​​​​​​​​​​​​ಮೈಕ್ರೋ ಕ್ರೆಡಿಟ್ (ಕಿರುಸಾಲ) ಯೋಜನೆ​​​​​​​​

​​
ಈ ಯೋಜನೆಯಡಿ ಗ್ರಾಮೀಣ, ಅರೆ ನಗರ ಮತ್ತು ನಗರ ಪ್ರದೇಶಗಳಲ್ಲಿನ ಸ್ವ ಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರತಿ ಫಲಾಪೇಕ್ಷಿಗೆ ಗರಿಷ್ಟ ಮೊತ್ತ ರೂ.15,000/- ಗಳನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ಸಹಾಯಧನ ರೂ.10,000/- ಗಳಾಗಿದ್ದು, ಉಳಿದ ರೂ.5,000/- ಸಾಲವಾಗಿರುತ್ತದೆ. ಸಹಾಯಧನ ಮತ್ತು ಸಾಲವನ್ನು ನಿಗಮದಿಂದ ನೇರವಾಗಿ  ನೀಡಲಾಗುವುದು. ಸಾಲದ ಹಣಕ್ಕೆ ವಾರ್ಷಿಕ ಶೆ.4ರಂತೆ ಬಡ್ಡಿ ವಿಧಿಸಲಾಗುವುದು. ಫಲಾನುಭವಿಗಳು ಸಾಲದ ಹಣವನ್ನು ಬಡ್ಡಿ ಸಮೇತವಾಗಿ ಮೂರು ವರ್ಷಗಳಲ್ಲಿ 36 ಮಾಸಿಕ ಸಮಕಂತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕು.

ಯೋಜನೆಗಳ ಅನುಷ್ಟಾನದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳು ​

1.    ನಿಗಮದಿಂದ ಸೌಲಭ್ಯ ಬಯಸುವ ಪ್ರತಿಯೊಂದು ಸ್ವಸಹಾಯ ಸಂಘವು ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರಬೇಕು, ನೋಂದಣಿಯಾಗಿರಬೇಕು ಮತ್ತು ರಾಷ್ಟ್ರೀಕೃತ / ಷ್ಯೆಡ್ಯೂಲ್ಡ್ / ಗ್ರಾಮೀಣ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.

2.    ಸ್ವಸಹಾಯ ಸಂಘಗಳಿಗೆ ಮಂಜೂರು ಮಾಡಲಾಗುವ ಹಣವನ್ನು ಅಯಾ ಸಂಘಗಳ ಹೆಸರಿಗೆ ಕ್ರಾಸ್ ಮಾಡಿದ ಚೆಕ್ಗಳ ಮೂಲಕವೇ ಪಾವತಿ ಮಾಡಬೇಕು.

3.    ಸ್ವಸಹಾಯ ಸಂಘಗಳಿಗೆ ಮಂಜೂರು ಮಾಡುವ ಸಾಲದ ಹಣಕ್ಕೆ ವಾರ್ಷಿಕ ಶೇ.4ರ ದರದಲ್ಲಿ ಬಡ್ಡಿ ವಿಧಿಸಲಾಗುವುದು. ಸಂಘಗಳು ತನ್ನ ಸದಸ್ಯರಿಗೆ ವಾರ್ಷಿಕ ಶೇ.5ರ ವರೆಗೆ ಬಡ್ಡಿ ವಿಧಿಸಬಹುದಾಗಿದ್ದು, ವ್ಯತ್ಯಾಸದ ಬಡ್ಡಿ ಹಣವನ್ನು ಸಂಘದ ಸೇವಾ ಶುಲ್ಕವಾಗಿ ಉಳಿಸಿಕೊಂಡು ಸಂಘದ ಅಭಿವೃದ್ಧಿಗಾಗಿ ಬಳಸಿಕೊಳ್ಳಬಹುದು.

4.    ಸ್ವಸಹಾಯ ಸಂಘಗಳಿಗೆ ಬಿಡುಗಡೆ ಮಾಡುವ ಸಾಲದ ಹಣವನ್ನು ಸಂಘಗಳು 36 ಮಾಸಿಕ ಕಂತುಗಳ ​​ರೂಪದಲ್ಲಿ ಬಡ್ಡಿ ಸಮೇತವಾಗಿ ಮರುಪಾವತಿ ಮಾಡಬೇಕಾಗಿರುತ್ತದೆ.


ಹೆಚ್ಚಿನ ಯೋಜನೆ ವಿವರಗಳಿಗಾಗಿ ನಿಗಮದ ಕಾಯ್ದೆ ನಿಯಮಗಳನ್ನು ನೋಡಿ​

​​ 

​​