​​​​​ಉದ್ಯಮ ಶೀಲತಾ ಯೋಜನೆ​​

​​  ನಿರುದ್ಯೋಗಿ ಪರಿಶಿಷ್ಟ ಪಂಗಡದವರು ನಡೆಸಲು ಇಚ್ಛಿಸುವ ವಿವಿಧ ಉದ್ಯಮಶೀಲತಾ ಚಟುವಟಿಕೆಗಳಾದ ಸಣ್ಣ ಕೈಗಾರಿಕೆ, ಟಾಟಾ ಇಂಡಿಕಾ, ಆಟೋರಿಕ್ಷಾ, ಟ್ಯ್ರಾಕ್ಟರ್, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಚರ್ಮಗಾರಿಕೆ, ವಕೀಲರ ಕಛೇರಿ, ಬ್ಯೂಟಿ ಪಾರ್ಲರ್, ರೆಡಿಮೇಡ್ ಗಾರ್ಮೆಂಟ್ಸ್, ಡಿ.ಟಿ.ಪಿ ಸೆಂಟರ್ ಇತ್ಯಾದಿ​ ಉದ್ದೇಶಗಳಿಗೆ ರೂ.1.00 ಲಕ್ಷಕ್ಕೂ ಮೇಲ್ಪಟ್ಟ ಘಟಕಗಳಿಗೆ ಬ್ಯಾಂಕುಗಳು ಸಾಲ ಮಂಜೂರು ಮಾಡಿದಲ್ಲಿ ನಿಗಮದಿಂದ ಈರೀತಿ​  ಸಹಾಯಧನ ಮಂಜೂರು ಮಾಡಲಾಗುವುದು.  ​
        
             ​ಘಟಕ ವೆಚ್ಚ         ​    ​​ಸಹಾಯಧನದ ಮಿತಿ

ರೂ.1.00 ಲಕ್ಷ ಮೇಲ್ಪಟ್ಟು

ರೂ. 5​.00 ಲಕ್ಷದವರೆಗೆ       ​

ಘಟಕ ವೆಚ್ಚದ ಶೇ.70 ರಷ್ಟು                         ಗರಿಷ್ಟ ರೂ.3.50 ಲಕ್ಷ

ರೂ.5.00 ಲಕ್ಷ ಮೇಲ್ಪಟ್ಟು

ರೂ.10.00 ಲಕ್ಷದವರೆಗೆ          


ಟಕ ವೆಚ್ಚದ ಶೇ.60 ರಷ್ಟು                         ಗರಿಷ್ಟ ರೂ. 5.00 ಲಕ್ಷ

ರೂ.10.00 ಲಕ್ಷ ಮೇಲ್ಪಟ್ಟು

ರೂ.20.00 ಲಕ್ಷದವರೆಗೆಟಕ ವೆಚ್ಚದ ಶೇ.50 ರಷ್ಟು                         ಗರಿಷ್ಟ ರೂ.5.0​0 ಲಕ್ಷ


ಯೋಜನೆಗಳ ಅನುಷ್ಟಾನದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳು

 

I      ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ

 

1.    ಗುರಿಗಳಿಗೆ ಅನುಗುಣವಾಗಿ ಮಾತ್ರ ಪ್ರಸ್ತವನೆಗಳನ್ನು ಪರಿಗಣಿಸುವುದು.

2.    ನಿಗದಿಪಡಿಸಿರುವ ಭೌತಿಕ ಗುರಿಯಂತೆ ಮುಂಚಿತವಾಗಿ ಲೀಡ್ ಬ್ಯಾಂಕಿಗಳಿಗೆ ಮಾಹಿತಿ ನೀಡಿ ಅವರ ಸೇವಾ ವ್ಯಾಪ್ತಿಗೆ ಒಳಪಡುವ ಬ್ಯಾಂಕುಗಳಿಗೆ ಗುರಿ ನಿಗದಿಪಡಿಸಲು ತಿಳಿಸುವುದು

3.    ರಾಷ್ಟ್ರೀಕೃತ ಬ್ಯಾಂಕ್, ಷೆಡ್ಯೂಲ್ಡ್ ಬ್ಯಾಂಕ್ ಹಾಗೂ ಗ್ರಾಮೀಣ ಬ್ಯಾಂಕುಗಳೀಗೆ ಅಯ್ಕೆಯಾದ ಫಲಾಪೇಕ್ಷಿಗಳ ಅರ್ಜಿಗಳನ್ನು ಶಿಫಾರಸ್ಸು ಮಾಡತಕ್ಕದ್ದು.

4.    ಬ್ಯಾಂಕ್ಗಳಿಂದ ಸಾಲ ಮಂಜೂರಾಗಿ ಸಹಾಯಧನ ಬಿಡುಗಡೆ ಮಡಲು ಬಂದ ಬೇಡಿಕೆ(Claims) ಪ್ರಸ್ತಾವನೆಗಳನ್ನು ಪರಿಶೀಲಿಸಿ, ನಿಗಮದಿಂದ ಶಿಫಾರಸ್ಸುಗೊಂಡಿದ್ದ, ಮತ್ತು ನಿಯಮಾನುಸಾರ ಬ್ಯಾಂಕ್ ವ್ಯವಸ್ಥಾಪಕರ ಮಂಜೂರಾತಿ ನಿಡಿದ ಮುಖ ಪತ್ರದೊಂದಿಗೆ ಬರುವಂತಹ ಪ್ರಸ್ತಾವನೆಗಳನ್ನು ಮಾತ್ರ ಸಹಾಯಧನ ಬಿಡುಗಡೆಗೆ ಪರಿಗಣಿಸತಕ್ಕದ್ದು.

5.    ಮೇಲಿನಂತೆ ಸ್ವೀಕರಿಸಲಾಗುವ ಕ್ಲೈಮ್ಗದಳನ್ನು ದಿನಾಂಕವಾರು ವಿಂಗಂಡಿಸಿ ಮೊದಲು ಬಂದ ಪ್ರಸ್ತಾವನೆಗಳಿಗೆ ಮೊದಲ ಆಧ್ಯತೆ ಮೇಲೆ ಸಹಾಯಧನ ಬಿಡುಗಡೆಮಾಡತಕ್ಕದು.

6.    ಮಂಜೂರಾತಿ ನೀಡಿದ ಪ್ರತಿಯೊಬ್ಬ ಫಲಾನುಭವಿಗಳಿಗೆ ಪ್ರತ್ಯೇಕವಾಗಿ ಮಂಜೂರಾತಿ ನೀಡುವುದು ಮತ್ತು ಬ್ಯಾಂಕ್ನ ಲ್ಲಿ  ಉಳಿತಾಯ ಖಾತೆಯನ್ನು ತೆರೆಯಲು ಸಹಕರಿಸುವುದು.

7.    ಸಹಾಯದನವನ್ನು ಬ್ಯಾಂಕಿಗೆ ಕಳುಹಿಸಿದ 30 ದಿವಸದೊಳಗೆ ಸಹಯಧನವನ್ನು ಫಲಾನುಭವಿಗಳಿಗೆ ಸ್ವತ್ತುಗಳನ್ನು ಸೃಜಿಸಲು ಬಿಡುಗಡೆಯಾಗುವ ಕ್ರಮವಹಿಸುವುದು.

8.    ಫಲಾನುಭವಿಗಳಿಗೆ ನಿಗಮ ಮತ್ತು ಬ್ಯಾಂಕಿನಿಂದ ಕಲ್ಪಿಸಲಾದ ಸೌಲಭ್ಯದಿ ಸೃಜಿಸಿದ ಸ್ವತ್ತಿನ ಛಾಯಚಿತ್ರವನ್ನು ತೆಗೆದು ಅದರ ಪ್ರತಿಯನ್ನು ಜಿಲ್ಲಾ ಕಛೇರಿಯಲ್ಲಿ ನಿರ್ವಹಿಸಲಾಗುವ ಫಲಾನುಭವಿಯ ವೈಯಕ್ತಿಕ ಸಾಲದ ಕಡತದಲ್ಲಿಡುವುದು ಮತ್ತು ಮತ್ತೊಂದು ಪೂರ್ಣ ವಿವರಗಳೊಂದಿಗೆ ನಿಗಮದ ಕೆಂದ್ರಕಛೇರಿಗೆ ಕಳುಹಿಸುವುದು.

9.    ನಿಗಮದಿಂದ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾದ ಸಹಾಯಧನವನ್ನು ಸಾಲದ ಹಣದೊಂದಿಗೆ ವಿನಿಯೋಗ ಮಾಡಿದ ಬಗ್ಗೆ ಹಣ ವಿನಿಯೋಗ ಪ್ರಮಾಣಪತ್ರವನ್ನು ಬ್ಯಾಂಕ್ನ ವ್ಯವಸ್ಥಾಪಕರು ಮತ್ತು ಜಿಲ್ಲಾ ವ್ಯವಸ್ಥಾಪಕರು ಚೀಟಿ ಸಹಿಯೊಂದಿಗೆ ಕೆಂದ್ರಕಛೇರಿಗೆ ಸಲ್ಲಿಸುವುದು.

10.   ಪ್ರತಿ ತಿಂಗಳು ಸೌಲಭ್ಯ ಕಲ್ಪಿಸಲಾದ ಮತ್ತು ಸಹಾಯಧನ ಮತ್ತು ಸಾಲದ ಹಣದ ವಿವರಗಳನ್ನು ಒಳಗೊಂಡ ಮಾಹಿತಿvಯನ್ನು ಫಲಾನುಭವಿವಾರು ಮತ್ತು ಉದ್ದೇಶವಾರು ಸಿದ್ದಪಡಿಸಿ ಕೆಂದ್ರಕಛೇರಿಗೆ ಸಲ್ಲಿಸುವುದು.​

ಹೆಚ್ಚಿನ ಯೋಜನೆ ವಿವರಗಳಿಗಾಗಿ ನಿಗಮದ ಕಾಯ್ದೆ ನಿಯಮಗಳನ್ನು ನೋಡಿ​​

​​