ಕರ್ನಾಟಕ ಜೀವವೈವಿಧ್ಯ ಮಂಡಳಿ ಇಲಾಖೆ

ಕರ್ನಾಟಕ ಸರ್ಕಾರ

GOK > Kbb > ದೃಷ್ಟಿ ಕಾರ್ಯಾಚರಣೆ
Last modified at 19/01/2018 11:40 by kbbuser

 ದೃಷ್ಟಿ ಮತ್ತು ಕಾರ್ಯಾಚರಣೆ

             

ಭಾರತದಲ್ಲಿ ಜೀವವೈವಿಧ್ಯತೆಯ ಸಂರಕ್ಷಣೆಯು ಅತ್ಯಂತ ಪ್ರಮುಖ ವಿಷಯವಾಗಿದ್ದು ಜೈವಿಕವೈವಿಧ್ಯ ಅಧಿನಿಯಮ 2002 ಸಹ ರಚನಾತ್ಮಕ ರೀತಿಯಲ್ಲಿಯೇ ಪ್ರಚೋದಿಸುತ್ತದೆ.

ಮಂಡಳಿಯ ಪ್ರಮುಖ ಉದ್ದೇಶವು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಅಂದರೆ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ, ನಗರ ಪಾಲಿಕೆ ಹಾಗು ಕಾರ್ಪೋರೇಷನ್ ಮಟ್ಟ್ಟಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಸಿ ನಿಟ್ಟಿನಲ್ಲಿ ಜನತಾ ಜೀವವೈವಿಧ್ಯ ದಾಖಲಾತಿಗಳನ್ನು ತಯಾರಿಸುವುದಾಗಿರುತ್ತದೆ. ಜನತಾ ಜೀವವೈವಿಧ್ಯ ದಾಖಲಾತಿಗಳಲ್ಲಿ ಆವಾಸಸ್ಥಾನಗಳು, ಭೂಮಿಯ ಜನಾಂಗ, ಜಾನಪದ ವೈವಿಧ್ಯಗಳು, ಸಸ್ಯ ತಳಿಗಳು, ಸಾಕುಪ್ರಾಣಿಗಳು, ಸೂಕ್ಷ್ಮಜೀವಿಗಳ ಪಟ್ಟಿ ಮತ್ತು ಜೈವಿಕವೈವಿಧ್ಯತೆಗೆ ಸಂಬಂಧಪಟ್ಟ ಪಾರಂಪರಿಕ ಜ್ಞಾನವನ್ನು ಒಳಗೊಂಡಿರುತ್ತದೆ.

ಜನತಾ ಜೀವವೈವಿಧ್ಯ ದಾಖಲಾತಿಯು ಜೀವವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ತಮ್ಮ ವ್ಯಾಪ್ತಿಗಳಲ್ಲಿ ದೊರೆಯುವಂತಹ ಜೈವಿಕ ಸಂಪನ್ಮೂಲಗಳ ಬಗ್ಗೆ ತಿಳುವಳಿಕೆ ಮೂಡಿಸುವಲ್ಲಿ ದಾರಿ ಮಾರ್ಗವಾಗಿದೆ. ಇದರಿಂದಾಗಿ ತಮ್ಮ ಪ್ರಾಂತೀಯ ವ್ಯಾಪ್ತಿಗಳಲ್ಲಿ ದೊರೆಯುವಂತಹ ಜೈವಿಕ ಸಂಪನ್ಮೂಲಗಳನ್ನು ವಾಣಿಜ್ಯ ಬಳಕೆಗಾಗಿ ಸಂಗ್ರಹ ಮಾಡುವಂತಹ ವ್ಯಕ್ತಿಯ ಮೇಲೆ ಶುಲ್ಕವನ್ನು ವಿಧಿಸುವಂತಹ ಅಧಿಕಾರವನ್ನು ನೀಡುತ್ತದೆ.

 

ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚರಣೆಯನ್ನು ಪ್ರಾರಂಭಿಸಲು, ಪ್ರಾರಂಭಿಕ ಅನುದಾನವೆಂದು ಜೀವವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ಸ್ಥಳೀಯ ಜೀವವೈವಿಧ್ಯತೆಯ ಅನುದಾನ ಅಥವಾ ಸಾಲವೆಂದು ರಾಜ್ಯ ಸರ್ಕಾರವು ಹಣದ ಸೌಲಭ್ಯವನ್ನು ಒದಗಿಸಿದೆ. ಸಂಬಂಧಪಟ್ಟ ಸ್ಥಳೀಯ ಪ್ರದೇಶಗಳಲ್ಲಿರುವಂತಹ ಜೀವವೈವಿಧ್ಯದ ಸಂರಕ್ಷಣೆ ಮತ್ತು ಉತ್ತೇಜ£ ಹಾಗು ಸಮುದಾಯದ ಪ್ರಯೋಜನÀಕ್ಕಾಗಿ ಬಳಸಬಹುದಾಗಿರುತ್ತದೆ. ಇದುವರೆಗೆ ಇದು ಜೀವವೈವಿಧ್ಯ ಸಂರಕ್ಷಣೆಗೆ ಸಮಂಜಸವಾಗಿದೆ.

 

ಜೈವಿಕವೈವಿಧ್ಯ ಅಧಿನಿಯಮ 2002ನ್ನು ಅನುಷ್ಠಾನಗೊಳಿಸುವುದಕ್ಕಾಗಿ 2003ರಲ್ಲಿ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವನ್ನು ರಚಿಸಲಾಯಿತು. ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು ಸ್ವಾಯತ್ತ ಸಂಸ್ಥೆಯಾಗಿದ್ದು ಜೈವಿಕ ಸಂಪನ್ಮೂಲಗಳು, ಅವುಗಳ ಸುಸ್ಥಿರ ಬಳಕೆ ಮತ್ತು ಜೈವಿಕ ಸಂಪನ್ಮೂಲಗಳಿಂದ ಬರುವ ಲಾಭಧ ನ್ಯಾಯ ಸಮ್ಮತ ಹಂಚಿಕೆಗೆ ಸಂಬಂಧಿಸಿದ ವಿಷಯಗಳಿಗೆ ಭಾರತ ಸರ್ಕಾರಕ್ಕೆ ಸೌಲಭ್ಯದಾಯಕ, ನಿಯಂತ್ರಕ ಮತ್ತು ಸಲಹೆ ನೀಡುವ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು 21ನೇ ನವೆಂಬರ್ 2014ರಂದು ನೀಡಲಾದ ಮಾರ್ಗಸೂಚಿಗಳಲ್ಲಿನ ಮಾರ್ಗಸೂಚಿಗಳಲ್ಲಿನ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದಿಂದ ಮೂಲಭೂತ ಚೌಕಟನ್ನು ಈಗಾಗಲೇ ಒದಗಿಸಲಾಗಿದೆ.

 

ಭಾರತ ಸರ್ಕಾರಕ್ಕೆ ಜೈವಿಕ ಸಂಪನ್ಮೂಲಗಳು, ಅವುಗಳ ಸುಸ್ಥಿರ ಬಳಕೆ, ನ್ಯಾಯಯುತ ಲಾಭÀ ಹಂಚಿಕೆಯ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ವಿಕೇಂದ್ರಿಕರಣ ವ್ಯವಸ್ಥೆಯ ಮೂಲಕ ಸಲಹೆ ನೀಡುವ ಕಾರ್ಯವನ್ನು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು ನಿರ್ವಹಿಸುವುದು ಜೈವಿಕವೈವಿಧ್ಯ ಅಧಿನಿಯಮ 2002 ಅನುಸೂಚಿಯಾಗಿದೆ.​


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಜೀವವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top