ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ

ಕರ್ನಾಟಕ ಸರ್ಕಾರದ ಉದ್ಯಮ

GOK > KVCDCL > Schemes

ರಾಜ್ಯ ಸರ್ಕಾರದ ಅನುದಾನದ ಯೋಜನೆಗಳು: 

1. (ಬ್ಯಾಂಕ್‍ಗಳ ಸಹಯೋಗದೊಂದಿಗೆ)ಸ್ವಯಂ ಉದ್ಯೋಗ ಸಾಲ ಯೋಜನೆ 
2. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ. 
3. ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ಯೋಜನೆ. 
4. ಅರಿವು-ಶೈಕ್ಷಣಿಕ ಸಾಲ ಯೋಜನೆ.
5. ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ.

ಈ ಮೇಲ್ಕಂಡ ಯೋಜನೆಗಳ ಅನುಷ್ಠಾನದ ಸಂಕ್ಷಿಪ್ತ ವಿವರ ಹಾಗೂ ಅನುಷ್ಠಾನದ ವಿಧಿವಿಧಾನಗಳು ಈ ಕೆಳಕಂಡಂತೆ ಇವೆ.

I. (ಬ್ಯಾಂಕ್‍ಗಳ ಸಹಯೋಗದೊಂದಿಗೆ)ಸ್ವಯಂ ಉದ್ಯೋಗ ಸಾಲ ಯೋಜನೆ:
ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯದವರು ಕೈಗೊಳ್ಳುವ ವ್ಯಾಪಾರ, ಸಣ್ಣ ಕೈಗಾರಿಕೆ, ಸೇವಾ ಉದ್ದಿಮೆ ಹಾಗೂ ಕೃಷಿ ಮತ್ತು ಕೃಷಿ ಅವಲಂಭಿತ ಚಟುವಟಿಕೆಗಳಿಗೆ ಬ್ಯಾಂಕ್‍ಗಳ ಸಹಯೋಗದೊಂದಿಗೆ ರೂ.5.00ಲಕ್ಷಗಳ ವರೆಗೆ ಸಾಲ ಸೌಲಭ್ಯ ಒದಗಿಸಲಾಗಿಸುವುದು.
1. ನಿಗಮದಿಂದ ರೂ.25000/-ಗಳ ವರೆಗಿನ ಘಟಕ ವೆಚ್ಚಕ್ಕೆ ಶೇ.30ರಷ್ಟು ಗರಿಷ್ಠ ರೂ.10000/-ಗಳ ಸಹಾಯಧನ ಹಾಗೂ ಘಟಕ ವೆಚ್ಚ ರೂ.1.00ಲಕ್ಷಗಳ ವರೆಗಿನ ಘಟಕಕ್ಕೆ ಶೇ.30ರಷ್ಟು ಅಥವ ಗರಿಷ್ಠ ರೂ.10,000/-ಗಳು ಸಹಾಯಧನ ಹಾಗೂ ಶೇ.20ರಷ್ಟು ಮಾರ್ಜಿನ್ ಹಣವನ್ನು ಮತ್ತು  ರೂ.1.00ಲಕ್ಷಗಳಿಂದ ರೂ.5.00ಲಕ್ಷಗಳ ವೆಚ್ಚದ ಘಟಕಗಳಿಗೆ ನಿಗಮದಿಂದ ಶೇ.20ರಷ್ಟ್ಟು ಗರಿಷ್ಠ ರೂ.1.00ಲಕ್ಷಗಳ ಮಾರ್ಜಿನ್ ಹಣವನ್ನು ವಾರ್ಷಿಕ ಶೇ.4ರ ಬಡ್ಡಿದರಲ್ಲಿ ಮಂಜೂರು ಮಾಡುವುದು. ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲವಾಗಿರುತ್ತದೆ. ಈ ಮೊತ್ತಕ್ಕೆ ಬ್ಯಾಂಕ್‍ಗಳಲ್ಲಿ ಚಾಲ್ತಿ ಇರುವ ಬಡ್ಡಿಯನ್ನು ವಿಧಿಸಲಾಗುವುದು.
2. ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-2ಎನಲ್ಲಿ ಬರುವ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರಬೇಕು ಹಾಗೂ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
3. ಮಾರ್ಜಿನ್ ಹಣ ಸಾಲದ ಮರುಪಾವತಿ ಬ್ಯಾಂಕ್ ನಿಗದಿಪಡಿಸಿದ ಕಂತುಗಳನ್ವಯ/ನಿಗಮದ ಮಾರ್ಜಿನ್ ಹಣ ಸಾಲದ ಮಂಜೂರಾತಿ ಆದೇಶ ನಿಗದಿಪಡಿಸಿದ ಕಂತುಗಳನ್ವಯ ನಿಗಮಕ್ಕೆ ಮರುಪಾವತಿ ಮಾಡಬೇಕು.
4. ರೂ.50,001/-ಗಳಿಗಿಂತ ಹೆಚ್ಚಿನ ಮಾರ್ಜಿನ್ ಹಣದ ಮರುಪಾವತಿ ಭದ್ರತೆಗೆ ಅರ್ಜಿದಾರರು ಅಥವಾ ಜಾಮೀನುದಾರಿಂದ ಸ್ತಿರಾಸ್ತಿ ಭದ್ರತೆ ಪಡೆಯಬೇಕು.(ಅoಟಟಚಿಣeಡಿಚಿಟ Seಛಿuಡಿiಣಥಿ). 
5. ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರದ ಆದೇಶ ಸಂಖ್ಯೆ: ಹಿಂವಕ 147 ಬಿಸಿಎ, 2014 ದಿನಾಂಕ: 14/08/2014ರನ್ವಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. 

II. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯಗಳಿಗೆ ಸೇರಿದ ಅರ್ಜಿದಾರರು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಂಪ್ರದಾಯಿಕ ವೃತ್ತಿಗಳಲ್ಲದೆ ಇತರೆ ವೃತ್ತಿಗಳಾದ ಹಸು ಸಾಕಾಣಿಕೆ, ವ್ಯಾಪಾರ ಚಟುವಟಿಕೆಗಳು ಇತ್ಯಾದಿ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ನಿಗಮದಲ್ಲಿ ಈ ಯೋಜನೆಯಲ್ಲಿ ಗರಿಷ್ಠ ರೂ.50000/-ಗಳ ಆರ್ಥಿಕ ನೆರವು ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.30ರಷ್ಟು ಗರಿಷ್ಠ ರೂ.10,000/-ಗಳ ಸಹಾಯ ಧನ ಹಾಗೂ ಉಳಿಕೆ ಶೇ.70ರಷ್ಟು ಗರಿಷ್ಠ ರೂ.40,000/-ಗಳ ಸಾಲವನ್ನು ವಾರ್ಷಿಕ ಶೇ. 4ರ ಬಡ್ಡಿ ದರದಲ್ಲಿ ಮಂಜೂರು ಮಾಡುವುದು.

1. ಅರ್ಹತೆ: ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ಬೆಂಗಳೂರು, ದಿನಾಂಕ: 30/03/2002ರನ್ವಯ ಪ್ರವರ್ಗ-2ಎನಲ್ಲಿ ಬರುವ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಉಪ ಜಾತಿಗಳಿಗೆ ಸೇರಿದವರಾಗಿಬೇಕು.
2. ಆದಾಯ ಮಿತಿ: ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
3. ಸಾಲದ ಮರುಪಾವತಿ ಅವಧಿ:  3 ವರ್ಷಗಳು ಮಾಸಿಕ ಕಂತುಗಳಲ್ಲಿ
4. ಈ ಯೋಜನೆಯಲ್ಲಿ ಸಾಂಪ್ರದಾಯಿಕ ವೃತ್ತಿ ಅಲ್ಲದ ಆರ್ಥಿಕ ಚಟುವಟಿಕೆಗಳಿಗೆ ಸೌಲಭ್ಯ ಒದಗಿಸುವುದು.
5. ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರದ ಆದೇಶ ಸಂಖ್ಯೆ: ಹಿಂವಕ 147 ಬಿಸಿಎ, 2014 ದಿನಾಂಕ: 14/08/2014ರನ್ವಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. 

III. ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವಿನ ಯೊಜನೆ:

ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯಗಳು ಕೈಗೊಳ್ಳುವ ಸಾಂಪ್ರದಾಯಿಕ ವೃತ್ತಿಯಾದ  ಶಿಲ್ಪಕಲೆ, ಮರಗೆಲಸ, ಲೋಹ, ಎರಕದ ಕೆಲಸ ಈ ವೃತ್ತಿಗಳನ್ನು ನಿರ್ವಹಿಸುವವರಿಗೆ ಕರ್ನಾಟಕ ವಿಶ್ವಕರ್ಮ ಸಮುದಾಯಗಳ  ಅಭಿವೃದ್ಧಿ ನಿಗಮದಿಂದ ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆಯಲ್ಲಿ  ರೂ.5,000/-ಗಳ ಸಹಾಯಧನ ಹಾಗೂ ರೂ.45,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಮಂಜೂರು ಮಾಡುವುದು.
1. ಅರ್ಹತೆ: ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ಬೆಂಗಳೂರು, ದಿನಾಂಕ: 30/03/2002ರನ್ವಯ ಪ್ರವರ್ಗ-2ಎನಲ್ಲಿ ಬರುವ ವಿಶಕರ್ಮ ಸಮುದಾಯಕ್ಕೆ ಸೇರಿದ ಉಪ ಜಾತಿಗಳಿಗೆ ಸೇರಿದವರಾಗಿಬೇಕು.
2. ಆದಾಯ ಮಿತಿ: ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
3. ಸಾಲದ ಮರುಪಾವತಿ ಅವಧಿ:  3 ವರ್ಷಗಳು ಮಾಸಿಕ ಕಂತುಗಳಲ್ಲಿ
4. ಈ ಯೋಜನೆಯಲ್ಲಿ ವೃತ್ತಿಯಾದ  ಶಿಲ್ಪಕಲೆ, ಮರಗೆಲಸ, ಲೋಹ, ಎರಕದ ಕೆಲಸ, ಚಿನ್ನ-ಬೆಳ್ಳಿ ಕೆಲಸ ವೃತ್ತಿಗಳನ್ನು ನಿರ್ವಹಿಸುವವರಿಗೆ ಸಮನಾಗಿ ಹಂಚಿಕೆ ಮಾಡಿಕೊಂಡು ಅನುಷ್ಠಾನಗೊಳಿಸುವುದು.
5. ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರದ ಆದೇಶ ಸಂಖ್ಯೆ: ಹಿಂವಕ 147 ಬಿಸಿಎ, 2014 ದಿನಾಂಕ: 14/08/2014ರನ್ವಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ​IV. ಅರಿವು-ಶೈಕ್ಷಣಿಕ ಸಾಲ ಯೋಜನೆ:

ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.3.50ಲಕ್ಷಗಳ ಮಿತಿಯಲ್ಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ(ಸಿ.ಇ.ಟಿ.) ಪ್ರವೇಶ ಪಡೆದು,(1) ಬಿ.ಇ.(ಸಿ.ಇ.ಟಿ), (2) ಎಂ.ಬಿ.ಬಿ.ಎಸ್., (3) ಬಿ.ಯೂ.ಎಂ.ಎಸ್., (4) ಬಿ.ಡಿ.ಎಸ್. (5) ಬಿ.ಎ.ಎಂ.ಎಸ್. (6) ಬಿ.ಎಚ್.ಎಂ.ಎಸ್. (7) ಎಂ.ಬಿ.ಎ. (8) ಎಂ.ಟೆಕ್. (9) ಎಂ.ಇ., (10) ಎಂ.ಡಿ., (11) ಪಿ.ಹೆಚ್‍ಡಿ. (12) ಬಿ.ಸಿ.ಎ./ಎಂ.ಸಿ.ಎ (13) ಎಂ.ಎಸ್.ಆಗ್ರ್ರಿಕಲ್ಚರ್ (14)ಬಿ.ಎಸ್.ಸಿ. ನರ್ಸಿಂಗ್, (15)ಬಿ.ಫಾರಂ/ಎಂ.ಫಾರಂ (16) ಬಿ.ಎಸ್.ಸಿ. ಪ್ಯಾರಾ ಮೆಡಿಕಲ್ (17) ಬಿ.ಎಸ್.ಸಿ. ಬಯೋ ಟೆಕ್ನಾಲಜಿ (18) ಬಿ.ಟೆಕ್ (19) ಬಿ.ಪಿ.ಟಿ. (20) ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ. (21)ಬಿ.ಎನ್.ಎಂ. (22)ಬಿ.ಹೆಚ್.ಎಮ್. (23)ಎಂ.ಡಿ.ಎಸ್. (24) ಎಂ.ಎಸ್.ಡಬ್ಲ್ಯೂ (25) ಎಲ್.ಎಲ್.ಎಂ. (26)ಎಂ.ಎಫ್.ಎ. (27) ಎಂ.ಎಸ್.ಸಿ. ಬಯೋ ಟೆಕ್ನಾಲಜಿ ಮತ್ತು (28) ಎಂ.ಎಸ್.ಸಿ.(ಎ.ಜಿ.) ಕೋರ್ಸ್‍ಗಳಲ್ಲಿ ಉಚಿತ ಸೀಟ್ ಪಡೆದು ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿಗೆ ಶೇಕಡ 2ರ ಬಡ್ಡಿ ದರದಲ್ಲಿ ಗರಿಷ್ಠ ವಾರ್ಷಿಕ 1.00ಲಕ್ಷಗಳ ವರೆಗೆ ಸಾಲ ಒದಗಿಸಲಾಗುವುದು.
ಮರುಪಾವತಿ ವಿದ್ಯಾರ್ಥಿಯು ಕೋರ್ಸ್ ಪೂರ್ಣಗೊಂಡ 4ನೇ ತಿಂಗಳಿಂದ  ಮರುಪಾವತಿಯ ಕಂತುಗಳು ತಾನಾಗಿಯೇ ಪ್ರಾರಂಭವಾಗುತ್ತವೆ. ಮರುಪಾವತಿಯ ಅವಧಿ 3 ವರ್ಷಗಳು. 
ಫಲಾನುಭವಿಗಳ ಆಯ್ಕೆ: ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರದ ಆದೇಶ ಸಂಖ್ಯೆ: ಹಿಂವಕ 147 ಬಿಸಿಎ, 2014 ದಿನಾಂಕ: 14/08/2014ರನ್ವಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. 

V. ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ:

ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರಿಗೆ  ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು. ಸಣ್ಣ ಮತ್ತು ಅತಿಸಣ್ಣ ರೈತರಾಗಿಬೇಕು. 
 ಘಟಕವೆಚ್ಚ:-ರೂ.2.00ಲಕ್ಷಗಳು. ರೂ.1.50ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ಸಾಲದ ಮೊತ್ತ ರೂ.50,000/-ಗಳು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ. ಸಾಲದ  ಮರುಪಾವತಿ ಅವಧಿ 3 ವರ್ಷಗಳು.
ಕರ್ನಾಟಕ ಅಂತರ್ಜಲ ಅಧಿನಿಯಮದನ್ವಯ ಈ ಕೆಳಕಂಡ 35 ತಾಲ್ಲೂಕುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯುವ ಮುನ್ನ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯತಕ್ಕದ್ದು. ಅನುಮತಿ ಪಡೆದಂತಹ ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಲು ಕ್ರಮವಹಿಸತಕ್ಕದ್ದು.


ತಾಲ್ಲೂಕುಗಳು.

ನಿಗಮವು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಆಯಾ ಯೋಜನೆಗನುಸಾರವಾಗಿ ಸಲ್ಲಿಸಬೇಕಾದ ದಾಖಲಾತಿಗಳು.

1. ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ ನಮೂನೆ. ಅಥವಾ ಅಗತ್ಯವಿರುವ ಮಾಹಿತಿಯನ್ನು ಬಿಳಿ ಹಾಳೆಯಲ್ಲಿ ಬರೆದು ಸಲ್ಲಿಸುವುದು.
2. ಜಾತಿ & ಆದಾಯ ಪ್ರಮಾಣ ಪತ್ರ. (5 ವರ್ಷಗಳ ಅವಧಿ ಒಳಗಿರಬೇಕು, ಮೂಲ ಪ್ರತಿ ಲಗತ್ತಿಸಬೇಕು)
3. ವಿಳಾಸ ದೃಢೀಕರಣಕ್ಕೆ ಪಡಿತರ ಚೀಟಿ/ಚುನಾವಣಾ ಗುರುತಿನ ಚೀಟಿ/ಆಧಾರ್ ಕಾರ್ಡ್/ಕೆ.ಪಿ.ಟಿ.ಸಿ.ಎಲ್. ಆರ್.ಆರ್. ನಂ. ಇರುವ ಬಿಲ್ಲಿನ ಜೆರಾಕ್ಸ್ ಪ್ರತಿ/ಪಾಸ್‍ಪೋರ್ಟ್ ಅಳತೆಯ 5 ಭಾವಚಿತ್ರಗಳು.
4. ಸಾಲದ ಉದ್ದೇಶದ ಅನುಭವದ ಮತ್ತು ಘಟಕ ಸ್ಥಾಪಿಸುವ ಸ್ಥಳದ ಬಗ್ಗೆ ಸ್ವಯಂ ಘೋಷಣೆ.
5. ಆಯ್ಕೆ ಸಮಿತಿಯಿಂದ ಆಯ್ಕೆ ಆದ ನಂತರ ಆಯ್ಕೆಯಾದ ಅರ್ಜಿದಾರರು ಸ್ಥಳೀಯ ಬ್ಯಾಂಕ್/ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿಲ್ಲ ಎಂಬುದಕ್ಕೆ ಅಥವಾ ಪಡೆದಿರುವ ಸಾಲವನ್ನು ಪೂರ್ಣ ಮರುಪಾವತಿ ಮಾಡಿರುವ ಬಗ್ಗೆ ಬೇಬಾಕಿ ಪತ್ರ.
6. ಅರ್ಜಿದಾರರ ಆಸ್ತಿ ಮತ್ತು ಋಣಭಾರದ(ಸಾಲಗಳ ಬಗ್ಗೆ) ಘೊಷಣೆ.
7. ಸಾಲದ ಭದ್ರತೆಗೆ ಅರ್ಜಿದಾರರು ಒದಗಿಸುವ ಜಾಮೀನುದಾರರ ಒಪ್ಪಿಗೆ ಪತ್ರ ಮತ್ತು ಆಸ್ತಿ ಋಣಭಾರದ ಘೋಷಣೆ.
8. ಸಾಲದ ಭದ್ರತೆಗೆ ಜಾಮೀನು ನೀಡುವವರು ಸರ್ಕಾರಿ ನೌಕರರಾಗಿದ್ದಲ್ಲಿ ಕನಿಷ್ಠ 5 ವರ್ಷ ಸೇವಾವಧಿ ದೃಢೀಕರಣ ಹಾಗೂ ರೂ.25000/-ಗಳಿಗಿಂತ ಹೆಚ್ಚಿನ ವೇತನ ಪಡೆಯುತ್ತಿರುವ ಬಗ್ಗೆ ವೇತನ ದೃಢೀಕರಣ ಪತ್ರ.
9. ಘಟಕಗಳಿಗೆ ಅಗತ್ಯವಿದ್ದಲ್ಲಿ ಗ್ರಾಮ ಪಂಚಾಯಿತಿ/ಪಟ್ಟಣ ಪಂಚಾಯಿತಿಗಳಿಂದ  ಲೈಸೆನ್ಸ್/ಪರವಾನಗಿ ಪತ್ರ.
10. ಸಾರಿಗೆ ವಲಯದಲ್ಲಿ ಸಾಲ ಪಡೆಯಲು ಡ್ರೈವಿಂಗ್ ಲೈಸೆನ್ಸ್.(ಜೆರಾಕ್ಸ್ ಪ್ರತಿ)
11. ಪಂಚವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ಸ್ವಯಂ ಘೋಷಣಾ ಪತ್ರ.
12. ರೂ.50,000/-ಗಳಿಗಿಂತ ಹೆಚ್ಚಿನ ಸಾಲದ ಭದ್ರತೆಗೆ ನಿಗಮಕ್ಕೆ ಸ್ಥಿರಾಸ್ತಿಯನ್ನು ಆಧಾರ ಮಾಡಬೇಕು. ಅರ್ಜಿದಾರರು ಅಥವಾ ಜಾಮೀನುದಾರರು ಹೊಂದಿರುವ ಸ್ಥಿರಾಸ್ತಿಯ ದಾಖಲಾತಿಗಳಾದ, ಮೂಲ ಕ್ರಯ ಪತ್ರ, 3 ವರ್ಷಗಳ ಪಹಣಿ, ಖಾತ ಉದ್ಧರಣೆ, 13 ವರ್ಷಗಳ ಋಣಭಾರ ರಾಹಿತ್ಯ ಪ್ರಮಾಣ ಪತ್ರ, ಸ್ಥಿರಾಸ್ತಿ ಮೌಲ್ಯ ನಿರ್ಣಯ ಪತ್ರ, ಕಂದಾಯ ಪಾವತಿ ರಶೀದಿ ಇತ್ಯಾಧಿ.
13. ರಾಷ್ಟ್ರೀಕೃತ/ಶೆಡ್ಯೂಲ್/ಗ್ರಾಮೀಣ ಬ್ಯಾಂಕ್‍ನಲ್ಲಿ ಫಲಾನುಭವಿಯು ಹೊಂದಿರುವ ಬ್ಯಾಂಕ್ ಖಾತಾ ಸಂಖ್ಯೆ,  ಐ.ಎಫ್.ಎಸ್.ಸಿ. ಕೋಡ್ ಹೊಂದಿದ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ. 
14. ಶೈಕ್ಷಣಿಕ ಸಾಲ ಯೋಜನೆಗೆ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ವ್ಯಾಸಂಗದ ದೃಢೀಕರಣ ಪತ್ರ.
15. ವಿದ್ಯಾರ್ಥಿ ಮೆರಿಟ್ ಆಧಾರದ ಮೇಲೆ ಸೀಟು ಪಡೆದಿರುವ ಬಗ್ಗೆ ಸಿ.ಇ.ಟಿ.ಯವರು ನೀಡಿರುವ ಸೀಟು ಹಂಚಿಕೆ ಪತ್ರ.
16. ಗಂಗಾಕಲ್ಯಾಣ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲು ಅರ್ಜಿದಾರರು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ಈ ಬಗ್ಗೆ ಸಂಬಂಧಿಸಿದ ತಹಶಿಲ್ದಾರ್/ಕಂದಾಯ ಅಧಿಕಾರಿಗಳಿಂದ ಪಡೆದ ದೃಢೀಕೃತ ಪ್ರಮಾಣ ಪತ್ರ. 
17. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಈಗಾಗಲೇ ಯಾವುದೇ ಯೋಜನೆಗಳಲ್ಲಿ ಸೌಲಭ್ಯ ಪಡೆದಿಲ್ಲವೆಂದು ಸ್ವಯಂ ಘೋಷಣೆ ಪತ್ರ.


ActionsUse SHIFT+ENTER to open the menu (new window).Open Menu
  
  
  
  
  
Description
  
There are no items to show in this view of the "Schemes" document library.

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಸರ್ಕಾರದ ಉದ್ಯಮ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top