​ಸನ್ನತಿ ಅಭಿವೃದ್ಧಿ ಪ್ರಾಧಿಕಾರ


ಗುಲ್ಬರ್ಗಾ ಜಿಲ್ಲೆಯ ಸನ್ನತಿ ಗ್ರಾಮ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿರುವ ಉತ್ಖನನಗಳು ಹಾಗೂ ಅಧ್ಯಯನಗಳಿಂದ ಅಲ್ಲಿ ಪ್ರಾಚೀನ ಬೌದ್ಧ ಸ್ಮಾರಕಗಳು ಇರುವುದನ್ನು ಮತ್ತು ಇದೊಂದು ಬಹುಮುಖ್ಯವಾದ ಬೌದ್ಧ ಸ್ಥಳವಾಗಿರುವುದನ್ನು ಕಂಡು ಹಿಡಿಯಲಾಗಿದೆ. ಸನ್ನತಿ ಬ್ಯಾರೇಜಿನಿಂದ ಬಾಧಿತವಾಗುವ ಸನ್ನತಿ ಗ್ರಾಮ ಒಳಗೊಂಡಂತೆ ಇತರೆ ಗ್ರಾಮಗಳನ್ನು ಸ್ಥಳಾಂತರಿಸಿ ಪುನರ್ ನಿರ್ಮಾಣ ಮತ್ತು ಪುನರ್ವಸತಿ ಕಲ್ಪಿಸಲು ಜವಾಬ್ದಾರಿ ಹೊಂದಿದ್ದ ಆಯುಕ್ತರು, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ ಇವರು ಸನ್ನತಿಯಲ್ಲಿನ ಬೌದ್ಧ ಸ್ಮಾರಕಗಳ ಜೀರ್ಣೋದ್ದಾರ, ಸಂರಕ್ಷಣೆ ಹಾಗೂ ಅಭಿವೃದ್ದಿ ಬಗ್ಗೆ ಒಂದು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿರುತ್ತಾರೆ. ಇದನ್ನು ಪರಿಶೀಲಿಸಿ, ಜಾರಿಗೆ ತರಲು ಬಸವಕಲ್ಯಾಣ ಅಭಿವೃದ್ದಿ ಮಂಡಳಿ ಮಾದರಿಯಲ್ಲಿ ಸನ್ನತಿ ಅಭಿವೃದ್ದಿ ಮಂಡಳಿ ರಚಿಸಲು ಒಂದು ಅಧಿನಿಯಮವನ್ನು ಜಾರಿಗೆ ತರುವುದನ್ನು ಬಾಕಿ ಇಟ್ಟು ಸರ್ಕಾರವು ಗುಲ್ಬರ್ಗಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಧಿಕಾರಿ ಮತ್ತು ಅಧಿಕಾರೇತರ ಸದಸ್ಯರನ್ನೊಳಗೊಂಡ ಸನ್ನತಿ ಅಭಿವೃದ್ದಿ ಮಂಡಳಿಯನ್ನು ರಚಿಸಿ ದಿನಾಂಕ: 14.11.2006 ರಂದು ಆದೇಶ ಹೊರಡಿಸಲಾಗಿರುತ್ತದೆ.
 
          ಈ ಮಂಡಳಿಯು ಅಭಿವೃದ್ದಿ ಕಾರ್ಯಕ್ರಮಗಳನ್ನು 3 ಹಂತಗಳಲ್ಲಿ ಕೈಗೊಂಡು ಪೂರ್ಣಗೊಳಿಸಲು ಜವಾಬ್ದಾರಿ ಹೊಂದಿರುತ್ತದೆ. ಇದರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಕೃಷ್ಣಾ ಭಾಗ್ಯಜಲ ನಿಗಮ ನಿಯಮಿತ, ಜಿಲ್ಲಾ ಆಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಗಳು ಸನ್ನತಿ ಅಭಿವೃದ್ದಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಕೈಗೊಳ್ಳುತ್ತವೆ. ಈಗಾಗಲೇ ಸನ್ನತಿ ಮತ್ತು ಕನಗನಹಳ್ಳಿ ಗ್ರಾಮಗಳಲ್ಲಿ ಬೌದ್ದ ಸ್ಮಾರಕಗಳ ಸುತ್ತ ಮುತ್ತಲ ಪ್ರದೇಶಗಳಲ್ಲಿ 48.11 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸನ್ನತಿ ಅಭಿವೃದ್ದಿ ಮಂಡಳಿಯು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು 2008-09ನೇ ಸಾಲಿನಲ್ಲಿ ರೂ. 500.00ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಸನ್ನತಿ ಅಭಿವೃದ್ಧಿ ಪ್ರಾಧಿಕಾರ  ಸಹಾಯಕ ಆಯುಕ್ತರ ಕಛೇರಿ, ಸೇಡಂ  ಗುಲ್ಬರ್ಗಾ ಜಿಲ್ಲೆ
ಆಯುಕ್ತರು (ಪ್ರ)                 
 ಶ್ರೀ ಭೀಮಾ ಶಂಕರ್  ಕೆ.ಎ.ಎಸ್ 
ಸಹಾಯಕ ಆಯುಕ್ತರು
ದೂರವಾಣಿ ಸಂಖ್ಯೆ: 080 08441-276073       
ಮೊಬೈಲ್ ಸಂ: 9480780674​​