ಕರ್ನಾಟಕ ಜೀವವೈವಿಧ್ಯ ಮಂಡಳಿ ಇಲಾಖೆ

ಕರ್ನಾಟಕ ಸರ್ಕಾರ

GOK > Kbb
Last modified at 12/12/2017 13:24 by System Account

​​​​​​​​​​

ಕರ್ನಾಟಕ ಜೀವವೈವಿಧ್ಯ ಮಂಡಳಿ ಇಲಾಖೆಗೆ ಸುಸ್ವಾಗತ

ಮಂಡಳಿ ಬಗ್ಗೆ 

ಜೈವಿಕವೈವಿಧ್ಯತೆ ಅಥವಾ ಜೀವವೈವಿಧ್ಯತೆ ಪದವನ್ನು ಸ್ಥೂಲವಾಗಿ ಭೂಮಿಯ ಮೇಲೆ ಕಂಡುಬರುವ ಎಲ್ಲಾ ವಿಧವಾದ ಜೀವರಾಶಿಗಳಿಗೆ ಉಪಯೋಗಿಸಬಹುದಾಗಿದೆ. ಭೂಮಿಯ ಮೇಲಿನ ಜೀವಿಗಳಿಗೆ ಬುನಾದಿಯಾಗಿರುವ ಮತ್ತು ಜೀವಪದ್ಧತಿಯ ಅವಿಬಾಜ್ಯ ಅಂಗವಾಗಿರುವ ಸೂಕ್ಷ್ಮಾಣುಗಳನ್ನು ಒಳಗೊಂಡಂತೆ ಇರುವ ಪ್ರಾಣಿ, ಸಸ್ಯ ಪ್ರಭೇದಗಳಿಗೆ ಜೀವವೈವಿಧ್ಯತೆಯ ಪದವನ್ನು ನೀಡಲಾಗಿದೆ.  

ಪಂಚದಾದ್ಯಂತ ಜೈವಿಕ ಸಂಪನ್ಮೂಲಗಳ ನಿರಂತರ ಶೋಷಣೆಯು ಮಾನವನ ಸ್ವಾಸ್ಥ್ಯ ಮತ್ತು ಹಣಕಾಸಿನ ಮೇಲೆ ಪರಿಣಾಮವನ್ನು ಬೀರತೋಡಗಿತು. ಇದರಿಂದ ಎಚ್ಚೆತ್ತ ಅಂತರ್‍ರಾಷ್ಟ್ರೀಯ ನಾಯಕರು ಜೈವಿಕ ಸಂಪನ್ಮೂಲಗಳಶೋಷಣೆಯ ವಿರುದ್ಧ ಹೋರಾಡಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸಿದರು. ಇದರ ಪರಿಣಾಮವಾಗಿ ರಿಯೋ ಡಿ ಜೆನೈರೋ ದಲ್ಲಿ 1992ರಲ್ಲಿ ನಡೆದ "ಭೂಸಮ್ಮೇಳನ ಶೃಂಗಸಭೆಯಲ್ಲಿ 'ಜೀವವೈವಿಧ್ಯ ಒಡಂಬಡಿಕೆಯು ಜಾರಿಯಾಯಿತು.​    

1994ರಲ್ಲಿ ಒಡಂಬಡಿಕೆಯ ಅಂಗದೇಶವಾಗಿದ್ದು, ಈಗ 196 ದೇಶಗಳು ಒಡಂಬಡಿಕೆಯ ಭಾಗಿಗಳಾಗಿವೆ. ಜೂನ್ 5,1992ರಲ್ಲಿ ರಿಯೋಡಿ ಜೆನೈರೋನಲ್ಲಿ ನಡೆದ ಭೂ ಸಮ್ಮೇಳನದ ಮುಂದುವರೆದ ಬಾಗವಾಗಿ ಜೈವಿಕವೈವಿಧ್ಯ​ಸಮಾವೇಶದ ಉದ್ದೇಶಗಳನ್ನು ಊರ್ಜಿತಗೊಳಿಸಲು ಭಾರತ ಸರ್ಕಾರವು ಜೈವಿಕವೈವಿಧ್ಯಅಧಿನಿಯಮ 2002ಅನ್ನು 5ನೇ ಜನವರಿ 2003ರಿಂದ ಅನ್ವಯವಾಗುವಂತೆ ಜಾರಿಗೆ ತಂದಿದೆ.


 ಜೈವಿಕವೈವಿಧ್ಯ ಅಧಿನಿಯಮ 2002:

 ​ಭಾರತ ಸರ್ಕಾರ ಜೈವಿಕವೈವಿಧ್ಯ ಅಧಿನಿಯಮ 2002ನ್ನು ದಿನಾಂಕ 5ನೇ ಫೆಬ್ರವರಿ 2003ರಿಂದ ಪಾರ್ಲಿಮೆಂಟ್ ಮೂಲಕ ಜಾರಿಗೊಳಿಸಿದೆ.
ಈ ಅಧಿನಿಯಮದ ಮುಖ್ಯದ್ದೇಶಗಳೇನೆಂದರೆ ಜೈವಿಕವೈವಿಧ್ಯತೆಯ ಸಂರಕ್ಷಣೆ, ಜೈವಿಕವೈವಿಧ್ಯತೆಯಸಂಪನ್ಮೂಲಗಳ ಸದ್ಬಳಕೆ, ಜೈವಿಕ ಸಂಪನ್ಮೂಲಗಳ ವಾಣಿಜ್ಯದಿಂದ ಬರುವ ಮತ್ತು ಇದಕ್ಕೆ ಹೊಂದಿಕೊಂಡ ಸಾಂಪ್ರದಾಯಿಕ ಜ್ಞಾನದ ಬಳಕೆಯಿಂದ ಉತ್ಪತ್ತಿಯಾಗುವ ಲಾಭದ ನ್ಯಾಯಸಮ್ಮತವಾದ ಹಂಚಿಕೆ. ಈ ಅಧಿನಿಯಮ ಕೇಂದ್ರ ಸರ್ಕಾರದಾಗಿದ್ದು, ಈಡೀ ರಾಷ್ಟ್ರದಲ್ಲಿ ಜಾರಿಗೊಳಿಸಲಾಗಿದೆ.  ​Untitled Document

ಡೌನ್ಲೋಡ್ SSL Certificate purchase Notification
​​​

Webdesign Pure Black GmbH

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಜೀವವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top