ಮೊಬೈಲ್ ಒನ್ ಬಹಳಷ್ಟು ಸೇವೆಗಳನ್ನು ನೀಡಬಲ್ಲ ರಾಷ್ಟ್ರದ ಮೊಟ್ಟಮೊದಲ ಹಾಗೂ ವಿಶ್ವದ ಅತಿದೊಡ್ಡ ವೈವಿಧ್ಯಮಯ ಮೊಬೈಲ್ ಆಡಳಿತ ವೇದಿಕೆಯಾಗಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಸರಕಾರದಿಂದ ಮತ್ತು ಖಾಸಗಿ ವಲಯ ಸೇರಿದ ಒಂದು ಮುಕ್ತ ವೇದಿಕೆಯ ಮೂಲಕ ನಾಗರೀಕ ಸೇವೆಗಳನ್ನು ವಿತರಿಸುವುದಕ್ಕಾಗಿ ಇರುವ, ಯಾವುದೇ ಸೇವೆಯನ್ನೂ ಸ್ವೀಕರಿಸಬಲ್ಲಂತಹ, ಹಾಗೂ ಸ್ಥಿರವಾದ ಒಂದು ಏಕೀಕೃತ ಮೊಬೈಲ್ ವೇದಿಕೆ ಇದಾಗಿದೆ. ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ, ಹೇಗಾದರೂ, 24x7x365 ದಿನಗಳೂ, ಯಾವುದೇ ಮೊಬೈಲ್ ಉಪಕರಣದಿಂದ ಸೇವೆಗಳು ಲಭ್ಯವಿರುತ್ತದೆ. G2C, B2C ಮತ್ತು G2B ಸೇವೆಗಳನ್ನೊಳಗೊಂಡಿರುತ್ತದೆ. ಮೊಬೈಲ್ ಒನ್ ವೇದಿಕೆಯನ್ನು ಎಲ್ಲಾ ಟೆಲಿಕಾಂ ಆಪರೇಟರ್ ಗಳೊಂದಿಗೆ ಏಕೀಕರಣ ಮಾಡಿದ್ದು ‘ಒಂದು URL, ಒಂದು ಸಣ್ಣ ಸಂಕೇತ ಮತ್ತು ಒಂದೇ ಅಪ್ಲಿಕೇಶನ್’’ ಸಿದ್ಧಾಂತದ ಮೂಲಕ ಎಲ್ಲಾ ಸೇವೆಗಳನ್ನು ಸಿಗುವಂತೆ ಈ ವೇದಿಕೆ ಕಾರ್ಯನಿರ್ವಹಿಸುತ್ತದೆ. ಅಂದರೆ, ನಾಗರೀಕರು ಎಲ್ಲಾ ಸೇವೆಗಳನ್ನು ಒಂದೇ ಕಡೆ ಪಡೆಯಬಹುದಾಗಿದ್ದು, ಇದರಿಂದಾಗಿ ಬಹಳಷ್ಟು ಜಾಲತಾಣಗಳನ್ನು ಸಂಪರ್ಕಿಸುವ ಅವಶ್ಯಕತೆ ಇರುವುದಿಲ್ಲ.
ಈ ವೇದಿಕೆಯು ಗ್ರಾಮೀಣ ಕರ್ನಾಟಕದಲ್ಲಿಯೂ ಇನ್ನೂ ಹೆಚ್ಚಿನ ಮಹತ್ವ ಪಡೆಯಲಿದೆ, ಟೆಲಿ-ಐಸಿಯು ಸೇವೆಯು ಆರೋಗ್ಯ ಸುರಕ್ಷತೆಯನ್ನು ಬಹಳವಾಗಿ ಸುಧಾರಿಸುತ್ತದೆ ದೇಶದ ಅತ್ಯುತ್ತಮ ತಜ್ಞ ವೈದ್ಯರುಗಳಿಂದ ಗ್ರಾಮಸ್ಥರಿಗೆ ಫಲ ಲಭ್ಯವಾಗಲಿದ್ದು, ನಗರಕ್ಕೆ ದೀರ್ಘ ಹಾಗೂ ದುಬಾರಿ ಪ್ರಯಾಣ ಮಾಡುವ ಪ್ರಸಂಗ ತಪ್ಪಲಿದೆ.