Skip Ribbon Commands
Skip to main content

ಕಂದಾಯ ಇಲಾಖೆ

ಕರ್ನಾಟಕ ಸರ್ಕಾರ, ಭಾರತ

Skip Navigation LinksGOK > Kandaya

ಕಂದಾಯ ಇ​ಲಾಖೆ


ಅತಿ ಪುರಾತನ ಕಾಲದಿಂದಲೂ ಯಾವುದೇ ರೀತಿಯ ಸರ್ಕಾರದಲ್ಲಾಗಲೀ, ಅಂದರೆ, ಚಕ್ರಾಧಿಪತ್ಯ,ರಾಜಪ್ರಭುತ್ವ, ನಿರಂಕುಶಪ್ರಭುತ್ವ ಅಥವಾ ಪ್ರಜಾಪ್ರಭುತ್ವ ಕಾಲದಿಂದಲೂ ಭೂನಿರ್ವಹಣೆ,ಭೂಕಂದಾಯ ಸಂಗ್ರಹಣೆ,ಭೂಮಾಲಿಕತ್ವ ನಿರ್ಬಂಧನೆ ಮತ್ತು ಭೂ ಉಪಯೋಗ ಮತ್ತು ಭೂಸ್ವಾಧೀನ ಹಕ್ಕುಗಳು ಮುಂತಾದವುಗಳೆಲ್ಲವೂ ರಾಜ್ಯ ಸರ್ಕಾರದ ಮುಖ ಜವಾಬ್ಧಾರಿಗಳಾಗಿದ್ದವು. ಪ್ರಾಚೀನ ಭಾರತದಲ್ಲಿ ವಾಸ್ತವವಾಗಿ ಸರ್ಕಾರದಲ್ಲಿ ಎರಡು ಇಲಾಖೆಗಳು ಮಾತ್ರ ಅಸ್ತಿತ್ವದಲ್ಲಿರುತ್ತಿದ್ದವು. ಮೊದಲನೆಯದೆಂದರೆ ಭೂನಿರ್ವಹಣೆ ಮತ್ತು ಭೂಕಂದಾಯ ಇಲಾಖೆ ಮತ್ತು ಎರಡನೆಯದೆಂದರೆ ರಾಜ್ಯವನ್ನು ಬಾಹ್ಯದಾಳಿಯ ವಿರುದ್ಧ ಹೋರಾಡಲು ಅಗಾಧವಾದ ಭೂಸೇನೆಯ ರಕ್ಷಣಾ ಇಲಾಖೆ.

ಮೊದಲನೇ ಇಲಾಖೆಯು ರಾಜಸ್ವ ಸಂಗ್ರಹಣೆ ಹಾಗೂ ಒಳಾಡಳಿತ ನಿರ್ವಹಣೆಯನ್ನು ಹಾಗೂ ಎರಡನೇ ಇಲಾಖೆಯು ಪ್ರಾಂತ್ಯಗಳ ರಕ್ಷಣೆ ಮತ್ತು ಸಮಗ್ರತೆಯನ್ನು ಬಾಹ್ಯದಾಳಿಗೀಡಾಗುವುದರಿಂದ ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದವು. ಸಮಾಜವು ಹೆಚ್ಚು ವೃದ್ದಿಯಾದಂತೆ ವೃತ್ತಿಗಳಲ್ಲಿನ ತಾರತಮ್ಯ, ರಾಜ್ಯದ ಕ್ಲಿಷ್ಠಕರವಾದ ಆಡಳಿತ ನಿರ್ವಹಣೆಗೆ ವಿಶಿಷ್ಠ ಇಲಾಖೆಗಳು ಹೊರಹೊಮ್ಮಿದವು. ಕಾಲ ಬದಲಾವಣೆಯಾದಂತೆ ಹಲವಾರು ಇಲಾಖೆಗಳು ರೂಪಿತಗೊಂಡು ಅಸ್ತಿತ್ವಕ್ಕೆ ಬಂದವು. ವಾಸ್ತವದ ಸಂಗತಿಯೆಂದರೆ ಪ್ರಾರಂಭದಲ್ಲಿ ಎಲ್ಲಾ ಇಲಾಖೆಗಳು ಕಂದಾಯ ಇಲಾಖೆಯಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ನಂತರ ಒಂದೊಂದಾಗಿ ಪ್ರತ್ಯೇಕಗೊಂಡವು. ಏನೇ ಆದರೂ ಇಂದಿಗೂ ಸಹ ರಾಜ್ಯದ ಹಾಗೂ ಸಮಾಜದ ಪ್ರಮುಖವಾದ ನಂದಿನ ಕೆಲಸ ಕಾರ್ಯಗಳನ್ನು ಕಂದಾಯ ಇಲಾಖೆಯೇ ನಿರ್ವಹಿಸುತ್ತಿದೆ. ಈ ಕಾರಣಗಳಿಂದಾಗಿಯೇ ಸರ್ಕಾರದಲ್ಲಿ ಕಂದಾಯ ಇಲಾಖೆಯು ``ಮಾತೃ ಇಲಾಖೆ``ಯೆಂದು ಕರೆಯಲ್ಪಡುತ್ತದೆ.​​​​ಭಾರತದ ​ರಾಷ್ಟ್ರೀಯ ಪೋರ್ಟಲ್​ಅಂತರಜಾಲದ ನಿರ್ವಹಣೆ​​​ಅಂತರಜಾಲದ ರಚನೆ
 India Portal​ಕಂದಾಯ ಇಲಾಖೆ,
5ನೇ ಮಹಡಿ, ಬಹುಮಹಡಿಗಳ ಕಟ್ಟಡ,3ನೇ ಹಂತ,
ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು 560 001
ದೂರವಾಣಿ ಸಂಖ್ಯೆ: 080 22252731/22032495
National Informatics Centre, Karnataka
ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ಕರ್ನಾಟಕ

ActionsUse SHIFT+ENTER to open the menu (new window).Open Menu
  
  
Kannada-Draft-rule-Gazette.pdf
  
Land Acquisition - Rehabilitation and Resettlement Draft rules by State.pdf
  
Last Updated -
Content Owned and Maintained by : ಕಂದಾಯ ಇಲಾಖೆ
Designed and Hosted by
Center for e-Governance
©2015, All Rights Reserved.
Disclaimer:Please note that this page also provides links to the websites/ web pages of Govt. Ministries/Departments/Organisations.
The content of these websites are owned by the respective organisations and they may be contacted for any further information or suggestion.
Help ¦ Terms & Conditions ¦ Copyright Policy ¦ Hyperlinking Policy ¦ Privacy Policy