Sign In

ಕರ್ನಾಟಕ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)

ಭೂ ಒಡೆತನ ಯೋಜನೆ

ಭೂ ಒಡೆತನ ಯೋಜನೆ ​

     ರಾಜ್ಯದಲ್ಲಿನ ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ  ಮಾತ್ರ ಯೋಜನೆಯಡಿ ಸೌಲಭ್ಯವನ್ನು ನೀಡಲಾಗುತ್ತದೆ. ಯೋಜನೆಯಡಿ ಘಟಕ ವೆಚ್ಚ ರೂ.15.00 ಲಕ್ಷವಿದ್ದು, ಪ್ರತಿ ಘಟಕದಲ್ಲಿ 2.00 ಎಕರೆ ಖುಷ್ಕಿ ಅಥವಾ 1.00 ಎಕರೆ ತರಿ ಅಥವಾ ಕನಿಷ್ಟ  ಎಕರೆ (20 ಗುಂಟೆ) ಭಾಗಾಯ್ತು ಜಮೀನನ್ನು ಖರೀದಿಸಿ ನೋಂದಣಿ ಮಾಡಿಸಿಕೊಡಲಾಗುವುದುಘಟಕ ವೆಚ್ಚದಲ್ಲಿ ಶೇ.50 ಭಾಗ ಸಹಾಯಧನ ಹಾಗೂ ಶೇ.50 ಭಾಗ ಅವಧಿ ಸಾಲದ ರೂಪದಲ್ಲಿ ಇರುತ್ತದೆಅವಧಿಸಾಲವನ್ನು ಶೇ.6 ಬಡ್ಡಿ ದರದಲ್ಲಿ ನಿಗಮದಿಂದಲೇ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯು ಜಮೀನಿನ ಖರೀದಿ ದರವನ್ನು ನಿಗದಿಪಡಿಸುತ್ತದೆ. ಫಲಾನುಭವಿಗಳು ಸಾಲದ ಹಣವನ್ನು ಬಡ್ಡಿ ಸಮೇತವಾಗಿ ಹತ್ತು ವರ್ಷಗಳಲ್ಲಿ ಪ್ರತಿ 6 ತಿಂಗಳಿಗೊಮ್ಮೆ 20 ಸಮಕಂತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕು


ಯೋಜನೆಗಳ ಅನುಷ್ಟಾನದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳು ​

1.    ಜಿಲ್ಲಾ ಅನುಷ್ಟಾನ ಸಮಿತಿ ಸಭೆಯ ನಡವಳಿಗಳು

2.    ಫಲಾನುಭವಿಗಳ ಭೂ ರಹಿತ ಕೃಷಿ ಕಾರ್ಮಿಕರೆಂಬುವುದಕ್ಕೆ ಪ್ರಮಾಣ ಪತ್ರ.

3.    ಫಲಾಫೇಕ್ಷಿಗಳ ಮತ್ತು ಭೂ ಮಾಲಿಕರ ​ಜಾತಿ ಪ್ರಮಾಣ ಪತ್ರ.

4.    ನಮೂನೆ-1 ರಲ್ಲಿ ಉಪ ವಿಭಾಗಾಧಿಕಾರಿ/ತಹಸೀಲ್ದಾರವರ ವರದಿ.

5.    ನಮೂನೆ-2 ರಲ್ಲಿ ತಾಲ್ಲೂಕು ಅಭಿವೃದ್ದಿ ಅಧಿಕಾರಿ/ಜಿಲ್ಲಾ ವ್ಯವಸ್ಥಾಪಕರ ಸ್ಥಳ ಪರಿಶೀಲನಾ ವರದಿ

6.    ಉಪನೋಂದಣಾಧಿಕಾರಿ ಕಛೇರಿಯಿಂದ ಪಡೆದ ಜಮೀನಿನ ನೊಂದಾಯಿತ ಬೆಲೆಯ ವಿವರಗಳನ್ನೊಳಗೊಂಡ ಪಟ್ಟಿ

7.    ಫಲಾಫೇಕ್ಷಿಗಳನ್ನು ಆಯ್ಕೆ ಮಾಡಲಾದ ಗ್ರಾಮ ಸಭೆಯ ನಡವಳಿಗಳು

8.    ನೀರಾವರಿ ಮೂಲ ಮತ್ತು ಬೆಳೆದ ಬೆಳೆಗಳ ವಿವರಗಳನ್ನು ಒಳಗೊಂಡ ಪಹಣಿ ಪತ್ರಿಕೆ

9.    ಸೇವಾ ವ್ಯಾಪ್ತಿಯಲ್ಲಿನ ಬ್ಯಾಂಕುಗಳಿಂದ ಪಡೆಯಲಾದ ಬೇಬಾಕಿ ಪತ್ರ

10.   ಜಮೀನಿನ ಕಚ್ಚಾ ನಕಾಶೆ.

11.    ಕಳೆದ 13 ವರ್ಷಗಳ ಋಣ ಭಾರ ಪತ್ರ(ಇ.ಸಿ)

12.   ಭೂಮಾಲಿಕರ ಒಪ್ಪಿಗೆ ಪತ್ರ

13.   ಕಾನೂನು ಸಲಹೆಗಾರರ ಅಭಿಪ್ರಾಯ

14.   ಸ್ಥಳ ಪರಿಶೀಲನೆ ನಡೆಸಿದ ಸಮಯದಲ್ಲಿ ತೆಗೆಯಲಾದ ವಿಡಿಯೋ ಚಿತ್ರೀಕರಣ ಸಿ.ಡಿ

15.   ಖರೀದಿಸಲು ಉದ್ಧೇಶಿಸಿರುವ ಜಮೀನು ಖುಷ್ಕಿಯಾಗಿದ್ದಲ್ಲಿ ಕೃಷಿಗೆ ಯೋಗ್ಯವಾಗಿರುವುದಕ್ಕೆ ಕೃಷಿ ಇಲಾಖೆ ಅಧಿಕಾರಿಗಳಿಂದ ಪಡೆದ ಪತ್ರ:ತರಿ ಅಥವಾ ಬಾಗಾಯ್ತ ಜಮೀನು ಆಗಿದ್ದಲ್ಲಿ ನೀರಾವರಿ ಮೂಲದ ಬಗ್ಗೆ ನೀರಾವರಿ ಇಲಾಖೆಯಿಂದ ಪಡೆಯಲಾದ ದೃಢೀಕರಣ ಪತ್ರ.​

  

ಹೆಚ್ಚಿನ ಯೋಜನೆ ವಿವರಗಳಿಗಾಗಿ ನಿಗಮದ ಕಾಯ್ದೆ ನಿಯಮಗಳನ್ನು ನೋಡಿ​​ 


 


   

​ ​

 
Last Updated -
Content Owned and Maintained by : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಆಭಿವೃದ್ಧಿ ನಿಗಮ ನಿಯಮಿತ
Designed and Hosted by
Center for e-Governance
©2015, All Rights Reserved.
Disclaimer:Please note that this page also provides links to the websites/ web pages of Govt. Ministries/Departments/Organisations.
The content of these websites are owned by the respective organisations and they may be contacted for any further information or suggestion.
Help ¦ Terms & Conditions ¦ Copyright Policy ¦ Hyperlinking Policy ¦ Privacy Policy