​ರೋರಿ​ಕ್ ಎಸ್ಟೇಟ್ ಮಂಡಳಿ​


ವಿಶ್ವವಿಖ್ಯಾತ ಚಿತ್ರ ಕಲಾವಿದ ಡಾ.ಸ್ವೇತಾಸ್ಲಾವ್ ರೋರಿಕ್ ರವರು ಮೂಲತಃ ರಷ್ಯಾ ದೇಶದವರಾದರೂ ಭಾರತದೇಶದ ಪ್ರಖ್ಯಾತ ಚಿತ್ರನಟಿಯಾದ ದೇವಿಕಾರಾಣಿಯವರನ್ನು ವಿವಾಹವಾದ ನಂತರ ಬೆಂಗಳೂರುನಲ್ಲಿ ವಾಸಿಸುತ್ತಿದ್ದರು. ಈ ಸುಂದರ ನಗರದಲ್ಲಿ ನೆಲೆಸಿ ಕ್ರಿಯಾತ್ಮಕ ಜೀವನವನ್ನು ನಡೆಸಿದರು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಈ ಖ್ಯಾತ ದಂಪತಿಗಳು ಬೆಂಗಳೂರು ಹೊರವಲಯದಲ್ಲಿ 468.33 ಎಕರೆ ವಿಶಾಲವಾದ ತಾತಗುಣಿ ಎಸ್ಟೇಟ್ ನ್ನು ಪಡೆದು ಅದರಲ್ಲಿ ಬರ್ಸೇರ ಪ್ಲಾಂಟೇಷನ್ ಅನ್ನು ಹೊಂದಿದ್ದರು. ಇಲ್ಲಿ ಡಾ.ರೋರಿಕ್ ರವರು ರಚಿಸಿದ ಕಲಾ ಸೃಷ್ಠಿಗಳು ಇಂದು ವಿಶ್ವದಲ್ಲಿ ನಾನಾ ಕಡೆ ಹರಡಿದೆ. ಈ ದಂಪತಿಗಳು ನಿಧನರಾದ ನಂತರ ಅವರ ಅಪೂರ್ವ ಕಲಾಕೃತಿಗಳು ಮತ್ತು ಅಮೂಲ್ಯವಾದ ಎಸ್ಟೇಟ್ ನಿಷ್ಕ್ರಿಯವಾಗಿ ಮುಂದಿನ ಪೀಳಿಗೆಗೆ ದೊರಕದೇ ಹೋಗುವ ಅಪಾಯ ಉದ್ಭವಿಸಿತು. ಕರ್ನಾಟಕ ಸರ್ಕಾರವು ಸರಿಯಾದ ಸಮಯಕ್ಕೆ ಸದರಿ ಎಸ್ಟೇಟ್ ನ್ನು ವಶಕ್ಕೆ ತೆಗೆದುಕೊಂಡು ಸಂರಕ್ಷಿಸಿ ಮತ್ತು ಉಳಿದ ಕಲಾಕೃತಿಗಳನ್ನು ತನ್ನ ವಶಕ್ಕೆ ಪಡೆಯಿತು. ರಾಜ್ಯ ಸರ್ಕಾರವು ರೋರಿಕ್ ಮತ್ತು ದೇವಿಕಾರಾಣಿ ರೋರಿಕ್ ಎಸ್ಟೇಟ್ (ಅರ್ಜನೆ ಮತ್ತು ವರ್ಗಾವಣೆ) ಕಾಯ್ದೆ, 1996 ಎಂಬ ವಿಶೇಷ ಕಾನೂನುನ್ನು ಜಾರಿಗೊಳಿಸಿದರಿಂದ, ಇದನ್ನು ಕೆಲವು ವ್ಯಕ್ತಿಗಳು ಪ್ರಶ್ನಿಸಿ ನ್ಯಾಯಾಲಯಕ್ಕೆ ದಾವೆ ಸಲ್ಲಿಸಿದ್ದಾರೆ. ಹಲವಾರು ವರ್ಷಗಳಿಂದ ಈ ವ್ಯಾಜ್ಯವು ನಡೆಯುತ್ತಿದ್ದು, ಪ್ರಸ್ತುತವಾಗಿ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಗಾಗಿ ಬಾಕಿಯಿರುತ್ತದೆ.

ರಾಜ್ಯದ ಕಂದಾಯ ಇಲಾಖೆಯು ಈ ಎಸ್ಟೇಟಿನ ಆಡಳಿತ ನಿರ್ವಹಿಸುತ್ತಿದ್ದು, ದಿನನಿತ್ಯದ ಉಸ್ತುವರಿ ಹಾಗೂ ನಿರ್ವಹಣೆಯ ಕೆಲಸಗಳನ್ನು ಹಿರಿಯ ಶ್ರೇಣಿಯ ಕೆ.ಎ.ಎಸ್. ಅಧಿಕಾರಿ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಈ ಎಸ್ಟೇಟನ್ನು ಇಡೀ ದೇಶದಲ್ಲೇ ಸುಂದರ ಕಲಾತ್ಮಕ ತಾಣವಾಗಿ ಮಾರ್ಪಾಡಿಸುವ ಮಹಾಯೋಜನೆಯನ್ನು ಹೊಂದಿದೆ. ನ್ಯಾಯಾಲಯವು ಯಥಾಸ್ಥಿತಿ ಕಾಪಾಡಲು ಆದೇಶಿಸಿದ್ದು, ಇದರ ಭದ್ರತೆಗೆ ಹಾಗೂ ಸಾಮಾನ್ಯ ಸಂರಕ್ಷಣಾ ಉಸ್ತುವಾರಿಗಾಗಿ ಸರ್ಕಾರವು ಅನುದಾನವನ್ನು ಒದಗಿಸುತ್ತಿದೆ. ಪ್ರಸ್ತುತ 2009-10 ಸಾಲಿನಲ್ಲಿ ರಾಜ್ಯ ಸರ್ಕಾರವು ರೂ.16.33 ಲಕ್ಷ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಿದೆ.

ಶ್ರೀ ರೋರಿಕ್ ಮತ್ತು ದೇವಿಕಾ ರಾಣಿ ಎಸ್ಟೇಟ್
ಡಾ: ಎಂ.ಪಿ. ಮನು ಬಳಿಗಾರ್ 
ಮುಖ್ಯ ಕಾರ್ಯನಿರ್ವಾಹಕರು, 
ವಿಶ್ವೇಶ್ವರಯ್ಯ ಗೋಪುರ ಅಂಬೇಡ್ಕರ್ ವೀಧಿ, ಬೆಂಗಳೂರು-560001.
ದೂರವಾಣಿ ಸಂಖ್ಯೆ: 080 22865802