Sign In

ಸಾರ್ವಜನಿಕ –ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ (PPP-IHD)

ಕರ್ನಾಟಕ ಸರ್ಕಾರ

ಪರಿಚಯ

​ಪರಿಚಯ

ಕರ್ನಾಟಕ ರಾಜ್ಯದಲ್ಲಿ ತೋಟಗಾರಿಕೆ ವಲಯವು ಕೃಷಿ ಜಿಡಿಪಿಯಲ್ಲಿನ ಶೇ.40 ಪಾಲು ಹೊಂದಿರುತ್ತದೆ. ಇಡೀ ದೇಶದಲ್ಲಿನ ಕೃಷಿಗೆ ಯೊಗ್ಯವಾದ ಜಮೀನಿನಲ್ಲಿ ಶೇ 83 ರಷ್ಟುಜಮೀನು ಸಣ್ಣ ಮತ್ತು ಅತೀಸಣ್ಣ ರೈತರಿಗೆ ಸೇರಿದ್ದು ಕರ್ನಾಟಕವು ಇದಕ್ಕೆ ಹೊರತಾಗಿಲ್ಲ. ತೋಟಗಾರಿಕೆಯು ಹೆಚ್ಚಿನ ಆದಾಯ ನೀಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ವಹಿಸುತ್ತಿದ್ದು ಮಹಿಳೆಯರು ಸಹಾ ಹೆಚ್ಚಿನ ಸಂಖ್ಯೆಯಲ್ಲಿ ತೋಟಗಾರಿಕೆ ಕೈಗೊಳ್ಳಬಹುದಾಗಿದೆ.

ಅನಿಯಮಿತ ಕೃಷಿ ಮಾರುಕಟ್ಟೆ ಮೌಲ್ಯ ಸರಪಳಿ ಮತ್ತು ಹೆಚ್ಚಿನ ಸಂಖ್ಯೆಯ ಮಧ್ಯವರ್ತಿಗಳ ಹಾವಳಿಯಿಂದಾಗಿ ಅತಿ ಹೆಚ್ಚಿನ ಕೊಯ್ಲೋತ್ತರ ಹಾನಿ, ಕಡಿಮೆ ಉತ್ಪಾದಕರಿಗೆ ಕಡಿಮೆ ಆದಾಯ ಸಹಾ ಮತ್ತೊಂದು ತೊಡಕಾಗಿದ್ದು ಉತ್ಪನ್ನಗಳ ಲಭ್ಯತೆಯಲ್ಲಿ ಅಸ್ಥಿರತೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುತ್ತದೆ. ಒಂದು ಅಂದಾಜಿನ ಪ್ರಕಾರ 18-40% ಹಣ್ಣು ಮತ್ತು ತರಕಾರಿಗಳ ಕೊಯ್ಲೋತ್ತರ ನಿರ್ವಹಣೆಯಲ್ಲಿ ಹಾಳಾಗುತ್ತಿದ್ದು, ಇದರಿಂದಾಗಿ ರೈತರಿಗೆ ಮತ್ತು ಗ್ರಾಹಕರಿಗೆ ಅತಿ ಹೆಚ್ಚಿನ ಆರ್ಥಿಕ ನಷ್ಟವನ್ನು ಉಂಟಾಗುತ್ತಿದೆ. ​

PPP-IHD: ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯು ಕರ್ನಾಟಕ ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆಗಳ ಮೌಲ್ಯ ವೃದ್ಧಿಸುವ  ದೂರ ದೃಷ್ಟಿ ಹೊಂದಿರುತ್ತದೆ. ತನ್ಮೂಲಕ ರಾಜ್ಯದಲ್ಲಿನ ತೋಟಗಾರಿಕೆ  ರೈತರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸಹ ವೃದ್ಧಿಸುವ ಹಾಗೂ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಒದಗಿಸುವ ಗುರಿಯನ್ನು ಸಹ ಹೊಂದಿರುತ್ತದೆ.

PPP-IHD:

ಈ ಯೋಜನೆಯಡಿ ಬೀಜದಿಂದ ಉತ್ಪನ್ನದವರೆಗೆ ಆರ್ಥಿಕ ಸಹಾಯ ನೀಡುವ ಮೂಲಕ ರೈತ ಗುಂಪುಗಳನ್ನು ಬಲಾಢ್ಯಿಗೊಳಿಸಬಹುದಾಗಿದೆ. ಉತ್ತಮ ಗುಣಮಟ್ಟದ ಬೀಜ, ಗೊಬ್ಬರ, ಕೀಟನಾಶಕಗಳು, ಉತ್ತಮ ಬೇಸಾಯ ಪದ್ಧಿತಿಗಳು ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ದೊರಕಿಸಿಕೊಡುವುದಲ್ಲದೆ, ಉತ್ಪಾದಕತೆಯನ್ನು ಸಹ ಹೆಚ್ಚಿಸಬಹುದಾಗಿರುತ್ತದೆ. ಕೊಯ್ಲಿನ ನಂತರ ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಣ, ಕೂಲಿಂಗ್ ಮತ್ತು ಪ್ಯಾಕಿಂಗ್ ವ್ಯವಸ್ಥೆಗಳು ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ದೊರಕಿಸಿಕೊಡುತ್ತವೆ. ಕೊನೆಯದಾಗಿ ಖಚಿತವಾದ ಉತ್ತಮ ಬೆಲೆಯು ಸಹ ಅಷ್ಟೆ ಮುಖ್ಯವಾಗಿರುತ್ತದೆ.  ಈ ಯೋಜನೆಯಡಿ ಕಂಪನಿ ಅಥವಾ ಕಂಪನಿಗಳ ಗುಂಪುಗಳ ಮುಖಾಂತರ ರೈತರಿಗೆ ಬೇಕಾಗುವ ಎಲ್ಲಾ ಬೇಸಾಯ ಸಾಮಗ್ರಿ ಒದಗಿಸಿ ಉತ್ಪನ್ನಗಳನ್ನು ರೈತರ ಗುಂಪುಗಳಿಂದ ಖರೀದಿಸಲು ಉತ್ತೇಜಿಸಲಾಗುತ್ತದೆ. ಕಂಪನಿಗಳು ಸಲ್ಲಿಸುವ ಪ್ರಸ್ತಾವನೆಗಳಿಗೆ ಇಲಾಖೆಯ ವಿವಿಧ ಯೋಜನೆಗಳ ಮಾರ್ಗಸೂಚಿಗಳನ್ವಯ ವಿವಿಧ ಘಟಕಗಳಿಗೆ ಸಹಾಯ ಧನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು. ಪ್ರಸ್ತಾವನೆಯ ವಿವಿಧ ಘಟಕಗಳಿಗೆ ಸರ್ಕಾರದ ವತಿಯಿಂದ  ವಿವಿಧ ಯೋಜನೆಗಳಡಿ ನೀಡಬಹುದಾದ ಸಹಾಯ ಧನದ ವಿವರಗಳನ್ನು ಇಲಾಖೆಯ ವೆಬ್ ಸೈಟ್(www.horticulture.kar.nic.in) ನಲ್ಲಿ ಲಭ್ಯವಿರುತ್ತದೆ. ಒಟ್ಟಾರೆಯಾಗಿ ಈ ಯೋಜನೆಯಡಿ ಸರ್ಕಾರ, ಕಂಪನಿ ಮತ್ತು ರೈತರು 1:1:1 ಪಾಲುದಾರಿಕೆ ಹೊಂದುವ ಸಾಧ್ಯತೆಗಳಿರುತ್ತವೆ.​


Last Updated -
Content Owned and Maintained by : ಸಾರ್ವಜನಿಕ –ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ (PPP-IHD)
Designed and Hosted by
Center for e-Governance
©2015, All Rights Reserved.
Disclaimer:Please note that this page also provides links to the websites/ web pages of Govt. Ministries/Departments/Organisations.
The content of these websites are owned by the respective organisations and they may be contacted for any further information or suggestion.
Help ¦ Terms & Conditions ¦ Copyright Policy ¦ Hyperlinking Policy ¦ Privacy Policy