತವಾದ ಅಧಿಕಾರಿಯು ಹೊರಡಿಸಿದ ಆದೇಶದ ವಿರುದ್ಧ ರೆವಿನ್ಯೂ ಅಫೀಲು ನ್ಯಾಯಮಂಡಳಿಗಳಿಗೆ ಅಪೀಲು ಸಲ್ಲಿಸಲು ಅವಕಾಶವನ್ನು ಕಲ್ಪಿಸಲು ಕಾಯ್ದೆಯ 118 ನೇ ಪ್ರಕರಣ 2 ನೇ ಉಪ ಪ್ರಕರಣ ತಿದ್ದುಪಡಿ ತರಲಾಗಿದೆ.
6 ಇನಾಂ ರದ್ದಿಯಾತಿ:-
   ವಿವಿಧ ಇನಾಂ ರದ್ದಿಯಾತಿ ಕಾಯ್ದೆಗಳ ಅಡಿಯಲ್ಲಿ ಅಂದರೆ, ಕರ್ನಾಟಕ (ಪರ್ಸನಲ್ ಮತ್ತು ಮಿಸ್ಲೇನಿಯಸ್) ಕಾಯ್ದೆ 1954, ಕರ್ನಾಟಕ ಮತೀಯ ಮತ್ತು ಧಾರ್ಮಿಕ ಇನಾಂ ರದ್ದಿಯಾತಿ ಕಾಯ್ದೆ 1955, ಕರ್ನಾಟಕ ಗ್ರಾಮ ಕಛೇರಿ ರದ್ದಿಯಾತಿ ಕಾಯ್ದೆ 1961, ಕರ್ನಾಟಕ(ಸಂಡೂರು ಪ್ರದೇಶ) ಇನಾಂ ರದ್ದಿಯಾತಿ ಕಾಯ್ದೆ, 1976 ಮತ್ತು ಕರ್ನಾಟಕ ಹಲವು ಇನಾಂ ರದ್ದಿಯಾತಿ ಕಾಯ್ದೆ1977ಗಳ ಅಡಿಯಲ್ಲಿ  ಉಳುಮೆ ಮಾಡುತ್ತಿದ್ದ ಗೇಣಿದಾರರಿಗೆ ಜಮೀನನ್ನು ಮರು ಮಂಜೂರು ಮಾಡಲಾಗಿದೆ. ಮರು ಮಂಜೂರಾತಿಗೆ ಅಧಿಭೋಗದಾರಿಗೆ ಹಕ್ಕು ಕೋರಿ ಅರ್ಜಿಸಲ್ಲಿಸಲು ನಿಗದಿ ಪಡಿಸಿದ ಸಮಯ ಈಗಾಗಲೇ ಮುಕ್ತಾಯವಾಗಿರುತ್ತದೆ.
ಇನಾಂ ಅರ್ಜಿಗಳ ವಿಲೇ ವಿವರ ಈ ಕೆಳಕಂಡಂತಿದೆ:
                                                                             (ವಿಸ್ತೀರ್ಣ ಎಕರೆಗಳಲ್ಲಿ)

ಸ್ವೀಕರಿಸಿದ ಒಟ್ಟು​ ಅರ್ಜಿಗಳ ಸಂಖ್ಯೆವಿಲೆಯಾದ ಒಟ್ಟು ಅರ್ಜಿಗಳ ಸಂಖ್ಯೆಅರ್ಜಿಗಳ ವಿಲೆಯ ವಿವರಬಾಕಿ ಅರ್ಜಿಗಳು
ಅರ್ಜಿದಾರರ ಪರವಾಗಿತಿರಸ್ಕೃತ ಅರ್ಜಿಗಳು
ಸಂಖ್ಯೆವಿಸ್ತೀರ್ಣಸಂಖ್ಯೆವಿಸ್ತೀರ್ಣಸಂಖ್ಯೆವಿಸ್ತೀರ್ಣಸಂಖ್ಯೆವಿಸ್ತೀರ್ಣಸಂಖ್ಯೆವಿಸ್ತೀರ್ಣ
26702616565852624431609524177303107603185140533493458347061

 
7 ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಇರಬೇಕಾದ ಅರ್ಹತೆ: 
   ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಭೂಮಿಯನ್ನು ಕೃಷಿ ಮಾಡುವವನನ್ನು ಹೊರತುಪಡಿಸಿ ಬೇರಾವುದೇ ವ್ಯಕ್ತಿ ಭೂ ಮಾಲೀಕರಾಗಿ ಅಥವಾ ಗೇಣಿದಾರರಾಗಿ ಅಥವಾ ಅಡಮಾಡನದಾರರಾಗಿರುವಂತಿಲ್ಲ. ಒಬ್ಬ ವ್ಯಕ್ತಿ ಒಂದು ಕುಟುಂಬದ ಸದಸ್ಯನಾಗದಿರಲಿ ಅಥವಾ ಕುಟುಂಬವಿಲ್ಲದಿರುಲು ಅಥವಾ ಒಂದು ಕುಟುಂಬಕ್ಕೆ ಭೂಮಿ ಹೊಂದುವ ಪರಿಮಿತಯನ್ನು 10 ಯುನಿಟ್ ಗಳೆಂದು ನಿಗದಿಪಡಿಸಲಾಯಿತು (ಒಂದು ಯೂನಿಟ್ ಗೆ 5.4 ಎಕರೆ ಡಿ-ವರ್ಗದ ಜಮೀನುಗಳ), ಶೈಕ್ಷಣಿಕ, ಧಾರ್ಮಿಕ ಅಥವಾ ಧಾರ್ಮಿಕ ದತ್ತಿ ಸಂಸ್ಥೆಗಳು ಅಥವಾ ಸೊಸೈಟಿ ಅಥವಾ ಭೂಮಿಯ ಆದಾಯವನ್ನು ಪೂರ್ಣವಾಗಿ ತನ್ನ ಸಂಸ್ಥೆಗೆ ಬಳಸಿಕೊಳ್ಳುವ ಟ್ರಸ್ಟ್, ಸೊಸೈಟಿ ಇವುಗಳ 20 ಯೂನಿಟ್ ಗಳಷ್ಟು ಭೂಮಿಯನ್ನು ಹೊಂದಬಹುದು. ಅದೇ ರೀತಿ ಭೂಮಿಯನ್ನು ಪ್ರತಿಯಾಗಿ ತನ್ನ ಸಂಶೋಧನೆ ಅಥವಾ ಬೀಜ ಕೇಂದ್ರ ಅಥವಾ ಎರಡೂ ಉದ್ದೇಶಕ್ಕೆ ಬಳಸಿಕೊಳ್ಳುವ ಸಕ್ಕರೆ ಕಾರ್ಖಾನೆ 50 ಯೂನಿಟ್ ಗಳಷ್ಟು ಭೂಮಿಯನ್ನು ಹೊಂದಬಹುದು. ಈ ಎಲ್ಲಾ ನಿರ್ಬಂದ, ಪರಿಮಿತಿ ಇತ್ಯಾದಿಗಳನ್ನು ಭೂಮಿ ಹೊಂದಲು ವಿಧಿಸಿದಾಗ್ಯೂ ಸರ್ಕಾರವು ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಾದ ಕೈಗಾರಿಕೆ, ಶಿಕ್ಷಣ, ಧಾರ್ಮಿಕ ವಸತಿ, ತೋಟಗಾರಿಗೆ ಮತ್ತು ಹೂ ಬನಗಳ ಅವಶ್ಯಕತೆಗಾಗಿ ಕೆಲವೊಂದು ಅವಕಾಶಗಳನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಸೆಕ್ಷನ್ 109(1)ರ ಅಡಿಯಲ್ಲಿ ಕ್ರಮವಾಗಿ 20 ಯುನಿಟ್ ಗಳು, 4 ಯುನಿಟ್ ಗಳು, 1 ಯುನಿಟ್, 10 ಯುನಿಟ್ ಗಳು ಮತ್ತು 20 ಯೂನಿಟ್ ಗಳನ್ನು ಹೊಂದಲು ಅವಕಾಶ ಮಾಡಿದೆ. ಒಂದು ವೇಳೆ ಉದ್ದೇಶ ಮತ್ತು ವಿಸ್ತೀರ್ಣ ಬದಲಾದರೆ ಅಥವಾ ಮೀರಿದರೆ ಇದನ್ನು 109 (1ಎ) ಸೆಕ್ಷನ್ ಅಡಿಯಲ್ಲಿ ಪರಿಗಣಿಸಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತ ಅಧಿಕಾರಸ್ಥ ಸಮಿತಿಯ ಶಿಫಾರಸ್ಸಿನೊಂದಿಗೆ ಮತ್ತು ಸಚಿವ ಸಂಪುಟ ಅನುಮೋದನೆಯೊಂದಿಗೆ ಸರ್ಕಾರವು ತನ್ನ ಅಧಿಕಾರ ಬಳಸಿ ಯಾವುದೇ ವಿಸ್ತೀರ್ಣವನ್ನು ಮತ್ತು ಯಾವುದೇ ಉದ್ದೇಶಕ್ಕೆ ವಿನಾಯಿತಿ ಅಥವಾ ಅನುಮತಿ ನೀಡಬಹುದಾಗಿದೆ. ಈ ನಿಯಾಮಾನುಸಾರ, ಯಾವುದೇ ನೊಂದಾಯಿತಿ ಸೊಸೈಟಿ ಅಥವಾ ಜಿಲ್ಲಾಧಿಕಾರಿಗಳಿಂದ ಅಥವಾ ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆದು ಕೃಷಿ ಭೂಮಿಯನ್ನು ಕೊಳ್ಳಬಹುದಾಗಿದೆ ಅಥವಾ ಹೊಂದಬಹುದಾಗಿದೆ.
8 ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಕಲಂ 109(1) ರ ಅಡಿಯಲ್ಲಿ ಜಿಲ್ಲಾಧಿಕಾರಿಗಳಿಗೆ  ಅಧಿಕಾರ ಪ್ರತ್ಯಾಯೋಜನೆ:
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಸೆಕ್ಷನ್ 109(1) ರಲ್ಲಿ ತಿಳಿಸಿರುವ ಉದ್ದೇಶಗಳಿಗಾಗಿ ಭೂಮಿಗಳನ್ನು ಸದರಿ ಕಾಯ್ದೆಯ ಸೆಕ್ಷನ್ 63, 79 ಎ, 79ಬಿ ಮತ್ತು 80 ರಲ್ಲಿನ ಅಧಿಕಾರಗಳಲ್ಲಿ ಕೆಲವನ್ನು ಕರ್ನಾಟಕ ಭೂ ಸುಧಾರಣಾ ಅಧಿನಿಯಮಕ್ಕೆ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 47 ಶಾಸನ 2001 ದಿನಾಂಕ 23.04.2003 ರಲ್ಲಿ ತಿದ್ದುಪಡಿ ಮಾಡಿ ಕೆಳಕಾಣಿಸಿದಂತೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿದೆ.

1) ಕೈಗಾರಿಗಾ ಉದ್ದೇಶಗಳಿಗಾಗಿ​10 ಯುನಿಟ್ ಗಳಿಗೆ ಮೀರದಂತೆ
2) ಶೈಕ್ಷಣಿಕ ಸಂಸ್ಥೆಗಳಿಗೆ2 ಯುನಿಟ್ ಗಳಿಗೆ ಮೀರದಂತೆ
3) ಪ್ರಾರ್ಥನಾ ಸಂಸ್ಥೆಗಳಿಗೆ¼ ಯುನಿಟ್ ಗಳಿಗೆ ಮೀರದಂತೆ
4) ಗೃಹ ಯೋಜನೆ10 ಯುನಿಟ್ ಗಳಿಗೆ ಮೀರದಂತೆ
5) ತೋಟಗಾರಿಕೆ ಮತ್ತು ಪುಷ್ಪೋದ್ಯಮ ಕೃಷಿ10 ಯುನಿಟ್ ಗಳಿಗೆ ಮೀರದಂತೆ

ಭೂ ಸುಧಾರಣೆ
ಶ್ರೀ ರವೀಂದ್ರನಾಥ್  ​
ಅಪರ ಕಾರ್ಯದರ್ಶಿ
ಕಂದಾಯ ಇಲಾಖೆ, 
3ನೇ ಗೇಟ್, 5ನೇ ಮಹಡಿ,
ಬಹುಮಹಡಿಗಳ ಕಟ್ಟಡ, ಅಂಬೇಡ್ಕರ್ ವೀಧಿ,
ಬೆಂಗಳೂರು-560001.
 ದೂರವಾಣಿ ಸಂಖ್ಯೆ: 080 22032343