Last modified at 17/02/2016 10:56 by System Account

ಇಲಾಖೆ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳು

ಖಜಾನೆ ನಿರ್ದೇಶನಾಲಯದ ನಿಯಂತ್ರಣಕ್ಕೆ ಒಳಪಟ್ಟು ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಜಿಲ್ಲಾ ಖಜಾನೆ, ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲಿ ಒಂದು ಉಪಖಜಾನೆ ಹಾಗೂ ಸಾರ್ವಜನಿಕರ ಹೆಚ್ಚಿನ ಸೌಲಭ್ಯಕ್ಕಾಗಿ ಕೆಲವು ತಾಲ್ಲೂಕು ಕೇಂದ್ರದ ಹೊರಗೆ ಇರುವ ಹೋಬಳಿ ಕೇಂದ್ರಗಳಲ್ಲಿ ಒಂದೊಂದು ಪೂರ್ಣ ಪ್ರಮಾಣದ ಉಪಖಜಾನೆಗಳು ಕಾರ್ಯ ನಿರ್ವಹಿಸುತ್ತಿವೆ.

ಬೆಂಗಳೂರು ನಗರದಲ್ಲಿ ಬೆಂಗಳೂರು ನಗರ ಜಿಲ್ಲಾ ಖಜಾನೆ ಅಲ್ಲದೆ, ಈ ಕೆಳಕಂಡಂತೆ ಇನ್ನೂ ನಾಲ್ಕು ವಿಶೇಷ ಖಜಾನೆಗಳು ಕಾರ್ಯನಿರ್ವಹಿಸುತ್ತಿವೆ.

  • ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಜಾನೆ.
  • ರಾಜ್ಯ ಹುಜೂರ್ ಖಜಾನೆ.
  • ಪಿಂಚಣಿ ಬಟವಾಡೆ ಖಜಾನೆ.
  • ಕೇಂದ್ರ ಮುದ್ರಾಂಕ ಭಂಡಾರ.

ರಾಜ್ಯ ಹುಜೂರ್ ಖಜಾನೆಯು ರಾಜ್ಯದ ಬಹು ದೊಡ್ಡ ಖಜಾನೆಯಾಗಿದ್ದು, ಬೆಂಗಳೂರು ನಗರದ ಎಲ್ಲಾ ಸಚಿವಾಲಯಗಳು, ಇಲಾಖಾ ಮುಖ್ಯಸ್ಥರು,ನ್ಯಾಯಾಲಯಗಳು ಮತ್ತು ಇತರೆ ಡ್ರಾಯಿಂಗ್ ಅಧಿಕಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಬಿಲ್ಲುಗಳು ಹಾಗೂ ಅನುದಾನಿತ ಸಂಸ್ಥೆಗಳ ಬಿಲ್ಲುಗಳ ಪಾವತಿ ಕಾರ್ಯವನ್ನು ನಿರ್ವಹಿಸುತ್ತದೆ. ಬೆಂಗಳೂರು ನಗರದಲ್ಲಿನ ಸುಮಾರು 94480 ಪಿಂಚಣಿದಾರರ ಪಿಂಚಣಿಯನ್ನು ಪಿಂಚಣಿ ಬಟವಾಡೆ ಖಜಾನೆಯು ನಿರ್ವಹಿಸುತ್ತದೆ. ರಾಜ್ಯದ ಎಲ್ಲಾ ಖಜಾನೆಗಳಿಗೆ ಅವಶ್ಯವಿರುವ ಭದ್ರತಾ ಲೇಖನ ಸಾಮಗ್ರಿಗಳಾದ ಚೆಕ್ಕುಗಳು, ಟೋಕನ್ ಪುಸ್ತಕ ಅಲ್ಲದೆ ವಿವಿಧ ಇಲಾಖೆಗಳ ಅಮೂಲ್ಯವಾದ ವಸ್ತುಗಳನ್ನು/ದಾಖಲೆಗಳನ್ನು ಅಭಿರಕ್ಷೆಯಲಿಟ್ಟುಕೊಳ್ಳುವ ಕಾರ್ಯವನ್ನು ಕೇಂದ್ರ ಮುದ್ರಾಂಕ ಭಂಡಾರ ನಿರ್ವಹಿಸುತ್ತದೆ.

ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಕಾರ್ಯ ಒತ್ತಡವಿರುವುದರಿಂದ, ಹುಬ್ಬಳ್ಳಿಯಲ್ಲಿ ಒಂದು ಪ್ರತ್ಯೇಕ ಹೆಚ್ಚುವರಿ ಜಿಲ್ಲಾ ಮಟ್ಟದ ಖಜಾನೆಯು ಕರ್ತವ್ಯ ನಿರ್ವಹಿಸುತ್ತಿದೆ.

ಮೇಲ್ಕಂಡ ವಿವರಗಳಂತೆ ರಾಜ್ಯದಲ್ಲಿ ಮುದ್ರಾಂಕ ಭಂಡಾರ ಸೇರಿದಂತೆ ಒಟ್ಟು 216 ಖಜಾನೆಗಳು ಕೆಲಸ ನಿರ್ವಹಿಸುತ್ತಿವೆ.

ಖಜಾನೆ ಇಲಾಖೆಯ ಪ್ರಮುಖ ಕಾರ್ಯಚಟುವಟಿಕೆಗಳು

  • ಸರ್ಕಾರಕ್ಕೆ ಬರುವ ಜಮೆಗಳನ್ನು ಲೆಕ್ಕ ಶೀರ್ಷಿಕೆಯಾನುಸಾರ ಲೆಕ್ಕ ಮಾಡುವುದು.
  • ಸರ್ಕಾರದಿಂದ ಪಾವತಿಗಳನ್ನು ಮೌಲ್ಯಾಂಶ ರೀತ್ಯಾ ಪರಿಶೀಲಿಸಿ ತೀರ್ಣಗೊಳಿಸುವುದು.
  • ತೀರ್ಣಗೊಳಿಸಲಾದ ಬಿಲ್ಲುಗಳಿಗೆ ಚೆಕ್ಕುಗಳನ್ನು ನೀಡುವುದು ಹಾಗೂ ಅವುಗಳ ಲೆಕ್ಕ ನಿರ್ವಹಣೆ.
  • ಠೇವಣಿ ಖಾತೆಗಳ ನಿರ್ವಹಣೆ ಹಾಗೂ ಅವುಗಳ ವಹಿವಾಟಿನ ಲೆಕ್ಕ ನಿರ್ವಹಣೆ.
  • ಉಳಿತಾಯ ಖಾತೆಗಳ ನಿರ್ವಹಣೆ ಹಾಗೂ ಬಡ್ಡಿ ಲೆಕ್ಕಾಚಾರ.
  • ಸರ್ಕಾರದ ಸೆಕ್ಯೂರಿಟಿಸ್‍ಗಳ ಮೇಲಿನ ಬಡ್ಡಿ ಪಾವತಿ ಹಾಗೂ ಲೆಕ್ಕ ನಿರ್ವಹಣೆ.
  • ಬಿಲ್ಲುಗಳಲ್ಲಿನ ಕಡಿತಗಳ ಲೆಕ್ಕ ಶೀರ್ಷಿಕೆವಾರು ಲೆಕ್ಕ ನಿರ್ವಹಣೆ.
  • ವಿವಿಧ ರೀತಿಯ ರಾಜ್ಯ ಪಿಂಚಣಿಗಳ ಪಾವತಿ ಹಾಗೂ ಲೆಕ್ಕ ನಿರ್ವಹಣೆ.
  • ಸಾಮಾಜಿಕ ಭದ್ರತೆಯಡಿಯಲ್ಲಿನ ತ್ರಿವಿಧ ಮಾಸಾಶನಗಳ ಪ್ರತಿ ತಿಂಗಳ ರವಾನೆ.
  • ಮಹಾಲೇಖಪಾಲರಿಗೆ ಹಾಗೂ ಜಿಲ್ಲಾ ಪಂಚಾಯತ್‍ಗಳಿಗೆ ಮಾಸಿಕ ಲೆಕ್ಕ ರವಾನೆ.
  • ಪರೀಕ್ಷಾ ಗೌಪ್ಯ ಸಾಮಗ್ರಿಗಳು, ಚುನಾವಣೆ ಮತ ಪತ್ರಗಳು ಹಾಗೂ ಸರ್ಕಾರದ ಬೆಲೆ ಬಾಳುವ ವಸ್ತುಗಳ ಅಭಿರಕ್ಷೆಗಾಗಿ ಭದ್ರಕೊಠಡಿಗಳ ನಿರ್ವಹಣೆ.
  • ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್‍ಗಳ ಹಾಗೂ ಬಿಲ್ಲುಗಳನ್ನು ಮೌಲ್ಯಾಂಶಗಳ ರೀತ್ಯ ಪರಿಶೀಲಿಸಿ ತೀರ್ಣಗೊಳಿಸುವುದು ಹಾಗೂ ಅವುಗಳಿಗೆ ಪ್ರತ್ಯೇಕ ಲೆಕ್ಕ ನಿರ್ವಹಣೆ.
  • ರಾಜ್ಯ ವಲಯ ಹಾಗೂ ಜಿಲ್ಲಾ ಪಂಚಾಯತ್ ಪಾವತಿಗಳ ಲೆಕ್ಕ ಶೀರ್ಷಿಕೆವಾರು ಬಜೆಟ್ ನಿಯಂತ್ರಣ
  • ತಾಲ್ಲೂಕು ಪಂಚಾಯತ್ ಪಾವತಿಗಳ ನಿಧಿ ನಿಯಂತ್ರಣ
  • ಸರ್ಕಾರಿ ನೌಕರರಿಗೆ ನೀಡಿರುವ ಹೆಚ್.ಡಿ.ಎಫ್.ಸಿ. ಸಾಲದ ಖಾತೆಗಳ ನಿರ್ವಹಣೆ ಹಾಗೂ ವಹಿವಾಟಿನ ನಿರ್ವಹಣೆ.
  • ನೂತನ ಪಿಂಚಣಿ ಯೋಜನೆಯ ಅನುಷ್ಠಾನ,ನೂಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಹಾಗೂ ಮೇಲುಸ್ತುವಾರಿ.



ಇಲಾಖೆ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳು

ಖಜಾನೆ ನಿರ್ದೇಶನಾಲಯದ ನಿಯಂತ್ರಣಕ್ಕೆ ಒಳಪಟ್ಟು ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಜಿಲ್ಲಾ ಖಜಾನೆ, ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲಿ ಒಂದು ಉಪಖಜಾನೆ ಹಾಗೂ ಸಾರ್ವಜನಿಕರ ಹೆಚ್ಚಿನ ಸೌಲಭ್ಯಕ್ಕಾಗಿ ಕೆಲವು ತಾಲ್ಲೂಕು ಕೇಂದ್ರದ ಹೊರಗೆ ಇರುವ ಹೋಬಳಿ ಕೇಂದ್ರಗಳಲ್ಲಿ ಒಂದೊಂದು ಪೂರ್ಣ ಪ್ರಮಾಣದ ಉಪಖಜಾನೆಗಳು ಕಾರ್ಯ ನಿರ್ವಹಿಸುತ್ತಿವೆ.

ಬೆಂಗಳೂರು ನಗರದಲ್ಲಿ ಬೆಂಗಳೂರು ನಗರ ಜಿಲ್ಲಾ ಖಜಾನೆ ಅಲ್ಲದೆ, ಈ ಕೆಳಕಂಡಂತೆ ಇನ್ನೂ ನಾಲ್ಕು ವಿಶೇಷ ಖಜಾನೆಗಳು ಕಾರ್ಯನಿರ್ವಹಿಸುತ್ತಿವೆ.


  1. ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಜಾನೆ.

  2. ರಾಜ್ಯ ಹುಜೂರ್ ಖಜಾನೆ.

  3. ಪಿಂಚಣಿ ಬಟವಾಡೆ ಖಜಾನೆ.

  4. ಕೇಂದ್ರ ಮುದ್ರಾಂಕ ಭಂಡಾರ.

ರಾಜ್ಯ ಹುಜೂರ್ ಖಜಾನೆಯು ರಾಜ್ಯದ ಬಹು ದೊಡ್ಡ ಖಜಾನೆಯಾಗಿದ್ದು, ಬೆಂಗಳೂರು ನಗರದ ಎಲ್ಲಾ ಸಚಿವಾಲಯಗಳು, ಇಲಾಖಾ ಮುಖ್ಯಸ್ಥರು,ನ್ಯಾಯಾಲಯಗಳು ಮತ್ತು ಇತರೆ ಡ್ರಾಯಿಂಗ್ ಅಧಿಕಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಬಿಲ್ಲುಗಳು ಹಾಗೂ ಅನುದಾನಿತ ಸಂಸ್ಥೆಗಳ ಬಿಲ್ಲುಗಳ ಪಾವತಿ ಕಾರ್ಯವನ್ನು ನಿರ್ವಹಿಸುತ್ತದೆ. ಬೆಂಗಳೂರು ನಗರದಲ್ಲಿನ ಸುಮಾರು 94480 ಪಿಂಚಣಿದಾರರ ಪಿಂಚಣಿಯನ್ನು ಪಿಂಚಣಿ ಬಟವಾಡೆ ಖಜಾನೆಯು ನಿರ್ವಹಿಸುತ್ತದೆ. ರಾಜ್ಯದ ಎಲ್ಲಾ ಖಜಾನೆಗಳಿಗೆ ಅವಶ್ಯವಿರುವ ಭದ್ರತಾ ಲೇಖನ ಸಾಮಗ್ರಿಗಳಾದ ಚೆಕ್ಕುಗಳು, ಟೋಕನ್ ಪುಸ್ತಕ ಅಲ್ಲದೆ ವಿವಿಧ ಇಲಾಖೆಗಳ ಅಮೂಲ್ಯವಾದ ವಸ್ತುಗಳನ್ನು/ದಾಖಲೆಗಳನ್ನು ಅಭಿರಕ್ಷೆಯಲಿಟ್ಟುಕೊಳ್ಳುವ ಕಾರ್ಯವನ್ನು ಕೇಂದ್ರ ಮುದ್ರಾಂಕ ಭಂಡಾರ ನಿರ್ವಹಿಸುತ್ತದೆ.

ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಕಾರ್ಯ ಒತ್ತಡವಿರುವುದರಿಂದ, ಹುಬ್ಬಳ್ಳಿಯಲ್ಲಿ ಒಂದು ಪ್ರತ್ಯೇಕ ಹೆಚ್ಚುವರಿ ಜಿಲ್ಲಾ ಮಟ್ಟದ ಖಜಾನೆಯು ಕರ್ತವ್ಯ ನಿರ್ವಹಿಸುತ್ತಿದೆ.

ಮೇಲ್ಕಂಡ ವಿವರಗಳಂತೆ ರಾಜ್ಯದಲ್ಲಿ ಮುದ್ರಾಂಕ ಭಂಡಾರ ಸೇರಿದಂತೆ ಒಟ್ಟು 216 ಖಜಾನೆಗಳು ಕೆಲಸ ನಿರ್ವಹಿಸುತ್ತಿವೆ.

ಖಜಾನೆ ಇಲಾಖೆಯ ಪ್ರಮುಖ ಕಾರ್ಯಚಟುವಟಿಕೆಗಳು


  1. ಸರ್ಕಾರಕ್ಕೆ ಬರುವ ಜಮೆಗಳನ್ನು ಲೆಕ್ಕ ಶೀರ್ಷಿಕೆಯಾನುಸಾರ ಲೆಕ್ಕ ಮಾಡುವುದು.

  2. ಸರ್ಕಾರದಿಂದ ಪಾವತಿಗಳನ್ನು ಮೌಲ್ಯಾಂಶ ರೀತ್ಯಾ ಪರಿಶೀಲಿಸಿ ತೀರ್ಣಗೊಳಿಸುವುದು.

  3. ತೀರ್ಣಗೊಳಿಸಲಾದ ಬಿಲ್ಲುಗಳಿಗೆ ಚೆಕ್ಕುಗಳನ್ನು ನೀಡುವುದು ಹಾಗೂ ಅವುಗಳ ಲೆಕ್ಕ ನಿರ್ವಹಣೆ.

  4. ಠೇವಣಿ ಖಾತೆಗಳ ನಿರ್ವಹಣೆ ಹಾಗೂ ಅವುಗಳ ವಹಿವಾಟಿನ ಲೆಕ್ಕ ನಿರ್ವಹಣೆ.

  5. ಉಳಿತಾಯ ಖಾತೆಗಳ ನಿರ್ವಹಣೆ ಹಾಗೂ ಬಡ್ಡಿ ಲೆಕ್ಕಾಚಾರ.

  6. ಸರ್ಕಾರದ ಸೆಕ್ಯೂರಿಟಿಸ್‍ಗಳ ಮೇಲಿನ ಬಡ್ಡಿ ಪಾವತಿ ಹಾಗೂ ಲೆಕ್ಕ ನಿರ್ವಹಣೆ.

  7. ಬಿಲ್ಲುಗಳಲ್ಲಿನ ಕಡಿತಗಳ ಲೆಕ್ಕ ಶೀರ್ಷಿಕೆವಾರು ಲೆಕ್ಕ ನಿರ್ವಹಣೆ.

  8. ವಿವಿಧ ರೀತಿಯ ರಾಜ್ಯ ಪಿಂಚಣಿಗಳ ಪಾವತಿ ಹಾಗೂ ಲೆಕ್ಕ ನಿರ್ವಹಣೆ.

  9. ಸಾಮಾಜಿಕ ಭದ್ರತೆಯಡಿಯಲ್ಲಿನ ತ್ರಿವಿಧ ಮಾಸಾಶನಗಳ ಪ್ರತಿ ತಿಂಗಳ ರವಾನೆ.

  10. ಮಹಾಲೇಖಪಾಲರಿಗೆ ಹಾಗೂ ಜಿಲ್ಲಾ ಪಂಚಾಯತ್‍ಗಳಿಗೆ ಮಾಸಿಕ ಲೆಕ್ಕ ರವಾನೆ.

  11. ಪರೀಕ್ಷಾ ಗೌಪ್ಯ ಸಾಮಗ್ರಿಗಳು, ಚುನಾವಣೆ ಮತ ಪತ್ರಗಳು ಹಾಗೂ ಸರ್ಕಾರದ ಬೆಲೆ ಬಾಳುವ ವಸ್ತುಗಳ ಅಭಿರಕ್ಷೆಗಾಗಿ ಭದ್ರಕೊಠಡಿಗಳ ನಿರ್ವಹಣೆ.

  12. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್‍ಗಳ ಹಾಗೂ ಬಿಲ್ಲುಗಳನ್ನು ಮೌಲ್ಯಾಂಶಗಳ ರೀತ್ಯ ಪರಿಶೀಲಿಸಿ ತೀರ್ಣಗೊಳಿಸುವುದು ಹಾಗೂ ಅವುಗಳಿಗೆ ಪ್ರತ್ಯೇಕ ಲೆಕ್ಕ ನಿರ್ವಹಣೆ.

  13. ರಾಜ್ಯ ವಲಯ ಹಾಗೂ ಜಿಲ್ಲಾ ಪಂಚಾಯತ್ ಪಾವತಿಗಳ ಲೆಕ್ಕ ಶೀರ್ಷಿಕೆವಾರು ಬಜೆಟ್ ನಿಯಂತ್ರಣ.

  14. ತಾಲ್ಲೂಕು ಪಂಚಾಯತ್ ಪಾವತಿಗಳ ನಿಧಿ ನಿಯಂತ್ರಣ.

  15. ಸರ್ಕಾರಿ ನೌಕರರಿಗೆ ನೀಡಿರುವ ಹೆಚ್.ಡಿ.ಎಫ್.ಸಿ. ಸಾಲದ ಖಾತೆಗಳ ನಿರ್ವಹಣೆ ಹಾಗೂ ವಹಿವಾಟಿನ ನಿರ್ವಹಣೆ.

  16. ನೂತನ ಪಿಂಚಣಿ ಯೋಜನೆಯ ಅನುಷ್ಠಾನ,ನೂಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಹಾಗೂ ಮೇಲುಸ್ತುವಾರಿ.



ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಖಜಾನೆ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
CM Karnataka logo
Top