ವಿಧಾನಸೌಧ, ಬಹುಮಹಡಿ ಕಟ್ಟಡ ಹಾಗೂ ವಿಕಾಸ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರದ ಸಚಿವಾಲಯವು ಲೋಕಲ್ ಏರಿಯಾ ನೆಟ್ವರ್ಕ್ ನೊಂದಿಗೆ (ಲ್ಯಾನ್) ಸಂಪರ್ಕ ಹೊಂದಿದೆ. ಈ ಮೂರೂ ಕಟ್ಟಡಗಳಲ್ಲಿರುವ ಎಲ್ಲಾ ಆಡಳಿತ ಇಲಾಖೆಗಳನ್ನೂ ಸಂಪರ್ಕಗೊಳಿಸುವುದಕ್ಕೋಸ್ಕರ ಈ ಸಚಿವಾಲಯ ಲ್ಯಾನ್ ಅನ್ನು ಸೃಜಿಸಲಾಗಿದೆ. ಸಹಜವಾಗಿಯೇ, ಸೆಕ್ಲಾನ್ ಎಂದು ಕರೆಸಿಕೊಳ್ಳುವ ಈ ಲ್ಯಾನ್ ಅನ್ನು ಇಂಟ್ರಾನೆಟ್ ಮತ್ತು ಇಂಟರ್ನೆಟ್ ಅಷ್ಟೇ ಅಲ್ಲದೆ, ವಿವಿಧ ಇ-ಆಡಳಿತ ಅನ್ವಯಿಕೆಗಳಾದ ಕಡತ ನಿರ್ವಹಣಾ ವ್ಯವಸ್ಥೆ (ಎಫ್ ಎಂಎಸ್), ಪತ್ರ ನಿರ್ವಹಣಾ ವ್ಯವಸ್ಥೆ (ಎಲ್ ಎಂಎಸ್) ಹಾಗೂ ಹಾಜರಾತಿ ನಿರ್ವಹಣಾ ವ್ಯವಸ್ಥೆಗಳನ್ನು ನಿರ್ವಹಿಸಲು ಕರ್ನಾಟಕ ಸರ್ಕಾರದ ಸಚಿವಾಲಯವು ಈ ಲ್ಯಾನನ್ನು ಗಣನೀಯ ಪ್ರಮಾಣದಲ್ಲಿ ಬಳಸುತ್ತದೆ. ಎಲ್ಲಾ ಬಳಕೆದಾರರು ಪ್ರತ್ಯೇಕ ಲ್ಯಾನ್ ಹೊಂದಿದ್ದು, ಫೈಬರ್ ಆಪ್ಟಿಕ್ ಕೇಬಲ್ಲುಗಳ ಮೂಲಕ ಮೇಲ್ಕಂಡ ಮೂರೂ ಸೌಲಭ್ಯಗಳನ್ನು ಒಂದು ಕೇಂದ್ರಿತ ಸೌಲಭ್ಯದಲ್ಲಿ ಅಡಕಮಾಡಿ ಸರ್ವಸಂಪರ್ಕಗೊಳಿಸಲಾಗಿದೆ.
ರಾಷ್ಟ್ರೀಯ ಇ-ಆಡಳಿತ ಕಾರ್ಯಯೋಜನೆಯಡಿಯಲ್ಲಿ, ಕರ್ನಾಟಕ ರಾಜ್ಯ ಸಚಿವಾಲಯ ಲ್ಯಾನ್ (ಸೆಕ್ಲಾನ್)ಅನ್ನು ಇ-ಆಡಳಿತ ಕೇಂದ್ರದ ವತಿಯಿಂದ ಅನುಷ್ಠಾನಗೊಳಿಸಲಾಗಿದೆ. ಸೆಕ್ಲಾನ್ ನಿರ್ವಹಣೆಯ ‘ಬೂಟ್’ ಮಾದರಿಯಲ್ಲಿ ಐದು ವರ್ಷಗಳ ಅವಧಿಗೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಉದ್ದೇಶಿಸಿದೆ.