​ರೈತ ನಿರ್ಮಾಪಕ ಸಂಸ್ಥೆ​


FPO ಗಳಿಗೆ ಒದಗಿಸಲಾಗುವ ಸೌಲಭ್ಯಗಳು

  • FPO ಗಳ ಮುಖಾಂತರ ನಿರ್ಮಿಸಲಾಗುವ ಮೂಲಭೂತ ಸೌಕರ್ಯಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಶೇ.90 ರ ಆರ್ಥಿಕ ಸಹಾಯವನ್ನು ನೀಡಲಾಗುವುದು.
  • FPO ಗಳಿಗೆ ಸಹಾಯ ನೀಡಲು ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಸಂಘಟಿಸಲು ಮತ್ತು ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಹಣೆ ಮಾಡಲು ಅನುವಾಗುವಂತೆ ನೋಡಲ್ ಏಜನ್ಸಿಯ ಮೂಲಕ ಆರ್ಥಿಕ ನೆರವು ನೀಡಲಾಗುವುದು.
  • ಸಂಪನ್ಮೂಲ ಸಂಸ್ಥೆಯು ರೈತರಿಗೆ ಅಗತ್ಯ ನೆರವು ಮತ್ತು ಸಹಾಯ ಮಾಡಲು ಹಾಗೂ ಕ್ಷೇತ್ರಮಟ್ಟದ ಕಾರ್ಯಕ್ರಮಗಳ ಪ್ರಗತಿಯನ್ನು ಪರಿವೀಕ್ಷಿಸಲು ಸ್ಥಳಿಯ ಸಂಪನ್ಮೂಲ ವ್ಯಕ್ತಿಗಳನ್ನು (LRP) ನಿಯೋಜಿಸುವುದು.
  • ಸಂಪನ್ಮೂಲ ಸಂಸ್ಥೆಗಳಿಗೆ ಕೃಷಿ/ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು IIHR ಸಂಸ್ಥೆಗಳ ವಿಜ್ಞಾನಿಗಳಿಂದ ಅಗತ್ಯ ತಾಂತ್ರಿಕ ತರಬೇತಿ ನೀಡಲಾಗುವುದು.
  • ರಾಜ್ಯ ಸರ್ಕಾರದ ವತಿಯಿಂದ FPO ಗಳಿಗೆ ಮೂರು  ವರ್ಷಗಳ ಅವಧಿಗೆ ನಿರ್ವಹಣಾ ಸಹಾಯವನ್ನು ನೀಡಲಾಗುವುದು.
  • ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಸಂಗ್ರಹಣೆ ಮತ್ತು ಮಾರಾಟ ಮಾಡಲು FPO ಗಳಿಗೆ ಲೈಸೆನ್ಸ್ ನೀಡಲಾಗುವುದು.
  • APMC Commission Agent ಮತ್ತು APMCಗಳಲ್ಲಿ ಆದ್ಯತೆ ಮೇರೆಗೆ ಸಂಗ್ರಹಣಾ ಗೋದಾಮುಗಳೊಂದಿಗೆ ಟ್ರೇಡರ್ ಲೈಸೆನ್ಸ್ ಗಳನ್ನು  FPO ಗಳಿಗೆ  ನೀಡಲಾಗುವುದು.
  • ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ರೈತರಿಗೆ ಆದ್ಯತೆಯ ಮೇರೆಗೆ ಸಹಾಯಧನ ನೀಡಲಾಗುವುದು.

​FPO ಸದಸ್ಯರ ಬೆಳೆವಾರು ಮಾಹಿತಿ

ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವ ರೀತಿಯನ್ನು ಗಮನಿಸುವುದು ಒಂದು ಮುಖ್ಯ ಉದ್ದೇಶವಾಗಿರುತ್ತದೆ. ಅಲ್ಲದೆ ವಿವಿಧ ಹಂತಗಳಲ್ಲಿ ಸೂಕ್ತ ಸಲಹೆ ನೀಡುವುದರ ಮುಖಾಂತರ ಸುಧಾರಿತ ಬೇಸಾಯ ಕ್ರಮಗಳಲ್ಲಿನ  ಪ್ರಮುಖ ಕಾರ್ಯಗಳನ್ನು ತಪ್ಪದೇ ರೈತರು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು. ಪ್ರಮುಖವಾಗಿ ಖರೀದಿದಾರರಿಗೆ ಯಾವ ಯಾವ ತೋಟಗಾರಿಕಾ ಬೆಳೆಗಳು ಯಾವ ಯಾವ ಪ್ರದೇಶದಲ್ಲಿ ಯಾವ ಸಮಯದಲ್ಲಿ ಕೊಯ್ಲಿಗೆ ಬರುವುದೆಂದು ತಿಳಿಸಲು ಅವಶ್ಯಕವಾಗಿರುತ್ತದೆ. ತೋಟಗಾರಿಕೆ ಬೆಳೆಗಳ GIS Mapping ಮಾಡುವ ಮೂಲಕ ಸುಲಭ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸೂಕ್ತ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು ಈ ತಂತ್ರಾಂಶದ ಮೂಲಕ PPPIHD ವಲಯದ ಖಾಸಗಿ ಪಾಲುದಾರರು ಸಹ ತಮ್ಮ ಸುಧಾರಿತ ಬೇಸಾಯ ಕ್ರಮಗಳನ್ನು ರೈತರಿಗೆ ಒದಗಿಸಿ ಅನುಸರಣಾಕ್ರಮಗಳ ಮೇಲೆ ನಿಗಾವಹಿಸಬೇಕಾಗಿರುತ್ತದೆ. ತನ್ಮೂಲಕ ಖಾಸಗಿ ಸಂಸ್ಥೆಗಳು ಪ್ರತಿವಾರ ಸದಸ್ಯ ರೈತರುಗಳಿಂದ ದೊರಕಬಹುದಾದ ಉತ್ಪನ್ನಗಳನ್ನು  ಅಂದಾಜಿಸಿ ಖರೀದಿಸಬಹುದಾಗಿದೆ.