PPP-IHD ಕಾರ್ಯತಂತ್ರಗಳು

  • ಕಂಪನಿಗಳು ವಿವರವಾದ ಉದ್ದೇಶಿತ ವ್ಯಾಪಾರ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸುವುದು.
  • ತೋಟಗಾರಿಕೆ ಇಲಾಖೆ ವತಿಯಿಂದ ಈಗಾಗಲೇ ವಿವಿಧ ಯೋಜನೆಗಳಡಿ (CHD/VIUC/NHM/SUJALA/CDB & ಇತರೆ) ಸ್ಥಾಪಿಸಿರುವ ರೈತ ಉತ್ಪಾದಕ ಸಂಸ್ಥೆ / ರೈತ ಆಸಕ್ತ ಗುಂಪುಗಳನ್ನು ಸಾಧ್ಯವಾದ ಮಟ್ಟಿಗೆ ಬಳಸಿಕೊಳ್ಳುವುದು.
  • ಅವಶ್ಯಕತೆಗೆ ಅನುಗುಣವಾಗಿ ಸುಧಾರಿತ ತಳಿಗಳ ಬೀಜಗಳು/ಸಸಿಗಳನ್ನು ಒದಗಿಸಲು ಮತ್ತು ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲು ತೋಟಗಾರಿಕೆಯಲ್ಲಿ ಪರಿಣಿತಿ ಹೊಂದಿರುವ ಸರ್ಕಾರಿ/ಖಾಸಗಿ ವಲಯಗಳೊಂದಿಗೆ ಸಮನ್ವಯ ಹೊಂದುವುದು.
  • ಸುಧಾರಿತ ತಳಿಗಳ ಅಳವಡಿಕೆ, ಉತ್ಪಾದನಾ ತಂತ್ರಜ್ಞಾನಗಳಾದ ನಿಖರ ಬೇಸಾಯ, ಸಂರಕ್ಷಿತ ಬೇಸಾಯ,ಸೂಕ್ಷ್ಮ ನೀರಾವರಿ ಇತ್ಯಾದಿಗಳ ಅಳವಡಿಕೆ ಮೂಲಕ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಲು ಕ್ರಮವಹಿಸುವುದು.
  • ಪ್ರಾಥಮಿಕ ಸಂಸ್ಕರಣೆ,ವಿಂಗಡಣೆ, ವರ್ಗೀಕರಣ, ಸ್ವಚ್ಛಗೊಳಿಸುವಿಕೆ, ಪ್ಯಾಕಿಂಗ್ ಮತ್ತು ಮೌಲ್ಯವರ್ಧನೆಗೆ ಸೌಕರ್ಯ ಒದಗಿಸುವುದು.
  • ತೋಟದಿಂದ ಮಾರುಕಟ್ಟೆವರೆಗೆ ಅಗತ್ಯವಿರುವ ಕೋಯ್ಲೋತ್ತರ ನಿರ್ವಹಣೆ,ಸಂಗ್ರಹಣೆ ಮತ್ತು ಸಾಗಣಿಕೆ ಮೂಲ ಸೌಕರ್ಯಗಳನ್ನು ಒದಗಿಸುವುದು.
  • ರೈತ ಉತ್ಪಾದಕ ಸಂಸ್ಥೆಗಳಿಗೆ ಸಂಗ್ರಹಣಾ ಗೋದಾಮುಗಳು, ಶೀತಲ ಸರಪಳಿಗಳು ಮತ್ತು ವಾತಾವರಣ ನಿಯಂತ್ರಿತ ಗೃಹಗಳನ್ನು ಒದಗಿಸುವುದು.​