​​​​​​​​​ ​​ಗಂಗಾ ಕಲ್ಯಾಣ​ ವೈಯುಕ್ತಿಕ ನೀರಾವರಿ ಕೊಳವೆ ಭಾವಿ ತೆರೆದ ಭಾವಿ ಯೋಜನೆ

​​

  • ಯೋಜನೆಯಲ್ಲಿ ಪರಿಶಿಷ್ಟ ಪಂಗಡದ ಸಣ್ಣ, ಅತಿ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಪಂಪ್ಸೆಟ್ ಹಾಗೂ ಇತರೆ ಪೂರಕ ಸಾಮಾಗ್ರಿಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು.
  •  ಘಟಕ ವೆಚ್ಚ ರೂ. 3.00 ಲಕ್ಷ ಇದರಲ್ಲಿ ರೂ.2.50 ಲಕ್ಷ ಸಹಾಯಧನ ಮತ್ತು ರೂ. 50000/- ಅವಧಿಸಾಲ ಹಾಗೂ ವಿದ್ಯುದ್ದೀಕರಣದ ಬಾಬ್ತು ರೂ.50,000/-ಗಳು ಒಳಗೊಂಡಿರುತ್ತದೆ ಸಾಲಕ್ಕೆ ವಾರ್ಷಿಕ ಶೇ.6 ದರದಲ್ಲಿ ಬಡ್ಡಿ ವಿಧಿಸಲಾಗಿವುದು. ಸಾಲ ಮತ್ತು ಬಡ್ಡಿಯನ್ನು 6 ವರ್ಷಗಳಲ್ಲಿ ಅರ್ಧವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.
  •  ಅಂತರ್ಜಲದ ಮಟ್ಟ ಕುಸಿದಿರುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚವನ್ನು ರೂ.4.00 ಲಕ್ಷಗಳಿಗೆ ನಿಗದಿಪಡಿಸಿದ್ದು, ರೂ.3.00 ಲಕ್ಷ ಸಹಾಯದನ ರೂ.50,000/- ಅವಧಿಸಾಲ ಮತ್ತು ವಿದ್ಯುಧೀಕರಣಕ್ಕೆ ರೂ.50,000/- ಆಗಿರುತ್ತದೆ. ಸಾಲಕ್ಕೆ ವಾರ್ಷಿಕ ಶೇ.6 ದರದಲ್ಲಿ ಬಡ್ಡಿ ವಿಧಿಸಲಾಗಿವುದು. ಸಾಲ ಮತ್ತು ಬಡ್ಡಿಯನ್ನು 6 ವರ್ಷಗಳಲ್ಲಿ ಅರ್ಧವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.

ಯೋಜನೆಗಳ ಅನುಷ್ಟಾನದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳು ​

1.    ಆಯ್ಕೆ ವಿಧಾನದ ಬಗ್ಗೆ ಈಗಾಗಲೆ ನೀಡಿರುವ ಸರ್ಕಾರಿ ಆದೇಶ ಸಂಖ್ಯೆ ಸಕಇ ಬಿ.ಸಿ.ಎ.2012 ದಿನಾಂಕ:12.04.2012ನ್ನು ಚಾಚೂ ತಪ್ಪದೇ ಪಾಲಿಸತಕ್ಕದ್ದು.

2.    ಆಯ್ಕೆಯಾದ ಫಲಾಪೇಕ್ಷಿಗಳ ಸ್ಥಳ ಪರಿಶೀಲನೆ ಅರ್ಹರಿರುವ ಬಗ್ಗೆ ನಿಗಮದ ಅಧಿಕಾರಿಗಳು ವರದಿ ತಯಾರಿಸಿಕೊಳ್ಳಬೇಕು(ನಮೂನೆ-1)

3.    ಅರ್ಹರೆಂದು ಕಂಡುಬಂದ ಎಲ್ಲಾ ಫಲಾಪೇಕ್ಷಿಗಳ ಪಟ್ಟಿಯನ್ನು ನಿಗದಿಪಡಿಸಿದ ಗುತ್ತಿಗೆದಾರರಿಗೆ ನೀಡಿ,ಭೂ ಭೌತ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ತಿಳಿಸುವುದು

4.    ಸಫಲ ಜಲಬಿಂಧು ದೊರೆತ ಪ್ರಕರಣಗಳಲ್ಲಿ ಕೊಳವೆಬಾವಿ ಮಂಜೂರಾತಿ ಪತ್ರವನ್ನು ಫಲಾಪೇಕ್ಷಿಗಳಿಗೆ ಕಳುಹಿಸಿ, ಈ ಕೆಳಕಂಡ ದಾಖಲಾತಿಯನ್ನು ಅವಧಿ ಸಾಲ ಮಂಜೂರಾತಿಗೆ ಸಲ್ಲಿಸಲು ತಿಳಿಸುವುದು(ಮಂಜೂರಾತಿಪತ್ರ ನಮೂನೆ-1)

1.    ರೂ.20/--ಛಾಪಾ ಕಾಗದದಲ್ಲಿ ಒಪ್ಪಿಗೆ ಪತ್ರ ನಮೂನೆ-1(ಅ)

2.    ಪ್ರೋÀನೋಟ್ (ರೂ.20/--ಛಾಪಾ ಕಾಗದದಲ್ಲಿ)

3.    ಕನ್ಸಿಡರೇಷನ್ ರಸೀದಿ(ರೂ.20/--ಛಾಪಾ ಕಾಗದದಲ್ಲಿ)

4.    ಲೋನ್ ಅಗ್ರಿಮೆಂಟ್(ರೂ.50/--ಛಾಪಾ ಕಾಗದದಲ್ಲಿ)

5.    ಜಮೀನಿನ ಮೇಲೆ ಭೋಜಾ ದಾಖಲಿಸಲು ನೀಡಿರುವ ಒಪ್ಪಿಗೆ ಪತ್ರವನ್ನು ಸಂಬಂಧಪಟ್ಟ ತಹಶೀಲ್ದಾರ್ ಕಛೇರಿಗೆ ನಮೂನೆ-1(ಇ) ನಂತೆ ಕಳುಹಿಸಿ ತಲುಪಿದ ಬಗ್ಗೆ ಸ್ವೀಕೃತಿ ಪಡೆಯಬೇಕು ಮತ್ತು ನಿಗಮದ ಬೋಜಾ ದಾಖಲಿಸಲಾಗಿರುವ ಪಹಣಿ ಪತ್ರಿಕೆಯನ್ನು ತರಿಸಿ ಕಡತದಲ್ಲಿ ಇಟ್ಟುಕೊಳ್ಳವುದು

6     ನಿಗಮದ ಪರಾವಾಗಿ ಭೂದಾಖಲೆಗಳಲ್ಲಿ ಬೋಜಾ ದಾಖಲೆಯಾದ ನಂತರ ಭೂಭೌತ ಸಮೀಕ್ಷೇಯ ವರದಿ ಆಧಾರದಲ್ಲಿ ಕೊಳವೆಬಾವಿ ಕೊರೆಯುವಂತೆ ಕಾರ್ಯಾದೇಶ ನೀಡುವುದು. ಇದರಿಂದ ಮುಂದಿನ ಕ್ರಮಗಳಾದ ಪಂಪ್ ಸರಾಬರಾಜು ಇತ್ಯಾದಿ ಬಗ್ಗೆ ಆಗುತ್ತಿರುವ ವಿಳಂಬವನ್ನು ತಡೆಯಬಹುದಾಗಿದೆ

        7.  ಕೊಳವೆಬಾವಿ ಕೊರೆಯುವ ಸಮಯದಲ್ಲಿ ತಾ.ಅ.ಅ / ಸಿಬ್ಬಂದಿ ಫಲಾನುಭವಿ ಹಾಜರಿದ್ದು ಕೊಳವೆಬಾವಿ ಕೊರೆದ ವಿವರಗಳನ್ನು ನಮೂನೆ-3 ರಲ್ಲಿ ನಿಖರವಾಗ ದಾÁಖಲಿಸಕೊಳ್ಳಬೇಕು. ಉಪಯೋಗಿಸಿದ ಕೇಸಿಂಗ್ ಪೈಪ್ ನಿಗದಿ ಪಡಿಸದ ದಪ್ಪÀ/ವಿಶಿಷ್ಟತೆಗೆ ಅನುಗುಣವಾಗಿರುವ À ಬಗ್ಗೆ ದೃಢೀಕರಿಸಿಕೊಳ್ಳಬೇಕು. ಒಂದು ವೇಳೆ ವಿಶಿಷ್ಟತೆಗೆ ಅನುಗುಣವಾಗಿ ಇಲ್ಲದೆ ಇದ್ದಲ್ಲಿ ಅದನ್ನು ತಕ್ಷಣ ಸಂಬಂಧಿಸಿದ ದಾಖಲಾತಿಗಳನ್ನು ನಮೂದಿಸುವುದು. ಕೊರೆಯುವಾಗ ನಿಗದಿತ 1000ಜಿ.ಪಿ.ಹೆಚ್ ಗಿಂತ ಹೆಚ್ಚಿನ ಪ್ರಮಾಣದ ನೀರು ದೊರೆತ ಸಂಧರ್ಭದಲ್ಲಿ ಭಾವಚಿತ್ರ ತೆಗೆದು ನಮೂನೆ-3(ಅ) ಜೊತೆ ಲಗತ್ತಿಸಿ ಕೇಂದ್ರ ಕಛೇರಿಗೆ ಕಳುಹಿಸುವುದು

        8.  ವಿದ್ಯುತ್ ಸಂಪರ್ಕಕ್ಕಾಗಿ ಎಸ್ಕಾಂನಲ್ಲಿ ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಸಿ ಸಲ್ಲಿಸಬೇಕಾದ ನಿಗದಿಪಡಿಸಿದ ರಿಜಿಸ್ಟ್ರೇಷನ್ ನಮೂನೆ-3(ಆ)ಗೆ ಫಲಾನುಭವಿಗೆ ಸಹಿ ಪಡೆಯಬೇಕು

      9.  ಈ ರೀತಿಯಾಗಿ ಕೊಳವೆಬಾವಿ ಕೊರೆದ ಬಗ್ಗೆ ತಯಾರಿಸಲಾದ ನಮೂನೆ-3 ಮತ್ತು ಗುತ್ತಿಗೆದಾರರು ಸಲ್ಲಿಸಿರುವ ಸಂಬಂಧಪಟ್ಟ ದೃಢೀಕರಣಗಳ ನಂತರ ಕೇಂದ್ರ ಕಛೇರಿಗೆ ಇತರೆ ದಾಖಲೆಗಳೊಂದಿಗೆ ಕೊರಿಯರ್ ಅಥವಾ ಸ್ಪೀಡ್ ಪೋಸ್ಟ್ ಮೂಖಾಂತರ ಕಳುಹಿಸಬೇಕು.

      10.ಬಿಲ್ಗರಳನ್ನು ಕ್ರೋಢಿಕರಿಸಿ ಘೋಷ್ವಾರೆಯೋದಿಗೆ ನಮೂನೆ-3ಇ ರಲ್ಲಿ  ಕೇಂದ್ರ ಕಛೇರಿಗೆ ಕಳುಹಿಸುವುದು

      11.   ಕೊಳವೆಬಾವಿ ಕೊರೆದಿರುವ ಮಾಹಿತಿಯನ್ನಾಧರಿಸಿ (ಆಳ,ನೀರಿನ ಪ್ರಮಾಣ) ರಿಜಿಸ್ಟ್ರೇಷನ್ ಫಾರ್ಮ ಭರ್ತಿ ಮಾಡಿ ಈ ಕೆಳಕಂಡ ದಾಖಲಾತಿಗಳೊಂದಿಗೆ ಎಸ್ಕಾಂ ಕಛೇರಿಯಲ್ಲಿ ನೊಂದಾಯಿಸಬೇಕು 

ಅ).   ಆನಲೈನ್ ರಿಜಿಸ್ಟ್ರೇಷನ್ ನಮೂನೆ

ಆ).   ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಬಗ್ಗೆ ದೃಢೀಕರಣ

ಇ).   ಪಹಣಿ

ಈ)   ನೋಂದಣಿ ಶುಲ್ಕ ಮತ್ತು ಪ್ರಾರಂಭಿಕ ಭದ್ರತಾ ಠೇವಣಿ (ಐ.ಎಸ್.ಡಿ),ಮೀಟರ್ ಭದ್ರತಾ  ಠೇವಣಿ(ಎಂ.ಎಸ್.ಡಿ) ಹಾಗೂ ಮೀಟರ್ ಬಾಕ್ಸ್ ಶುಲ್ಕವನ್ನು (ಆಯಾ ಎಸ್ಕಾಂಗಳಲ್ಲಿ   ನಿಗದಿಪಡೆಸಿರುವಂತೆ) ಸರಾಬರಾಜು ಮಾಡುವ ಪಂಪ್ ಸೆಟ್ ಹೆಚ್.ಪಿ. ಆಧರಿಸಿ ಡಿ.ಡಿ ಮುಖಾಂತರ ಪಾವತಿಸಬೆಕು.ಈ ಕಾರ್ಯವು ಕೊಳವೆಬಾವಿ ಕೊರೆದ ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ರಿಜಿಸ್ಟ್ರೇಷನ್ ಸಮಯದಲ್ಲಿಯೇ ಇವೆಲ್ಲವನ್ನು ಪಡೆದು ಈ ಬಾಬ್ತು ತಗಲುವ ವೆಚ್ಚವನ್ನು ಒಟ್ಟಾರೆ ಘಟಕ ವಚ್ಚದಲ್ಲಿ ಭರಿಸಬೇಕು.

    12. ಈ ಹಂತದಲ್ಲಿ ಬೇಕಾದ ಪಂಪ್ಸೆರಟ್ ಹಾಗೂ ಪೂರಕಗಳ ಲೆಕ್ಕಾಚಾರ ಮಾಡಿಕೊಂಡು     ಸಹಾಯಧನಕ್ಕಿಂತ ಹೆಚ್ಚಿಗೆ ಬೇಕಾದ ಮೊತ್ತವನ್ನು ಲೆಕ್ಕಾಚಾರ ಮಡಬೇಕು. ಈ ಮೊತ್ತವು ಉಳಿದಿರುವ ಸಹಾಯಧನ ಮತ್ತು ರೂ.50,000/- ಅವಧಿಸಾಲಕ್ಕೂ ಮೀರುವಂತಿದ್ದಲ್ಲಿ ಹೆಚ್ಚುವರಿ ಮೊತ್ತವನ್ನು ಫಲಾನುಭವಿಗೆ ಪವತಿಸುವಂತೆ ತಿಳಿಸಬೇಕು. 

ಅ)   ಲಭ್ಯವಿರುವ ಸಹಾಯಧನದಲ್ಲಿಯೇ ಆಗುವಂತಿದ್ದಲ್ಲಿ ನಿಗಮದ ಹೆಸರು ದಾಖಲು ಮಾಡಿರುವ ಭೋಜಾ ರದ್ದು ಪಡಿಸುವುದು,ಹಾಗೂ ಪಂಪ್ಸೆಚಟ್ ಮತ್ತು ಪೂರಕ ಸಾಮಗ್ರಿಗಳನ್ನು ಸರಬರಾಜು ಮಾಡಿಸುವುದು.

ಆ).   ಉಳಿದ ಸಹಯಧನ ಮತ್ತು ರೂ.50,000/- ದವರೆಗೆ ಎಷ್ಟು ಬೇಕಾಗುತ್ತದೊ ಅಷ್ಟು ಅವಧಿಸಾಲ ಮಂಜೂರು ಮಾಡಿಕೊಂಡು ಪಂಪ್ಸೆಟ್ ಸರಬರಾಜು ಮಾಡಿಸುವುದು.

ಇ).   ಅವಧಿ ಸಾಲ ರೂ.50,000/- ಕ್ಕಿಂತ ಹೆಚ್ಚಿಗೆ ತಗಲುವುದಿದ್ದಲ್ಲಿ,ಈ ಹೆಚ್ಚುವರಿ ಮೊತ್ತವನ್ನು ಫಲಾನುಭವಿಯಿಂದ ನಿಗಮಕ್ಕೆ ಪಾವತಿಸಿಕೊಂಡು, ರಸೀದಿ ನೀಡಿ ಪಂಪ್ ಸೆಟ್ ಸರಬರಾಜು ಮಾಡಿಸುವುದು 

13.   ಕೊಳವೆ ಬಾವಿ ಕೊರೆಯುವಾಗ ಉಪಯೋಗಿಸಿತ್ತಿರುವ ಕೇಸಿಂಗ್ 3ನೇ ತಪಾಸಣೆ ಸಂಸ್ಥೆ ಯಿಂದ ಪರಿಶೀಲನೆ ಮಾಡಲ್ಪಟ್ಟಿರುವ ಬಗ್ಗೆ ದೃಢಿಕರಣ ಪಡೆಯಬೇಕು.

14.   ಕೊಳವೆ ಬಾವಿ ಕೊರೆಯುವಾಗ ಒಂದು ವೇಳೆ ವಿಫಲವಾದ್ದಲ್ಲಿ ನಮೂನೆ-3ರಲ್ಲಿ ದಾಖಲಿಸಿಕೊಂಡ ಜಿಲ್ಲಾ ಕಛೇರಿಯಲ್ಲಿ ದಾಖಲೆ ಇಟ್ಟುಕೊಳ್ಳಬೇಕು. ಇಂತಹ ವಿಫಲ ಕೊಳವೆಬಾವಿಗಳನ್ನು ಕೂಡಲೆ ಕಲ್ಲು ಮಣ್ಣು ಗಳಿಂದ ಮುಚ್ಚಬೇಕು. ಫಲಾನುಭವಿಗೆ ಜಮಿನಿನ ಮೇಲೆ ದಾಖಲಾದ ಬೋಜಾ ರದ್ದುಪಡಿಸಲು ಸಂಬಂಧಪಟ್ಟ ತಹಶಿಲ್ದಾರರಿಗೆ ಪತ್ರ ಕಳುಹಿಸುವುದು

15   ಕೇಂದ್ರ ಕಛೇರಿಯಿಂದ ನೀಡಿರುವ ಕಾರ್ಯಾದೇಶದ ಆಧಾರದ ಮೇಲೆ ಪಂಪ್ಸೆಾಟ್ ಗುತ್ತಿಗೆದಾರರು ಪಂಪ್ಸೆಟ್ ಪೂರಕಗಳನ್ನು ಸರಬರಾಜು ಮಾಡಲು ಬಂದಾಗ ಎಲ್ಲಾ ಸಾಮಾಗ್ರಿಗಳನ್ನು 3ನೇ ತಪಾಸಣಾ ಸಂಸ್ಥೆಯಿಂದ ಪರಿಶೀಲಿಸಲ್ಪಟ್ಟಿರುವ ಬಗ್ಗೆ ದೃಢಿಕರಿಸಿಕೊಳ್ಳಬೇಕು.ಸರಾಬರಾಜು ಮಾಡಿದಾಗ ನಿದಿಪಡಿಸಿದ ನಮೂನೆ-5ರಲ್ಲಿ ಎಲ್ಲಾ ವಿವರಗಳನ್ನು ದಾಖಲಿಸಿಕೊಂಡು ಕೆಂದ್ರಕಛೇರಿ ಗೆ ಕಳುಹಿಸಬೇಕು.ಎಲ್ಲಾ ಪಂಪ್ಸೊಟ್ ಮತ್ತು ಸಾಮಾಗ್ರಿಗಳ ಭಾವಚಿತ್ರ ತೆಗೆಸಿ ನಮೂನೆ-5(ಅ)ನೊಂದಿಗೆ ಲಗತ್ತಿಸಿ ಕಳುಹಿಸುವುದು. 

16.  ಪಂಪ್ಸೆನಟ್ ಸರಾಬರಾಜು ಮಾಡಿದ ಬಗ್ಗೆ ಬಿಲ್ಲುಗಳನ್ನು ಕ್ರೂಡಿಕರಿಸಿ ನಮೂನೆ-5(ಆ) ರ ಘೋಷ್ವರೆಯೋಂದಿಗೆ ಕೇಂದ್ರ ಕಛೇರಿಗೆ ಕಳುಹಿಸುವುದು

17.   ಪಂಪ್ಸೆಟ್ ಮತ್ತು  ಪೂರಕಗಳನ್ನು ವಿಳಂಬವಿಲ್ಲದೆ ಕೊಳವೆಬಾವಿಗೆ ಆಳವಡಿಸಿ ನಿಗದಿಪಡಿಸಿದ£ ನಮೂನೆ 5(ಇ) ನೊಂದಿಗೆ ಕೇಂದ್ರ ಕಛೇರಿಗೆ ಹಣ ಪಾವತಿಗಾಗಿ ಕಳುಹಿಸುವುದು. ಆಳವಡಿಸಿದ ಬಗ್ಗೆ ಭಾವಚಿತ್ರ ತೆಗೆದು ನಮೂನೆ-5(ಈ)ಗಳೊಂದಿಗೆ ಲಗತ್ತಿಸಿ ಕಳುಹಿಸುವುದು.

18.   ಪಂಪ್ಸೆಟ್ ಆಳವಡಿಸಿದ ಕೂಡಲೇ ಕಂಪ್ಲಿಷನ್ ವರದಿ ಮತ್ತು ವೈರಿಂಗ್ ಡಯಾಗ್ರಮ್ಗಳನ್ನು ವದ್ಯುತ್ ಗುತ್ತಿಗೆದಾರರಿಂದ ಎಸ್ಕಾಂ ಗೆ ಸಲ್ಲಿಸುವುದು

19.ವಿದ್ಯುಧೀಕರಣವಾದ ಒಂದು ತಿಂಗಳೊಳಗೆ ಸ್ಥಳ ಪರೀಶೀಲನೆ ನಡೆಸಿ ನಮೂನೆ-6 ಮತು ್ತನಮೂನೆ-7 ಕೇಂದ್ರ ಕಛೇರಿಗೆ  ಪೂರ್ಣ ಗೊಂಡ ವರದಿ ಕಳುಹಿಸುವುದು.

20. ಪ್ರತಿ ತಿಂಗಳು ಕೇಂದ್ರ ಕಚೇರಿಗೆ ಕಳುಹಿಸಬೇಕಾದ ನಮೂನೆಗಳನ್ನು ಲಗತ್ತಿಸಿದೆ.

ಅ. ವಿದ್ಯುದೀಕರಣ (ಪ್ರಗತಿ ನಮೂನೆ-8, 8ಬಿ, ಮತ್ತು 8(ಇ).​

ಆ. ಕೊಳವೆಬಾವಿ ಕೊರೆಯುವಿಕೆಯಲ್ಲಿ ಸಾಧಿಸಿದ ಪ್ರಗತಿ ನಮೂನೆ-09.


ಹೆಚ್ಚಿನ ಯೋಜನೆ ವಿವರಗಳಿಗಾಗಿ ನಿಗಮದ ಕಾಯ್ದೆ ನಿಯಮಗಳನ್ನು ನೋಡಿ​​

​