Last modified at 17/02/2016 10:56 by System Account

ಖಜಾನೆ ಇಲಾಖೆ-ಆಡಳಿತ ಅಧಿಕಾರ ಶ್ರೇಣಿ

ಖಜಾನೆ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಒಟ್ಟು 2995 ಮಂಜೂರಾದ ಹುದ್ದೆಗಳಿವೆ. ಹಾಗೂ ಇತೀಚಿನ ಸರ್ಕಾರದ ಆದೇಶದನ್ವಯ ದಿನಾಂಕ 21-12-2013 ರಿಂದ ಆರ್ಥಿಕ ಇಲಾಖೆಯಲ್ಲಿನ ಸರ್ಕಾರದ ಕಾರ್ಯದರ್ಶಿ(ಖಜಾನೆ-2)ರವರು ಪದನಿಮಿತ್ತ ಖಜಾನೆ ಆಯುಕ್ತರು ಆಗಿರುತ್ತಾರೆ. ಖಜಾನೆ ನಿರ್ದೇಶನಾಲಯದಲ್ಲಿ ನಿರ್ದೇಶಕರು, ಇವರ ಅಧೀನದಲ್ಲಿ ಇಬ್ಬರು ಹೆಚ್ಚುವರಿ ನಿರ್ದೇಶಕರು, ಹಾಗೂ ಓರ್ವರು ಜಂಟಿ ನಿರ್ದೇಶಕರು ಪ್ರಧಾನ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಹೆಚ್ಚುವರಿ ನಿರ್ದೇಶಕರ 2 ಹುದ್ದೆಯನ್ನು ಸರ್ಕಾರದ ಆದೇಶ ಆಇ 02 ಆಖ ಇ 2014(ಭಾ) ಬೆಂಗಳೂರು, ದಿನಾಂಕ: 09.09.2014 ರಂತೆ ಸೃಜಿಸಲಾಗಿದೆ. ಈ ಹುದ್ದೆಯು ದಿನಾಂಕ 01-01-2015 ರಿಂದ 1 ಹುದ್ದೆ ಜಾರಿಗೆ ಬರುವಂತೆ ಹಾಗೂ ದಿನಾಂಕ: 01-01-2016 ರಿಂದ ಜಾರಿಗೆ ಬರುವಂತೆ ಮತ್ತೊಂದು ಹುದ್ದೆಯನ್ನು ಸೃಜಿಸಲಾಗಿದೆ. ಹಾಗೂ ಸರ್ಕಾರದ ಆದೇಶ ಸಂಖ್ಯೆ ಆಇ 132 ಆಖಇ: 2014 ಬೆಂಗಳೂರು ದಿನಾಂಕ: 12.09.2014ರನ್ವಯ ಜಿಲ್ಲಾ ಖಜಾನೆ ಮೈಸೂರು, ಬೆಳಗಾವಿ ಮತ್ತು ಕಲ್ಬುರ್ಗಿಯಲ್ಲಿ ಇದ್ದ 3 ಉಪ ನಿರ್ದೇಶಕರ ಹುದ್ದೆಗಳನ್ನು ಜಂಟಿ ನಿರ್ದೇಶಕರ ಹುದ್ದೆಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಹಾಗೂ 18 ಜಿಲ್ಲಾ ಖಜಾನಾಧಿಕಾರಿಗಳ ಹುದ್ದೆಯನ್ನು ಉಪ ನಿರ್ದೇಶಕರ ಹುದ್ದೆಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದಲ್ಲದೆ 57 ಸಹಾಯಕ ಖಜಾನಾಧಿಕಾರಿಗಳ ಹುದ್ದೆಗಳನ್ನು ಸಹಾಯಕ ನಿರ್ದೇಶಕರು/ಜಿಲ್ಲಾ ಖಜಾನಾಧಿಕಾರಿಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಹಾಗೂ 57 ಮುಖ್ಯ ಲೆಕ್ಕಿಗರ ಹುದ್ದೆಗಳನ್ನು ಸಹಾಯಕ ಖಜಾನಾಧಿಕಾರಿಗಳ ಹುದ್ದೆಗಳಾಗಿಯೂ, 57 ಪ್ರಥಮ ದರ್ಜೆ ಸಹಾಯಕ ಹುದ್ದೆಗಳನ್ನು ಮುಖ್ಯ ಲೆಕ್ಕಿಗರ ಹುದ್ದೆಗಳಾಗಿಯೂ ಹಾಗೂ 259 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಾಗಿ ಉನ್ನತಿಕರಿಸಲಾಗಿದೆ.

ಆಡಳಿತ್ಮಾಕವಾಗಿ ಖಜಾನೆ ನಿರ್ದೇಶಕರು,ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಪ್ರಸ್ತುತ ಅವರ ಅಧೀನದ ಅಧಿಕಾರಿಗಳಾದ 1 ಹೆಚ್ಚುವರಿ ನಿರ್ದೇಶಕರು, 4 ಜಂಟಿ ನಿರ್ದೇಶಕರು, 23 ಉಪನಿರ್ದೇಶಕರು, 8 ಜಿಲ್ಲಾ ಖಜಾನಾಧಿಕಾರಿಗಳು ರಾಜ್ಯ ಜಿಲ್ಲಾ ಮಟ್ಟದ ಖಜಾನೆಗಳಲ್ಲಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದು, ನೇರವಾಗಿ ನಿರ್ದೇಶಕರಿಗೆ ವರದಿ ಮಾಡುತ್ತಿರುತ್ತಾರೆ. ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಹಾಗೂ ಜಿಲ್ಲಾ ಖಜಾನಾಧಿಕಾರಿಗಳ ಹುದ್ದೆಯ ಕೆಳಹಂತದಲ್ಲಿ 57 ಸಹಾಯಕ ನಿರ್ದೇಶಕರು, ಖಜಾನೆ ನಿರ್ದೇಶನಾಲಯ, ಹಾಗೂ ಜಿಲ್ಲಾ ಮತ್ತು ಉಪ ಖಜಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಇದಲ್ಲದೆ 231 ಸಹಾಯಕ ಖಜಾನಾಧಿಕಾರಿಗಳು ಖಜಾನೆ ನಿರ್ದೇಶನಾಲಯ, ನೂತನ ಪಿಂಚಣಿ ಯೋಜನಾ ಫಟಕ, ಖಜಾನೆ ಗಣಕ ಜಾಲ ಕೇಂದ್ರ ಸೇರಿದಂತೆ ರಾಜ್ಯದ ಜಿಲ್ಲಾ ಮತ್ತು ಉಪ ಖಜಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಜಿಲ್ಲಾ ಖಜಾನೆಗಳ ಅಧೀನದಲ್ಲಿ ಬರುವ ಸಹಾಯಕ ನಿರ್ದೇಶಕರು ಹಾಗೂ ಸಹಾಯಕ ಖಜಾನಾಧಿಕಾರಿಗಳು ಸಂಬಂಧಿಸಿದ ಜಿಲ್ಲಾ ಖಜಾನೆಗಳ ಪ್ರಭಾರಧಿಕಾರಿಗಳಿಗೆ ವರದಿ ಮಾಡುತ್ತಿರುತ್ತಾರೆ. ಇದಲ್ಲದೆ ಇಲಾಖೆಯಲಿ 70 ಸಹಾಯಕ ಖಜಾನಾಧಿಕಾರಿಗಳು ವಿವಿಧ ತಾಲ್ಲುಕು ಪಂಚಾಯತ್ಗಳಲ್ಲಿ ಲೆಕ್ಕಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ.

ಡೌನ್ಲೋಡ್

ಸಂಸ್ಥೆಯ ರಚನೆ

ಸಂಸ್ಥೆಯ ರಚನೆ(English)

 pdf    ಸಂಸ್ಥೆಯ ರಚನೆ

  pdf  ಸಂಸ್ಥೆಯ ರಚನೆ (English)

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಖಜಾನೆ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
CM Karnataka logo
Top