PPP-IHD ಯ ಪ್ರಮುಖ ಗುಣಲಕ್ಷಣಗಳು:

  • ​​ಈ ಯೋಜನೆಯಡಿ RKVY ಅನುದಾನ ಉಪಯೋಗಿಸಲಾಗುವುದಲ್ಲದೆ ಇತರೆ ಕೇಂದ್ರ ಪುರಸ್ಕೃತ ಯೋಜನೆಗಳು ಮತ್ತು ರಾಜ್ಯ ವಲಯ ಯೋಜನೆಗಳನ್ನು ಸಹ  ಒಗ್ಗೂಡಿಸಿ ಅನುಷ್ಟಾನ ಮಾಡಲಾಗುವುದು.
  • ಕರ್ನಾಟಕ ರಾಜ್ಯದಾದ್ಯಂತ ಸಮಗ್ರ ತೋಟಗಾರಿಕೆಯ ಅಭಿವೃದ್ಧಿಗಾಗಿ ಅರ್ಹ ಖಾಸಗಿ ಕಂಪನಿ ಅಥವಾ ಕಂಪನಿಗಳ ಗುಂಪು ಸೂಕ್ತ ಯೋಜನೆಗಳನ್ನು ತಯಾರಿಸಿ ಸಲ್ಲಿಸುವುದು.
  • ಈ ರೀತಿಯ ಮಧ್ಯಸ್ಥಿಕೆಗಳು ಉತ್ಪಾದನೆಯಿಂದ ಮಾರುಕಟ್ಟೆವರೆಗಿನ ಎಲ್ಲಾ ಅಂಶಗಳನ್ನು ಒಳಗೊಂಡಂತಿದ್ದು, ಯೋಜನಾ ವಿನ್ಯಾಸದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳಲು ಅವಕಾಶವಿರಬೇಕು.
  • ಉದ್ದೇಶಿತ ಯೋಜನೆಯು ಸೂಕ್ತ ತಂತ್ರಜ್ಞಾನ, ತರಬೇತಿ ಮತ್ತು ಯಾಂತ್ರೀಕರಣದ ಮೂಲಕ ತೋಟಗಾರಿಕೆ ಬೆಳೆಗಾರರ ಸಾಮರ್ಥ್ಯ ಹೆಚ್ಚಿಸುವಂತಿರಬೇಕು.
  • ಈ ಯೋಜನೆಗಳಡಿ ರೈತರ ಗುಂಪು ಉತ್ಪಾದಕ ಘಟಕವಾಗಬೇಕಾಗಿದ್ದು, ಇದಕ್ಕಾಗಿ ಈಗಾಗಲೇ ರಾಜ್ಯದಲ್ಲಿರುವ ರೈತ ಉತ್ಪಾದಕ  ಸಂಸ್ಥೆಗಳನ್ನು ಬಳಸಿಕೊಳ್ಳಬಹುದಾಗಿದೆ. ಆಯಾ ಯೋಜನೆಯ ಅಗತ್ಯತೆಗೆ ಅನುಗುಣವಾಗಿ ಖಾಸಗಿ ಸಂಸ್ಥೆಗಳು ಹೊಸ ರೈತರ ಗುಂಪುಗಳನ್ನು ಸಹ ರಚಿಸಿಕೊಳ್ಳಬಹುದಾಗಿದೆ.
  • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯು ಇಂತಹ ಯೋಜನೆಗಳನ್ನು ಪರಿಶೀಲಿಸಿ ಅನುಮೋದಿಸುವುದು.
  • ರಾಜ್ಯ ಮಟ್ಟದಲ್ಲಿ ಯೋಜನಾ ಮೇಲುಸ್ತವಾರಿ ಘಟಕವನ್ನು ರಚಿಸಲಾಗುವುದು. ಈ ಘಟಕವು
  1. ಸಂಪರ್ಕ ಸಂಸ್ಥೆಯಾಗಿ.
  2. ಖಾಸಗಿ ಸಂಸ್ಥೆಗಳಿಗೆ ಪ್ರಸ್ತಾವನೆ ತಯಾರಿಸಲು ಸಹಾಯ ನೀಡಲು.
  3. ಖಾಸಗಿ ಕಂಪನಿಗಳಿಗೆ ಕಾರ್ಯ ಚಟುವಟಿಕೆಯ ವ್ಯಾಪ್ತಿಯ ಬಗ್ಗೆ ಸಲಹೆ ನೀಡುವುದು.
  • ರಾಜ್ಯ ಮಟ್ಟದಲ್ಲಿ ವಿವಿಧ ಬೆಳೆಗಳಿಗೆ ಪ್ರತ್ಯೇಕ ಸಂಪರ್ಕಾಧಿಕಾರಿಗಳನ್ನು ನೇಮಿಸಿ ಬಾಗೀದಾರರ ನಡುವೆ ಸೂಕ್ತ ಸಮನ್ವಯ ಸಾಧಿಸಲು ಕ್ರಮ ವಹಿಸುವುದು. ಕ್ರಮ ಸಂಖ್ಯೆ 6, 7 ಮತ್ತು 8 ಕ್ಕೆ ಸಂಬಧಿಸಿದ ಸರ್ಕಾರಿ ಆದೇಶಗಳು ಇಲಾಖೆಯ ವೆಬ್ ಸೈಟ್(www.horticulture.kar.nic.in) ನಲ್ಲಿ ಲಭ್ಯವಿರುತ್ತವೆ.
  • ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (Regulation and Development) ಕಾಯಿದೆ ಮತ್ತು ನಿಯಮ  1966 ರನ್ವಯ ಒಪ್ಪಂದ ಕೃಷಿಗೆ ಅವಕಾಶವಿರುತ್ತದೆ.